logo
ಕನ್ನಡ ಸುದ್ದಿ  /  ಮನರಂಜನೆ  /  Mangalavaaram Ott: ಪಾಯಲ್ ರಜಪೂತ್ ಅಭಿನಯದ 'ಮಂಗಳವಾರಂ' ಓಟಿಟಿ ದಿನಾಂಕ ಘೋಷಣೆ, ಕನ್ನಡದಲ್ಲೂ ಇರುತ್ತೆ ಆಡಿಯೊ

Mangalavaaram OTT: ಪಾಯಲ್ ರಜಪೂತ್ ಅಭಿನಯದ 'ಮಂಗಳವಾರಂ' ಓಟಿಟಿ ದಿನಾಂಕ ಘೋಷಣೆ, ಕನ್ನಡದಲ್ಲೂ ಇರುತ್ತೆ ಆಡಿಯೊ

Raghavendra M Y HT Kannada

Dec 23, 2023 08:18 PM IST

google News

ಟಾಲಿವುಡ್‌ನ ಮಂಗಳವಾರಂ ಸಿನಿಮಾ ಓಟಿಟಿ ಬಿಡುಗಡೆ ದಿನಾಂಕ ಫಿಕ್ಸ್ ಆಗಿದ್ದು, ಡಿಸ್ನಿಪ್ಲಸ್ ಹಾಡ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ.

  • ನಟಿ ಪಾಯಲ್ ರಜಪೂತ್ ನಟನೆಯ ಮಂಗಳವಾರಂ ಓಟಿಟಿಯಲ್ಲಿ ಬಿಡುಗಡೆಯಾಗುವ ದಿನಾಂಕ ಘೋಷಣೆಯಾಗಿದೆ. ಡಿಸ್ನಿಪ್ಲಸ್ ಹಾಟ್‌ಸ್ಟಾರ್‌ನಲ್ಲಿ ಯಾವಾಗ ಬರಲಿದೆ ಅನ್ನೋದರ ವಿವರ ಇಲ್ಲಿದೆ.

ಟಾಲಿವುಡ್‌ನ ಮಂಗಳವಾರಂ ಸಿನಿಮಾ ಓಟಿಟಿ ಬಿಡುಗಡೆ ದಿನಾಂಕ ಫಿಕ್ಸ್ ಆಗಿದ್ದು, ಡಿಸ್ನಿಪ್ಲಸ್ ಹಾಡ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ.
ಟಾಲಿವುಡ್‌ನ ಮಂಗಳವಾರಂ ಸಿನಿಮಾ ಓಟಿಟಿ ಬಿಡುಗಡೆ ದಿನಾಂಕ ಫಿಕ್ಸ್ ಆಗಿದ್ದು, ಡಿಸ್ನಿಪ್ಲಸ್ ಹಾಡ್‌ಸ್ಟಾರ್‌ನಲ್ಲಿ ರಿಲೀಸ್ ಆಗಲಿದೆ.

ಬೆಂಗಳೂರು: ಟಾಲಿವುಡ್‌ನಲ್ಲಿ ಸೂಪರ್ ಡೂಪರ್ ಹಿಟ್ ‘ಆರ್‌ಎಕ್ಸ್ 100’ ಸಿನಿಮಾ ನೀಡಿದ್ದ ಜನಪ್ರಿಯ ನಿರ್ದೇಶಕ ಅಜಯ್ ಭೂಪತಿ ಅವರು ಆ್ಯಕ್ಷನ್ ಕಟ್ ಹೇಳಿರುವ 'ಮಂಗಳವಾರಂ' (Mangalavaaram) ಸಿನಿಮಾ ಈ ವರ್ಷಾಂತ್ಯದಲ್ಲೇ ಓಟಿಟಿಗೆ ಬರೋದು ಪಕ್ಕಾ ಆಗಿದ್ದು, ದಿನಾಂಕ ಕೂಡ ಫಿಕ್ಸ್ ಆಗಿದೆ.

ನವೆಂಬರ್ 17 ರಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ 'ಮಂಗಳವಾರಂ' ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿ ದೊಡ್ಡ ಯಶಸ್ಸು ಕಂಡಿತ್ತು. ಇದಕ್ಕೂ ಮುನ್ನವೇ ಟ್ರೇಲರ್‌ನಿಂದಲೇ ಭಾರಿ ಸದ್ದು ಮಾಡಿತ್ತು. ನಿರೀಕ್ಷೆ ಮೀರಿದ ಸಕ್ಸಸ್ ಕಂಡಿತ್ತು. ಕಲೆಕ್ಷನ್ ವಿಚಾರದಲ್ಲಿ ನೋಡುವುದಾದರೆ ಕಡಿಮೆ ಬಜೆಟ್‌ನಲ್ಲಿ ತೆರೆಗೆ ಬಂದ 'ಮಂಗಳವಾರಂ' ಕಲೆಕ್ಷನ್‌ನಲ್ಲೂ ಗಮನ ಸೆಳೆದಿತ್ತು. ಪಾಯಲ್ ರಜಪೂತ್ (Payal Rajput) ಪ್ರಮುಖ ಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಓಟಿಟಿಗೆ ಯಾವಾಗ ಬರುತ್ತೆ ಅಂತ ಸಿನಿ ರಸಿಕರು ತುಂಬಾ ಕಾತುರದಿಂದ ಕಾಯುತ್ತಿದ್ದರು. ಇದೀಗ 'ಮಂಗಳವಾರಂ' ಓಟಿಟಿ ಬಿಡುಗಡೆಯ ದಿನಾಂಕ ಘೋಷಣೆಯಾಗಿದೆ.

'ಮಂಗಳವಾರಂ' ಬಿಡುಗಡೆಯಾಗುತ್ತಿರುವ ಪ್ಲಾಟ್‌ಫಾರ್ಮ್ ಯಾವುದು?

ಓಟಿಟಿಯ ಪ್ರಮುಖ ಪ್ಲಾಟ್‌ಫಾರ್ಮ್ ಡಿಸ್ನಿಪ್ಲಸ್ ಹಾಟ್‌ಸ್ಟಾರ್ 'ಮಂಗಳವಾರಂ' ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದ್ದು, ಡಿಸೆಂಬರ್ 26 ರಂದು ತನ್ನ ಬಿಡುಗಡೆ ಮಾಡಲಿದೆ ಎಂದು ವರದಿಯಾಗಿದೆ. ಆದರೆ ಇದೇ ದಿನಾಂಕದಂದು ರಿಲೀಸ್ ಆಗುತ್ತಾ ಅನ್ನೋದನ್ನು ಡಿಸ್ನಿಪ್ಲಸ್ ಹಾಟ್‌ಸ್ಟಾರ್ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

'ಮಂಗಳವಾರಂ' ಸಿನಿಮಾ ತೆಲುಗು ಮಾತ್ರವಲ್ಲದೆ, ಕನ್ನಡ, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲೂ ಡಿಸ್ನಿಪ್ಲಸ್ ಹಾಟ್‌ಸ್ಚಾರ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮಿಂಗ್ ಆಗಲಿವೆ.

ಗ್ರಾಮದಲ್ಲಿ ಮಂಗಳವಾರಗಳಂದೇ ಮರಣಗಳು ಸಂಭವಿಸುತ್ತಿರುತ್ತವೆ. ಆ ಮರಣಗಳಿಗೆ ಕಾರಣವೇನು? ಆತ್ಮಹತ್ಯೆಗಳಾ? ಇಲ್ಲ ಯಾರಾದರೂ ಕೊಲೆ ಮಾಡುತ್ತಿದ್ದಾರಾ ಎಂಬುದರ 'ಮಂಗಳವಾರಂ' ಸಿನಿಮಾದ ಕಥೆ. ಚಿತ್ರದಲ್ಲಿ ನಂದಿತಾ ಶ್ವೇತಾ, ಅಜ್ಮಲ್ ಅಮೀರ್, ದಿವ್ಯ ಪಿಳ್ಳೈ, ರವೀಂದ್ರ ವಿಜಯ್, ಕೃಷ್ಣ ಚೈತನ್ಯ, ಅಜಯ್ ಘೋಷ್, ಶ್ರಾವಣ್ ರೆಡ್ಡಿ, ಪ್ರಿಯದರ್ಶಿ ಪುಲಿಕೊಂಡ, ದಯಾನಂದ್ ರೆಡ್ಡಿ, ಚೈತನ್ಯ ಮುಖ್ಯ ಭೂಮಿಯಲ್ಲಿದ್ದಾರೆ. ಸಿನಿಮಾಗೆ ಅಜನೀಶ್ ಲೋಕನಾಥ್ ಅವರ ಸಂಗೀತವಿದೆ.

ಮುದ್ರಾ ಮಿಡಿಯಾ ವರ್ಕ್ಸ್ ಮತ್ತು ಎ ಕ್ರಿಯೇಟಿವ್ ವರ್ಕ್ ಬ್ಯಾನರ್‌ಗಳ ಅಡಿಯಲ್ಲಿ ಸ್ವಾತಿ ರೆಡ್ಡಿ ಗಣುಪಾಟಿ ಮತ್ತು ಸುರೇಶ್ ವರ್ಮಾ ಜಂಟಿಯಾಗಿ ನಿರ್ಮಿಸಿದ್ದಾರೆ. ಶಿವೇಂದ್ರ ದಾಶರಥಿ ಛಾಯಾಗ್ರಹಣ, ಮಾಧವ್ ಕುಮಾರ್ ಕುಳ್ಳಪಲ್ಲಿ ಸಂಕಲ ಮಾಡಿದ್ದಾರೆ. ನಿರ್ದೇಶಕ ಅಜಯ್ ಭೂಪತಿ ಅವರ ಆ್ಯಕ್ಷನ್ ಕಟ್, ನಟಿ ಪಾಯಲ್ ರಜಪೂತ್ ಅವರ ಆ್ಯಟಿಂಗ್ ಹಾಗೂ ಲೋಕನಾಥ್ ಅವರ ಸಂಗೀತ 'ಮಂಗಳವಾರಂ' ಸಿನಿಮಾದ ಹೈಲೈಟ್ಸ್ ಆಗಿದೆ. ನೀವೇನಾದರೂ ಥಿಯೇಟರ್‌ನಲ್ಲಿ ಸಿನಿಮಾವನ್ನು ಮಿಸ್ ಮಾಡಿಕೊಂಡಿದ್ದರೆ ಓಟಿಟಿಯಲ್ಲಿ ನೋಡುವ ಸಸ್ಪೆನ್ಸ್ ಥ್ರಿಲ್ಲರ್ ಮೂವಿಯನ್ನು ಎಂಜಾಯ್ ಮಾಡಿ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ