Devara Review: ಅಬ್ಬರಿಸಿ ಬೊಬ್ಬಿರಿದ ದೇವರ, ಇದು ಸಾಮಾನ್ಯ ಸಿನಿಮಾ ಅಲ್ಲ ಸ್ವಾಮಿ ಎಂದ ಜ್ಯೂ ಎನ್‌ಟಿಆರ್ ಫ್ಯಾನ್ಸ್; ಟ್ವಿಟ್ಟರ್ ರಿವ್ಯೂ
Sep 27, 2024 06:26 AM IST
Devara Review: ಅಬ್ಬರಿಸಿ ಬೊಬ್ಬಿರಿದ ದೇವರ,ಇದು ಸಾಮಾನ್ಯ ಸಿನಿಮಾ ಅಲ್ಲ ಸ್ವಾಮಿ ಎಂದ ಜ್ಯೂ ಎನ್‌ಟಿಆರ್ ಫ್ಯಾನ್ಸ್; ಟ್ವಿಟ್ಟರ್ ರಿವ್ಯೂ
ಕೊರಟಾಲ ಶಿವ ನಿರ್ದೇಶನದ ಟಾಲಿವುಡ್‌ನ ಮೋಸ್ಟ್ ಅವೇಟೆಡ್ ಸಿನಿಮಾ ದೇವರ ರಿಲೀಸ್ ಆಗಿದೆ. ಸಿನಿಮಾ ಪಕ್ಕಾ ಬ್ಲಾಕ್ ಬಸ್ಟರ್ ಎಂದು ಸಿನಿಮಾ ನೋಡಿದವರು ಪ್ರತಿಕ್ರಿಯಿಸುತ್ತಿದ್ದಾರೆ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ರಿವ್ಯೂ ಬರೆದುಕೊಳ್ಳುತ್ತಿದ್ದಾರೆ. ದೇವರ ಸಿನಿಮಾ ಟ್ವಿಟ್ಟರ್ ರಿವ್ಯೂ ಇಲ್ಲಿದೆ.
ಜ್ಯೂನಿಯರ್ ಎನ್‌ಟಿಆರ್ ಅಭಿನಯದ ಬಹುನಿರೀಕ್ಷಿತ ದೇವರ ಸಿನಿಮಾ ರಿಲೀಸ್ ಅಗಿದೆ. ಮಧ್ಯರಾತ್ರಿಯಿಂದಲೇ ಶೋ ಆರಂಭವಾಗಿದ್ದು ಆಂಧ್ರ ಹಾಗೂ ತೆಲಂಗಾಣದಲ್ಲಿ ಇಂದು ಬೆಳಗ್ಗೆ 4 ಗಂಟೆಗೆ ಮೊದಲ ಶೋ ಆರಂಭವಾಗಿದೆ. ಇಂದು ಮೊದಲ ದಿನ 6 ಶೋ ಇರಲಿದ್ದು ಹತ್ತು ದಿನಗಳ ಕಾಲ 5 ಶೋಗಳಿಗಾಗಿ ಚಿತ್ರತಂಡ ಅನುಮತಿ ಪಡೆದಿದೆ.
ವಾರದ ಹಿಂದೆಯೇ ದೇವರ ಚಿತ್ರತಂಡ ಟಾಲಿವುಡ್ ಗಣ್ಯರಿಗಾಗಿ ವಿಶೇಷ ಪ್ರೀಮಿಯರ್ ಶೋ ಏರ್ಪಡಿಸಿತ್ತು. 2 ದಿನಗಳ ಹಿಂದೆ ಸಾಗರೋತ್ತರ ವಿತರಕರು ಸಿನಿಮಾ ನೋಡಿ ಸೂಪರ್ ಎಂದಿದ್ದರು. ಇದೀಗ ಸಿನಿಮಾ ನೋಡಿದ ಅಭಿಮಾನಿಗಳು ಕೂಡಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ದೇವರ ಎಕ್ಸ್ ರಿವ್ಯೂ ಹೊರ ಬಿದ್ದಿದೆ. ಸಿನಿಮಾ ನೋಡಿದವರು ಏನಂದ್ರು? ಯಾರ ಪಾತ್ರ ಇಷ್ಟಪಟ್ಟರು? ಹಾಡುಗಳು ಹೇಗಿವೆ?
ದೇವರ ಸಿನಿಮಾ ಎಕ್ಸ್ ರಿವ್ಯೂ
ದೇವರ ಒಂದು ಸಿನಿಮಾ ಅಲ್ಲ , ಇದು ಹಬ್ಬ. ಡ್ರಾಮಾ, ಎಮೋಷನ್, ಆಕ್ಷನ್ ಎಲ್ಲವೂ ಒಟ್ಟಿಗೆ ಸೇರಿದೆ. ಕ್ಲೈಮಾಕ್ಸ್ ಅಂತೂ ಬಹಳ ಚೆನ್ನಾಗಿದೆ. ಫಸ್ಟ್ ಹಾಫ್ ಚೆನ್ನಾಗಿದೆ. ಸೆಕೆಂಟ್ ಹಾಫ್ ಅಂತೂ ಬೆಂಕಿ ಎಂದು ಎಕ್ಸ್ ಯೂಸರ್ ಒಬ್ಬರು ಕಾಮೆಂಟ್ ಮಾಡಿ ಚಿತ್ರದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಜ್ಯೂನಿಯರ್ ಎನ್‌ಟಿಆರ್ ತಾವೊಬ್ಬ ಆಲ್ ರೌಂಡರ್ ನಟ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಬ್ಯಾಕ್ ಟು ಬ್ಯಾಕ್ ಮಾಸ್ ದೃಶ್ಯಗಳಲ್ಲಂತೂ ಎನ್‌ಟಿಆರ್ ಮಿಂಚಿದ್ದಾರೆ ಮೊದಲಾರ್ಧಕ್ಕಿಂತ ದ್ವಿತೀಯಾರ್ಧ ಚೆನ್ನಾಗಿದೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಮೊದಲಾರ್ಧ ಚೆನ್ನಾಗಿದೆ ಎನ್ನುತ್ತಾರೆ. ಕಾಲರ್ ಎಗರಿಸಿ ಹೇಳುತ್ತಿದ್ದೇನೆ, ದೇವರ ಬ್ಲಾಕ್ ಬಸ್ಟರ್ ಪಕ್ಕಾ ಎಂದು ಮತ್ತೊಬ್ಬರು ಎಕ್ಸ್ ಯೂಸರ್ ಹೇಳಿದ್ದಾರೆ.
ಇಟ್ಸ್ ಸಿನಿಮಾ ಎಂಬ ಎಕ್ಸ್ ಪೇಜ್‌ನಲ್ಲಿ ದೇವರ ಚಿತ್ರಕ್ಕೆ 4 ಸ್ಟಾರ್ ರೇಟಿಂಗ್ ನೀಡಲಾಗಿದೆ. ಸಿನಿಮಾ ನೋಡುತ್ತಿದ್ದರೆ ಗೂಸ್ ಬಂಪ್ಸ್ ಬರುತ್ತದೆ. ಜ್ಯೂನಿಯರ್ ಎನ್‌ಟಿಆರ್ ಎಂಟ್ರಿ ಮಸ್ತ್, ಸೈಫ್ ಅಲಿ ಖಾನ್ ಹಾಗೂ ಇತರರ ಆಕ್ಟಿಂಗ್ ಚೆನ್ನಾಗಿದೆ. ಅನಿರುದ್ದ ಸಂಗೀತದ ಬಗ್ಗೆ ಹೇಳುವ ಅಗತ್ಯವೇ ಇಲ್ಲ. ಸೆಕೆಂಡ್ ಹಾಫ್ ಚೆನ್ನಾಗಿದೆ. ಒಟ್ಟಿನಲ್ಲಿ ಸಿನಿಮಾ ಬ್ಲಾಕ್ ಬಸ್ಟರ್ ಎಂದು ಬರೆಯಲಾಗಿದೆ.
ಚಿತ್ರಕ್ಕೆ ಜ್ಯೂ ಎನ್‌ಟಿಆರ್ ನಟನೆಯೇ ಬಲ, ಸೈಫ್ ಅಲಿ ಖಾನ್ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಆಕ್ಷನ್ ದೃಶ್ಯಗಳಂತೂ ಸೂಪರ್, ಸೆಕಂಡ್ ಹಾಫ್ ಸೂಪರ್, ಹಾಡುಗಳು ಚೆನ್ನಾಗಿದೆ. ಆದರೆ ಸಿನಿಮಾದಲ್ಲ ಜಾಹ್ನವಿ ಕಪೂರ್ ಕೆಲಸ ಹೆಚ್ಚಿಗೆ ಇಲ್ಲ. ಸಿನಿಮಾ ನಿಜಕ್ಕೂ ಎಂಟರ್‌ಟೈನರ್ ಅಗಿದೆ. ಸಿನಿಮಾ ನೋಡುವುದನ್ನು ಮಿಸ್ ಮಾಡಬೇಡಿ ಎಂದು ಜ್ಯೂನಿಯರ್ ಎನ್‌ಟಿಆರ್ ಅಭಿಮಾನಿಯೊಬ್ಬರು ರಿವ್ಯೂ ಬರೆದುಕೊಂಡಿದ್ದಾರೆ.
ಸಿನಿಮಾಗೆ ಪಾಸಿಟಿವ್ ಟಾಕ್ ಜೊತೆಗೆ ಕೆಲವರು ನೆಗೆಟಿವ್ ಕಾಮೆಂಟ್ ಕೂಡಾ ವ್ಯಕ್ತಪಡಿಸಿದ್ದಾರೆ
ದೇವರ ಸಿನಿಮಾದಲ್ಲಿ ಎನ್‌ಟಿಆರ್ ಆಕ್ಟಿಂಗ್, ಅನಿರುದ್ಧ್ ರವಿಚಂದರ್ ಸಂಗೀತ, ಇಂಟರ್‌ವೆಲ್ ಫೈಟ್ ಚೆನ್ನಾಗಿದೆ ಆದರೆ ಚಿತ್ರದಲ್ಲಿ ಟ್ವಿಸ್ಟ್ ಇಲ್ಲ, ಸೆಕೆಂಡ್ ಹಾಫ್ ಚೆನ್ನಾಗಿಲ್ಲ, ಸ್ಟೋರಿ ಅಷ್ಟಕಷ್ಟೇ, ಹೊಸತನ ಇಲ್ಲ, ಕ್ಲೈಮಾಕ್ಸ್ ಕೂಡಾ ನೀರಸ ಎಂದು ಎಕ್ಸ್ ಯೂಸರ್ ಸಿನಿಮಾ ಬಗ್ಗೆ ಬೇಸರದ ಮಾತುಗಳನ್ನಾಡಿದ್ದಾರೆ.
ಫಸ್ಟ್ ಆಫ್ ಓಕೆ, ಆದರೆ ವಿಎಫ್‌ಎಕ್ಸ್ ಚೆನ್ನಾಗಿಲ್ಲ. ಹಿನ್ನೆಲೆ ಸಂಗೀತ ಸಾಮಾನ್ಯವಾಗಿದೆ. ಸಿನಿಮಾ ಬಹಳ ನಿಧಾನವಾಗಿ ಸಾಗುತ್ತದೆ. ಸೆಕೆಂಡ್ ಹಾಫ್ ನಿರೀಕ್ಷಿದಂತೆ ಇಲ್ಲ ಎಂದು @Mad_MaxXX2 ಹೆಸರಿನ ಯೂಸರ್ ಪ್ರತಿಕ್ರಿಯಿಸಿದ್ದಾರೆ.
ದೇವರ ಚಿತ್ರವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್ ಅಡಿ ನಿರ್ಮಿಸಿದ್ದು ಕೊರಟಾಲ ಶಿವ ಆಕ್ಷನ್ ಕಟ್ ಹೇಳಿದ್ದಾರೆ. ಅನಿರುದ್ಧ್ ರವಿಚಂದರ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಎನ್‌ಟಿಆರ್, ಜಾಹ್ನವಿ ಕಪೂರ್, ಸೈಫ್ ಅಲಿ ಖಾನ್ ಜೊತೆಗೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್, ಕಲೈಯರಸನ್, ಮುರಳಿ ಶರ್ಮಾ ಮತ್ತು ಅಭಿಮನ್ಯು ಸಿಂಗ್ ಸಿನಿಮಾದಲ್ಲಿ ನಟಿಸಿದ್ದಾರೆ. 300 ಕೋಟಿ ರೂ ಬಜೆಟ್ ಸಿನಿಮಾ ಇದು. ದೇವರ ಭಾಗ 2 ಸಿನಿಮಾ 2026 ರಲ್ಲಿ ತೆರೆ ಕಾಣಲಿದೆ.