Kaatera Release: ಕೈಯಲ್ಲಿ ಕರ್ಪೂರ ಬೆಳಗಿದ ಅಭಿಮಾನಿ, ಕಾಟೇರ ಯಶಸ್ಸಿಗೆ ದೇವಸ್ಥಾನದಲ್ಲಿ ಪೂಜೆ; ಕಾಟೇರ ಹಬ್ಬದ ವಿಡಿಯೋಗಳನ್ನು ನೋಡಿ
Dec 29, 2023 01:46 PM IST
ಕಾಟೇರ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿದ ದರ್ಶನ್ ಅಭಿಮಾನಿಗಳು
ದರ್ಶನ್ ಹಾಗೂ ಆರಾಧನಾ ರಾಮ್ ಅಭಿನಯದ ಕಾಟೇರ ಚಿತ್ರವನ್ನು ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ಧಾರೆ. ರಾಜ್ಯಾದ್ಯಂತ ಅಭಿಮಾನಿಗಳೂ ತಮ್ಮದೇ ರೀತಿ ಸಿನಿಮಾ ಬಿಡುಗಡೆಯನ್ನು ಸಂಭ್ರಮಿಸಿದ್ದಾರೆ.
Kaatera Release: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕಾಟೇರ ಸಿನಿಮಾ ಇಂದು ತೆರೆ ಕಂಡಿದೆ. ಈ ಚಿತ್ರದ ಮೂಲಕ ನಟಿ ಮಾಲಾಶ್ರೀ ನಿರ್ಮಾಪಕ ರಾಮು ಪುತ್ರಿ ಆರಾಧನಾ ರಾಮ್ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. 2023ನೇ ವರ್ಷದ ಕೊನೆಯ ಸಿನಿಮಾವಾಗಿ ಎಂಟ್ರಿ ಕೊಟ್ಟಿರುವ ಕಾಟೇರ ಅಭಿಮಾನಿಗಳ ಮನಸ್ಸು ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಕಾಟೇರ ಚಿತ್ರವನ್ನು ರಾಕ್‌ಲೈನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ರಾಕ್‌ಲೈನ್ ವೆಂಕಟೇಶ್ ನಿರ್ಮಿಸಿದ್ದು, ತರುಣ್ ಸುಧೀರ್ ಆಕ್ಷನ್ ಕಟ್ ಹೇಳಿದ್ಧಾರೆ. ಚಿತ್ರದಲ್ಲಿ ದರ್ಶನ್ ಹಾಗೂ ಆರಾಧನಾ ರಾಮ್ ಜೊತೆಗೆ ಜಗಪತಿ ಬಾಬು, ಕುಮಾರ್ ಗೋವಿಂದ್, ಶ್ರುತಿ ಕೃಷ್ಣ ಹಾಗೂ ಇನ್ನಿತರರು ನಟಿಸಿದ್ದಾರೆ. ರಾಜ್ಯಾದ್ಯಂತ ಕಾಟೇರ ಸಿನಿಮಾ ಬಿಡುಗಡೆಯನ್ನು ಅಭಿಮಾನಿಗಳು ಹಬ್ಬವನ್ನಾಗಿ ಆಚರಿಸುತ್ತಿದ್ದಾರೆ. ಒಂದೆಡೆ ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದರೆ, ಮತ್ತೊಂದೆಡೆ ದರ್ಶನ್ ಅಭಿಮಾನಿಗಳು ಇತರ ಅಭಿಮಾನಿಗಳಿಗಾಗಿ ಬೆಳ್ಳಂ ಬೆಳಗ್ಗೆ ಬಾಡೂಟ ತಯಾರಿಸಿದ್ದಾರೆ. ಮಂಡ್ಯದಲ್ಲಿ ಬಿರ್ಯಾನಿ ತಯಾರಿಸಿ ಹಂಚಿದ್ದಾರೆ. ಹೀಗೆ ಇಡೀ ರಾಜ್ಯದಲ್ಲೇ ಕಾಟೇರ ಬಿಡುಗಡೆಯನ್ನು ಮನೆ ಹಬ್ಬದಂತೆ ಆಚರಿಸಲಾಗುತ್ತಿದೆ.
ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ವಿಡಿಯೋಗಳಿವು.
ಅಭಿಮಾನಿಯೊಬ್ಬರು ತಮ್ಮ ಕೈಯಲ್ಲಿ ಕರ್ಪೂರ ಹಚ್ಚಿಕೊಂಡು ದರ್ಶನ್ ಕಟೌಟ್‌ಗೆ ಬೆಳಗುತ್ತಿರುವ ಆರತಿ ಬೆಳಗುತ್ತಿರುವ ವಿಡಿಯೋವೊಂದನ್ನು ಯೂಸರ್‌ವೊಬ್ಬರು ತಮ್ಮ ಎಕ್ಸ್ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದು ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ತಾವು ನಾಯಕಿಯಾಗಿ ನಟಿಸಿರುವ ಕಾಟೇರ ಚಿತ್ರವನ್ನು ಆಭಿಮಾನಿಗಳೊಂದಿಗೆ ಜುಳಿತು ನೋಡಲು ಆರಾಧನಾ ರಾಮ್, ನಿರ್ದೇಶಕ ಮಹೇಶ್ ಜೊತೆ ಜೆ.ಪಿ.ನಗರದ ಸಿದ್ದೇಶ್ವರ ಚಿತ್ರಮಂದಿರಕ್ಕೆ ಆಗಮಿಸಿದ್ದರು. ಈ ಸಮಯದಲ್ಲಿ ಅಭಿಮಾನಿಗಳು ಆರಾಧನಾ ಫೋಟೋ, ವಿಡಿಯೋ ಸೆರೆ ಹಿಡಿದ ಕ್ಷಣ.
ರಾಜ್ಯಾದ್ಯಂತ ಸುಮಾರು 21 ಪ್ರಮುಖ ಚಿತ್ರಮಂದಿರಗಳಲ್ಲಿ ಸಿನಿಮಾ ನೋಡಲು ಬರುವ ಅಭಿಮಾನಿಗಳಿಗಾಗಿ ದರ್ಶನ್ ಅಭಿಮಾನಿಗಳು ಬಾಡೂಟ ಏರ್ಪಡಿಸಿದ್ದರು. ದಚ್ಚು ಅಭಿಮಾನಿಗಳು ಸಿನಿಮಾ ನೋಡಿ ಸಂಭ್ರಮಿಸುವುದರ ಜೊತೆಗೆ ನಾನ್ ವೆಜ್ ಸವಿದು ಖುಷಿಪಟ್ಟರು.
ರಾಜ್ಯದ ಬಹುತೇಕ ಚಿತ್ರಮಂದಿರಗಳಲ್ಲಿ ಕಾಟೇರ ಚಿತ್ರದ ದರ್ಶನ್ ಕಟೌಟ್‌ಗೆ ಬೃಹತ್ ಹೂವಿನ ಹಾರ ಹಾಕಿ ಸಂಭ್ರಮಿಸಿದರು. ಇನ್ನೂ ಕೆಲವೆಡೆ ಅಭಿಮಾನಿಗಳು ಕಟೌಟ್‌ಗೆ ಬಿಂದಿಗೆಗಳಿಂದ ತಂದ ಹಾಲಿನಿಂದ ಅಭಿಷೇಕ ಮಾಡಿ ಖುಷಿಪಟ್ಟರು.
ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಭಿಮಾನಿಗಳು ಕಾಟೇರ ಚಿತ್ರದ ಪೋಸ್ಟರ್ ಜೊತೆ ಎತ್ತಿನ ಗಾಡಿ, ಟ್ರಾಕ್ಟರ್ ಮೆರವಣಿಗೆ ಮಾಡಿ ಜಾತ್ರೆ ಮಾಡಿದರು. ಈ ವಿಡಿಯೋ ಕೂಡಾ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ದರ್ಶನ್ ಅಕ್ಕನ ಮಗ ಚಂದು, ಬೆಂಗಳೂರಿನ ಅಣ್ಣಮ್ಮ ತಾಯಿ ದೇವಸ್ಥಾನಕ್ಕೆ ತೆರಳಿ ಸಿನಿಮಾ ಯಶಸ್ವಿಯಾಗಲಿ ಎಂದು ಪೂಜೆ ಮಾಡಿಸಿದ ಕ್ಷಣ.