logo
ಕನ್ನಡ ಸುದ್ದಿ  /  ಮನರಂಜನೆ  /  ರಿಲೀಸ್‌ಗೂ ಮುನ್ನ 1000 ಕೋಟಿ ಬಿಸ್ನೆಸ್‌ ಮಾಡಿದ ಅಲ್ಲು ಅರ್ಜುನ್‌ ಪುಷ್ಪ 2 ಚಿತ್ರ;ಡಿಜಿಟಲ್‌,ಥಿಯೇಟ್ರಿಕಲ್‌ ರೈಟ್ಸ್‌ನಿಂದ ಬಂದ ಪಾಲು ಎಷ್ಟು?

ರಿಲೀಸ್‌ಗೂ ಮುನ್ನ 1000 ಕೋಟಿ ಬಿಸ್ನೆಸ್‌ ಮಾಡಿದ ಅಲ್ಲು ಅರ್ಜುನ್‌ ಪುಷ್ಪ 2 ಚಿತ್ರ;ಡಿಜಿಟಲ್‌,ಥಿಯೇಟ್ರಿಕಲ್‌ ರೈಟ್ಸ್‌ನಿಂದ ಬಂದ ಪಾಲು ಎಷ್ಟು?

Rakshitha Sowmya HT Kannada

Oct 22, 2024 08:51 AM IST

google News

ರಿಲೀಸ್‌ಗೂ ಮುನ್ನ 1000 ಕೋಟಿ ಬಿಸ್ನೆಸ್‌ ಮಾಡಿದ ಅಲ್ಲು ಅರ್ಜುನ್‌ ಪುಷ್ಪ 2 ಸಿನಿಮಾ

  • ಸುಕುಮಾರ್‌ ನಿರ್ದೇಶನದಲ್ಲಿ ಅಲ್ಲು ಅರ್ಜುನ್‌ ರಶ್ಮಿಕಾ ಮಂದಣ್ಣ ಪ್ರಮುಖ ಪಾತ್ರದಲ್ಲಿ ನಟಿಸಿರುವ ಪುಷ್ಪ 2: ದಿ ರೂಲ್‌ ಸಿನಿಮಾ ಬಿಡುಗಡೆಗೂ ಮುನ್ನವೇ ದೊಡ್ಡ ಮೊತ್ತದ ಬಿಸ್ನೆಸ್‌ ಮಾಡಿದೆ. ಥಿಯೇಟ್ರಿಕಲ್‌, ಡಿಜಿಟಲ್‌, ಸ್ಯಾಟಲೈಟ್‌ ರೈಟ್ಸ್‌ ಸೇರಿ ಒಟ್ಟು 1,065 ಕೋಟಿ ರೂ. ಗಳಿಸಿದೆ ಎಂದು ಮೂಲಗಳು ತಿಳಿಸಿವೆ. 

ರಿಲೀಸ್‌ಗೂ ಮುನ್ನ 1000 ಕೋಟಿ ಬಿಸ್ನೆಸ್‌ ಮಾಡಿದ ಅಲ್ಲು ಅರ್ಜುನ್‌ ಪುಷ್ಪ 2 ಸಿನಿಮಾ
ರಿಲೀಸ್‌ಗೂ ಮುನ್ನ 1000 ಕೋಟಿ ಬಿಸ್ನೆಸ್‌ ಮಾಡಿದ ಅಲ್ಲು ಅರ್ಜುನ್‌ ಪುಷ್ಪ 2 ಸಿನಿಮಾ

ಐಕಾನ್‌ ಸ್ಟಾರ್‌ ಅಲ್ಲು ಅರ್ಜುನ್‌ ಅಭಿನಯದ ಪುಷ್ಪ 2 ಸಿನಿಮಾ ರಿಲೀಸ್‌ಗೆ ರೆಡಿ ಇದೆ. ಡಿಸೆಂಬರ್‌ 6 ರಂದು ಈ ಸಿನಿಮಾ ವಿಶ್ವಾದ್ಯಂತ ಅದ್ದೂರಿಯಾಗಿ ತೆರೆ ಕಾಣುತ್ತಿದೆ. ಮೊದಲ ಭಾಗ ಬ್ಲಾಕ್‌ ಬಸ್ಟರ್‌ ಆಗಿದೆ. ಎರಡನೇ ಭಾಗ ನೋಡಲು ಸಿನಿಪ್ರಿಯರು ಕಾಯುತ್ತಿದ್ದಾರೆ. ಸಿನಿಮಾ ಚಿತ್ರೀಕರಣ ಆರಂಭವಾದಾಗಿನಿಂದ ದೊಡ್ಡ ಕ್ರೇಜ್‌ ಸೃಷ್ಟಿಸಿದೆ. ಇದೀಗ ಸಿನಿಮಾ ರಿಲೀಸ್‌ಗೆ ಮುನ್ನವೇ ದೊಡ್ಡ ಮೊತ್ತದ ಲಾಭ ಮಾಡಿದೆ ಎನ್ನಲಾಗುತ್ತಿದೆ.

ರಿಲೀಸ್‌ಗೂ ಮುನ್ನವೇ 1,065 ಕೋಟಿ ರೂ. ಬಾಚಿಕೊಂಡ ಪುಷ್ಪ 2

ಯಾವುದೇ ಸಿನಿಮಾ ರಿಲೀಸ್‌ ಆದ ನಂತರ ಬಾಕ್ಸ್‌ ಆಫೀಸಿನಲ್ಲಿ 1000 ಕೋಟಿ ರೂ ಕಲೆಕ್ಷನ್‌ ಮಾಡಿದರೆ ಅದು ದೊಡ್ಡ ದಾಖಲೆ ಎಂಬ ಲೆಕ್ಕಾಚಾರ ಹಾಕಲಾಗುತ್ತದೆ. ಆದರೆ ಪುಷ್ಪ ಸಿನಿಮಾ ಬಿಡುಗಡೆ ಆಗುವ ಮುನ್ನವೇ 1,065 ಕೋಟಿ ರೂ. ಬಿಸ್ನೆಸ್‌ ಮಾಡಿದೆ ಎಂಬ ಮಾತು ಕೇಳಿ ಬರುತ್ತಿದೆ. ಥಿಯಟ್ರಿಕಲ್‌, ಒಟಿಟಿ ಡಿಜಿಟಲ್‌ ಸ್ಟ್ರೀಮಿಂಗ್‌, ಆಡಿಯೋ, ಸಾಟಲೈಟ್‌ ಎಲ್ಲಾ ಸೇರಿ ಸಿನಿಮಾ ಭಾರೀ ಲಾಭ ಮಾಡಿದೆ ಎಂಬ ಮಾತು ಟಾಲಿವುಡ್‌ ವಲಯದಲ್ಲಿ ಕೇಳಿ ಬರುತ್ತಿದೆ.

ಆಂಧ್ರಪ್ರದೇಶ, ತೆಲಂಗಾಣದಲ್ಲಿ ಥಿಯೇಟ್ರಿಕಲ್‌ ಹಕ್ಕುಗಳು 220 ಕೋಟಿಗೆ ಮಾರಾಟವಾಗಿದೆಯಂತೆ, ಉತ್ತರ ಭಾರತದಲ್ಲಿ 200 ಕೋಟಿ ರೂ.ಗೆ ಸೇಲ್‌ ಆಗಿದೆ. ಈ ಮೂಲಕ ಯಾವ ಬಾಲಿವುಡ್‌ ಸಿನಿಮಾ ಮಾಡದ ದಾಖಲೆಯನ್ನು ಪುಷ್ಪ 2 ಮಾಡಿದೆ ಎಂಬ ಮಾತು ಕೇಳಿಬರುತ್ತಿದೆ. ಅದೇ ರೀತಿ ತಮಿಳುನಾಡಿನಲ್ಲಿ 50 ಕೋಟಿ ರೂ, ಕರ್ನಾಟಕದಲ್ಲಿ 30 ಕೋಟಿ ರೂ, ಕೇರಳದಲ್ಲಿ 20 ಕೋಟಿ ರೂ. ಗಳಿಸಿದೆಯಂತೆ. ಜೊತೆಗೆ ಓವರ್‌ಸೀಸ್‌ ಥಿಯೇಟ್ರಿಕಲ್‌ ರೈಟ್ಸ್‌ ಸುಮಾರು 120 ಕೋಟಿ ರೂ.ಗೆ ಮಾರಾಟವಾಗುವ ಮೂಲಕ ಬಿಡುಗಡೆಗೆ ಮುನ್ನವೇ ಪುಷ್ಪ 2 ಸಿನಿಮಾ ಥಿಯೇಟ್ರಿಕಲ್‌ ರೈಟ್ಸ್‌ ಮೂಲಕವೇ 640 ಕೋಟಿ ರೂ. ಪ್ರೀ ರಿಲೀಸ್‌ ಬಿಸ್ನೆಸ್‌ ಮಾಡಿದೆ.

ಡಿಸೆಂಬರ್‌ 6 ರಂದು ತೆರೆ ಕಾಣುತ್ತಿರುವ ಸಿನಿಮಾ

ಇನ್ನು ಒಟಿಟಿ ವಿಚಾರಕ್ಕೆ ಬರುವುದಾದರೆ ಡಿಜಿಟಲ್‌ ಸ್ಟ್ರೀಮಿಂಗ್‌ ಹಕ್ಕು ನೆಟ್‌ಫ್ಲಿಕ್ಸ್‌ ಪಾಲಾಗಿದೆಯಂತೆ. ಸುಮಾರು 275 ಕೋಟಿ ರೂ. ಕೊಟ್ಟು ನೆಟ್‌ಫ್ಲಿಕ್ಸ್‌, ಪುಷ್ಪ 2 ಸಿನಿಮಾವನ್ನು ಖರೀದಿ ಮಾಡಿದೆ. ಆಡಿಯೋ ಹಕ್ಕು 65 ಕೋಟಿ ರೂ, ಸ್ಯಾಟಲೈಟ್‌ ಹಕ್ಕಿನಿಂದ 85 ಕೋಟಿ ರೂ. ಗಳಿಸಿದೆಯಂತೆ. ಒಟ್ಟಾರೆ ಬಿಡುಗಡೆಗೂ ಮುನ್ನ ಈ ಎಲ್ಲಾ ಹಕ್ಕುಗಳಿಂದ ಪುಷ್ಪ ಚಿತ್ರಕ್ಕೆ 1,065 ಕೋಟಿ ಪ್ರೀ ರಿಲೀಸ್‌ ಬಿಸ್ನೆಸ್‌ ಆಗಿದೆ ಎಂಬ ಟಾಕ್‌ ಶುರುವಾಗಿದೆ. ಆದರೆ ಈ ವಿಚಾರವಾಗಿ ಪುಷ್ಪ 2 ಚಿತ್ರತಂಡ ತುಟಿ ಬಿಚ್ಚಿಲ್ಲ. ಒಂದು ವೇಳೆ ಇದು ನಿಜವಾಗಿದ್ದೇ ಆದಲ್ಲಿ , ಬಾಕ್ಸ್‌ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಪುಡಿ ಮಾಡುವುದು ಗ್ಯಾರಂಟಿ.

ಪುಷ್ಪ 2 ಸಿನಿಮಾ ಡಿಸೆಂಬರ್‌ 6 ರಂದು ತೆಲುಗು ಸೇರಿ ಕನ್ನಡ, ತಮಿಳು, ಹಿಂದಿ, ಮಲಯಾಳಂ ಭಾಷೆಗಳಲ್ಲಿ ರಿಲೀಸ್‌ ಆಗುತ್ತಿದೆ. ಶೀಘ್ರದಲ್ಲೇ ಪ್ರಮೋಷನ್‌ ಕೆಲಸಗಳು ಕೂಡಾ ಶುರುವಾಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್‌ ಹಾಗೂ ಸುಕುಮಾರ್‌ ರೈಟಿಂಗ್ಸ್‌ ಬ್ಯಾನರ್‌ ಅಡಿ ಪುಷ್ಪ ಚಿತ್ರವನ್ನು ಸುಕುಮಾರ್‌ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಹಾಡುಗಳಿಗೆ ದೇವಿ ಶ್ರೀ ಪ್ರಸಾದ್‌ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್‌, ಫಹಾದ್‌ ಫಾಸಿಲ್‌, ಡಾಲಿ ಧನಂಜಯ್‌, ಪ್ರಕಾಶ್‌ ರಾಜ್‌, ಸುನಿಲ್‌, ಅನಸೂಯ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ