logo
ಕನ್ನಡ ಸುದ್ದಿ  /  ಮನರಂಜನೆ  /  Sreeleela: ಹ್ಯಾಟ್ರಿಕ್‌ ಸೋಲಿನ ಸುಳಿಗೆ ಶ್ರೀಲೀಲಾ; ಕಿಸ್‌ ಬೆಡಗಿ ಬೇಡವೆಂದು ಮನದನ್ನೆ ರಶ್ಮಿಕಾಳನ್ನು ಕರೆತಂದ ವಿಜಯ್‌ ದೇವರಕೊಂಡ!

Sreeleela: ಹ್ಯಾಟ್ರಿಕ್‌ ಸೋಲಿನ ಸುಳಿಗೆ ಶ್ರೀಲೀಲಾ; ಕಿಸ್‌ ಬೆಡಗಿ ಬೇಡವೆಂದು ಮನದನ್ನೆ ರಶ್ಮಿಕಾಳನ್ನು ಕರೆತಂದ ವಿಜಯ್‌ ದೇವರಕೊಂಡ!

Jan 18, 2024 08:01 AM IST

Sreeleela: ಹ್ಯಾಟ್ರಿಕ್‌ ಸೋಲಿನ ಸುಳಿಗೆ ಶ್ರೀಲೀಲಾ; ಕಿಸ್‌ ಬೆಡಗಿ ಬೇಡವೆಂದು ಮನದನ್ನೆ ರಶ್ಮಿಕಾಳನ್ನು ಕರೆತಂದ ವಿಜಯ್‌ ದೇವರಕೊಂಡ!

    • Sreeleela: ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನನೂರಿ ಚಿತ್ರದ ನಾಯಕಿಯಾಗಿ ಶ್ರೀಲೀಲಾ ಹೆಸರು ಈ ಹಿಂದೆ ಐಎಂಡಿಬಿ ಸೈಟ್‌ನಲ್ಲಿ ಕಾಣಿಸಿಕೊಂಡಿತ್ತು. ಇದೀಗ ಶ್ರೀಲೀಲಾ ಜಾಗದಲ್ಲಿ ರಶ್ಮಿಕಾ ಮಂದಣ್ಣ ಹೆಸರು ಮೂಡಿದ್ದು, ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ಶ್ರೀಲೀಲಾ ಸ್ಥಾನಕ್ಕೆ ರಶ್ಮಿಕಾ ಬಂದ್ರಾ? ಎಂದೇ ಸುದ್ದಿ ಹರಿದಾಡುತ್ತಿದೆ.
Sreeleela: ಹ್ಯಾಟ್ರಿಕ್‌ ಸೋಲಿನ ಸುಳಿಗೆ ಶ್ರೀಲೀಲಾ; ಕಿಸ್‌ ಬೆಡಗಿ ಬೇಡವೆಂದು ಮನದನ್ನೆ ರಶ್ಮಿಕಾಳನ್ನು ಕರೆತಂದ ವಿಜಯ್‌ ದೇವರಕೊಂಡ!
Sreeleela: ಹ್ಯಾಟ್ರಿಕ್‌ ಸೋಲಿನ ಸುಳಿಗೆ ಶ್ರೀಲೀಲಾ; ಕಿಸ್‌ ಬೆಡಗಿ ಬೇಡವೆಂದು ಮನದನ್ನೆ ರಶ್ಮಿಕಾಳನ್ನು ಕರೆತಂದ ವಿಜಯ್‌ ದೇವರಕೊಂಡ!

Sreeleela: ಶ್ರೀಲೀಲಾ ಕಳೆದ ವರ್ಷ ಒಂದಲ್ಲ ಎರಡಕ್ಕ ಮೂರು ಪ್ಲಾಪ್‌ ಸಿನಿಮಾಗಳನ್ನು ನೀಡಿದ್ದಾರೆ. ಈ ಸರಣಿ ಸೋಲು ಅವರ ಸಿನಿಮಾ ಕೆರಿಯರ್‌ ಮೇಲೂ ಅಷ್ಟೇ ಗಂಭೀರ ಪರಿಣಾಮವನ್ನೇ ಬೀರುತ್ತಿದೆ. ವಿಜಯ್ ದೇವರಕೊಂಡ ಮತ್ತು ನಿರ್ದೇಶಕ ಗೌತಮ್ ತಿನ್ನನೂರಿ ಕಾಂಬಿನೇಷನ್‌ನ ಹೊಸ ಚಿತ್ರದಲ್ಲಿ ನಾಯಕಿಯಾಗಿದ್ದ ಶ್ರೀಲೀಲಾ, ಇದೀಗ ಸೋಲಿನಿಂದಾಗಿ ಈ ಚಿತ್ರದಿಂದ ಹೊರಗುಳಿದಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಶ್ರೀಲೀಲಾ ಜಾಗಕ್ಕೆ ರಶ್ಮಿಕಾ ಮಂದಣ್ಣ ಎಂಟ್ರಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

‘ಪೌಡರ್‌’ ಕೊಟ್ಟು ಪವರ್‌ ಹೆಚ್ಚಿಸಲು ಹೊರಟ ಗುಲ್ಟು ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ; ನಗು ಉಕ್ಕಿಸುವ ಟೀಸರ್‌ ಬಿಡುಗಡೆ

ಶಿಳ್ಳೆ, ಕೇಕೆ, ಚಪ್ಪಾಳೆ.. ಬೆಳ್ಳಿತೆರೆ ಮೇಲೆ ಮತ್ತೆ ಮಿನುಗಿದ ಕಲ್ಟ್‌ ಕ್ಲಾಸಿಕ್‌ A ಚಿತ್ರ; ಥಿಯೇಟರ್‌ ಮುಂದೆ ಹಬ್ಬ ಮಾಡಿದ ಉಪ್ಪಿ ಫ್ಯಾನ್ಸ್

ನಮ್ಮ ಚಿತ್ರದ ಹೆಸರು ದಿ ಜಡ್ಜ್‌ಮೆಂಟ್‌ ಆಗಿರಬಹುದು, ಪ್ರೇಕ್ಷಕರು ಕೊಡುವ ಜಡ್ಜ್‌ಮೆಂಟೇ ನಮಗೆ ಅಂತಿಮ; ರವಿಚಂದ್ರನ್

ಕೊನೆಗೂ ಮದುವೆ ಮುನ್ಸೂಚನೆ ನೀಡಿ, ಫ್ಯಾನ್ಸ್‌ ತಲೆಗೆ ಹುಳ ಬಿಟ್ಟ ಡಾರ್ಲಿಂಗ್‌ ಪ್ರಭಾಸ್‌; ಅಷ್ಟಕ್ಕೂ ಹುಡುಗಿ ಯಾರಿರಬಹುದು?

ಇತ್ತೀಚಿಗೆ ಆ ಸುದ್ದಿ ನಿಜವೆಂಬಂತೆ ಕಾಣುತ್ತಿದೆ. ಐಎಂಡಿಬಿ ಸೈಟ್‌ನಲ್ಲಿ VD12 ಚಿತ್ರದಲ್ಲಿ ನಾಯಕಿಯಾಗಿ ಶ್ರೀಲೀಲಾ ಹೆಸರು ಕಾಣಿಸಿಕೊಂಡಿತ್ತು. ಇತ್ತೀಚೆಗಷ್ಟೇ ಶ್ರೀಲೀಲಾ ಬದಲಿಗೆ ಅಲ್ಲಿ ರಶ್ಮಿಕಾ ಮಂದಣ್ಣ ನಾಯಕಿ ಎಂದು ಕಾಣಿಸಿಕೊಂಡು ಕುತೂಹಲ ಮೂಡಿಸಿದೆ. ಅಂದರೆ, ವಿಜಯ್‌ ದೇವರಕೊಂಡಗೆ ಶ್ರೀಲೀಲಾ ಬದಲಿಗೆ ರಶ್ಮಿಕಾ ಬಂದಿದ್ದಾರೆ. ಕಳೆದ ಮೂರು ಸಿನಿಮಾಗಳ ಸೋಲಿನಿಂದಾಗಿ ಶ್ರೀಲೀಲಾ ಅವರನ್ನು ಚಿತ್ರದಿಂದ ಕೈಬಿಡಲಾಗಿದೆ ಎನ್ನಲಾಗುತ್ತಿದೆ.

ಕಳೆದ ವರ್ಷ ಶ್ರೀಲೀಲಾ ಅವರು ಸ್ಕಂದ, ಭಗವಂತ ಕೇಸರಿ, ಆದಿಕೇಶವ ಮತ್ತು ಎಕ್ಸ್‌ಟ್ರಾರ್ಡಿನರಿ ಮ್ಯಾನ್ ಚಿತ್ರಗಳಲ್ಲಿ ನಟಿಸಿದ್ದರು. ಈ ನಾಲ್ಕು ಸಿನಿಮಾಗಳ ಪೈಕಿ ಭಗವಂತ ಕೇಸರಿ ಹಿಟ್‌ ಆದರೂ, ಅಲ್ಲಿ ನಾಯಕಿಯಾಗಿರಲಿಲ್ಲ. ನಾಯಕಿಯಾಗಿ ನಟಿಸಿದ್ದ ಸ್ಕಂದ ಮತ್ತು ಆದಿಕೇಶವ ಜತೆಗೆ ಎಕ್ಸ್ಟ್ರಾ ಆರ್ಡಿನರಿ ಮ್ಯಾನ್ ಸಿನಿಮಾಗಳು ಸೋತು ಸುಣ್ಣವಾಗಿದ್ದವು. ಇತ್ತೀಚಿಗೆ ಬಿಡುಗಡೆಯಾದ ಗುಂಟೂರು ಖಾರಂ ಕಲೆಕ್ಷನ್ಸ್ ಚೆನ್ನಾಗಿದ್ದರೂ ಶ್ರೀಲೀಲಾ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿಲ್ಲ. ಈ ಕಾರಣಕ್ಕೆ ವಿಜಯ್ ದೇವರಕೊಂಡ ಸಿನಿಮಾದಿಂದ ಶ್ರೀಲೀಲಾ ಅವರನ್ನು ಕೈಬಿಡಲಾಗಿದೆಯಂತೆ.

ರಶ್ಮಿಕಾ ಜತೆ ದೇವರಕೊಂಡ ಹ್ಯಾಟ್ರಿಕ್

ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಈ ಹಿಂದೆ ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರಗಳಲ್ಲಿ ನಟಿಸಿದ್ದಾರೆ. ಇದೀಗ ಇದೇ ಜೋಡಿ ಜೊತೆಯಾಗಿ ನಟಿಸುತ್ತಿರುವ ಮೂರನೇ ಸಿನಿಮಾ ಇದಾಗಿದೆ. ಈ ಜೋಡಿಗೆ ತೆಲುಗಿನಲ್ಲಿ ಇರುವ ಕ್ರೇಜ್ ಗಮನದಲ್ಲಿಟ್ಟುಕೊಂಡು ವಿಡಿ12 ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸಲಿದ್ದಾರೆ ಎಂದೂ ಹೇಳಲಾಗುತ್ತಿದೆ. ಮತ್ತೊಂದೆಡೆ, ವಿಜಯ್ ಮತ್ತು ರಶ್ಮಿಕಾ ಪ್ರೀತಿಸುತ್ತಿದ್ದಾರೆ ಎಂಬ ವದಂತಿಗಳು ಬಹಳ ದಿನಗಳಿಂದ ಸುತ್ತುತ್ತಿವೆ. ವಿಜಯ್ ಮತ್ತು ರಶ್ಮಿಕಾ ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬರಬೇಕಿದೆ.

ಜೆರ್ಸಿ ಸಿನಿಮಾ ಮೂಲಕ ನಿರ್ದೇಶನದ ತಾಕತ್ತು ತೋರಿಸಿದ್ದ ಗೌತಮ್ ತಿನ್ನಾನೂರಿ, ಇದೀಗ ಸ್ಪೈ ಆ್ಯಕ್ಷನ್ ಥ್ರಿಲ್ಲರ್ ಕಥಾವಸ್ತು ಹೊಂದಿರುವ ವಿಜಯ್ ದೇವರಕೊಂಡ ಸಿನಿಮಾವನ್ನು ತೆರೆಗೆ ತರುತ್ತಿದ್ದಾರೆ. ಸಿತಾರಾ ಎಂಟರ್ಟೈನ್ಮೆಂಟ್ಸ್ ಈ ಬಿಗ್ ಬಜೆಟ್ ಸಿನಿಮಾವನ್ನು ನಿರ್ಮಿಸುತ್ತಿದೆ.

ಏಪ್ರಿಲ್‌ನಿಂದ ಶುರು

ವಿಜಯ್ ದೇವರಕೊಂಡ ಮತ್ತು ಗೌತಮ್ ತಿನ್ನಾನೂರಿ ಕಾಂಬಿನೇಷನ್‌ನ ಈ ಸಿನಿಮಾ ಹೈ ಬಜೆಟ್‌ ಕಾರಣದಿಂದ ನಿಂತು ಹೋಗಿದೆ ಎಂಬ ಮಾತು ಟಾಲಿವುಡ್‌ನಲ್ಲಿ ಕೇಳಿಬಂದಿತ್ತು. ಈಗ ಆದರೆ ಚಿತ್ರತಂಡ ಈ ವದಂತಿಗಳನ್ನು ತಳ್ಳಿಹಾಕಿದೆ. ಏಪ್ರಿಲ್‌ನಿಂದ ಈ ಸಿನಿಮಾದ ಶೂಟಿಂಗ್ ಶುರುವಾಗಲಿದೆಯಂತೆ. ವಿಜಯ್ ದೇವರಕೊಂಡ ಸದ್ಯ ಪರಶುರಾಮ್ ನಿರ್ದೇಶನದಲ್ಲಿ ತಯಾರಾಗುತ್ತಿರುವ ಫ್ಯಾಮಿಲಿ ಸ್ಟಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಈ ಸಿನಿಮಾದ ಶೂಟಿಂಗ್ ಮುಗಿದ ಕೂಡಲೇ ವಿಜಯ್ ದೇವರಕೊಂಡ, ಗೌತಮ್ ತಿನ್ನನೂರಿ ಸಿನಿಮಾದ ಶೂಟಿಂಗ್ ಶುರು ಮಾಡಲಿದ್ದಾರೆ. ವಿಡಿ 12 ಚಿತ್ರಕ್ಕೆ ಅನಿರುದ್ಧ್ ಸಂಗೀತ ನೀಡುತ್ತಿದ್ದಾರೆ. ಚಿತ್ರೀಕರಣ ಪ್ರಾರಂಭವಾಗುವ ಮೊದಲೇ ಈ ಚಿತ್ರದ OTT ಹಕ್ಕುಗಳು ಮಾರಾಟವಾಗಿವೆ. ನೆಟ್‌ಫ್ಲಿಕ್ಸ್ ಈ ಚಿತ್ರದ ಸ್ಟ್ರೀಮಿಂಗ್ ಹಕ್ಕುಗಳನ್ನು ದೊಡ್ಡ ಮೊತ್ತಕ್ಕೆ ಪಡೆದುಕೊಂಡಿದೆ. ಈ ವರ್ಷದ ದಸರಾ ಹಬ್ಬದಂದು ಈ ಸಿನಿಮಾ ರಿಲೀಸ್ ಆಗುವ ಸಾಧ್ಯತೆಯಿದೆ.

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ