logo
ಕನ್ನಡ ಸುದ್ದಿ  /  ಮನರಂಜನೆ  /  Dollars Pete: ದರೋಡೆ ಹಿಂದಿನ ರೋಚಕ ಕಥೆ ಹೊಂದಿರುವ ಡಾಲರ್ಸ್‌ ಪೇಟೆ ಸಿನಿಮಾ ಟೀಸರ್‌ ರಿಲೀಸ್‌; ಇದು ನೈಜ ಘಟನೆ ಆಧಾರಿತ ಚಿತ್ರ

Dollars Pete: ದರೋಡೆ ಹಿಂದಿನ ರೋಚಕ ಕಥೆ ಹೊಂದಿರುವ ಡಾಲರ್ಸ್‌ ಪೇಟೆ ಸಿನಿಮಾ ಟೀಸರ್‌ ರಿಲೀಸ್‌; ಇದು ನೈಜ ಘಟನೆ ಆಧಾರಿತ ಚಿತ್ರ

Rakshitha Sowmya HT Kannada

May 23, 2023 06:30 AM IST

ಡಾಲರ್ಸ್‌ ಪೇಟೆ ಸಿನಿಮಾ ಟೀಸರ್‌ ರಿಲೀಸ್

    • ಡಾಲರ್ಸ್‌ ಪೇಟೆ,  ಹೈಪರ್ ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್. 4-5 ಪಾತ್ರಗಳು ಒಂದು ಜಾಗದಲ್ಲಿ ಕ್ರಾಸ್ ಓವರ್ ಆಗುತ್ತೆ ಎನ್ನುವುದು ಚಿತ್ರದ ಹೈಲೆಟ್. 50ರಷ್ಟು ಸಿನಿಮಾ ಬ್ಯಾಂಕ್‌ನಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಡಾಲರ್ಸ್‌ ಪೇಟೆ ಸಿನಿಮಾ ಟೀಸರ್‌ ರಿಲೀಸ್
ಡಾಲರ್ಸ್‌ ಪೇಟೆ ಸಿನಿಮಾ ಟೀಸರ್‌ ರಿಲೀಸ್

ಕನ್ನಡ ಚಿತ್ರರಂಗದಲ್ಲಿ ಈಗ ಹೊಸ ಪ್ರತಿಭೆಗಳ ವಿಭಿನ್ನ ಪರ್ವ ಕಾಲ ಶುರುವಾಗಿದೆ. ಅದರ ಮುಂದುವರೆದ ಭಾಗವಾಗಿ ರೂಪುಗೊಂಡಿರುವ ಸಿನಿಮಾ ಡಾಲರ್ಸ್ ಪೇಟೆ. ಮಾರ್ಫಿ, ಮದಗಜ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕನಾಗಿ ಕೆಲಸ ಮಾಡಿರುವ ಮೋಹನ್ ಎನ್ ಮುನಿನಾರಾಯಣಪ್ಪ ನಿರ್ದೇಶನದ ಈ ಚಿತ್ರದ ಟೀಸರ್ ರಿಲೀಸ್ ಆಗಿದೆ. ದರೋಡೆ ಹಿಂದಿನ ರೋಚಕ ಕಥೆಯನ್ನು ಬಿಚ್ಚಿಡುವ ಟೀಸರ್‌ನಲ್ಲಿ ಬುಲೆಟ್‌ಗಳ ಆರ್ಭಟ, ಹೊಡೆದಾಟ-ಬಡಿದಾಟ, ಹಣ, ವಿಲನ್ ಅಬ್ಬರ ಜೋರಾಗಿದೆ.

ಟ್ರೆಂಡಿಂಗ್​ ಸುದ್ದಿ

Deepfake: ತಲೆ ಆಲಿಯಾ ಭಟ್‌ರದ್ದು, ದೇಹ ಯಾರದ್ದು? ಆಲಿಯಾ ಭಟ್‌ರ ಮತ್ತೊಂದು ಡೀಫ್‌ಫೇಕ್‌ ವಿಡಿಯೋ ವೈರಲ್‌, ಅಸಲಿ- ನಕಲಿ ವಿಡಿಯೋ ನೋಡಿ

ದ ಸೂಟ್‌ ಕನ್ನಡ ಸಿನಿಮಾ ಮೇ 17ರಂದು ಬಿಡುಗಡೆ; ಟ್ರೇಲರ್‌ ನೋಡಿ ಖುಷಿಪಟ್ಟ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Choo Mantar: ಶರಣ್‌ ಲಕ್‌ ಬದಲಾಯಿಸಬಹುದೇ ಛೂ ಮಂತರ್‌? ಬಹುನಿರೀಕ್ಷಿತ ಸಿನಿಮಾ ರಿಲೀಸ್‌ ಮುಂದೂಡಿಕೆ

Tejasswi Prakash: ಉರ್ಫಿ ಹಾಕುವ ಬಟ್ಟೆಗಳು ಇದಕ್ಕಿಂತಲೂ ಚೆನ್ನಾಗಿರುತ್ವೆ: ತೇಜಸ್ವಿ ಪ್ರಕಾಶ್‌ ಎದೆಗಾರಿಕೆಗೆ ನೆಟ್ಟಿಗರಿಂದ ಕ್ಲಾಸ್‌

ಡಾಲರ್ಸ್‌ ಪೇಟೆ ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿ ಟೀಸರ್ ರಿಲೀಸ್ ಮಾಡುವ ಮೂಲಕ ಪ್ರಚಾರ ಕಾರ್ಯಕ್ಕೆ ಚಾಲನೆ ಕೊಟ್ಟಿದೆ. ಸೋಮವಾರ ಬೆಂಗಳೂರಿನ ರೇಣುಕಾಂಬ ಸ್ಟುಡಿಯೋದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಟೀಸರ್ ರಿಲೀಸ್ ಮಾಡಿದ ಚಿತ್ರತಂಡ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದೆ. ನಿರ್ದೇಶಕ ಮೋಹನ್ ಮಾತನಾಡಿ, ಡಾಲರ್ಸ್ ಪೇಟೆ ಸತ್ಯ ಘಟನೆಯಾಧಾರಿತ ಚಿತ್ರ. ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಬ್ಯಾಂಕ್ ಮ್ಯಾನೇಜರ್‌ನಿಂದ 13 ಕೋಟಿ ಹಣ, 100 ಜನಕ್ಕೆ ಮಿಸ್ ಆಗಿ ಡೆಪೋಸಿಟ್ ಆಗುತ್ತದೆ. ಅದು ಹೇಗೆ ಏನು ಅನ್ನೋದರ ಸುತ್ತ ಸಿನಿಮಾ ಸಾಗುತ್ತದೆ. ಇಡೀ ಸಿನಿಮಾವನ್ನು ಒಂದು ಪಾತ್ರದ ಮೇಲೆ ಡೆವಲಪ್ ಮಾಡಿಲ್ಲ. ಇದೊಂದು ಹೈಪರ್ ಲಿಂಕ್ ಹಾಗೂ ಡಾರ್ಕ್ ಕಾಮಿಡಿ ಥ್ರಿಲ್ಲರ್. 4-5 ಪಾತ್ರಗಳು ಒಂದು ಜಾಗದಲ್ಲಿ ಕ್ರಾಸ್ ಓವರ್ ಆಗುತ್ತೆ ಎನ್ನುವುದು ಚಿತ್ರದ ಹೈಲೆಟ್. 50ರಷ್ಟು ಸಿನಿಮಾ ಬ್ಯಾಂಕ್‌ನಲ್ಲೇ ನಡೆಯಲಿದೆ ಎಂದು ಮಾಹಿತಿ ನೀಡಿದರು.

ನಟಿ ಸೌಮ್ಯ ಮಾತನಾಡಿ, ನಾನು ಪೂಜಾ ಎಂಬ ಪಾತ್ರದಲ್ಲಿ ನಟಿಸಿದ್ದೇನೆ. ಈ ಸಿನಿಮಾದ ಭಾಗವಾಗಿರುವುದು ನನಗೆ ಖುಷಿ ಕೊಟ್ಟಿದೆ. ನಿರ್ಮಾಪಕಿ ಪೂಜಾ ಬೆನ್ನೆಲುಬಾಗಿ ನಿಂತು ಯಾವುದೇ ಕುಂದು ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ನಿರ್ದೇಶಕರು ನನಗೆ ಕಥೆ ಹೇಳಿದಾಗ ತಕ್ಷಣ ಸಿನಿಮಾ ಮಾಡಲು ಒಪ್ಪಿಕೊಂಡೆ. ಥ್ರಿಲ್ಲರ್ ಜಾನರ್ ಆದರೂ ಪಾತ್ರಗಳು ಅಳುತ್ತಿದ್ದರು ಪ್ರೇಕ್ಷಕರು ನಗುವಂತೆ ಮಾಡುವ ಸನ್ನಿವೇಶ ಚಿತ್ರದಲ್ಲಿದೆ. ನಿಮ್ಮೆಲ್ಲರ ಸಹಕಾರ ಹೀಗೆ ಇರಲಿ ಎಂದರು.

ನಟ ವೆಂಕಟ್ ರಾಜು ಮಾತನಾಡಿ, ನಾನು ಡಾನ್ ಪಾತ್ರದಲ್ಲಿ ನಟಿಸಿದ್ದೇನೆ. ನನ್ನ ಸ್ನೇಹಿತನಿಂದ ಈ ಪಾತ್ರ ಸಿಕ್ಕಿದೆ. ಮೂರು ತಿಂಗಳು ಪಾತ್ರಕ್ಕೆ ತಯಾರಿ ಮಾಡಿಕೊಂಡಿದ್ದೇನೆ. ಸೆಟ್‌ನಲ್ಲಿ ಇಡೀ ಕುಟುಂಬದ ರೀತಿ ಎಲ್ಲರೂ ಟ್ರೀಟ್ ಮಾಡುತ್ತಿದ್ದರು. ಇದು ಒಳ್ಳೆ ಅನುಭವ. ಪ್ರತಿಯೊಬ್ಬರು ಸಿನಿಮಾ ನೋಡುವ ಮೂಲಕ ನಮ್ಮನ್ನು ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು.

ಈ ಸಿನಿಮಾದಲ್ಲಿ ಲೂಸಿಯಾ ಪವನ್ ಪತ್ನಿ ಸೌಮ್ಯ ಜಗನ್ ಮೂರ್ತಿ, ಮೆಟ್ರೋ ಸಾಗಾ ಖ್ಯಾತಿಯ ಆಕರ್ಷ್ ಕಮಲ, ವೆಂಕಟ್, ರಾಜ್, ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ದಿಯಾ ಸಿನಿಮಾ ಖ್ಯಾತಿಯ ಪೃಥ್ವಿ ಅಂಬರ್ ಗೆಸ್ಟ್ ಅಪಿಯರೆನ್ಸ್ ಚಿತ್ರದಲ್ಲಿದೆ. ಉಳಿದಂತೆ ದತ್ತು ಬಣಕರ್, ಕೌಶಿಲ್, ರಾಘವೇಂದ್ರ, ಹೊನ್ನವಳ್ಳಿ ಕೃಷ್ಣ, ಡ್ರಾಮಾ ಜೂನಿಯರ್ಸ್ ಮಹೇಂದ್ರ ಹಾಗೂ ಇನ್ನಿತರರು ಚಿತ್ರದಲ್ಲಿದ್ದಾರೆ.

ಸೂರಜ್ ಜೋಯಿಸ್ ಸಂಗೀತ ನಿರ್ದೇಶನ, ಆನಂದ್ ಸುಂದರೇಶ ಛಾಯಾಗ್ರಹಣ, ಮಹೇಶ್ ತೊಗಟ್ಟ ಸಂಕಲನ, ಅರ್ಜುನ್ ರಾಜ್ ಮತ್ತು ನರಸಿಂಹ ಸಾಹಸ ನಿರ್ದೇಶನ, ರಮೇಶ್ ಎಸ್, ಮನೋಹರ ಸಹ ಬರವಣಿಗೆ ಡಾಲರ್ಸ್‌ ಪೇಟೆ ಸಿನಿಮಾಗೆ ಇದೆ. ಪೆಂಟ್ರಿಕ್ಸ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ ಪೂಜಾ ಟಿ.ವೈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು