logo
ಕನ್ನಡ ಸುದ್ದಿ  /  ಮನರಂಜನೆ  /  ಲೀಲಾವತಿ ಹಿಂದೆಯೇ ಹೊರಟ ಬಂಗಾರಮ್ಮ; ಲೀಲಮ್ಮರನ್ನು ಆರೈಕೆ ಮಾಡುತ್ತಿದ್ದ ಹಿರಿಯ ಜೀವ ಇನ್ನಿಲ್ಲ

ಲೀಲಾವತಿ ಹಿಂದೆಯೇ ಹೊರಟ ಬಂಗಾರಮ್ಮ; ಲೀಲಮ್ಮರನ್ನು ಆರೈಕೆ ಮಾಡುತ್ತಿದ್ದ ಹಿರಿಯ ಜೀವ ಇನ್ನಿಲ್ಲ

Praveen Chandra B HT Kannada

Dec 14, 2023 08:08 AM IST

google News

ದಿ. ಲೀಲಾವತಿ ಅವರನ್ನು ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನ

    • ಕನ್ನಡದ ಹಿರಿಯ ನಟಿ ದಿವಂಗತ ಲೀಲಾವತಿ ಅವರನ್ನು ಆರೈಕೆ ಮಾಡುತ್ತಿದ್ದ, ಚಿಕ್ಕ ವಯಸ್ಸಿನಿಂದಲೂ ಲೀಲಾವತಿ ಜತೆಗೆ ಇದ್ದು ನೋಡಿಕೊಳ್ಳುತ್ತಿದ್ದ ಬಂಗಾರಮ್ಮ (65) ನಿಧನರಾಗಿದ್ದಾರೆ. ಹಿರಿಯ ನಟಿ ಲೀಲಾವತಿ ನಿಧನರಾದ ನಾಲ್ಕೇ ದಿನದಲ್ಲಿ ಅವರ ಪ್ರೀತಿಯ ಬಂಗಾರಮ್ಮ ಕೂಡ ಇಹಲೋಕ ತ್ಯಜಿಸಿದ್ದಾರೆ.
ದಿ. ಲೀಲಾವತಿ ಅವರನ್ನು ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನ
ದಿ. ಲೀಲಾವತಿ ಅವರನ್ನು ಆರೈಕೆ ಮಾಡುತ್ತಿದ್ದ ಬಂಗಾರಮ್ಮ ನಿಧನ

ಬೆಂಗಳೂರು: ಇತ್ತೀಚೆಗೆ ನಿಧನರಾದ ಕನ್ನಡದ ಹಿರಿಯ ನಟಿ ಅಭಿನೇತ್ರಿ ಲೀಲಾವತಿಯವರನ್ನು ಚಿಕ್ಕ ವಯಸ್ಸಿನಿಂದಲೂ ನೋಡಿಕೊಳ್ಳುತ್ತಿದ್ದ, ಆರೈಕೆ ಮಾಡುತ್ತಿದ್ದ ಬಂಗಾರಮ್ಮ (65) ನಿಧನರಾಗಿದ್ದಾರೆ. ಲೀಲಾವತಿ ಕುಟುಂಬದ ಸದಸ್ಯರಂತೆ ಇದ್ದ, ಲೀಲಾವತಿಯವರ ಆರೈಕೆ ಮಾಡುತ್ತಿದ್ದ ಬಂಗಾರಮ್ಮ ಅವರ ಅಗಲಿಕೆಯೂ ವಿನೋದ್‌ ರಾಜ್‌ ಕುಟುಂಬಕ್ಕೆ ಆಘಾತ ನೀಡಿದೆ. ಹಿರಿಯ ನಟಿ ಲೀಲಾವತಿ ನಿಧನರಾದ ಕೆಲವೇ ದಿನಗಳಲ್ಲಿ ಬಂಗಾರಮ್ಮ ಕೂಡ ಇಹಲೋಕ ತ್ಯಜಿಸಿದ್ದಾರೆ.

ಬಂಗಾರಮ್ಮ ಅವರು ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿದ್ದರು. ಇವರನ್ನು ಬೆಂಗಳೂರಿನ ನಾಗರಬಾವಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಡಿಸೆಂಬರ್‌ 12ರ ಮಧ್ಯರಾತ್ರಿಯೇ ಇವರು ನಿಧನರಾಗಿದ್ದಾರೆ. ಚಿಕ್ಕವಯಸ್ಸಿನಿಂದಲೂ ಲೀಲಾವತಿ ಅವರ ಜತೆಗೇ ಗೆಳತಿಯಂತೆ ಬಂಗಾರಮ್ಮ ಇರುತ್ತಿದ್ದರು. ಲೀಲಾವತಿಯವರ ಸಹಾಯಕಿಯಾಗಿ ಜತೆಗಿದ್ದರು. ಇದೀಗ ಈ ಹಿರಿಯ ಜೀವವೂ ಚಿರನಿದ್ರೆಗೆ ಜಾರಿದೆ.

ಕನ್ನಡದಲ್ಲಿ 600ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದ ಹಿರಿಯ ನಟಿ ಲೀಲಾವತಿ ಡಿಸೆಂಬರ್‌ 8ರಂದು ನಿಧನರಾಗಿದ್ದರು. ಅವರು ನಿಧನರಾದ ನಾಲ್ಕೇ ದಿನದಲ್ಲಿ ಬಂಗಾರಮ್ಮ ಅವರೂ ಇಹಲೋಕ ತ್ಯಜಿಸಿದ್ದಾರೆ. ಲೀಲಾವತಿ ಅವರು ವಯೋಸಹಜ ಕಾಯಿಲೆಯಿಂದ ಕಳೆದ ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದರು. ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡ ಬಳಿನ ನೆಲಮಂಗಲದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸ್ಪತ್ರೆಯಲ್ಲಿ ನಿಧನರಾಗಿದ್ದರು.

ಹಿರಿಯ ನಟಿ ಲೀಲಾವತಿ ಅವರು ದಕ್ಷಿಣ ಭಾರತದ ಜನಪ್ರಿಯ ನಟಿಯಾಗಿದ್ದರು. ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲೂ ನಟಿಸಿದ್ದಾರೆ. ಇವರು ನಟಿಸಿದ ಚಿತ್ರಗಳ ಸಂಖ್ಯೆ 600 ದಾಟುತ್ತದೆ. ಕನ್ನಡದಲ್ಲಿಯೇ ನಾಲ್ಕುನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. 1937ರಲ್ಲಿ ನಟಿ ಲೀಲಾವತಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ್ದರು.

ಬಹುಭಾಷಾ ನಟಿಯಾಗಿ ಬಹುಬೇಡಿಕೆ ಪಡೆದುಕೊಂಡಿದ್ದ ಲೀಲಾವತಿಯವರ ಆರಂಭಿಕ ಬದುಕು ಹೂವಿನ ಹಾದಿಯಾಗಿರಲಿಲ್ಲ. ಜೀವನದಲ್ಲಿ ಸಕಲ ಕಷ್ಟಗಳನ್ನು ಅನುಭವಿಸಿದ್ದರು. ಬಾಲ್ಯದಲ್ಲಿ ಬಡತನ ಇವರ ಆಸ್ತಿಯಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಜನಿಸಿದ ಇವರು ಕೇವಲ ಎರಡನೇ ತರಗತಿ ಓದಿದ್ದರು. ಆ ಕಾಲದಲ್ಲಿ ಅಷ್ಟು ಶಿಕ್ಷಣ ಪಡೆಯುವುದು ಸುಲಭವಾಗಿರಲಿಲ್ಲ. ಇವರ ಜನ್ಮದಿನಾಂಕ ಸರಿಯಾಗಿ ಗೊತ್ತಿಲ್ಲ. 1936/37ರಲ್ಲಿ ಜನಿಸಿದ್ದರು. ಐವತ್ತು ದಶಕಕ್ಕೂ ಹೆಚ್ಚು ಚಿತ್ರರಂಗಕ್ಕೆ ಸೇವೆ ಸಲ್ಲಿಸಿದರು. ಇವರ ಬದುಕಿನ ಕಥೆ, ಸಿನಿಮಾ ರಂಗದ ಸಾಧನೆ ಕುರಿತ ವಿಶೇಷ ಲೇಖನ ಓದಿದ್ದು 2ನೇ ಕ್ಲಾಸ್‌, ಕಡುಬಡತನ, 15ನೇ ವಯಸ್ಸಿನಲ್ಲಿ ನಟನೆ ಆರಂಭ; ಲೀಲಾ ಕಿರಣ್‌ ಲೀಲಾವತಿ ಆದ ಕಥೆ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ