Bigg Boss Kannada: ಆರು ಮಂದಿಗೆ ವಾರದ ಗಡುವು! ಕಂಡೀಷನ್ ಮೇಲೆ ಬಿಗ್‌ಬಾಸ್ ಮನೆಗೆ ಕಳುಹಿಸಿದ ಕಿಚ್ಚ
Oct 09, 2023 08:26 AM IST
Bigg Boss Kannada: ಆರು ಮಂದಿಗೆ ವಾರದ ಗಡುವು! ಕಂಡೀಷನ್ ಮೇಲೆ ಬಿಗ್‌ಬಾಸ್ ಮನೆಗೆ ಕಳುಹಿಸಿದ ಕಿಚ್ಚ
- Bigg Boss Kannada 10 Grand Opening: ಬಿಗ್‌ಬಾಸ್ ಕನ್ನಡ ಸೀಸನ್ 10ಕ್ಕೆ ಗ್ರ್ಯಾಂಡ್ ಓಪನಿಂಗ್ ಸಿಕ್ಕಿದೆ. ಒಟ್ಟು 11 ಮಂದಿ ಅಧಿಕೃತವಾಗಿ ಮನೆ ಪ್ರವೇಶಿಸಿದರೆ, ಹೋಲ್ಡ್ ಆಗಿ ಉಳಿದ ಆರು ಮಂದಿಗೆ ವಾರದ ಗಡುವು ನೀಡಿ ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದೆ.
Bigg Boss Kannada: ಬಿಗ್‌ಬಾಸ್ ಕನ್ನಡದ ಸೀಸನ್ 10ಕ್ಕೆ ಗ್ರಾಂಡ್ ಓಪನಿಂಗ್ ಸಿಕ್ಕಿದೆ. ಈ ಹಿಂದೆಂದೂ ಕಾಣದ ಹೊಸತನದ ಮೂಲಕ ಈ ಸಲದ ಬಿಗ್‌ಬಾಸ್‌ಗೆ ಚಾಲನೆ ಸಿಕ್ಕಿದೆ. ಮೊದಲೆಲ್ಲ ನೇರವಾಗಿ ಆಯ್ಕೆಯಾದ ಸ್ಪರ್ಧಿಗಳನ್ನು ಬಿಗ್ ಮನೆಗೆ ಕಳುಹಿಸಲಾಗುತ್ತಿತ್ತು. ಆದರೆ, ಈ ಸಲ ಮನೆ ಪ್ರವೇಶಕ್ಕೂ ಮುನ್ನ ಆಡಿಯನ್ಸ್ ವೋಟಿಂಗ್ ಅಗ್ನಿಪರೀಕ್ಷೆಯಲ್ಲಿ ಪಾಸ್ ಆದ ಬಳಿಕವೇ ಮನೆ ಪ್ರವೇಶಿಸಲು ಅವಕಾಶ ನೀಡಿತ್ತು.
ಆ ಪೈಕಿ ಒಟ್ಟು 19 ಮಂದಿಯಲ್ಲಿ 11 ಮಂದಿ ನೇರವಾಗಿ ಆಡಿಯನ್ಸ್ ಕಡೆಯಿಂದ ವೋಟಿಂಗ್ ಪಡೆದು ಅಲ್ಲಿ ಶೇ. 80 ಪ್ಲಸ್ ಅಂಕ ಪಡೆದುಕೊಂಡು ಖುಷಿಯಲ್ಲಿ ಬಿಗ್‌ಬಾಸ್ ಮನೆ ಸೇರಿದರೆ, ಇನ್ನುಳಿದ ಸಂಗೀತಾ ಶೃಂಗೇರಿ, ಡ್ರೋನ್ ಪ್ರತಾಪ್, ರಕ್ಷಕ್ ಬುಲೆಟ್, ವರ್ತೂರು ಸಂತೋಷ್, ತನಿಷಾ ಕುಪ್ಪುಂದ, ಕಾರ್ತಿಕ್ ಮಹೇಶ್ ಸೇರಿ 6 ಮಂದಿಗೆ ಆಡಿಯನ್ಸ್ ವೋಟ್ ಸಿಗಲಿಲ್ಲ. ಇವರೆಲ್ಲರನ್ನು ತಾತ್ಕಾಲಿಕವಾಗಿ ಹೊರಗಿಟ್ಟು, ಎಲ್ಲ ಸ್ಪರ್ಧಿಗಳು ಮನೆ ಪ್ರವೇಶಿಸಿದ ಬಳಿಕ ಕೇವಲ ಒಂದೇ ವಾರದ ಗಡುವಿನ ಮೇಲೆ ಮನೆ ಒಳಗೆ ಕಳುಹಿಸಲಾಗಿದೆ. ಇಬ್ಬರಿಗೆ ವೋಟ್ ಸಿಗದಿದ್ದಕ್ಕೆ ಮರಳಿ ಮನೆ ಕಡೆ ಹೋಗಬೇಕಾಯಿತು.
ಹೋಲ್ಡ್‌ನಲ್ಲಿದ್ದ ಸ್ಪರ್ಧಿಗಳೆಲ್ಲ ಮನೆಯೊಳಗೆ!
ವೀಕ್ಷಕರು ಹೋಲ್ಡ್‌ನಲ್ಲಿ ಇಟ್ಟಿದ್ದ ಸ್ಪರ್ಧಿಗಳು ಪ್ರತಾಪ್, ತನಿಶಾ, ಸಂಗೀತಾ, ಸಂತೋಷ್, ರಕ್ಷಕ್, ಕಾರ್ತೀಕ್. ‘ನಿಮ್ಮಲ್ಲಿ ಬಿಗ್‌ಬಾಸ್ ಯಾರು ಒಳಗೆ ಹೋಗಬೇಕು ಎಂದು ನಿರ್ಧರಿಸಬೇಕು’ ಎಂದು ಹೇಳಿದ ಕಿಚ್ಚ ಒಂದು ವಾರದ ಮಟ್ಟಿಗೆ ಎಲ್ಲ ಸ್ಪರ್ಧಿಗಳನ್ನು ಮನೆಯೊಳಗೆ ಕಳಿಸಿಕೊಟ್ಟಿದ್ದಾರೆ. ಒಂದು ವಾರದಲ್ಲಿ ಮನೆಯೊಳಗೆ ತೋರಿಸಲಿರುವ ಪರ್ಫಾರ್ಮೆನ್ಸ್ ಆಧಾರದ ಮೇಲೆ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ ಎಂಬುದು ನಿರ್ಧಾರವಾಗಲಿದೆ.
ಇದರೊಂದಿಗೆ ಬಿಗ್‌ಬಾಸ್ ಕನ್ನಡ 10ನೇ ಸೀಸನ್ ಅದ್ದೂರಿಯಾಗಿ ಪ್ರಾರಂಭವಾಗಿದೆ. ವೇದಿಕೆಗೆ ಬಂದಿದ್ದ ಒಟ್ಟೂ 19 ಸ್ಪರ್ಧಿಗಳಲ್ಲಿ ಇಬ್ಬರನ್ನು ಪ್ರೇಕ್ಷಕ ಪ್ರಭುಗಳು ವಾಪಸ್ ಕಳಿಸಿದ್ದಾರೆ. ಆರು ಜನರನ್ನು ಹೋಲ್ಡ್‌ನಲ್ಲಿಟ್ಟಿದ್ದಾರೆ. ಮುಂದಿನ ವಾರ ಯಾರು ಮನೆಯೊಳಗೆ ಮುಂದುವರಿಯಲಿದ್ದಾರೆ. ಯಾರು ಹೊರಗೆ ಬರಲಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ಒಂದು ವಾರ ಕಾಯಲೇಬೇಕು.
ಸಗಣಿಯನ್ನೂ ಎತ್ತುತ್ತೀನಿ; ಶೋಕಿಯನ್ನೂ ಮಾಡ್ತೀನಿ
ವರ್ತೂರಿನಲ್ಲಿ ವ್ಯವಸಾಯ ಮಾಡಿಕೊಂಡಿರುವ ಸಂತೋಷ್, ‘ರೈತ ಅಂದರೆ ಸಗಣಿಯನ್ನೇ ಎತ್ತಬೇಕು ಎಂದೇನಿಲ್ಲ; ಶೋಕಿನೂ ಮಾಡಬಹುದು’ ಎಂದು ದಿಟ್ಟವಾಗಿ ಹೇಳುತ್ತಾರೆ. ಚಿಕ್ಕಂದಿನಲ್ಲಿಯೇ ತಂದೆಯನ್ನು ಕಳೆದುಕೊಂಡಿದ್ದ ಸಂತೋಷ್, ‘ತಂದೆಯ ದುಡ್ಡಿನಲ್ಲಿ ಬದುಕುತ್ತಾನೆ’ ಎಂಬ ಮಾತುಗಳನ್ನೂ ಕೇಳಬೇಕಾಯ್ತು. ಅದನ್ನೇ ಸವಾಲಾಗಿ ಸ್ವೀಕರಿಸಿ ತಂದೆ ಕೊಟ್ಟಿದ್ದನ್ನು ಒಂದಕ್ಕೆ ಹತ್ತು ಪಟ್ಟಾಗಿ ಬೆಳೆಸಿದ್ದಾರೆ.
ಹಳ್ಳಿಕಾರ್ ತಳಿಯ ಎತ್ತುಗಳನ್ನು ಪ್ರೀತಿಯಿಂದ ಸಾಕಿ ಬೆಳೆಸುತ್ತಿದ್ದಾರೆ. ಅವುಗಳಿಗೂ ಬೆಳ್ಳಿ ಚೈನು, ಕಾಲ ಕಡಗ ಮಾಡಿಸಿರುವ ಸಂತೋಷ್, ಎತ್ತುಗಳ ಓಟದ ಸ್ಪರ್ಧೆಯಲ್ಲಿಯೂ ಖ್ಯಾತರಾದವರು. ‘ಇರುವವರೆಗೂ ಬದುಕನ್ನು ಆನಂದಿಸಿ. ಯಾರಿಗೂ ಮೋಸ ಮಾಡಬೇಡಿ’ ಎನ್ನುವುದನ್ನು ತಮ್ಮ ಬದುಕಿನ ಸಿದ್ಧಾಂತವಾಗಿಸಿಕೊಂಡಿರುವ ಅವರಿಗೆ ಜನರು 78% ವೋಟ್ ಹಾಕಿ ಹೋಲ್ಡ್‌ನಲ್ಲಿಡಲಾಗಿತ್ತು. ದೇಸಿ ತಳಿಯ ಹಸುಗಳ ಬಗ್ಗೆ ಜನರಲ್ಲಿ ಬಿಗ್‌ಬಾಸ್ ಮನೆಯ ಮೂಲಕ ಅರಿವು ಮೂಡಿಸುವ ಸಂತೋಷ್ ಕನಸು ನನಸಾಗುತ್ತದೆಯೇ? ಕಾದು ನೋಡಬೇಕು. ಇನ್ನು ಈ ಸಲದ ವಿಶೇಷ ಏನೆಂದರೆ ಈ ಸಲದ ಬಿಗ್‌ಬಾಸ್ ಅನ್ನು 'JioCinemaದಲ್ಲಿ 24 ಗಂಟೆ ಉಚಿತವಾಗಿ ವೀಕ್ಷಣೆ ಮಾಡಬಹುದು.
ಬಿಗ್‌ಬಾಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ