logo
ಕನ್ನಡ ಸುದ್ದಿ  /  ಮನರಂಜನೆ  /  ಗುರುತೇ ಸಿಗದಷ್ಟು ಬದಲಾಗಿದ್ದಾರೆ ನವರಸನಾಯಕ ಜಗ್ಗೇಶ್‌ ಅವ್ರ ಕುಬೇರ ಚಿತ್ರದ ಹೀರೋಯಿನ್;‌ ಎಲ್ಲಿದ್ದಾರೆ, ಹೇಗಿದ್ದಾರೆ ನಟಿ ರವಳಿ?

ಗುರುತೇ ಸಿಗದಷ್ಟು ಬದಲಾಗಿದ್ದಾರೆ ನವರಸನಾಯಕ ಜಗ್ಗೇಶ್‌ ಅವ್ರ ಕುಬೇರ ಚಿತ್ರದ ಹೀರೋಯಿನ್;‌ ಎಲ್ಲಿದ್ದಾರೆ, ಹೇಗಿದ್ದಾರೆ ನಟಿ ರವಳಿ?

Sep 01, 2024 02:24 PM IST

google News

ನವರಸ ನಾಯಕ ಜಗ್ಗೇಶ್‌ ನಟನೆಯ ಕುಬೇರ ಚಿತ್ರದ ಹಾಡಿನ ದೃಶ್ಯದಲ್ಲಿ ರವಳಿ

    • 1990ರಲ್ಲಿ ಮಲಯಾಳಂನ ಜಡ್ಜ್‌ಮೆಂಟ್‌ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ರವಳಿ, ಬಳಿಕ 1991ರಲ್ಲಿ ಜಯಭೇರಿ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಗುರುತಿಸಿಕೊಂಡರು. 1992ರಲ್ಲಿ ಪಟ್ಟತು ರಾಣಿ ಚಿತ್ರದಿಂದ ತಮಿಳು ಚಿತ್ರರಂಗಕ್ಕೂ ಬಂದರು. 1998ರಲ್ಲಿ ಗಡಿಬಿಡಿ ಕೃಷ್ಣ ಚಿತ್ರದಲ್ಲಿ ನಟಿಸಿ ಕನ್ನಡಕ್ಕೂ ಅವರ ಆಗಮನವಾಯಿತು. ಈಗ ಇದೇ ನಟಿ ಹೇಗಿದ್ದಾರೆ ಗೊತ್ತಾ? 
ನವರಸ ನಾಯಕ ಜಗ್ಗೇಶ್‌ ನಟನೆಯ ಕುಬೇರ ಚಿತ್ರದ ಹಾಡಿನ ದೃಶ್ಯದಲ್ಲಿ ರವಳಿ
ನವರಸ ನಾಯಕ ಜಗ್ಗೇಶ್‌ ನಟನೆಯ ಕುಬೇರ ಚಿತ್ರದ ಹಾಡಿನ ದೃಶ್ಯದಲ್ಲಿ ರವಳಿ (Photo\ Lahari Music)

Kannada Actress Ravali: ಸೌತ್‌ ಸಿನಿಮಾ ರಂಗದಲ್ಲಿ ಸರಿ ಸುಮಾರು ಎರಡು ದಶಕಗಳ ಕಾಲ ಬಣ್ಣದ ಲೋಕದಲ್ಲಿ ಮಿಂಚಿದ್ದ ನಟಿಯರ ಸಾಲಿನಲ್ಲಿ ನಿಲ್ಲಿವಂಥವರು ನಟಿ ರವಳಿ. ಆಂಧ್ರ ಮೂಲದ ರವಳಿ, ಬರಿ ತೆಲುಗು ಸಿನಿಮಾರಂಗಕ್ಕಷ್ಟೇ ಸೀಮಿತವಾಗಿರಲಿಲ್ಲ. ಅದರ ಜತೆಗೆ ಸೌತ್‌ನ ಇನ್ನೀತರ ಭಾಷೆಗಳಾದ ಕನ್ನಡ, ತಮಿಳು ಮತ್ತು ಮಲಯಾಳಂನಲ್ಲಿಯೂ ತಮ್ಮದೇ ಆದ ಸ್ಟಾರ್‌ಡಮ್‌ ಸೃಷ್ಟಿಸಿಕೊಂಡಿದ್ದರು. 90ರ ದಶಕದಲ್ಲಿ ಸೌತ್‌ನ ಹಾಟ್‌ ಬೆಡಗಿಯಾಗಿಯೂ ರವಳಿ ಗುರುತಿಸಿಕೊಂಡಿದ್ದರು. ಕನ್ನಡದಲ್ಲಿಯೂ ಹತ್ತಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ, ಇದೀಗ ಈ ನಟಿ ಎದುರಿಗೆ ಬಂದರೆ, ಇದು ರವಳಿನಾ? ಅನ್ನೋ ಪ್ರಶ್ನೆ ಎಲ್ಲರನ್ನೂ ಕಾಡುತ್ತದೆ.

1990ರಲ್ಲಿ ಚಿತ್ರರಂಗಕ್ಕೆ ಎಂಟ್ರಿ

1990ರಲ್ಲಿ ಮಲಯಾಳಂನ ಜಡ್ಜ್‌ಮೆಂಟ್‌ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಬಂದ ರವಳಿ, ಅದಾದ ಮೇಲೆ 1991ರಲ್ಲಿ ಜಯಭೇರಿ ಚಿತ್ರದ ಮೂಲಕ ಟಾಲಿವುಡ್‌ನಲ್ಲಿ ಗುರುತಿಸಿಕೊಂಡರು. 1992ರಲ್ಲಿ ಪಟ್ಟತು ರಾಣಿ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೂ ಪದಾರ್ಪಣೆ ಮಾಡಿದರು. ಅಲ್ಲಿಂದ ಏರುಗತಿಯಲ್ಲಿಯೇ ಶುರುವಾದ ರವಳಿ ಅವರ ಸಿನಿಮಾ ವೃತ್ತಿ ಜೀವನ, ಸುದೀರ್ಘ ಒಂದು ದಶಕಕ್ಕೂ ಅಧಿಕ ಕಾಲ ಸಾಲು ಸಾಲು ಸಿನಿಮಾಗಳಲ್ಲಿ ರವಳಿ ಬಿಜಿಯಾಗಿದ್ದರು. ತೆಲುಗು ತಮಿಳಿನ ವದ್ದು ಭಾವ ತಪ್ಪು, ವಿನೋದಮ್‌, ಪೆಲ್ಲಿ ಸಂದಡಿ, ಅಕ್ಕಾ ಭಾಗುನ್ನಾವಾ, ಪೆಲ್ಲಲ ರಾಜ್ಯಮ್‌, ಚಿನ್ನಬ್ಬಾಯಿ, ಅಭಿಮನ್ಯು ಸಿನಿಮಾಗಳ ಮೂಲಕ ಫೇಮಸ್‌ ಆದರು.

ಗಡಿಬಿಡಿ ಕೃಷ್ಣ ಚಿತ್ರದ ಮೂಲಕ ಕನ್ನಡಕ್ಕೆ

ಹೀಗಿರುವಾಗ ಇದೇ ನಟಿಯನ್ನು 1998ರಲ್ಲಿ ಶಿವರಾಜ್‌ಕುಮಾರ್‌ ಅವರ ಗಡಿಬಿಡಿ ಕೃಷ್ಣ ಸಿನಿಮಾ ಮೂಲಕ ಕನ್ನಡಕ್ಕೆ ಕರೆತಂದಿದ್ದರು ನಿರ್ದೇಶಕ ಓಂ ಸಾಯಿ ಪ್ರಕಾಶ್.‌ ಆ ಚಿತ್ರದ ಮೂಲಕ ಕನ್ನಡಕ್ಕೆ ಬಂದ ರವಳಿ, ಅದೇ ವರ್ಷ ನವರಸನಾಯಕ ಜಗ್ಗೇಶ್‌ ಅವರ ಜತೆಗೆ ವೀರಣ್ಣ ಸಿನಿಮಾದಲ್ಲಿಯೂ ನಾಯಕಿಯಾಗಿ ನಟಿಸಿದರು. ಬಳಿಕ ಜಗ್ಗೇಶ್‌ ಅವರ ಕುಬೇರ ಸಿನಿಮಾದಲ್ಲಿಯೂ ರವಳಿ ನಾಯಕಿಯಾಗಿ ಮುಂದುವರಿದರು. ಕಳನಾಯಕ, ಬಿಲ್ಲ ರಂಗ, ಜಿಪುಣ ನನ್ನ ಗಂಡ ಚಿತ್ರದಲ್ಲಿ ನಟಿಸಿದ್ದರು. ಅದಾದ ಬಳಿಕ ಮತ್ತೆ ಕನ್ನಡದ ಕಡೆಗೆ ಅವರ ಆಗಮನವಾಗಿಲ್ಲ.

ನಟಿ ರವಳಿ ಅವರ ಇತ್ತೀಚಿನ ಫೋಟೋಗಳು

ನಟನೆಯಿಂದ ದೂರ ದೂರ..

ರವಳಿ ಅವರು 1972ರಲ್ಲಿ ಆಂಧ್ರಪ್ರದೇಶದ ಗುಡಿವಾಡ ಅವರ ಜನ್ಮಸ್ಥಳ. ಸರಿ ಸುಮಾರು 20 ವರ್ಷಗಳ ಕಾಲ ನಟಿಯಾಗಿ ಗುರುತಿಸಿಕೊಂಡಿದ್ದ ರವಳಿ, 2007ರಲ್ಲಿ ನೀಲಿ ಕೃಷ್ಣ ಎಂಬುವವರ ಜತೆಗೆ ವಿವಾಹವಾದರು. ಮದುವೆಯ ನಂತರ ಚಿತ್ರರಂಗದಿಂದ ದೂರವೇ ಉಳಿದರು. ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೊದಲ ಮಗಳು 2008ರಲ್ಲಿ ಹುಟ್ಟಿದರೆ, 2018ರಲ್ಲಿ ಎರಡನೇ ಮಗಳಿಗೆ ರವಳಿ ಜನ್ಮ ನೀಡಿದ್ದಾರೆ. ಈ ನಡುವೆ ಸಿನಿಮಾದಿಂದ ದೂರ ಉಳಿದರೂ, ಸಿನಿಮಾದವರ ಜತೆಗಿನ ನಂಟು ರವಳಿ ಅವರಿಗಿದೆ. ಆಗಾಗ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.

ಸೋಷಿಯಲ್‌ ಮೀಡಿಯಾದಲ್ಲಿ ಆಗಾಗ ತಮ್ಮ ದೇಹದ ತೂಕದ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಸದ್ಯ ಮಕ್ಕಳು ಮತ್ತು ಪತಿಯ ಜತೆಗೆ ಹೈದರಾಬಾದ್‌ನಲ್ಲಿಯೇ ವಾಸವಾಗಿದ್ದಾರೆ ರವಳಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ