SIIMA Awards 2024: ದರ್ಶನ್‌ಗೆ ಸಿಗಬಹುದೇ ಅತ್ಯುತ್ತಮ ನಟ ಪ್ರಶಸ್ತಿ? ಕಾಟೇರ- ಸಪ್ತ ಸಾಗರದಾಚೆ ಎಲ್ಲೋ ನಡುವೆ ಬಿಗ್ ಫೈಟ್
Jul 17, 2024 12:46 PM IST
SIIMA Awards 2024: ದರ್ಶನ್‌ಗೆ ಸಿಗಬಹುದೇ ಅತ್ಯುತ್ತಮ ನಟ ಪ್ರಶಸ್ತಿ?
- SIIMA Awards 2024 Kannada Nominations: ಸದ್ಯ ಸೈಮಾ ಬಿಡುಗಡೆ ಮಾಡಿರುವ ನಾಮನಿರ್ದಶನಗೊಂಡವರ ಪಟ್ಟಿಯಲ್ಲಿ ಕಾಟೇರ ನಟ ದರ್ಶನ್, ಗುರುದೇವ ಹೊಯ್ಸಳ ನಟ ಡಾಲಿ ಧನಂಜಯ, ಟೋಬಿ ನಟ ರಾಜ್ ಬಿ ಶೆಟ್ಟಿ, ಶಿವಾಜಿ ಸುರತ್ಕಲ್ 2ನ ರಮೇಶ್ ಅರವಿಂದ್, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನಟ ರಕ್ಷಿತ್ ಶೆಟ್ಟಿ ಮತ್ತು ಘೊಸ್ಟ್ ನಟನೆಗಾಗಿ ಶಿವರಾಜ್ ಕುಮಾರ್ ಇದ್ದಾರೆ.
ಬೆಂಗಳೂರು: ಸೈಮಾ ಪ್ರಶಸ್ತಿ 2024ರ ನಾಮನಿರ್ದೇಶನ ಪಟ್ಟಿ ಬಿಡುಗಡೆಯಾಗಿದ್ದು, ಕಳೆದ ವರ್ಷ ಬಿಡುಗಡೆಯಾದ ಹಲವು ಸಿನಿಮಾಗಳು ಸ್ಪರ್ಧೆಯಲ್ಲಿವೆ. ಸದ್ಯ ಜೈಲಿನಲ್ಲಿ ಆರೋಪಿಯಾಗಿ ನ್ಯಾಯಂಗ ಬಂಧನಲ್ಲಿರುವ ನಟ ದರ್ಶನ್ ಅವರು ಅತ್ಯುತ್ತಮ ನಟ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದಾರೆ. ಕಾಟೇರ ಸಿನಿಮಾವು ಈ ಪಟ್ಟಿಯಲ್ಲಿದೆ. ಸೈಮಾ ನಾಮನಿರ್ದೇಶನ ಪಟ್ಟಿಯಲ್ಲಿ ಹಲವು ವಿಭಾಗಗಳಲ್ಲಿ ಕಾಟೇರ ಮತ್ತು ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳ ನಡುವೆ ಬಿಗ್ ಫೈಟ್ ಇದೆ. ಏಕೆಂದರೆ, ಕಾಟೇರ ಸಿನಿಮಾವು ಎಂಟು ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾವು 7 ವಿಭಾಗಗಳಲ್ಲಿ ನಾಮನಿರ್ದೇಶನಗೊಂಡಿದೆ.
ಕನ್ನಡದ ಅತ್ಯುತ್ತಮ ನಟ ಯಾರು?
SIIMA Awards 2024ನಲ್ಲಿ ಈ ಬಾರಿ ಅತ್ಯುತ್ತಮ ಕನ್ನಡ ನಟ ಯಾರು ಯಾರ ಪಾಲಾಗಲಿದೆ ಎಂಬ ಕುತೂಹಲ ಮೂಡಿದೆ. ಸದ್ಯ ಸೈಮಾ ಬಿಡುಗಡೆ ಮಾಡಿರುವ ನಾಮನಿರ್ದಶನಗೊಂಡವರ ಪಟ್ಟಿಯಲ್ಲಿ ಕಾಟೇರ ನಟ ದರ್ಶನ್, ಗುರುದೇವ ಹೊಯ್ಸಳ ನಟ ಡಾಲಿ ಧನಂಜಯ, ಟೋಬಿ ನಟ ರಾಜ್ ಬಿ ಶೆಟ್ಟಿ, ಶಿವಾಜಿ ಸುರತ್ಕಲ್ 2ನ ರಮೇಶ್ ಅರವಿಂದ್, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ನಟ ರಕ್ಷಿತ್ ಶೆಟ್ಟಿ ಮತ್ತು ಘೊಸ್ಟ್ ನಟನೆಗಾಗಿ ಶಿವರಾಜ್ ಕುಮಾರ್ ಇದ್ದಾರೆ. ಸೈಮಾ ಅವಾರ್ಡ್‌ಗೆ ನಾಮನಿರ್ದೇಶನಗೊಂಡಿರುವ ಈ ಸಿನಿಮಾಗಳಲ್ಲಿ ಯಾವ ಸಿನಿಮಾಕ್ಕೆ ಗೆಲುವಿನ ಕಿರೀಟ ದೊರಕಲಿದೆ ಎಂಬ ನಿರೀಕ್ಷೆ ಮೂಡಿದೆ.
ಅತ್ಯುತ್ತಮ ಸಿನಿಮಾ ಯಾವುದು?
ಸೈಮಾ ಪ್ರಶಸ್ತಿ 2024ಕ್ಕೆ ಕನ್ನಡದ ಐದು ಸಿನಿಮಾಗಳು ನಾಮನಿರ್ದೇಶನಗೊಂಡಿವೆ. ಆಚಾರ್ ಆ್ಯಂಡ್ ಕೋ, ಕಾಟೇರ, ಕೌಸಲ್ಯ ಸುಪ್ರಜಾ ರಾಮ, ಕ್ರಾಂತಿ ಮತ್ತು ಸಪ್ತ ಸಾಗರದಾಚೆ ಎಲ್ಲೋ- ಸೈಡ್ ಎ ಸೈಮಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿವೆ.
ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ಎಲ್ಲಿ ನಡೆಯಲಿದೆ?
ದುಬೈನ ವರ್ಲ್ಡ್ ಟ್ರೇಡ್ ಸೆಂಟರ್‌ನಲ್ಲಿ ಪ್ಟೆಂಬರ್ 14-15ರಂದು ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.
ಫಿಲ್ಮ್ ಫೇರ್ ಸೌತ್ ನಾಮಿನೇಷನ್ ವಿವರ
ಒಂದೆಡೆ ಸೈಮಾ ಪ್ರಶಸ್ತಿಗೆ ಕನ್ನಡದ ಹಲವು ಸಿನಿಮಾಗಳು ನಾಮನಿರ್ದೇಶನಗೊಂಡಿದ್ದರೆ, ಇನ್ನೊಂದೆಡೆ ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿಯೂ ಹೊರಬಿದ್ದಿದೆ. ಕನ್ನಡದ ಹಲವು ಸಿನಿಮಗಳು, ಹಲವು ನಟಿಯರು, ಹಲವು ನಟರು, ಹಲವು ನಿರ್ದೇಶಕರು, ಸಂಗೀತ ನಿರ್ದೇಶಕರು ಸೇರಿದಂತೆ ಫಿಲ್ಮ್ ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡವರ ಪಟ್ಟಿ ಬಿಡುಗಡೆಯಾಗಿದೆ.
ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಗೆ 19.20.21, ಡೇರ್‌ಡೇವಿಲ್ ಮುಸ್ತಫಾ, ಕಾಟೇರ, ಕೌಶಲ್ಯ ಸುಪ್ರಜಾ ರಾಮ, ಸಪ್ತ ಸಾಗರದಾಚೆ ಎಲ್ಲೋ ಮತ್ತು ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾಗಳು ನಾಮನಿರ್ದೇಶನಗೊಂಡಿವೆ. ಅತ್ಯುತ್ತಮ ನಿರ್ದೇಶಕ ವಿಭಾಗದಲ್ಲಿ ಹೇಮಂತ್ ಎಂ.ರಾವ್ (ಸಪ್ತ ಸಾಗರದಾಚೆ ಎಲ್ಲೋ), ಮಂಸೋರೆ (19.20.21), ನಿತಿನ್ ಕೃಷ್ಣಮೂರ್ತಿ (ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ) , ರಾಜ್ ಬಿ.ಶೆಟ್ಟಿ (ಸ್ವಾತಿ ಮುತ್ತಿನ ಮಳೆ ಹನಿಯೆ) ಮತ್ತು ಶಶಾಂಕ್ ಸೋಗಲ್ (ಡೇರ್ ಡೆವಿಲ್ ಮುಸ್ತಫಾ) ನಾಮನಿರ್ದೇಶನಗೊಂಡಿದ್ದಾರೆ.
ಅತ್ಯುತ್ತಮ ನಟ ವಿಭಾಗದಲ್ಲಿ ನಾಗಭೂಷಣ (ಟಗರು ಪಲ್ಯ), ರಾಜ್ ಬಿ ಶೆಟ್ಟಿ (ಸ್ವಾತಿ ಮುತ್ತಿನ ಮಳೆ ಹನಿಯೇ), ರಕ್ಷಿತ್ ಶೆಟ್ಟಿ (ಸಪ್ತ ಸಾಗರದಾಚೆ ಎಲ್ಲೋ), ಶಿಶಿರ್ ಬೈಕಾಡಿ (ಡೇರ್ ಡೆವಿಲ್ ಮುಸ್ತಫಾ) ಮತ್ತು
ಶಿವರಾಜ್ ಕುಮಾರ್ (ಡೆವಿಲ್) ನಾಮನಿರ್ದೇಶನಗೊಂಡಿದ್ದಾರೆ. ಅತ್ಯುತ್ತಮ ನಟಿ ವಿಭಾಗದಲ್ಲಿ ಅಕ್ಷತಾ ಪಾಂಡವಪುರ (ಪಿಂಕಿ ಎಲ್ಲಿ), ಅಮೃತಾ ಪ್ರೇಮ್ (ಟಗರು ಪಲ್ಯ), ಮಿಲನಾ ನಾಗರಾಜ್ (ಕೌಸಲ್ಯ ಸುಪ್ರಜಾ ರಾಮ) ಮತ್ತು ರುಕ್ಮಿಣಿ ವಸಂತ್ (ಸಪ್ತ ಸಾಗರದಾಚೆ ಎಲ್ಲೋ) ನಾಮ ನಿರ್ದೇಶನಗೊಂಡಿದ್ದಾರೆ. ಅತ್ಯುತ್ತಮ ಪೋಷಕ ನಟ ವಿಭಾಗದಲ್ಲಿ ಸಿರಿ ರವಿಕುಮಾರ್ (ಸ್ವಾತಿ ಮುತ್ತಿನ ಮಳೆ ಹನಿಯೇ), ನಾಗಭೂಷಣ (ಕೌಸಲ್ಯ ಸುಪ್ರಜಾ ರಾಮ), ಪೂರ್ಣಚಂದ್ರ (ಡೇರ್ ಡೆವಿಲ್ ಮುಸ್ತಫಾ), ರಾಜೇಶ್ ನಟರಂಗ (19.20.21), ರಮೇಶ್ ಇಂದಿರಾ (ಸಪ್ತ ಸಾಗರದಾಚೆ ಎಲ್ಲೋ) ಮತ್ತು ರಂಗಾಯಣ ರಘು (ಟಗರು ಪಲ್ಯ) ನಾಮ ನಿರ್ದೇಶನಗೊಂಡಿದ್ದಾರೆ. ಫಿಲ್ಮ್ ಫೇರ್ ಸೌತ್ ಪ್ರಶಸ್ತಿ ನಾಮಿನೇಷನ್ ಕುರಿತು ಸಂಪೂರ್ಣ ವಿವರ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ.