logo
ಕನ್ನಡ ಸುದ್ದಿ  /  Entertainment  /  Sandalwood News Superstar Rajinikanth Blessed Young Rebel Star Abhishek Ambareesh Aviva Bidapa Marriage Rsm

Abhishek Aviva Marriage: ಅವಿವಾ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಅಭಿಷೇಕ್‌ ಅಂಬರೀಶ್‌; ನೂತನ ವಧು ವರರಿಗೆ ಆಶೀರ್ವದಿಸಿದ ರಜನಿಕಾಂತ್‌

Rakshitha Sowmya HT Kannada

Jun 05, 2023 12:31 PM IST

ಅಭಿಷೇಕ್‌ ಅಂಬರೀಶ್ - ಅವಿವಾ ಬಿದ್ದಪ್ಪ ಮದುವೆ

  • ಜೂನ್‌ 7 ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನ ತ್ರಿಪುರ ವಾಸಿನಿ ಹಾಲ್‌ನಲ್ಲಿ ಅಭಿಷೇಕ್‌ ಹಾಗೂ ಅವಿವಾ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಕೂಡಾ ಚಿತ್ರರಂಗದಿಂದ ಅನೇಕ ಸೆಲೆಬ್ರಿಟಿಗಳು ಹಾಜರಾಗುವ ಸಾಧ್ಯತೆ ಇದೆ.

ಅಭಿಷೇಕ್‌ ಅಂಬರೀಶ್ - ಅವಿವಾ ಬಿದ್ದಪ್ಪ ಮದುವೆ
ಅಭಿಷೇಕ್‌ ಅಂಬರೀಶ್ - ಅವಿವಾ ಬಿದ್ದಪ್ಪ ಮದುವೆ

ರೆಬೆಲ್‌ ಸ್ಟಾರ್‌ ಅಂಬರೀಶ್‌ ಸಂಸದೆ ಸುಮಲತಾ ಪುತ್ರ, ಸ್ಯಾಂಡಲ್‌ವುಡ್‌ ಯಂಗ್‌ ರೆಬೆಲ್‌ ಸ್ಟಾರ್‌ ಅಂಬರೀಶ್‌ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖ್ಯಾತ ಫ್ಯಾಷನ್‌ ಗುರು ಪ್ರಸಾದ್‌ ಬಿದ್ದಪ್ಪ ಹಾಗೂ ಜುಡಿತಾ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಅವರನ್ನು ಅಭಿಷೇಕ್‌ ವರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Rajinikanth Biopic: ರಜನಿಕಾಂತ್ ಬಯೋಪಿಕ್ ಹಕ್ಕು ಪಡೆದ ಬಾಲಿವುಡ್ ನಿರ್ಮಾಪಕ! 2025ಕ್ಕೆ ಶೂಟಿಂಗ್‌, ರೀಲ್ ರಜನಿ ಯಾರು?

ದಾದಾ ಸಾಹೇಬ್ ಫಾಲ್ಕೆ ಫಿಲಂ ಫೆಸ್ಟಿವಲ್‌ನಲ್ಲಿ ‘ಕೆಂಡ’ಕ್ಕೆ ಪ್ರಶಸ್ತಿ; ಸಹದೇವ್ ಕೆಲವಡಿಗೆ ಬೆಸ್ಟ್ ಡೆಬ್ಯೂ ಡೈರೆಕ್ಟರ್ ಅವಾರ್ಡ್

ರಿಷಿಯ ‘ರುದ್ರ ಗರುಡ ಪುರಾಣ’ ಚಿತ್ರಕ್ಕೆ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಸಾಥ್‌; ಫಸ್ಟ್‌ ಲುಕ್‌ ರಿಲೀಸ್‌ ಮಾಡಿದ ದೊಡ್ಮನೆ ಸೊಸೆ

ಮದುವೆಗೆ ಒಪ್ಪಿಗೆ ಸಿಕ್ಕರೂ, ರಾಮ್‌ ಜತೆ ಮಕ್ಕಳು ಮಾಡಿಕೊಳ್ಳಲ್ವಂತೆ ಸ್ವಾರ್ಥಿ ಸೀತಾ! ಸೀತಮ್ಮ ನಿಂದ್ಯಾಕೋ ಓವರ್‌ ಆಯ್ತಮ್ಮ ಎಂದ ವೀಕ್ಷಕ

ಇಂದು ಬೆಳಗ್ಗೆ ಬೆಂಗಳೂರಿನ ಮಾಣಿಕ್ಯ ವಜ್ರ ಮಂಟಪದಲ್ಲಿ ಗೌಡರ ಸಂಪ್ರದಾಯಂತೆ ಬೆಳಗ್ಗೆ 9.30 ರಿಂದ 10.30ರ ನಡುವಿನ ಶುಭ ಮುಹೂರ್ತದಲ್ಲಿ ನಟ ಅಭಿಷೇಕ್‌ ತಮ್ಮ ಪ್ರೇಯಸಿ ಅವಿವಾಗೆ ಮಾಂಗಲ್ಯಧಾರಣೆ ಮಾಡಿದರು. ಸೂಪರ್‌ ಮಾಜಿ ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು, ಸೂಪರ್‌ ಸ್ಟಾರ್‌ ರಜನಿಕಾಂತ್‌, ಟಾಲಿವುಡ್‌ ಖ್ಯಾತ ನಟ ಮೋಹನ್‌ ಬಾಬು, ಯಶ್‌, ಉಪೇಂದ್ರ, ನರೇಶ್‌, ಪವಿತ್ರಾ ಲೋಕೇಶ್‌, ಸುಂದರ್‌ ರಾಜ್‌, ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌, ಸಚಿವ ಮಧು ಬಂಗಾರಪ್ಪ, ಅನಿಲ್‌ ಕುಂಬ್ಳೆ ಸೇರಿದಂತೆ ಅನೇಕ ಗಣ್ಯರು ಅಭಿಷೇಕ್‌ ಅವಿವಾ ಮದುವೆಗೆ ಆಗಮಿಸಿ ನೂತನ ವಧು ವರರನ್ನು ಹಾರೈಸಿದ್ದಾರೆ. ಕಳೆದ ವರ್ಷ ಡಿಸೆಂಬರ್‌ 11ರಂದು ಈ ಜೋಡಿ ನಿಶ್ವಿತಾರ್ಥ ಮಾಡಿಕೊಂಡಿದ್ದರು. ಆಗಲೂ ಕೂಡಾ ಅನೇಕ ಗಣ್ಯರು ಹಾಜರಾಗಿದ್ದರು.

ಜೂನ್‌ 7 ರಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನ ತ್ರಿಪುರ ವಾಸಿನಿ ಹಾಲ್‌ನಲ್ಲಿ ಅಭಿಷೇಕ್‌ ಹಾಗೂ ಅವಿವಾ ಅದ್ದೂರಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಆ ಕಾರ್ಯಕ್ರಮಕ್ಕೆ ಕೂಡಾ ಚಿತ್ರರಂಗದಿಂದ ಅನೇಕ ಸೆಲೆಬ್ರಿಟಿಗಳು ಹಾಜರಾಗುವ ಸಾಧ್ಯತೆ ಇದೆ. ಅಂಬರೀಶ್‌ ಹುಟ್ಟೂರು ಮಂಡ್ಯದಲ್ಲಿ ಜೂನ್‌ 16 ರಂದು ಬೀಗರ ಔತಣ ಕಾರ್ಯಕ್ರಮ ಇದೆ. ಈ ಕಾರ್ಯಕ್ರಮಕ್ಕೆ ಲಕ್ಷಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಅಂಬರೀಶ್‌ ಅಭಿಮಾನಿಗಳು ಅಭಿಷೇಕ್‌ ಹಾಗೂ ಅವಿವಾಗೆ ವೈವಾಹಿಕ ಜೀವನಕ್ಕೆ ಶುಭ ಕೋರಿದ್ದಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಚಿತ್ರರಂಗದಿಂದ ದೂರವಿದ್ರೂ ಕನ್ನಡ ಸಿನಿಮಾ ಮರೆತಿಲ್ಲ; ವಿಷ್ಣುವರ್ಧನ್‌ ಜೊತೆಗಿನ ಸಿನಿಮಾ ನೆನೆದ ಹಳ್ಳಿಮೇಷ್ಟ್ರು ಖ್ಯಾತಿಯ ಬಿಂದಿಯಾ

ಮುದ್ದಿನ ಹುಡುಗಿ ಚೆಂದ, ಮೌನದ ರೂಪವೇ ಅಂದ... 'ರಾಯರು ಬಂದರು ಮಾವನ ಮನೆಗೆ' ಸಿನಿಮಾದ ಈ ಸುಂದರ ಹಾಡು ಈಗಲೂ ಅನೇಕ ಜನರಿಗೆ ಬಹಳ ಇಷ್ಟ. ದ್ವಾರಕೀಶ್‌ ನಿರ್ದೇಶನದ ಈ ಚಿತ್ರದಲ್ಲಿ ಡಾ. ವಿಷ್ಣುವರ್ಧನ್‌, ಬಿಂದಿಯಾ, ಡಾಲಿ ಹಾಗೂ ಇನ್ನಿತರರು ನಟಿಸಿದ್ದರು. ಸದ್ಯಕ್ಕೆ ನಟನೆಯಿಂದ ದೂರ ಇರುವ ಬಿಂದಿಯಾ ಈ ಸಿನಿಮಾ ಹಾಗೂ ಡಾ. ವಿಷ್ಣುವರ್ಧನ್‌ ಅವರನ್ನು ನೆನಪಿಸಿಕೊಂಡಿದ್ದಾರೆ.

ಈ ಸ್ಟೋರಿಯನ್ನು ಪೂರ್ತಿ ಓದಲು ಇಲ್ಲಿ ಕ್ಲಿಕ್‌ ಮಾಡಿ

ಒಂಟಿ ಒಂಟಿಯಾಗಿರುವುದು ಬೋರೋ ಬೋರು ಎಂದ ಬಾವ ಬಾಮೈದ ಸಿನಿಮಾ ನಟಿ ರಂಭಾಗೆ ಇಂದು 47ನೇ ಹುಟ್ಟುಹಬ್ಬದ ಸಂಭ್ರಮ

ಆಂಧ್ರ ಪ್ರದೇಶದಲ್ಲಿ ಹುಟ್ಟಿ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಳಿ, ಭೋಜ್‌ಪುರಿ, ಇಂಗ್ಲೀಷ್‌ ಭಾಷೆಗಳ ಸಿನಿಮಾಗಳಲ್ಲಿ ನಟಿಸುವ ಮೂಲಕ ಬಹುಭಾಷಾ ನಟಿಯಾಗಿ ಹೆಸರು ಮಾಡಿರುವ ನಟಿ ರಂಭಾ ಇಂದು 47ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅಭಿಮಾನಿಗಳು, ಸಿನಿಮಾ ಗಣ್ಯರು ಮುದ್ದು ಹುಡುಗಿ ರಂಭಾಗೆ ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ರಂಭಾ ಬಗ್ಗೆ ತಿಳಿಯಲು ಈ ಲಿಂಕ್‌ ಕ್ಲಿಕ್‌ ಮಾಡಿ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು