logo
ಕನ್ನಡ ಸುದ್ದಿ  /  ಮನರಂಜನೆ  /  The Suit First Look: ‘ದ ಸೂಟ್‌’.. ಇದು ಮೈಮೇಲೆ ಧರಿಸುವ ಸೂಟಿನ ಕಥೆ; ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್

The Suit First Look: ‘ದ ಸೂಟ್‌’.. ಇದು ಮೈಮೇಲೆ ಧರಿಸುವ ಸೂಟಿನ ಕಥೆ; ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್

HT Kannada Desk HT Kannada

Mar 31, 2023 12:36 PM IST

‘ದ ಸೂಟ್‌’.. ಇದು ಮೈಮೇಲೆ ಧರಿಸುವ ಸೂಟಿನ ಕಥೆ; ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್‌

  • ಹೊಸಬರ ಹೊಸ ಪ್ರಯತ್ನವೆಂಬಂತೆ ‘ದ ಸೂಟ್‌’ ಹೆಸರಿನ ಸಿನಿಮಾ ಇದೀಗ ತನ್ನ ಮೊದಲ ನೋಟವನ್ನು ಹೊರಗೆಡವಿದೆ. 

‘ದ ಸೂಟ್‌’.. ಇದು ಮೈಮೇಲೆ ಧರಿಸುವ ಸೂಟಿನ ಕಥೆ; ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್‌
‘ದ ಸೂಟ್‌’.. ಇದು ಮೈಮೇಲೆ ಧರಿಸುವ ಸೂಟಿನ ಕಥೆ; ಫಸ್ಟ್‌ ಲುಕ್‌ ಬಿಡುಗಡೆ ಮಾಡಿದ ಗೀತ ಸಾಹಿತಿ ವಿ. ನಾಗೇಂದ್ರ ಪ್ರಸಾದ್‌

The Suit First Look: ಶೀರ್ಷಿಕೆ ಮೂಲಕವೇ ಗಮನ ಸೆಳೆಯುವ ನಿಟ್ಟಿನಲ್ಲಿ ‘ದ ಸೂಟ್‌’ ಸಿನಿಮಾ ಇದೀಗ ತನ್ನ ಲುಕ್‌ ಹೊರಗೆಡವಿದೆ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್‌ ಅನ್ನು ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್‌ ಮತ್ತು ನೀರ್‌ ದೋಸೆ ಸಿನಿಮಾ ಖ್ಯಾತಿಯ ವಿಜಯ್‌ ಪ್ರಸಾದ್‌ ಬಿಡುಗಡೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಐಶ್ವರ್ಯಾ ಅರ್ಜುನ್‌- ಉಮಾಪತಿ ರಾಮಯ್ಯ ಮದುವೆ ಆಮಂತ್ರಣ ಬಂತು; ಅರ್ಜುನ್‌ ಸರ್ಜಾ ಮಗಳಿಗೆ ಮುಂದಿನ ತಿಂಗಳೇ ಶುಭವಿವಾಹ

Casting Couch: ಕಾಸ್ಟಿಂಗ್‌ ಡೈರೆಕ್ಟರ್‌ ವಿರುದ್ಧ ದೂರು ನೀಡಿದ ನಟಿ ಅಮೂಲ್ಯ ಗೌಡ; ಅಶ್ಲೀಲ ಸಂದೇಶ ಕಳುಹಿಸಿ ಅಡಿಷನ್‌ಗೆ ಆಹ್ವಾನ

ಮೊಟ್ಟೆ ಉಡುಗೆ ತೊಟ್ಟ ನಟಿ ಉರ್ಫಿ ಜಾವೇದ್‌; ಮೊಟ್ಟೆಗಳ ಮೇಲೆ ಕಣ್ಣು ನೆಟ್ಟ ನೆಟ್ಟಿಗರು ಹೇಳಿದ್ದೇ ಬೇರೆ

Manjummel Boys: ಮಂಜುಮ್ಮೆಲ್ ಬಾಯ್ಸ್‌ನ ಈ 2 ಸೀನ್‌ಗಳ ಕುರಿತು ನಡೆಯುತ್ತಿದೆ ಬಿಸಿಬಿಸಿ ಚರ್ಚೆ, ಅದ್ಭುತ ಅಂದ್ರು ಒಟಿಟಿ ಪ್ರೇಕ್ಷಕರು

ಚಿತ್ರದ ಬಗ್ಗೆ ಮಾಹಿತಿ ನೀಡುವ ನಿರ್ದೇಶಕ ಎಸ್.‌ ಭಗತ್‌ ರಾಜ್‌, "ನಾನು ಕಾಶಿನಾಥ್ ಅವರ ಬಳಿ ಕೆಲಸ ಮಾಡಿದ್ದೆ. ಈ ಚಿತ್ರದ ಕಥೆಯನ್ನು ಅವರಿಗೆ ಹೇಳಿದ್ದೆ. ಅವರು ಕೂಡ ಕಥೆ ಮೆಚ್ಚಿಕೊಂಡು ಮನಸಾರೆ ಹಾರೈಸಿದ್ದರು. ಇದು ನನ್ನ ನಿರ್ದೇಶನದ ಮೊದಲ ಚಿತ್ರ. ನಮ್ಮ ಚಿತ್ರದಲ್ಲಿ ನಾವು ಧರಿಸುವ ಸೂಟೇ ಪ್ರಮುಖ ಪಾತ್ರಧಾರಿ. ಸೂಟ್‌ಗೆ ಅದರದೇ ಆದ ವಿಶೇಷತೆ ಇದೆ. ಮದುವೆ, ಮೀಟಿಂಗ್ ಮುಂತಾದ ಕಡೆ ಸೂಟ್ ಧರಿಸಿದರೆ, ಒಂದು ವಿಶೇಷ ಕಳೆ. ಎಷ್ಟೋ ವಿವಾಹಗಳು ಸೂಟು - ಬೂಟು ಕೊಡಲಿಲ್ಲ ಅಂತ ನಿಂತ ಉದಾಹರಣೆಗಳಿವೆʼ ಎಂದರು.

ಮುಂದುವರಿದು ಮಾಹಿತಿ ನೀಡುವ ಅವರು, "ಕುವೆಂಪು, ಸರ್ ಎಂ ವಿಶ್ವೇಶ್ವರಯ್ಯ, ಅಂಬೇಡ್ಕರ್ ಅವರಲ್ಲದೆ, ಕಸ್ತೂರಿ ನಿವಾಸದ ಅಣ್ಣಾವ್ರು ಸೇರಿ ಬಹುತೇಕ ಸಿನಿಮಾ ನಟರು ಸೂಟ್‌ನಲ್ಲಿ ಮಿಂಚಿದ್ದಾರೆ. ಹೀಗೆ ತನ್ನದೆ ಗತ್ತಿರುವ ಸೂಟ್‌ ಆಧರಿಸಿ ದ ಸೂಟ್‌ ಹೆಸರಿನ ಸಿನಿಮಾ ಮಾಡಿದ್ದೇವೆ. ಮಾಲತಿ ಬಿ. ರಾಮಸ್ವಾಮಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಆರು ಹಾಡುಗಳಿಗೆ ಕಿರಣ್ ಶಂಕರ್ ಸಂಗೀತ ನೀಡಿದ್ದಾರೆ‌. ಕಿರಣ್ ಹಂಪಾಪುರ ಛಾಯಾಗ್ರಹಣ, ಸುರೇಶ್ ಡಿ.ಹೆಚ್ ಸಂಕಲನ ಈ ಚಿತ್ರಕ್ಕಿದೆ ಎಂದರು.

ಈ ಚಿತ್ರದಲ್ಲಿ ಧಾನ್ವಿ, ಸುಜಯ್ ಆರ್ಯ, ಕಮಲ್, ಮಂಜುನಾಥ್ ಪಾಟೀಲ್, ಭೀಷ್ಮ ರಾಮಯ್ಯ, ದೀಪ್ತಿ ಕಾಪ್ಸೆ, ಡಾ. ವಿ. ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಉಮೇಶ್ ಬಣಕಾರ್, ಸಿದ್ದಲಿಂಗು ಶ್ರೀಧರ್ , ಜೋಸೆಫ್ ಸೇರಿ ರಂಗಭೂಮಿ ಹಾಗೂ ರಾಜಕೀಯ ಪ್ರಮುಖ ಗಣ್ಯರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಗಣ್ಯರಿಂದ ಸೂಟ್‌ ಬಗ್ಗೆ ಕವನ

ದ ಸೂಟ್ ಚಿತ್ರದ ಶೀರ್ಷಿಕೆ ನೊಂದಾಯಿಸಿದ ಬಳಿಕ ಕನ್ನಡ ಚಿತ್ರರಂಗದ ನಿರ್ದೇಶಕರು, ಚಿತ್ರ ಸಾಹಿತಿಗಳ ಬಳಿ ಸೂಟ್‌ ಟೈಟಲ್‌ ಮೇಲೆ ಕವನ ಬರೆಸಿದ್ದರು ನಿರ್ದೇಶಕರು. ಅದು ಈಗಾಗಲೇ ಪುಸ್ತಕ ರೂಪದಲ್ಲಿಯೇ ಹೊರಬಂದಿದೆ. ಹಿರಿಯ ನಟ ಕಾಶಿನಾಥ್, ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಪತ್ನಿ ನಾಗಲಕ್ಷ್ಮಿ, ಪತ್ರಕರ್ತ ಜೋಗಿ, ಸಂಗೀತ ನಿರ್ದೇಶಕ ವಿ. ಮನೋಹರ್ ಸೇರಿ ಹಲವರು ಈ ಪುಸ್ತಕ ಬಿಡುಗಡೆ ಮಾಡಿದ್ದರು. ಈ ಪುಸ್ತಕ ರಿಲೀಸ್‌ ಬಳಿಕ ಚಿತ್ರದ ಶೂಟಿಂಗ್‌ ಆರಂಭವಾಗಿತ್ತು.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು