logo
ಕನ್ನಡ ಸುದ್ದಿ  /  ಮನರಂಜನೆ  /  14 ದಿನಗಳಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಕರ್ನಾಟಕದ ಪಾಲು ಎಷ್ಟಿದೆ?

14 ದಿನಗಳಲ್ಲಿ ಜ್ಯೂನಿಯರ್‌ ಎನ್‌ಟಿಆರ್‌ ದೇವರ ಸಿನಿಮಾ ಕಲೆಕ್ಷನ್‌ ಮಾಡಿದ್ದು ಎಷ್ಟು, ಕರ್ನಾಟಕದ ಪಾಲು ಎಷ್ಟಿದೆ?

Rakshitha Sowmya HT Kannada

Oct 11, 2024 04:34 PM IST

google News

ದೇವರ ಚಿತ್ರ 14 ದಿನಗಳಲ್ಲಿ ಒಟ್ಟು 408 ಕೋಟಿ ರೂ ಕಲೆಕ್ಷನ್‌ ಮಾಡಿರುವುದಾಗಿ ವಿಮರ್ಶಕರು ಮಾಹಿತಿ ನೀಡಿದ್ದಾರೆ. ದೇವರ ಚಿತ್ರವನ್ನು ಯುವಸುಧಾ ಆರ್ಟ್ಸ್‌, ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದೆ. ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್‌ ಕಟ್‌ ಹೇಳಿದ್ದಾರೆ.

  • ಸೆಪ್ಟೆಂಬರ್‌ 27 ರಂದು ತೆರೆ ಕಂಡ ಜ್ಯೂನಿಯರ್‌ ಎನ್‌ಟಿಆರ್‌ ಅಭಿನಯದ ಸಿನಿಮಾ ಇದುವರೆಗೂ ಒಟ್ಟು 408 ಕೋಟಿ ರೂ. ಗ್ರಾಸ್‌ ಅಮೌಂಟ್‌ ಸಿಕ್ಕಿದೆ ಎಂದು ವರದಿ ಅಗಿದೆ. ಅದರಲ್ಲಿ 14 ದಿನಗಳಲ್ಲಿ ಕರ್ನಾಟಕದಿಂದ 17.15 ಕೋಟಿ ರೂ ದೊರೆತಿದೆ. 

ದೇವರ ಚಿತ್ರ 14 ದಿನಗಳಲ್ಲಿ ಒಟ್ಟು 408 ಕೋಟಿ ರೂ ಕಲೆಕ್ಷನ್‌ ಮಾಡಿರುವುದಾಗಿ ವಿಮರ್ಶಕರು ಮಾಹಿತಿ ನೀಡಿದ್ದಾರೆ. ದೇವರ ಚಿತ್ರವನ್ನು ಯುವಸುಧಾ ಆರ್ಟ್ಸ್‌, ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದೆ. ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್‌ ಕಟ್‌ ಹೇಳಿದ್ದಾರೆ.
ದೇವರ ಚಿತ್ರ 14 ದಿನಗಳಲ್ಲಿ ಒಟ್ಟು 408 ಕೋಟಿ ರೂ ಕಲೆಕ್ಷನ್‌ ಮಾಡಿರುವುದಾಗಿ ವಿಮರ್ಶಕರು ಮಾಹಿತಿ ನೀಡಿದ್ದಾರೆ. ದೇವರ ಚಿತ್ರವನ್ನು ಯುವಸುಧಾ ಆರ್ಟ್ಸ್‌, ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದೆ. ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್‌ ಕಟ್‌ ಹೇಳಿದ್ದಾರೆ.

ಜ್ಯೂನಿಯರ್‌ ಎನ್‌ಟಿಆರ್‌ ದೇವರ ಕಲೆಕ್ಷನ್‌ 14ನೇ ದಿನ ಕೂಡಾ ಕಡಿಮೆ ಆಗಿದೆ. ಆದರೆ ಈ ಸಿನಿಮಾ 2 ವಾರಗಳಲ್ಲಿ ಹಾಕಿದ ಬಂಡವಾಳವನ್ನು ಹಿಂತೆಗೆದುಕೊಂಡು ಸ್ವಲ್ಪ ಮಟ್ಟಿಗೆ ಲಾಭ ಮಾಡಿದೆ. ದೇವರ 14 ದಿನಗಳ ಬಾಕ್ಸ್‌ ಆಫೀಸ್‌ ಕಲೆಕ್ಷನ್‌ ಬಗ್ಗೆ ವಿವರ ಇಲ್ಲಿದೆ.

ಎರಡು ವಾರಗಳಲ್ಲಿ ಒಟ್ಟು ದೊರೆತ ಹಣವೆಷ್ಟು?

ಯಂಗ್‌ ಟೈಗರ್‌ ಜ್ಯೂನಿಯರ್‌ ಎನ್‌ಟಿಆರ್‌, ಜಾಹ್ನವಿ ಕಪೂರ್‌ ಮೊದಲ ಬಾರಿಗೆ ಜೋಡಿಯಾಗಿ ನಟಿಸಿರುವ ಸಿನಿಮಾ ದೇವರ. ಆಚಾರ್ಯ ನಂತರ ಕೊರಟಾಲ ಶಿವ ನಿರ್ದೇಶನದಲ್ಲಿ ತೆರೆ ಕಂಡ ಅಕ್ಷನ್‌ ಥ್ರಿಲ್ಲರ್‌ ಎಂಟರ್‌ಟೈನರ್‌ ದೇವರ ಸೆಪ್ಟೆಂಬರ್‌ 27ರಂದು ವರ್ಲ್ಡ್‌ ವೈಡ್‌ ಗ್ರ್ಯಾಂಡ್‌ ರಿಲೀಸ್‌ ಆಯ್ತು. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಸ್ವಲ್ಪ ಮಟ್ಟಿಗೆ ಲಾಭ ಕೂಡಾ ಮಾಡಿದೆ. ದೇವರ ಚಿತ್ರಕ್ಕೆ ಆಂಧ್ರ ಹಾಗೂ ತೆಲಂಗಾಣದಲ್ಲಿ 14 ನೇ ದಿನ 1.44 ಕೋಟಿ ಷೇರ್‌ ಕಲೆಕ್ಷನ್‌ ಬಂದಿದೆ. ಹಾಗೇ ಎರಡು ವಾರಗಳಲ್ಲಿ ಒಟ್ಟು 143.71 ಕೋಟಿ ರೂ. ಹಾಗೂ 206 ಕೋಟಿ ಗ್ರಾಸ್‌ ಕಲೆಕ್ಷನ್‌ ದೊರೆತಿದೆ.

ಕರ್ನಾಟಕದ ಪಾಲು ಎಷ್ಟು?

ಕರ್ನಾಟಕದಿಂದ 14 ದಿನಗಳಲ್ಲಿ 17.15 ಕೋಟಿ ರೂ. ತಮಿಳುನಾಡಿನಲ್ಲಿ 4.07 ಕೋಟಿ ರೂ. ಕೇರಳದಿಂದ 96 ಲಕ್ಷ ಹಾಗೂ ಹಿಂದಿ ಸೇರಿ ಇತರ ರಾಜ್ಯಗಳಲ್ಲಿ ಸೇರಿ 32.55 ಕೋಟಿ ಷೇರ್‌ ಕಲೆಕ್ಷನ್‌ ವಸೂಲಿಯಾಗಿದೆ. ಓವರ್‌ಸೀಸ್‌ನಿಂದ 2 ವಾರಗಳಲ್ಲಿ ದೇವರ ಸಿನಿಮಾಗೆ 32.55 ಕೋಟಿ ಷೇರ್‌ ಕಲೆಕ್ಷನ್‌ ಬಂದಿದೆ ಎನ್ನಲಾಗುತ್ತಿದೆ. ಹೀಗೆ ಒಟ್ಟು 233.97 ಕೋಟಿ ಷೇರ್‌ ಕಲೆಕ್ಷನ್‌ ಮಾಡಿದೆ. ಇನ್ನು ಪ್ರಪಂಚಾದ್ಯಂತ ಇದುವರೆಗೂ ದೇವರ ಚಿತ್ರಕ್ಕೆ ಒಟ್ಟು 408 ಕೋಟಿ ರೂ. ಗ್ರಾಸ್‌ ಅಮೌಂಟ್‌ ಸಿಕ್ಕಿದೆ ಎನ್ನಲಾಗುತ್ತಿದೆ. ಎರಡು ವಾರಗಳಲ್ಲಿ ದೇವರ ಸಿನಿಮಾ ಭಾರತ ದೇಶದಲ್ಲಿ 260.85 ಕೋಟಿ ನೆಟ್‌ ಕಲೆಕ್ಷನ್‌ ಮಾಡಿದೆ, ಅದರಲ್ಲಿ ತೆಲುಗಿನಿಂದ 193.17 ಕೋಟಿ, ಹಿಂದಿಯಿಂದ 58.35 ಕೋಟಿ, ಕರ್ನಾಟಕದಿಂದ 2.04 ಕೋಟಿ, ತಮಿಳುನಾಡಿನಿಂದ 5.94 ಕೋಟಿ, ಮಲಯಾಳಂನಿಂದ 1.35 ಕೋಟಿ ಹಣ ದೊರೆತಿದೆ.

ಕೊರಟಾಲ ಶಿವ ನಿರ್ದೇಶನದ ಚಿತ್ರ

ದೇವರ ಚಿತ್ರವನ್ನು ಯುವಸುಧಾ ಆರ್ಟ್ಸ್ ಮತ್ತು ಎನ್‌ಟಿಆರ್ ಆರ್ಟ್ಸ್ ಬ್ಯಾನರ್‌ ಜೊತೆ ಸೇರಿ ನಿರ್ಮಿಸಿದೆ. ಚಿತ್ರಕ್ಕೆ ಕೊರಟಾಲ ಶಿವ ಆಕ್ಷನ್‌ ಕಟ್‌ ಹೇಳಿದ್ದಾರೆ. ಅನಿರುದ್ಧ್‌ ರವಿಚಂದರ್ ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ನೀಡಿದ್ದಾರೆ. ಚಿತ್ರದಲ್ಲಿ ಜ್ಯೂ ಎನ್‌ಟಿಆರ್‌, ದೇವರ ಹಾಗೂ ವರ ಎಂಬ ಡಬಲ್‌ ರೋಲ್‌ನಲ್ಲಿ ನಟಿಸಿದ್ದಾರೆ. ಈ ಸಿನಿಮಾ ಮೂಲಕ ಜಾಹ್ನವಿ ಕಪೂರ್‌ ತೆಲುಗು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿತ್ರದಲ್ಲಿ ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಭೈರಾ ಹೆಸರಿನ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ಜೊತೆಗೆ ಪ್ರಕಾಶ್ ರಾಜ್, ಶ್ರೀಕಾಂತ್, ಶೈನ್ ಟಾಮ್ ಚಾಕೊ, ನರೇನ್, ಕಲೈಯರಸನ್, ಮುರಳಿ ಶರ್ಮಾ ಮತ್ತು ಅಭಿಮನ್ಯು ಸಿಂಗ್ ಸಿನಿಮಾದಲ್ಲಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ