Seetha Rama Serial: ಸೀತಾಳ ಬಳಿ ನಾನು ದೇಸಾಯಿ ಕಂಪನಿ ಒಡೆಯ ಅಂತ ಹೇಳಲು ಮುಂದಾದ ರಾಮ್! ಬೆನ್ನಿಗೆ ನಿಂತ ಆಪ್ತಮಿತ್ರ ಅಶೋಕ
Nov 22, 2023 06:30 AM IST
Seetha Rama Serial: ಸೀತಾಳ ಬಳಿ ನಾನು ದೇಸಾಯಿ ಕಂಪನಿ ಒಡೆಯ ಅಂತ ಹೇಳಲು ಮುಂದಾದ ರಾಮ್! ಬೆನ್ನಿಗೆ ನಿಂತ ಆಪ್ತಮಿತ್ರ ಅಶೋಕ
- Seetha Rama Serial Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ನವೆಂಬರ್ 21ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಸೀತಾ ಮನೆಗೆ ಬಂದಿದ್ದಾಳೆ. ಆದರೆ, ಆ ಟ್ರಾನ್ಸ್‌ಫರ್ ಬಗ್ಗೆ ಆಕೆಯ ಮನದಲ್ಲಿ ಒಂದಷ್ಟು ಗೊಂದಲಗಳು ಮೂಡಿವೆ.
Seetha Rama: ಸಿಹಿ ಜತೆಗೆ ಸೀತಾ ಗೂಡು ಸೇರಿದ್ದಾಳೆ. ಬೆಳಗೆದ್ದು ಪ್ಯಾಕ್ ಮಾಡಿಟ್ಟಿದ್ದ ವಸ್ತುಗಳನ್ನು ಪ್ರಿಯಾ, ಶಾಂತಮ್ಮಜ್ಜಿ ಜತೆ ಸೇರಿ ಮತ್ತೆ ಹೊಂದಿಸುತ್ತಿದ್ದಾಳೆ. ಈ ನಡುವೆ ಟ್ರಾನ್ಸ್‌ಫರ್ ವಿಚಾರ ರಾತ್ರೋ ರಾತ್ರಿ ಬದಲಾವಣೆ ಆಗಿದ್ದಕ್ಕೆ ಸೀತಾ ಮನದಲ್ಲಿ ಗೊಂದಲ ಮನೆ ಮಾಡಿದೆ. ಈಮೇಲ್ ಬರುವುದಕ್ಕೂ ಮುಂಚೆ ರಾಮ್ ಹೇಗೆ ಅಷ್ಟು ಬೇಗ ಬಂದ್ರು ಎಂದು ಸೀತಾ ಪ್ರಿಯಾ ಜತೆ ಚರ್ಚೆ ನಡೆಸುತ್ತಿದ್ದಾಳೆ. ಆಗೋದೆಲ್ಲ ಒಳ್ಳೆಯದಕ್ಕೆ ಎಂದು ಸೀತಾಗೆ ಸಲಹೆ ನೀಡಿದ್ದಾಳೆ ಪ್ರಿಯಾ.
ಇತ್ತ ಮನೆಯಲ್ಲಿ ರಾಮ ಒಬ್ಬನೇ ಮಾತನಾಡಿಕೊಳ್ಳುತ್ತಿದ್ದಾನೆ. ಮನಸಲ್ಲಿರುವ ಮಾತನ್ನು ಸೀತಾಳ ಮುಂದೆ ಹೇಳಿಕೊಳ್ಳುವ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾನೆ. ಒಮ್ಮಿಂದೊಮ್ಮೆ ನಿಮ್ಮ ಮೇಲೆ ಫೀಲಿಂಗ್ ಶುರುವಾಗಿದೆ ಅಂತ ಹೇಗೆ ಹೇಳಲಿ ಎನ್ನುತ್ತಿದ್ದಾನೆ. ಯಾಕೆ ಇರೋ ಸಂಬಂಧ ಹಾಳು ಮಾಡಿಕೊಳ್ಳಬೇಕು. ಈಗ ಹೇಗಿದ್ದೇನೋ ಹಾಗೇ ಇರ್ತಿನಿ ಎನ್ನುತ್ತಿದ್ದಂತೆ, ಅಲ್ಲಿಗೆ ಅಶೋಕನ ಆಗಮನವಾಗಿದೆ.
ಪ್ರೀತಿಸ್ತಿದಿನಿ ಅಂತ ಹೇಳೋಕೆ ಎಷ್ಟು ಒದ್ದಾಡ್ತಿದ್ದೀಯಾ? ಹೃದಯದಲ್ಲೇನಿದೆ ಅದನ್ನೇ ಬಾಯಿಂದ ಹೇಳು ಎನ್ನುತ್ತಿದ್ದಾನೆ ಅಶೋಕ. ಇಬ್ಬರೂ ಪ್ರೀತಿ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಇತ್ತ ಅಶೋಕ ಮಾತ್ರ ಆದಷ್ಟು ಬೇಗ ಲವ್ ಪ್ರಪೋಸ್ ಮಾಡೋ ಎಂದು ರಾಮನ ದುಂಬಾಲು ಬಿದ್ದಿದ್ದಾನೆ. ಸೀತಾಳ ರೆಸ್ಪಾನ್ಸ್ ಹೇಗಿರಬಹುದು ಎಂದು ರಾಮ ನಟನೆ ಮಾಡಿ ತೋರಿಸುತ್ತಿದ್ದಾನೆ. ಇದನ್ನು ಸರಳವಾಗಿ ತೆಗೆದುಕೋ ಎನ್ನುತ್ತಿದ್ದಾನೆ.
ಸೀತಾ ಇದಕ್ಕೆ ಇಲ್ಲ ಅಂದ್ರೆ? ನನ್ನನ್ನು ಇನ್ಮೇಲೆ ಮಾತನಾಡಿಸಲೇಬೇಡಿ ಎಂದರೆ ಮುಂದೆ ಏನ್ ಕಥೆ ಎಂದು ರಾಮ್ ಅಶೋಕನಿಗೆ ಹೇಳಿದ್ದಾನೆ. ನೆಗೆಟಿವ್ ವಿಚಾರ ಯಾಕೆ ಮಾಡ್ತಿಯಾ. ಸೀತಾಗೂ ನಿನ್ನ ಮೇಲೆ ಪ್ರೀತಿ ಇರಬಹುದು, ಸೋ ಮೊದಲ ಸ್ಟೇಪ್ ನಿನ್ನಿಂದಲೇ ಶುರುವಾಗಲಿ ಎಂದಿದ್ದಾನೆ ಅಶೋಕ. ಇದಕ್ಕೆ ನಾನು ಮೊದಲು ಯಾರು ಎಂಬುದನ್ನು ಹೇಳ್ತಿನಿ ಎಂದಿದ್ದಾನೆ. ಇದು ಅಶೋಕನಿಗೆ ಖುಷಿ ತಂದಿದೆ.
ತಾತ ಸೂರ್ಯಪ್ರಕಾಶ್ ಜತೆ ಅಶೋಕ ಮಾತುಕತೆ ನಡೆಸುತ್ತಿದ್ದಾನೆ. ರಾಮನ ಮನಸ್ಸಲ್ಲೇನಿದೆ ಎಂಬುದನ್ನು ತಾತನ ಬಳಿ ಹೇಳುತ್ತಿದ್ದಾನೆ ಅಶೋಕ. ಅವನ ಬಾಳಲ್ಲಿ ಒಳ್ಳೆಯದಾಗಬೇಕು ಎನ್ನುತ್ತಿದ್ದಾಗ ಅವನ ಹಿತ ಶತ್ರುಗಳು ಅವನಿಗೆ ಅಡ್ಡಗಾಲಾಗಿ ನಿಂತಿವೆ. ಆ ಹಿತ ಶತ್ರು ಯಾರು ಎಂಬುದನ್ನು ಹೇಳುವಷ್ಟರಲ್ಲಿಯೇ ಬಾಗಿಲ ಬಳಿ ಭಾರ್ಗವಿಯ ಆಗಮನವಾಗಿದೆ. ಭಾರ್ಗವಿ ಬರುತ್ತಿದ್ದಂತೆ, ತಾನೇ ಅಲ್ಲಿಂದ ಹೊರನಡೆದಿದ್ದಾನೆ ಅಶೋಕ. ಮಾವನ ಬಳಿ ಬಂದು ದೀಪಾವಳಿ ಬಂತು ಆಫೀಸ್‌ನವರೆಲ್ಲರನ್ನೂ ಮನೆಗೆ ಕರೆದು ಊಟ ಹಾಕಿಸಬೇಕು ಎಂದೂ ಹೇಳಿಕೊಂಡಿದ್ದಾಳೆ.