logo
ಕನ್ನಡ ಸುದ್ದಿ  /  ಮನರಂಜನೆ  /  Vikipedia: 'ವಿಕಿಪೀಡಿಯ'ದಲ್ಲಿ ಹೆಸರು ಸೇರಿಸಲು ಹೊರಟಿದೆ ಯುವ ಸಮೂಹ...

Vikipedia: 'ವಿಕಿಪೀಡಿಯ'ದಲ್ಲಿ ಹೆಸರು ಸೇರಿಸಲು ಹೊರಟಿದೆ ಯುವ ಸಮೂಹ...

HT Kannada Desk HT Kannada

Aug 07, 2022 07:24 PM IST

google News

'ವಿಕಿಪೀಡಿಯ'ದಲ್ಲಿ ಹೆಸರು ಸೇರಿಸಲು ಹೊರಟಿದೆ ಯುವ ಸಮೂಹ...

    • ಜಗತ್ತಿನಲ್ಲಿ ಎರಡು ರೀತಿ ಜನ ಇರ್ತಾರೆ. ಒಂದು ವಿಕಿಪೀಡಿಯದಲ್ಲಿ ಇಲ್ಲದೇ ಇರುವವರು. ಮತ್ತೊಬ್ರು ವಿಕಿಪೀಡಿಯಲ್ಲಿ ಇರುವವರು. ವಿಕಿಪೀಡಿಯದಲ್ಲಿ ಇಲ್ಲದೇ ಇರುವ ವಿಕಾಸ್ ತನ್ನ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ಅದೂ “ವಿಕಿವೀಪಿಯ” ಮೂಲಕ
'ವಿಕಿಪೀಡಿಯ'ದಲ್ಲಿ ಹೆಸರು ಸೇರಿಸಲು ಹೊರಟಿದೆ ಯುವ ಸಮೂಹ...
'ವಿಕಿಪೀಡಿಯ'ದಲ್ಲಿ ಹೆಸರು ಸೇರಿಸಲು ಹೊರಟಿದೆ ಯುವ ಸಮೂಹ...

ಬೆಂಗಳೂರು: ಸತ್ಯಂ ಶಿವಂ ಸುಂದರಂ, ಒಂದೂರಲ್ಲಿ ರಾಜರಾಣಿ, ಮಹಾದೇವಿ, ಶಾಂತಂಪಾಪಂ, ಯಾರೇ ನೀ‌ ಮೋಹಿನಿ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ಯಶವಂತ್ "ವಿಕಿಪೀಡಿಯ"(Vikipedia) ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿರುವುದು ಗೊತ್ತೇ ಇದೆ. ಇದೀಗ ಈ ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ನೋಡುಗರ ಕುತೂಹಲ ಹೆಚ್ಚಿಸಿದೆ.

ಜಗತ್ತಿನಲ್ಲಿ ಎರಡು ರೀತಿ ಜನ ಇರ್ತಾರೆ. ಒಂದು ವಿಕಿಪೀಡಿಯದಲ್ಲಿ ಇಲ್ಲದೇ ಇರುವವರು. ಮತ್ತೊಬ್ರು ವಿಕಿಪೀಡಿಯಲ್ಲಿ ಇರುವವರು. ವಿಕಿಪೀಡಿಯದಲ್ಲಿ ಇಲ್ಲದೇ ಇರುವ ವಿಕಾಸ್ ತನ್ನ ಕಥೆ ಹೇಳೋದಿಕ್ಕೆ ಬರ್ತಿದ್ದಾರೆ. ವಿಕಾಸ್ ಪಾತ್ರದಲ್ಲಿ ಯಶವಂತ್ ನಟಿಸಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ಕಾಣಿಸಿಕೊಂಡಿದ್ದಾರೆ.

ಟ್ರೇಲರ್ ಬಗ್ಗೆ ಮಾತನಾಡುವ ಯಶವಂತ್, ಪ್ರಪಂಚದಲ್ಲಿ ಎರಡು ರೀತಿ ಜನ ಅಲ್ಲ. ಮೂರು ರೀತಿ ಜನ ಇರ್ತಾರೆ. ಆ ಮೂರನೇಯವರೇ ನಾವು. ವಿಕಿಪೀಡಿಯದಲ್ಲಿ ತಮ್ಮ ಹೆಸರು ಬರಲು ಹೊರಟವರ ಗುಂಪಿಗೆ ನಾನು ನನ್ನ ತಂಡ ಸೇರುತ್ತದೆ ಅನಿಸುತ್ತದೆ. ಕಷ್ಟಪಟ್ಟು ಮೂರು ವರ್ಷ ಸಿ‌ನಿಮಾ ಮಾಡಿದ್ದೇವೆ. ಈ ತಿಂಗಳ 26ಕ್ಕೆ ತೆರೆಗೆ ಬರ್ತಿದೆ ಬೆಂಬಲ ನೀಡಿ ಎಂದರು.

ಆಶಿಕಾ ಸೋಮಶೇಖರ್‌ ಸಹ ಈಗಾಗಲೇ ಸಿನಿಮಾ, ಕಿರುಚಿತ್ರಗಳಲ್ಲಿ ನಟಿಸಿದ ಅನುಭವ ಇದೆ. ಆದಿತ್ಯ ಅಭಿನಯದ "ಮುಂದುವರಿದ ಅಧ್ಯಾಯ" ಚಿತ್ರದಲ್ಲಿ ಆಶಿಕಾ ನಟಿಸಿದ್ದರು. "ಎ ಡೇಟ್"‌ ಕಿರುಚಿತ್ರದಲ್ಲಿಯೂ ನಟಿಸಿದ್ದರು. ಇದಷ್ಟೇ ಅಲ್ಲ "ಪುಟ್ಟ ಮೀನಿನ ಹೆಜ್ಜೆಗಳು" ಎಂಬ ಕವನ ಸಂಕಲನವನ್ನೂ ಬರೆದಿದ್ದರು. ಇನ್ನು ಈಗಾಗಲೇ ಮೋಷನ್ ಪೋಸ್ಟರ್ ಹಾಗೂ "ತನು ಮನ.." ಹಾಡಿನ ಮೂಲಕ ಟಾಕ್ ಕ್ರಿಯೇಟ್ ಮಾಡಿರುವ "ವಿಕಿಪೀಡಿಯ" ಸಿನಿಮಾಗೆ ಸೋಮು ಹೊಯ್ಸಳ ಆಕ್ಷನ್ ಕಟ್ ಹೇಳಿದ್ದು, ಇದು ಇವರ ಚೊಚ್ಚಲ ಸಿನಿಮಾವಾಗಿದೆ.

ಡ್ರಾಮಾ, ಎಮೋಷನಲ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಹೆಚ್ ಕೆ ಕ್ಯಾಮೆರಾ, ರಾಕೇಶ್ ಸಂಗೀತ, ರವಿಚಂದ್ರನ್ ಸಿ ಸಂಕಲನ ಸಿನಿಮಾಕ್ಕಿದೆ. ರಫ್ ಕಟ್ ಪ್ರೊಡಕ್ಷನ್ ನಡಿ ನಿರ್ಮಾಣವಾಗಿರುವ ಸಿನಿಮಾಗೆ ಯು/ಎ ಸರ್ಟಿಫಿಕೇಟ್ ಸಿಕ್ಕಿದ್ದು, ಇದೇ ತಿಂಗಳ 26ಕ್ಕೆ ತೆರೆಗೆ ಬರ್ತಿದೆ.

<p>ವಿಕಿಪೀಡಿಯ ಸಿನಿಮಾ ತಂಡ</p>

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ