Lucky Baskhar Trailer: ಅಕ್ಟೋಬರ್ 31ರಂದು ತೆರೆಕಾಣಲಿದೆ ದುಲ್ಕರ್ ಸಲ್ಮಾನ್ ಸಿನಿಮಾ; ಲಕ್ಕಿ ಬಾಸ್ಕರ್ ಟ್ರೈಲರ್ ನೋಡಿ ಬೆರಗಾದ ಫ್ಯಾನ್ಸ್
Oct 22, 2024 06:34 PM IST
ಲಕ್ಕಿ ಬಾಸ್ಕರ್ ಟ್ರೈಲರ್ ರಿಲೀಸ್, ಅಕ್ಟೋಬರ್ 31ರಂದು ತೆರೆಕಾಣಲಿದೆ ಸಿನಿಮಾ
- ಲಕ್ಕಿ ಬಾಸ್ಕರ್ ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಲಕ್ಕಿ ಬಾಸ್ಕರ್ ಚಿತ್ರವನ್ನು ಅಕ್ಟೋಬರ್ 31ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ ಎಂದು ಚಿತ್ರತಂಡ ತಿಳಿಸಿದೆ. ದುಲ್ಕರ್ ಸಲ್ಮಾನ್ ಮತ್ತು ಮೀನಾಕ್ಷಿ ಚೌಧರಿ ಅಭಿನಯದ ಈ ಸಿನಿಮಾ ಟ್ರೈಲರ್ ನೋಡಿ ಫ್ಯಾನ್ಸ್ ಖುಷಿಯಾಗಿದ್ದಾರೆ.
ನಿರ್ದೇಶಕ ವೆಂಕಿ ಅಟ್ಲೂರಿ ಅವರ ದುಲ್ಕರ್ ಸಲ್ಮಾನ್ ಮತ್ತು ಮೀನಾಕ್ಷಿ ಚೌಧರಿ ಅಭಿನಯದ ಲಕ್ಕಿ ಬಾಸ್ಕರ್ ಸಿನಿಮಾ ಟ್ರೈಲರ್ ರಿಲೀಸ್ ಆಗಿದೆ. ಅಕ್ಟೋಬರ್ 31, 2024 ರಂದು ಈ ಚಿತ್ರ ತೆರೆಕಾಣಲಿದೆ. ಸಿನಿಮಾ ನೋಡಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ನಿನ್ನೆ ಅಕ್ಟೋಬರ್ 21ರಂದು ಬಿಡುಗಡೆಯಾದ ಟ್ರೈಲರ್ ಪ್ರೇಕ್ಷರಲ್ಲಿ ಇನ್ನುಷ್ಟು ಕುತೂಹಲವನ್ನು ಹೆಚ್ಚಿಸಿದೆ. ದುಲ್ಕರ್ ಸಲ್ಮಾನ್ ಟ್ರೈಲರ್‌ಅನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ. ನಿನ್ನೆ ಚಿತ್ರತಂಡವು ಅತ್ಯಂತ ಕುತೂಹಲದಿಂದ ಅಭಿಮಾನಿಗಳು ಕಾಯುತ್ತಿದ್ದ ಲಕ್ಕಿ ಬಾಸ್ಕರ್ ಟ್ರೈಲರ್‌ಅನ್ನು ಅನಾವರಣಗೊಳಿಸಿದೆ.
ಟ್ರೈಲರ್‌ನಲ್ಲಿ ಒಂದು ಸಮುದ್ರ ಮೊದಲಿಗೆ ಕಾಣಿಸುತ್ತದೆ ಅದರ ದಂಡೆಯಲ್ಲಿ ಮೂರು ಜನ, ನಾಯಕ ಭಾಸ್ಕರ್ ಹಾಗೂ ಅವನ ಹೆಂಡತಿ, ಮಗ ನೊಟ್ಟಿಗೆ ಸ್ಕೂಟರ್‌ನಲ್ಲಿ ಸಾಗುತ್ತಿರುವುದು ಕಾಣುತ್ತದೆ. ಇದು ಒಂದು ಪುಟ್ಟ ಸಂಸಾರದ ಕಥೆ. ಬಡತನದಿಂದ ಹೇಗೆ ಶ್ರೀಮಂತನಾಗಬೇಕು ಎಂದು ಭಾಸ್ಕರ್ ಯಾವಾಗಲೂ ಆಲೋಚನೆ ಮಾಡುತ್ತಲೆ ಇರುತ್ತಾನೆ. ಭಾಸ್ಕರ್ ತನ್ನದೇ ಕಾಲೇಜಿನ ಹುಡುಗಿಯೊಬ್ಬಳನ್ನು ಪ್ರೀತಿಸಿ ಮದುವೆ ಆಗಿರುತ್ತಾನೆ. ಅವರಿಬ್ಬರಿಗೂ ಒಬ್ಬ ಮಗನಿರುತ್ತಾನೆ. ಅವರ ಸಂಸಾರ ನಿಭಾಯಿಸಲು ದುಡಿಯುವವನು ಭಾಸ್ಕರ್ ಒಬ್ಬನೇ ಆಗಿರುತ್ತಾನೆ. ಹೆಂಡತಿಯ ಆಸೆ ಹಾಗೂ ಮನೆಯಲ್ಲಿರುವ ಕಷ್ಟ ಕಳೆಯಲಿ ಎಂದು ಹಣ ಮಾಡುವ ಆಸೆಗೆ ಭಾಸ್ಕರ್ ಬೀಳುತ್ತಾನೆ.
ಇದೇ ರೀತಿಯ ಕಥಾ ಹಂದರವಿದೆ. ನಂತರ ಅವನ ಬದುಕಿನಲ್ಲಾಗುವ ಮಹತ್ತರ ಬೆಳವಣಿಗೆಗಳು ಸಂಸಾರದ ಸುಖವನ್ನು ಹಾಳು ಮಾಡುತ್ತಾ ಸಾಗುತ್ತದೆ. ಇದೇ ರೀತಿ ಕಥೆ ಮುಂದುವರೆಯುತ್ತದೆ. ದುರಾಸೆ, ಪ್ರೀತಿ, ಉದ್ವೇಗ, ದುರಹಂಕಾರ, ಆತ್ಮವಿಶ್ವಾಸ ಹೀಗೆ ಪ್ರತಿಯೊಂದು ಭಾವನೆಗೂ ಈ ಸಿನಿಮಾದಲ್ಲಿದೆ. ಅದನ್ನು ಅಷ್ಟೇ ಸುಂದರವಾಗಿ ತಮ್ಮ ಅಭಿನಯದಲ್ಲಿ ದುಲ್ಕರ್ ಸಲ್ಮಾನ್ ವ್ಯಕ್ತಪಡಿಸಿದ್ದಾರೆ.
ಛಾಯಾಗ್ರಾಹಕ ನಿಮಿಷ್ ರವಿ ಅವರು ತಮ್ಮ ಕೈಚಳಕದ ಮೂಲಕ ದೃಷ್ಯಗಳನ್ನು ಸೆರೆಹಿಡಿದಿದ್ದಾರೆ. 80 ಹಾಗೂ 90ರ ದಶಕದಲ್ಲಿ ಬಾಂಬೆ ಹೇಗಿತ್ತು ಎಂಬ ಚಿತ್ರಣವನ್ನು ಈ ಸಿನಿಮಾದಲ್ಲಿ ಮರಸೃಷ್ಟಿ ಮಾಡಲಾಗಿದೆ. ಜಿವಿ ಪ್ರಕಾಶ್ ಕುಮಾರ್ ಅವರ ಹಿನ್ನೆಲೆ ಸಂಗೀತವು ಈ ಚಿತ್ರಕ್ಕೆ ಇನ್ನಷ್ಟು ಶಕ್ತಿ ತುಂಬಿದೆ. ಶ್ರೀಕರ ಸ್ಟುಡಿಯೋಸ್ ಇದನ್ನು ಪ್ರಸ್ತುತಪಡಿಸುತ್ತಿದೆ.
ಈ ಐದು ಭಾಷೆಗಳಲ್ಲಿ ಬಿಡುಗಡೆ
ಲಕ್ಕಿ ಬಾಸ್ಕರ್ ಚಿತ್ರವನ್ನು ಅಕ್ಟೋಬರ್ 31 ರಂದು ತೆಲುಗು, ಮಲಯಾಳಂ, ತಮಿಳು, ಹಿಂದಿ ಮತ್ತು ಕನ್ನಡ ಭಾಷೆಗಳಲ್ಲಿ ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.