logo
ಕನ್ನಡ ಸುದ್ದಿ  /  ಮನರಂಜನೆ  /  ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ? ಫಿಟ್‌ ಆಗಿರಲು ಬಯಸೋರಿಗೆ ಟಿಪ್ಸ್‌

ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ? ಫಿಟ್‌ ಆಗಿರಲು ಬಯಸೋರಿಗೆ ಟಿಪ್ಸ್‌

Praveen Chandra B HT Kannada

Apr 30, 2024 02:01 PM IST

ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ?

    • ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಸಿದ್ದ ನೈಜೀರಿಯಾ ಕನ್ನಡಿಗ ಮೈಕಲ್‌ ಅಜಯ್‌ ಪ್ರತಿನಿತ್ಯ ಏನೆಲ್ಲ ವರ್ಕೌಟ್‌ ಮಾಡುತ್ತಾರೆ? ಎಷ್ಟು ಕಿ.ಮೀ. ವಾಕಿಂಗ್‌ ಮಾಡ್ತಾರೆ? ಮೈಕಲ್‌ ಅಜಯ್‌ ಡಯೆಟ್‌ ಪ್ಲ್ಯಾನ್‌ ಏನು? ಅವರ ಫಿಟ್ನೆಸ್‌ ಸೀಕ್ರೆಟ್‌ ಏನು? ತಿಳಿದುಕೊಳ್ಳೋಣ ಬನ್ನಿ.ಬೆ 
ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ?
ಬಿಗ್‌ಬಾಸ್‌ ಕನ್ನಡ ಸ್ಪರ್ಧಿ ಮೈಕಲ್‌ ಅಜಯ್‌ ದಿನಚರಿ ಏನು, ತೂಕ ಇಳಿಕೆಗೆ ವರ್ಕೌಟ್‌ ಡಯೆಟ್‌ ಹೇಗಿರುತ್ತದೆ?

ಬೆಂಗಳೂರು: ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಸ್ಪರ್ಧಿಸಿದ್ದ ನೈಜೀರಿಯಾ ಮೂಲದ ಮೈಕಲ್‌ ಅಜಯ್‌ ಫಿಟ್ನೆಸ್‌ ಗುಟ್ಟು ಏನೆಂದು ಸಾಕಷ್ಟು ಜನರಿಗೆ ಕುತೂಹಲವಿರಬಹುದು. ನೈಜಿರಿಯಾ ಮೂಲದ ಮೈಕಲ್‌ ತನ್ನ ಕನ್ನಡ ಮಾತಿನಿಂದಲೇ ಎಲ್ಲರನ್ನೂ ಮೋಡಿ ಮಾಡುತ್ತಾರೆ. ಈ ಬಾರಿ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರಲ್ಲಿ ತನ್ನ ಮೈಕಟ್ಟು, ಫಿಟ್ನೆಸ್‌ನಿಂದಲೇ ಎಲ್ಲರ ಗಮನ ಸೆಳೆದಿದ್ದರು. ಸುಮಾರು 6 ಅಡಿ ಎತ್ತರವಿರುವ ಮೈಕಲ್‌ ರಾಷ್ಟ್ರೀಯ ಮಟ್ಟದ ಬಾಸ್ಕೆಟ್‌ಬಾಲ್‌ ಆಟಗಾರನೂ ಹೌದು. ಹೂಡಿಕೆ ಬ್ಯಾಂಕ್‌ ಕ್ಷೇತ್ರದ ವಿಶ್ಲೇಷಕರಾಗಿಯೂ ಕೆಲಸ ಮಾಡಿದ್ದಾರೆ. ತನ್ನ 22ನೇ ವಯಸ್ಸಿನಲ್ಲಿ ಮೊದಲ ಕಂಪನಿ ಆರಂಭಿಸಿದ ಮೈಕಲ್‌ ಅಜಯ್‌ ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾರೆ. ಅಂತಾರಾಷ್ಟ್ರೀಯ ಫ್ಯಾಷನ್‌ ಮಾಡೆಲ್‌ ಆಗಿಯೂ ಗಮನ ಸೆಳೆದಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೋದಿ ಕೆಲಸ ಹೊಗಳುವಂತೆ ರಶ್ಮಿಕಾ ಮಂದಣ್ಣಗೆ ಸಿಕ್ಕಿದೆ 10 ಕೋಟಿ ರೂ!? ‘ಇನ್ನೊಬ್ಬಳು ಕಂಗನಾ ಬಂದಳು’ ಎನ್ನುತ್ತ ನಟಿಯನ್ನು ಝಾಡಿಸಿದ ನೆಟ್ಟಿಗರು

Seetha Rama Serial: ಅಶೋಕನ ಮೇಲೆ ಮಾರಣಾಂತಿಕ ಹಲ್ಲೆ, ಇದು ಭಾರ್ಗವಿ ಸಂಚೋ, ರುದ್ರಪ್ರತಾಪನ ಕೈವಾಡವೋ?

Brundavana Serial: ಮನೆಯವರ ಮುಂದೆ ತಗ್ಲಾಕ್ಕೊಂಡ ಆಕಾಶ್‌, ಸುನಾಮಿ ಬಾಯಿಂದ ಸತ್ಯ ಹೇಳಿಸ್ತಾರಾ ಮಾವ ಸತ್ಯಮೂರ್ತಿ?

ಶೇಕಡಾ 66 ಅಂಕ ತೆಗೆದು ಎಸ್‌ಎಸ್‌ಎಲ್‌ಸಿ ಪಾಸ್‌ ಆದ ಭಾಗ್ಯಾ, ಸಪ್ಪೆ ಮೋರೆ ಹಾಕಿ ನಿಂತ ತಾಂಡವ್‌; ಭಾಗ್ಯಲಕ್ಷ್ಮೀ ಧಾರಾವಾಹಿ

ಮೈಕಲ್‌ ಅಜಯ್‌ ಫಿಟ್ನೆಸ್‌ ಗುಟ್ಟು

ಮೈಕಲ್‌ ಅಜಯ್‌ ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಪ್ರತಿನಿತ್ಯ ತನ್ನ ಫಿಟ್ನೆಸ್‌ ಗುರಿಗಳ ಕುರಿತು ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ. ಪ್ರತಿದಿನ ಏನೆಲ್ಲ ವ್ಯಾಯಾಮ ಮಾಡಿದೆ? ಏನು ಆಹಾರ ತಿಂದೆ? ಡಯೆಟ್‌ ಹೇಗಿತ್ತು? ದಿನವನ್ನು ಹೇಗೆ ಕಳೆದೆ ಎಂದು ತನ್ನ ಫ್ಯಾನ್ಸ್‌ಗೆ ಅಪ್‌ಡೇಟ್‌ ನೀಡುತ್ತಾರೆ. ಇಂದು ಕೂಡ ಮೈಕಲ್‌ ಅಜಯ್‌ ತನ್ನ ಫಿಟ್ನೆಸ್‌ ವಿಡಿಯೋ ಹಂಚಿಕೊಂಡಿದ್ದಾರೆ. ಅವರು ಯಾವೆಲ್ಲ ವರ್ಕೌಟ್‌ ಮಾಡಿದ್ದಾರೆ? ಏನೆಲ್ಲ ಡಯೆಟ್‌ ಮಾಡಿದ್ದಾರೆ ಎಂದು ತಿಳಿದುಕೊಳ್ಳೋಣ. ಮೈಕಲ್‌ ಅಜಯ್‌ 74 ದಿನಗಳ ಫಿಟ್ನೆಸ್‌ ಗುರಿ ಹಾಕಿಕೊಂಡಿದ್ದಾರೆ. ಈಗ 28ನೇ ದಿನ ನಡೆಯುತ್ತಿದೆ.

ಮೈಕಲ್‌ ಅಜಯ್‌ ಡಯೆಟ್‌ ಪ್ಲ್ಯಾನ್

"ಫಿಟ್ನೆಸ್‌ ಗುರಿ ಹಾಕಿಕೊಂಡು ನಾಲ್ಕು ವಾರ ಕಳೆದಿದೆ. ಈಗ 84 ಕೆಜಿ. ಇದ್ದೇನೆ. ವೇಟ್‌ ಲಾಸ್‌ ಆಗಿದೆ. ಆ ಖುಷಿಯಲ್ಲಿ ಕಬನ್‌ ಪಾರ್ಕ್‌ಗೆ ಹೋದೆ. ಅಲ್ಲಿ ಪಾರಿವಾಳಗಳನ್ನು ನೋಡಿ ಖುಷಿಯಾಯ್ತು. ಒಟ್ಟು ಎಂಟು ಕಿಲೋಮೀಟರ್‌ ವಾಕಿಂಗ್‌ ಫಿನಿಶ್‌ ಮಾಡಿದೆ. ಮನೆಗೆ ಬಂದು ಪ್ರೋಟೀನ್‌ ಓಟ್ಸ್‌ ಮಾಡಿ ತಿಂದೆ. ಇದಾದ ಬಳಿಕ ಯೂಟ್ಯೂಬ್‌ ಬ್ಲಾಗ್‌ ವಿಡಿಯೋ ಎಡಿಟಿಂಗ್‌ ಮಾಡಿದೆ. ಮೊಟ್ಟೆ ಆಫ್‌ಬಾಯ್ಲ್‌ ಮಾಡಿ ತಿಂದೆ. ಜಿಮ್‌ನಲ್ಲಿ ಇವತ್ತು ಕ್ರಾಸ್‌ಫಿಟ್‌ ವರ್ಕೌಟ್‌, ಬ್ಯಾಟಲ್‌ ರೋಪ್‌ ವೇವ್ಸ್‌, ಬ್ಯಾಟಲ್‌ ರೋಪ್‌ ಶೋಲ್ಡರ್‌ ಪ್ರೆಸ್‌, ಜಂಪಿಂಗ್‌, ಸ್ಯಾಂಡ್‌ ಬ್ಯಾಗ್‌ ರೋವ್ಸ್‌, ಇತ್ಯಾದಿ ಎಕ್ಸರ್‌ಸೈಸ್‌ ಮಾಡಿದೆ. ಜಿಮ್‌ ವರ್ಕೌಟ್‌ ಮುಗಿಸಿದ ಬಳಿಕ ನನ್ನ ಶಾಪ್‌ಗೆ ಹೋದೆ. ಅಲ್ಲಿ ಒಂದಿಷ್ಟು ಕೆಲಸ ಮಾಡಿದೆ. ಇದಾದ ಬಳಿಕ ಮನೆಗೆ ಬಂದು ಮಾಡಿದೆ ಡಿನ್ನರ್‌. ಚಿಕನ್‌ ಮತ್ತು ಕುಕುಂಬರ್‌ ಡಿನ್ನರ್‌ ಮಾಡಿದೆ. ಇದಾದ ಬಳಿಕ ಬುಕ್ಸ್‌ ಓದಿದೆ. ಇಂದಿನ ಲೆಸನ್‌- "ನಿಮಗೆ ಯಾವುದೇ ಪ್ರತಿಫಲ ನೀಡದ ವ್ಯಕ್ತಿಯನ್ನು ನೀವು ಹೇಗೆ ಟ್ರೀಟ್‌ ಮಾಡುವಿರೋ, ಅದು ನಿಮ್ಮ ನಿಜವಾದ ವ್ಯಾಲ್ಯೂ" ಎಂದು ಮೈಕಲ್‌ ಅಜಯ್‌ ತನ್ನ ಈ ದಿನದ ಫಿಟ್ನೆಸ್‌ ಮತ್ತು ಡಯೆಟ್‌ ಅಪ್‌ಡೇಟ್‌ ನೀಡಿದ್ದಾರೆ. ‌

ಇದಕ್ಕೂ ಒಂದು ದಿನ ಮೊದಲು ಅಂದರೆ ದಿನ 27ರಂದು ಮೈಕಲ್‌ ಅಜಯ್‌ ತನ್ನ ಸಹಸ್ಪರ್ಧಿ ನಮ್ರತಾ ಗೌಡರನ್ನು ಭೇಟಿಯಾಗಿದ್ದಾರೆ. "ಬೆಳಗ್ಗೆ ಎದ್ದು ನೀರು ಕುಡಿದೆ. ಬಳಿಕ ಅಗ್ರಹಾರ ಲೇಕ್‌ಗೆ ಹೋದೆ. 5 ಕಿಲೋಮೀಟರ್‌ ಜಾಗಿಂಗ್‌ ಮಾಡಿದೆ. ಮನೆಗೆ ಬಂದು ಎಂದಿನಂತೆ ಪ್ರೋಟೀನ್‌ ಓಟ್ಸ್‌ ಮಾಡಿ ತಿಂದೆ. ಇದಾದ ಬಳಿಕ ನೆಕ್ಸ್ಟ್‌ ಮೀಲ್‌ "ಎಗ್ಸ್‌ ಮತ್ತು ವಾಟರ್‌ ಮೆಲನ್‌ ತಿಂದೆ. ಬೇಗ ಜಿಮ್‌ಗೆ ಹೋಗಿ ಲೆಗ್‌ ವರ್ಕೌಟ್‌ ಮಾಡಿದೆ. ಲೆಗ್‌ ಪ್ರೆಸಸ್‌, ವಾಕಿಂಗ್‌ ಲಂಜಸ್‌, ಕಾಫ್‌ ರೈಸಸ್‌ ಇತ್ಯಾದಿ ವರ್ಕೌಟ್‌ ಮಾಡಿದೆ. ಇದಾದ ಬಳಿಕ ಮನೆಗೆ ಬಂದು ನಮ್ರತಾ ಗೌಡ ಬರ್ತ್‌ಡೆಗೆ ಹೋಗಲು ಸಿದ್ಧವಾದೆ. ವಿನಯ್‌, ನಮ್ರತಾ ಗೌಡ ಸೇರಿದಂತೆ ಬಿಗ್‌ಬಾಸ್‌ನ ಬಹುತೇಕ ಸ್ಪರ್ಧಿಗಳು ಅಲ್ಲಿದ್ದರು. ಇದಾಗಿ ಮನೆಗೆ ಬಂದು ಪ್ರೊಟೀನ್‌ ಕುಡಿದು ಬುಕ್‌ ಓದಿದೆ. ಇಂದಿನ ಲೆಸನ್‌- ಜೀವನ ಸದಾ ಪರಿಪೂರ್ಣವಾಗಿರಬೇಕೆನ್ನುವುದು ಜೀವನದ ದೊಡ್ಡ ಭ್ರಮೆ" ಎಂದು ಮೈಕಲ್‌ ಅಜಯ್‌ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ