logo
ಕನ್ನಡ ಸುದ್ದಿ  /  ಮನರಂಜನೆ  /  ಅದೃಷ್ಟ ಪರೀಕ್ಷೆಯಲ್ಲಿ ಗೆದ್ದ ಭಾಸ್ಕರ; ದುಲ್ಕರ್‌ ಸಲ್ಮಾನ್‌ ಲಕ್ಕಿ ಭಾಸ್ಕರ್ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ; ಹೀಗಿದೆ ಟ್ವಿಟರ್ ವಿಮರ್ಶೆ

ಅದೃಷ್ಟ ಪರೀಕ್ಷೆಯಲ್ಲಿ ಗೆದ್ದ ಭಾಸ್ಕರ; ದುಲ್ಕರ್‌ ಸಲ್ಮಾನ್‌ ಲಕ್ಕಿ ಭಾಸ್ಕರ್ ಸಿನಿಮಾಗೆ ಪ್ರೇಕ್ಷಕರ ಮೆಚ್ಚುಗೆ; ಹೀಗಿದೆ ಟ್ವಿಟರ್ ವಿಮರ್ಶೆ

Reshma HT Kannada

Oct 31, 2024 07:25 AM IST

google News

ಲಕ್ಕಿ ಭಾಸ್ಕರ್ ಟ್ವಿಟರ್ ರಿವ್ಯೂ

    • ಹೆಂಗಳೆಯರ ನೆಚ್ಚಿನ ನಟ ದುಲ್ಕರ್ ಸಲ್ಮಾನ್‌ ಲಕ್ಕಿ ಭಾಸ್ಕರನಾಗಿ ಅದೃಷ್ಟ ‍ಪರೀಕ್ಷೆಗೆ ನಿಂತಿದ್ದಾರೆ. ಇವರು ನಟಿಸಿರುವ ಲಕ್ಕಿ ಭಾಸ್ಕರ್ ಸಿನಿಮಾ ಇಂದು (ಅಕ್ಟೋಬರ್‌ 31) ಬಿಡುಗಡೆಯಾಗಿದ್ದು, ಲಕ್ಕಿ ಭಾಸ್ಕರ್ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಸಿನಿಮಾ ನೋಡಿದ ಪ್ರೇಕ್ಷಕರ ಟ್ವಿಟರ್ ರಿವ್ಯೂ ಹೀಗಿದೆ.
ಲಕ್ಕಿ ಭಾಸ್ಕರ್ ಟ್ವಿಟರ್ ರಿವ್ಯೂ
ಲಕ್ಕಿ ಭಾಸ್ಕರ್ ಟ್ವಿಟರ್ ರಿವ್ಯೂ

Lucky Baskhar Twitter Review: ಮಾಲಿವುಡ್‌, ಟಾಲಿವುಡ್‌ನಲ್ಲಿ ಹೆಸರು ಗಳಿಸಿರುವ ನಟ ದುಲ್ಕರ್ ಸಲ್ಮಾನ್ ಅವರ 32ನೇ ಚಿತ್ರ ‘ಲಕ್ಕಿ ಭಾಸ್ಕರ್‌‘. ಇಂದು (ಅಕ್ಟೋಬರ್ 31) ಭಾಸ್ಕರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾನೆ. ದುಲ್ಕರ್ ಸಲ್ಮಾನ್‌, ಮೀನಾಕ್ಷಿ ಚೌಧರಿ, ಆಯೆಷಾ ಖಾನ್‌, ಹೈಪರ್ ಆದಿ, ಪಿ ಸಾಯಿಕುಮಾರ್ ಮೊದಲಾದವರು ನಟಿಸಿರುವ ‘ಲಕ್ಕಿ ಭಾಸ್ಕರ್‌‘ ಸಿನಿಮಾ ಬಗ್ಗೆ ನಿರೀಕ್ಷೆ ಕೊಂಚ ಹೆಚ್ಚೇ ಇದೆ. ದುಲ್ಕರ್ ಸಲ್ಮಾನ್ ಸಿನಿಮಾ ಬಗ್ಗೆ ಸಿನಿ ಪ್ರೇಕ್ಷಕರಲ್ಲಿ ಕೊಂಚ ನಿರೀಕ್ಷೆ ಹೆಚ್ಚಿರುವುದು ಸಹಜವೇ.

ವೆಂಕಿ ಅಟ್ಲೂರಿ ನಿರ್ದೇಶನದ, ಸೂರ್ಯದೇವರ ನಾಗವಂಶಿ, ಸಾಯಿ ಸೌಜನ್ಯ ನಿರ್ಮಾಣ ಲಕ್ಕಿ ಭಾಸ್ಕರ ಸಿನಿಮಾ ಇಂದು ಬಿಡುಗಡೆಯಾಗಿದೆ. ನಿನ್ನೆ (ಅಕ್ಟೋಬರ್ 30) ಪ್ರೀಮಿಯರ್ ಶೋ ಇದ್ದು, ಸಿನಿಮಾದ ನೋಡಿದ ಪ್ರೇಕ್ಷಕರು ಲಕ್ಕಿ ಭಾಸ್ಕರನನ್ನು ಮೆಚ್ಚಿಕೊಂಡಿದ್ದಾರಾ, ಸಿನಿಮಾ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಟಿಟ್ವರ್ ರಿವ್ಯೂ ಮೂಲಕ ಕಂಡುಕೊಳ್ಳೋಣ.

ಲಕ್ಕಿ ಭಾಸ್ಕರ್‌ ಟ್ವಿಟರ್ ರಿವ್ಯೂ

‘ಲಕ್ಕಿ ಭಾಸ್ಕರ್ ಗೆಲ್ಲುವ ಕುದುರೆ. ಚಿತ್ರದ ಚಿತ್ರಕಥೆಯನ್ನು ಬಹಳ ಸೊಗಸಾಗಿ ಬರೆದಿದ್ದಾರೆ. ನಿರ್ದೇಶನವೂ ಅದ್ಭುತವಾಗಿದೆ. ಪ್ರತಿಯೊಬ್ಬ ಕಲಾವಿದವರು ಪಾತ್ರಕ್ಕೆ ಜೀವ ತುಂಬಿದ್ದಾರೆ. ಭಾಸ್ಕರ ಪಾತ್ರವನ್ನು ಜೀವಿಸಿ ನಟಿಸಿದ್ದಾರೆ ದುಲ್ಕನ್ ಸಲ್ಮಾನ್‌. ದುಲ್ಕರ್ ನಿಜಕ್ಕೂ ಚಿತ್ರರಂಗಕ್ಕೆ ಸಿಕ್ಕ ಉಡುಗೊರೆ‘ ಎಂದು @ynakg2 ಎನ್ನುವ ಟ್ವಿಟರ್ ಪುಟ ನಿರ್ವಹಿಸುತ್ತಿರುವವರು ಕಾಮೆಂಟ್ ಮಾಡಿದ್ದಾರೆ.

‘ಲಕ್ಕಿ ಭಾಸ್ಕರ ಸಿನಿಮಾ ನೋಡಲು ಹೋಗುವ ಮುನ್ನ ಈ ವಿಚಾರಗಳು ನಿಮಗೆ ತಿಳಿದಿರಲಿ. ಇದೊಂದು ಫೈನಾಶ್ಷಿಯಲ್ ಥ್ರಿಲ್ಲರ್ ಸಿನಿಮಾ. ಬ್ಯಾಂಕ್ ಉದ್ಯೋಗಿಯೊಬ್ಬರು ಶ್ರೀಮಂತರಾಗಲು ಹಗರಣ ಮಾಡುವುದು ಈ ಚಿತ್ರದ ಕಥಾ ವಸ್ತು. ಅವರು ಚಲನಚಿತ್ರವು ಕಾಲ್ಪನಿಕ ಮತ್ತು ನಿಜ ಜೀವನದ ಘಟನೆಗಳನ್ನು ಸಂಯೋಜಿಸುತ್ತದೆ.ಪ್ರೀಮಿಯರ್ ಶೋಗಳು ಅಕ್ಟೋಬರ್ 30 ರಂದು ಸಂಜೆ ಪ್ರಾರಂಭವಾಗುತ್ತವೆ ಮತ್ತು ಅಕ್ಟೋಬರ್ 31ರಿಂದ ಸಾಮಾನ್ಯ ಪ್ರದರ್ಶನಗಳಿರುತ್ತವೆ. ಸಿನಿಮಾದ ಅವಧಿ ಎರಡೂವರೆ ಗಂಟೆ‘ ಎಂದು @am_Migrade ಎನ್ನುವವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ‘ಖಂಡಿತ ಇದೊಂದು ಬ್ಲಾಕ್‌ಬಸ್ಟರ್ ಸಿನಿಮಾ‘ ಎಂದು RISK_AJAY ಎನ್ನುವವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಲಕ್ಕಿ ಭಾಸ್ಕರ್ ಒಂದು ಅದ್ಭುತ ಮನರಂಜನೆಯ ಸಿನಿಮಾ. ಸಿನಿಮಾದಲ್ಲಿ ನಾಯಕನ ಪಾತ್ರವೇ ಹೆಚ್ಚು ಎನ್ನಿಸಿದರೂ ಖಂಡಿತ ಚಿತ್ರವನ್ನು ತಪ್ಪದೇ ನೋಡಬೇಕು. ಅದ್ಭುತ ಚಿತ್ರ,ಪ್ರೇಕ್ಷಕರನ್ನ ಹಿಡಿದಿಟ್ಟುಕೊಳ್ಳುವ ಸ್ಕ್ರೀನ್ ಪ್ಲೇ, ವೆಂಕಿ ಅಟ್ಲೂರಿ ಕಥೆಯನ್ನು ತೆಗೆದುಕೊಂಡು ರೀತಿಯೇ ಅದ್ಭುತ. ದುಲ್ಕರ್ ಸಲ್ಮಾನ್ ನಟನೆಯೇ ಅದ್ಭುತ, ಜಿವಿ ಪ್ರಕಾಶ್ ಅವರ ಸಂಗೀತ ನಿರ್ದೇಶನವು ಚಿತ್ರ ಹೈಲೈಟ್‌‘ ಎಂದು @9Chonik ಎನ್ನುವ ಎಕ್ಸ್‌ ಬಳಕೆದಾರರು ಬರೆದುಕೊಂಡಿದ್ದಾರೆ.

‘ಲಕ್ಕಿ ಭಾಸ್ಕರ್ ಸಿನಿಮಾ ನೋಡಲು ಅದ್ಭುತವಾಗಿದೆ. ದುಲ್ಕರ್ ಸಲ್ಮಾನ್ ನಟನೆಯ ಬಗ್ಗೆ ಮಾತೇ ಇಲ್ಲ. ಚಿತ್ರದಲ್ಲಿ ಸುಮತಿಯಾಗಿ ಮಿಂಚಿದ್ದಾರೆ ಮೀನಾಕ್ಷಿ ಚೌಧರಿ. ಜಿವಿ ಪ್ರಕಾಶ್ ಅವರ ಸಂಗೀತಕ್ಕೆ ಮನಸೋಲದೇ ಇರಲು ಸಾಧ್ಯವೇ ಇಲ್ಲ. ವೆಂಕಿ ಅಟ್ಲೂರಿ ನಿರ್ದೇಶನವೂ ಅದ್ಭುತ‘ ಎಂದು @withluv_karthik ಎನ್ನುವವರು ಎಕ್ಸ್‌ ಪುಟದಲ್ಲಿ ಸಿನಿಮಾವನ್ನು ಹಾಡಿ ಹೊಗಳಿದ್ದಾರೆ.

‘ಲಕ್ಕಿ ಭಾಸ್ಕರ್ ಸಿನಿಮಾವು ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುತ್ತದೆ. ಮೊದಲಾರ್ಧದಲ್ಲಿ ಬ್ಯಾಂಕ್ ಉದ್ಯೋಗಿಯ ಬದುಕು, ಬ್ಯಾಂಕ್ ಬ್ಯಾಂಕ್ ಕಾರ್ಯಾಚರಣೆಗಳ ಸಂಕೀರ್ಣ ಕಾರ್ಯಗಳನ್ನು ಬಗ್ಗೆ ತಿಳಿಸುತ್ತದೆ. ಪ್ರತಿ ಹಂತವನ್ನು ಸಿನಿಮಾದಲ್ಲಿ ತುಂಬಾ ಸುಂದರವಾಗಿ ತೋರಿಸಲಾಗಿದೆ. ಬ್ಯಾಂಕ್ ಉದ್ಯೋಗಿಯ ಪಾತ್ರದಲ್ಲಿ ದುಲ್ಕರ್ ಸಲ್ಮಾನ್ ನಟನೆ ಅದ್ಭುತ. ಒಟ್ಟಾರೆ ಸಿನಿಮಾದ ಮೊದಲಾರ್ಧ ನೋಡಿದ್ರೆ ಸಿನಿಮಾ ಗೆಲ್ಲುತ್ತೆ ಎಂದು ಹೇಳಬಹುದು‘ ಎಂದು ಇಂಟರ್ವಲ್‌ನಲ್ಲಿ @MovieCrow ಎನ್ನುವವರು ಸಿನಿಮಾ ಬಗ್ಗೆ ಟ್ವಿಟರ್‌ನಲ್ಲಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.

‘ಈಗಷ್ಟೇ ಲಕ್ಕಿ ಭಾಸ್ಕರ ಸಿನಿಮಾ ನೋಡಿದೆ. ಅಬ್ಬಾ, ಇದೊಂದು ಅದ್ಬುತ ಸಂವೇದನಾಶೀಲ ಚಿತ್ರ. ಭಾರತ ಚಿತ್ರರಂಗದಲ್ಲಿ ಬ್ಯಾಂಕಿಂಗ್ ಮೇಲೆ ಮೂಡಿದ ಬಂದ ಬೆಸ್ಟ್ ಚಿತ್ರ ಇದಾಗಿದೆ. ಭಾಸ್ಕರನ ಪಾತ್ರದಲ್ಲಿ ಅದ್ಭುತವಾಗಿ ನಟಸಿದ್ದಾರೆ ದುಲ್ಕರ್ ಸಲ್ಮಾನ್‌. ಮೀನಾಕ್ಷಿ ಚೌದರಿ ನಟನೆಯೂ ಅದ್ಭುತ. ಸಂಗೀತವೂ ಸೊಗಸಾಗಿದೆ. ಇಂತಹ ಕಥೆ ಬರೆದು, ನಿರ್ದೇಶನ ಮಾಡಿದ ವೆಂಕಿ ಅಟ್ಲೂರಿಗೆ ಹ್ಯಾಟ್ಸ್‌ ಆಫ್‌ ಎಂದಿದ್ದಾರೆ pavan sadineni.

‘ಲಕ್ಕಿ ಭಾಸ್ಕರ್ ಸಿನಿಮಾವು ಮೊದಲಿಂದ ಕೊನೆವರೆಗೂ ಗೆದ್ದಿದೆ. ವೆಂಕಿ ಅಟ್ಲೂರಿ ಅವರು ಈ ಚಿತ್ರಕಥೆಯನ್ನು ತುಂಬಾ ಸೊಗಸಾಗಿ ಬರೆದು, ನಿರ್ದೇಶನ ಮಾಡಿದ್ದಾರೆ. ಪ್ರತಿ ನಟರೂ ನಮ್ಮ ‍ಪಾತ್ರಕ್ಕೆ ಜೀವ ತುಂಬಿದ್ದಾರೆ. ದುಲ್ಕರ್ ಸಲ್ಮಾನ್ ಬ್ಯಾಂಕ್ ಉದ್ಯೋಗಿ ಭಾಸ್ಕರ್‌ನಾಗಿ ಕಣ್ಣು ಮುಂದೆ ಬಂದಂತೆ ನಟಿಸಿದ್ದಾರೆ‘ ಎಂದು @TheVincible ಎನ್ನುವವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ