logo
ಕನ್ನಡ ಸುದ್ದಿ  /  ಮನರಂಜನೆ  /  Aparna Balamurali Body Shaming: ನೀನು ಆ ಪಾತ್ರಕ್ಕೆ ಲಾಯಕ್‌ ಎಂದ ಜನರು...'ಸೂರರೈ ಪೊಟ್ರು' ನಟಿ ಉತ್ತರಿಸಿದ್ದು ಹೀಗೆ..!

Aparna Balamurali Body Shaming: ನೀನು ಆ ಪಾತ್ರಕ್ಕೆ ಲಾಯಕ್‌ ಎಂದ ಜನರು...'ಸೂರರೈ ಪೊಟ್ರು' ನಟಿ ಉತ್ತರಿಸಿದ್ದು ಹೀಗೆ..!

HT Kannada Desk HT Kannada

Sep 16, 2022 02:48 PM IST

'ಸೂರರೈ ಪೊಟ್ರು' ನಟಿ ಅಪರ್ಣಾ ಬಾಲಮುರಳಿ

    • ಅಪರ್ಣಾ ಮೊದಲಿನಿಂದಲೂ ದಪ್ಪ ಇದ್ದಾರೆ. ಆದರೆ ಇದೀಗ ಅವರು ಮತ್ತಷ್ಟು ದಪ್ಪ ಆಗಿದ್ದಾರೆ. ಇದೇ ವಿಚಾರವನ್ನು ಹಲವರು ಟ್ರೋಲ್‌ಗೆ ಬಳಸಿಕೊಳ್ಳುತ್ತಿದ್ದಾರೆ. ''ದಿನೇ ದಿನೆ ನೀನು ದಪ್ಪ ಆಗ್ತಿದ್ಯ, ನಾಯಕಿಯಾಗಿ ಅಲ್ಲ, ನೀನು ನಾಯಕಿ-ನಾಯಕನ ತಾಯಿ ಪಾತ್ರಕ್ಕೆ ಲಾಯಕ್ಕು'' ಎಂದು ಏಕವಚನದಲ್ಲೇ ಕಮೆಂಟ್‌ ಮಾಡುತ್ತಿದ್ದಾರೆ.
'ಸೂರರೈ ಪೊಟ್ರು' ನಟಿ ಅಪರ್ಣಾ ಬಾಲಮುರಳಿ
'ಸೂರರೈ ಪೊಟ್ರು' ನಟಿ ಅಪರ್ಣಾ ಬಾಲಮುರಳಿ (PC: Aparna Balamurali Facebook)

ಸಿನಿಮಾ ಸೆಲೆಬ್ರಿಟಿಗಳ ಬಾಡಿ ಶೇಮಿಂಗ್‌ ಸಮಸ್ಯೆ, ಇಂದು ನಿನ್ನೆಯದಲ್ಲ. ನಾಯಕಿ ಎಂದರೆ ತೆಳ್ಳಗೆ, ಬೆಳ್ಳಗೆ, ಗ್ಲಾಮರಸ್‌ ಆಗಿರಬೇಕು ಎನ್ನುವ ನಂಬಿಕೆಯಿಂದ ಅನೇಕ ಜನರು ಇಂದಿಗೂ ಹೊರ ಬಂದಿಲ್ಲ. ಆದ್ದರಿಂದ ಸೆಲೆಬ್ರಿಟಿಗಳು, ಅದರಲ್ಲೂ ನಾಯಕಿಯರು ಸ್ವಲ್ಪ ದಪ್ಪ ಆದರೂ ಟ್ರೋಲ್‌ ಮಾಡಲು ಆರಂಭಿಸುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಆವೇಶಂ ಒಟಿಟಿ ಬಿಡುಗಡೆ ದಿನಾಂಕ: ಮನೆಯಲ್ಲೇ ನೋಡಿ ಫಹಾದ್‌ ಫಾಸಿಲ್‌ ನಟನೆಯ ಬ್ಲಾಕ್‌ಬಸ್ಟರ್‌ ಮಲಯಾಳ ಸಿನಿಮಾ

ಹೀರಾಮಂಡಿ ವೆಬ್‌ಸರಣಿಯಲ್ಲಿ ಸಲಿಂಗರತಿ ದೃಶ್ಯ; ಡೈಮಂಡ್‌ ಬಜಾರ್‌ನ ಆಕೆಗೆ ಪುರುಷರೆಂದರೆ ಆಗೋದೇ ಇಲ್ಲ ಅಂದ್ರು ಸೋನಾಕ್ಷಿ ಸಿನ್ಹಾ

ದಿ ಬ್ರೋಕನ್‌ ನ್ಯೂಸ್‌ ವೆಬ್ ಸರಣಿ: ಸುದ್ದಿಮನೆ ಜೀವಿಗಳನ್ನು ಕಾಡುವ, ಜನರ ಕಣ್ಣು ತೆರೆಸುವ ಕಥಾನಕ, ನಿಜ-ಸುಳ್ಳಿನ ತಾಕಲಾಟ, ಸುದ್ದಿಯ ಹಲವು ಮುಖ

Jio Cinema OTT: ಕಲರ್ಸ್‌ ಕನ್ನಡದ ಈ ಧಾರಾವಾಹಿಗಳನ್ನು ಟಿವಿಗಿಂತ ಮುಂಚೆಯೇ ಜಿಯೋ ಸಿನಿಮಾದಲ್ಲೂ ವೀಕ್ಷಿಸಬಹುದು

'ಸೂರರೈ ಪೊಟ್ರು' ನಟಿ ಅಪರ್ಣಾ ಬಾಲಮುರಳಿ ಕೂಡಾ ಈಗ ಬಾಡಿ ಶೇಮಿಂಗ್‌ಗೆ ಒಳಗಾಗಿದ್ದಾರೆ. 2020 ರಲ್ಲಿ ತೆರೆ ಕಂಡ 'ಸೂರರೈ ಪೊಟ್ರು' ಸಿನಿಮಾ ನೋಡಿದವರಿಗೆ ಈ ನಟಿ ನೆನಪಿರುತ್ತಾರೆ. ನಾಯಕನ ಪತ್ನಿ ಬೊಮ್ಮಿ ಆಗಿ ಅಪರ್ಣಾ ಅದ್ಭುತ ಅಭಿನಯ ಮಾಡಿದ್ದರು. ಅಪರ್ಣಾ ಮೊದಲಿನಿಂದಲೂ ದಪ್ಪ ಇದ್ದಾರೆ. ಆದರೆ ಇದೀಗ ಅವರು ಮತ್ತಷ್ಟು ದಪ್ಪ ಆಗಿದ್ದಾರೆ. ಇದೇ ವಿಚಾರವನ್ನು ಹಲವರು ಟ್ರೋಲ್‌ಗೆ ಬಳಸಿಕೊಳ್ಳುತ್ತಿದ್ದಾರೆ. ''ದಿನೇ ದಿನೆ ನೀನು ದಪ್ಪ ಆಗ್ತಿದ್ಯ, ನಾಯಕಿಯಾಗಿ ಅಲ್ಲ, ನೀನು ನಾಯಕಿ-ನಾಯಕನ ತಾಯಿ ಪಾತ್ರಕ್ಕೆ ಲಾಯಕ್ಕು'' ಎಂದು ಏಕವಚನದಲ್ಲೇ ಕಮೆಂಟ್‌ ಮಾಡುತ್ತಿದ್ದಾರೆ.

ಆದರೆ ಈ ಬಾಡಿ ಶೇಮಿಂಗ್‌ ವಿಚಾರಕ್ಕೆ ಅಪರ್ಣಾ ಕೂಡಾ ಪ್ರತಿಕ್ರಿಯಿಸಿದ್ದಾರೆ. ''ಈ ರೀತಿ ಬಾಡಿ ಶೇಮಿಂಗ್‌ ಆಗುತ್ತಿರುವುದು ಇದೇ ಮೊದಲಲ್ಲ. ನಾನು ನಟನೆಗೆ ಬಂದ ಆರಂಭದ ದಿನಗಳಲ್ಲೇ ಈ ಅನುಭವ ಆಗಿತ್ತು. ಕೆಲವರಿಗೆ ಪ್ರತಿಭೆ ಬೇಕಿಲ್ಲ, ನಾಯಕಿ ಎಂದರೆ ಆಕೆ ಸಣ್ಣ ಇರಬೇಕು, ಎಕ್ಸ್‌ ಪೋಸ್‌ ಮಾಡಬೇಕು ಎಂದೇ ತಿಳಿದುಕೊಂಡಿರುತ್ತಾರೆ. ಮೊದಲು ಇದರ ಬಗ್ಗೆ ನನಗೂ ಬೇಸರ ಎನಿಸುತ್ತಿತ್ತು. ಆದರೆ ಜನರ ಮಾತಿಗೆ ಪ್ರತಿಕ್ರಿಯಿಸುತ್ತಾ ಹೋದರೆ ನಮ್ಮ ಸಮಯ ವ್ಯರ್ಥ. ಯಾವ ಸಮಯದಲ್ಲಿ ಯಾವ ಪಾತ್ರ ಮಾಡಿಸಬೇಕು ಎನ್ನುವುದು ನಿರ್ದೇಶಕರಿಗೆ ಸೇರಿದ್ದು, ನಾಯಕ-ನಾಯಕಿಗೆ ತಾಯಿ ಪಾತ್ರ ಮಾಡುವಷ್ಟು ನನಗೆ ವಯಸ್ಸಾಗಿಲ್ಲ'' ಎಂದು ಉತ್ತರಿಸಿದ್ದಾರೆ. ಪ್ರಿಯಾಮಣಿ, ಕಾಜಲ್‌ ಅಗರ್‌ವಾಲ್‌ ( ಗರ್ಭಿಣಿಯಾಗಿದ್ದಾಗ) ನಿತ್ಯಾ ಮೆನನ್‌, ತಾಪ್ಸಿ ಪನ್ನು, ಕನ್ನಡದ ನೀತು ಸೇರಿದಂತೆ ಅನೇಕ ನಟಿಯರು ಬಾಡಿ ಶೇಮಿಂಗ್‌ ಒಳಗಾಗಿದ್ದಾರೆ.

ದಪ್ಪ ಇದ್ದರೆ ಸೂ…ಅಂತಾರೆ ಎಂದು ಬೇಸರ ವ್ಯಕ್ತಪಡಿಸಿದ್ದ ನೀತು

ಎಷ್ಟೋ ಬಾರಿ ಬಾಡಿ ಶೇಮಿಂಗ್‌ ಒಳಗಾಗಿರುವ ನೀತು ಇತ್ತೀಚೆಗೆ ಸೋಷಿಯಲ್‌ ಮೀಡಿಯಾ ಮುಖಾಂತರ ಬೇಸರ ಹೊರಹಾಕಿದ್ದರು. ಖಾಸಗಿ ವಾಹಿನಿಯೊಂದರ ಕಾರ್ಯಕ್ರಮದಲ್ಲಿ ತಾವು ಭಾಗವಹಿಸಿದ್ದ ವಿಡಿಯೋ ಸ್ಕ್ರೀನ್​​​ ಶಾಟ್​​​​ವೊಂದನ್ನು ಹಂಚಿಕೊಂಡಿದ್ದ ನೀತು, ''ಪ್ರತಿ ಬಾರಿ ಈ ಎಪಿಸೋಡ್ ಮರು ಪ್ರಸಾರ ಮಾಡಿದಾಗ ನಿಂದಕರು ಒಟ್ಟಿಗೆ ಕಮೆಂಟ್ಸ್ ಸೆಕ್ಷನ್ ಅಲ್ಲಿ ಸಿಗ್ತಾರೆ. ಇವರ ಪ್ರಕಾರ ತೆಳ್ಳಗಿಲ್ದೇ ಇರೋವ್ರು ಲೂಸ್ ಫಿಟ್ಟಿಂಗ್ ಮಾತ್ರ ಹಾಕೋಕೆ ಯೋಗ್ಯರು, ಇವರ ಪ್ರಕಾರ ದುಂಡಗಿರುವವರು ತುಂಬಾ ಮಜಾ ಮಾಡೋದ್ರಿಂದ ಹಾಗೆ ಆಗಿದ್ದಾರೆ, ಹಾಗಾಗಿ ಸೂ….. ಅನ್ನೋ ಕ್ಯಾರೆಕ್ಟರ್ ಸರ್ಟಿಫಿಕೇಟ್ ಕೊಡ್ತಾರೆ. ಇವರ ಪ್ರಕಾರ 'ಪ್ಲಸ್ ಸೈಜ್' ಇರುವವರ ಮೇಲೆ ಯಾರಿಗೂ ಪ್ರೀತಿ, ರೋಮ್ಯಾನ್ಸ್ ಹುಟ್ಟಲ್ಲ. ಅಂತವರನ್ನು ಬ್ಯೂಟಿಫುಲ್ ಅಂತ ಪರಿಗಣಿಸಬಾರದು, ಹಿಡಿoಬಾ/ ರಾಕ್ಷಸಿಯಾಗೋಕೆ ಮಾತ್ರ ನಾವು ಲಾಯಕ್, ಪ್ಲಸ್ ಸೈಜ್​​​​​​​ನವರು ಜೀವನ ಪರ್ಯಂತ ದುಃಖದಲ್ಲಿ, ಡಯಟ್ ಹಾಗೂ ವರ್ಕೌಟ್ ಬಗ್ಗೆನೇ ಚಿಂತಿಸಿ, ತಗ್ಗಿ ಬಗ್ಗಿ ಸಮಾಜದಿಂದ ವಿಮುಖರಾಗಿ ಬದುಕಬೇಕು. ಬೇರೆ ಯಾವ ವಿಷಯದ ಬಗ್ಗೆಯೂ ನಮಗೆ ಅಭಿಪ್ರಾಯ ಇರಲೇಬಾರದು'' ಎಂದು ಬೇಸರ ವ್ಯಕ್ತಪಡಿಸಿದ್ದರು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು