logo
ಕನ್ನಡ ಸುದ್ದಿ  /  ಮನರಂಜನೆ  /  Tollywood News: 2ನೇ ಮದುವೆ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದ ತೆಲುಗು ನಟಿ ಪ್ರಗತಿ ಈಗ ವೇಯ್ಟ್ ಲಿಫ್ಟಿಂಗ್ ಸ್ಪರ್ಧಿ;ಇದು ಸಿನಿಮಾ ಅಲ್ಲ ಜೀವನ

Tollywood News: 2ನೇ ಮದುವೆ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದ ತೆಲುಗು ನಟಿ ಪ್ರಗತಿ ಈಗ ವೇಯ್ಟ್ ಲಿಫ್ಟಿಂಗ್ ಸ್ಪರ್ಧಿ;ಇದು ಸಿನಿಮಾ ಅಲ್ಲ ಜೀವನ

Rakshitha Sowmya HT Kannada

Jul 20, 2023 07:49 AM IST

google News

ತೆಲುಗು ನಟಿ ಪ್ರಗತಿ ಮಹವಾದಿ

  • ನನ್ನ ಹೊಸ ಪ್ರಯಾಣ ಈಗಷ್ಟೇ ಆರಂಭವಾಗಿದೆ. 250 ಕಿಲೋ ಭಾರ ಎತ್ತುವ ಮೂಲಕ ಈ ಪ್ರಯಾಣ ಆರಂಭವಾಗಿದೆ. ಗುರಿ ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ. ಈ ಜರ್ನಿಯಲ್ಲಿ ನನಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಪ್ರಗತಿ ತನ್ನನ್ನು ಬೆಂಬಲಿಸಿದವರಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.

ತೆಲುಗು ನಟಿ ಪ್ರಗತಿ ಮಹವಾದಿ
ತೆಲುಗು ನಟಿ ಪ್ರಗತಿ ಮಹವಾದಿ

ತೆಲುಗು ನಟಿ ಪ್ರಗತಿ ಕೆಲವು ದಿನಗಳ ಹಿಂದೆ ಜಿಮ್‌ನಲ್ಲಿ ವರ್ಕೌಟ್‌ ಮಾಡುವ ಮೂಲಕ ಸುದ್ದಿಯಾಗಿದ್ದರು. ಅದಾದ ನಂತರ ಎರಡನೇ ಮದುವೆ ಬಗ್ಗೆ ಮಾತನಾಡಿ ಗಮನ ಸೆಳೆದಿದ್ದರು. ಈಗ ಪ್ರಗತಿ ಮತ್ತೆ ಟಾಕ್‌ ಆಫ್‌ ದಿ ಟೌನ್‌ ಎನಿಸಿದ್ದಾರೆ. ನಟನೆ ಬಿಟ್ಟು ವೇಯ್ಟ್‌ ಲಿಫ್ಟಿಂಗ್‌ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ.

47 ವರ್ಷದ ಪ್ರಗತಿ ಮಹವಾದಿ

ನಟಿ ಪ್ರಗತಿ ಅವರಿಗೆ ಈಗ 47 ವರ್ಷ ವಯಸ್ಸು. ಆಕೆ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಗುರುತಿಸಿಕೊಂಡಿದ್ದಾರೆ. ನಾಯಕ/ನಾಯಕಿಯ ಅಮ್ಮನಾಗಿ, ಅತ್ತಿಗೆಯಾಗಿ ನಟಿಸುತ್ತಿದ್ದಾರೆ. ತೆರೆ ಮೇಲೆ ಲಕ್ಷಣವಾಗಿ ಸೀರೆ ಉಟ್ಟು, ಹಣೆ ತುಂಬಾ ಬೊಟ್ಟು ಇಟ್ಟು, ಹೂವು ಮುಡಿದು ಕಾಣಿಸಿಕೊಳ್ಳುವ ಪ್ರಗತಿ ತೆರೆ ಹಿಂದಿ ಫುಲ್‌ ಮಾಡ್ರನ್‌. ಇದರ ಜೊತೆಗೆ ಒಮ್ಮೆ ಪ್ರಗತಿ ಜಿಮ್‌ ಹಾಗೂ ಮನೆಯಲ್ಲಿ ವರ್ಕೌಟ್‌ ಮಾಡುವ ವಿಡಿಯೋ ಹಂಚಿಕೊಂಡು ಮೊದಲ ಬಾರಿಗೆ ಎಲ್ಲರಿಗೂ ಶಾಕ್‌ ನೀಡಿದ್ದರು. ತೆರೆ ಮೇಲೆ ಅಮ್ಮನ ಪಾತ್ರದಲ್ಲಿ ನಟಿಸುವ ಪ್ರಗತಿ ಇವರೇನಾ ಎಂದು ಎಲ್ಲರೂ ಹುಬ್ಬೇರಿಸಿದ್ದರು.

ಎರಡನೇ ಮದುವೆ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದ ನಟಿ

ಇದರ ಜೊತೆಗೆ ಇತ್ತೀಚೆಗೆ ಪ್ರಗತಿ ಎರಡನೇ ಮದುವೆ ಬಗ್ಗೆ ಮಾತನಾಡಿದ್ದರು. ''ನಾಯಕಿಯಾಗಿ ಸಿನಿ ಕರಿಯರ್‌ ಆರಂಭಿಸಿದ ನಾನು ಮದುವೆ ನಂತರ ಜೀವನ ಸ್ವರ್ಗ ಎಂದುಕೊಂಡಿದ್ದೆ. ಆರಂಭದಲ್ಲಿ ಎಲ್ಲವೂ ಸರಿ ಇತ್ತು. ಆದರೆ ಕ್ರಮೇಣ ನಮ್ಮಿಬ್ಬರ ನಡುವೆ ಅಂತರ ಹೆಚ್ಚಾಯ್ತು. ಮಕ್ಕಳಿಗಾಗಿ ಎಲ್ಲವನ್ನೂ ಸಹಿಸಿಕೊಂಡಿದ್ದೆ. ಆದರೆ ನಂತರ ಸಹಿಸಲು ಆಗಲಿಲ್ಲ. ಡಿವೋರ್ಸ್‌ ಪಡೆಯುವುದು ಉತ್ತಮ ಎಂದು ನಿರ್ಧರಿಸಿ ಕಾನೂನಿನ ಪ್ರಕಾರ ಆತನೊಂದಿಗೆ ಸಂಬಂಧ ಕಡಿದುಕೊಂಡೆ. ಈಗ ನನಗೆ ಸಂಗಾತಿ ಬೇಕು ಎನಿಸುತ್ತಿದೆ. ನನಗೆ ಈಗ 47 ವರ್ಷ ವಯಸ್ಸು. ನನಗೆ ಅಡ್ಜೆಸ್ಟ್‌ ಆಗುವವರು ಕಷ್ಟ'' ಎಂದು ತಾವೇ ಹೇಳಿಕೊಂಡಿದ್ದರು.

ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಗೆ ಸಕಲ ತಯಾರಿ

ಈಗ ಪ್ರಗತಿ ಕೆಲವು ದಿನಗಳ ಕಾಲ ನಟನೆಯಿಂದ ದೂರ ಉಳಿದು ವೇಯ್ಟ್‌ ಲಿಫ್ಟಿಂಗ್‌ ಕಡೆ ಗಮನ ಹರಿಸಿದ್ದಾರೆ. 'ವಿಷನ್ ಡಿಸಿಪ್ಲಿನ್ ಪವರ್ ನ್ಯಾಷನಲ್ 2023' ವೇಯ್ಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಗತಿ ಭಾಗವಹಿಸುತ್ತಿದ್ದಾರಂತೆ. ವೇಯ್ಟ್ ಲಿಫ್ಟಿಂಗ್ ಅಭ್ಯಾಸ ಮಾಡುತ್ತಿರುವ ವಿಡಿಯೋವನ್ನು ಪ್ರಗತಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ''ಹೊಸ ಆರಂಭ, ಈ 2 ತಿಂಗಳಲ್ಲಿ ಜೀವನ ಇಷ್ಟು ಬದಲಾಗುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ. ಪವರ್‌ ಲಿಫ್ಟಿಂಗ್‌ನಲ್ಲಿ ನನ್ನ ಹೊಸ ಪ್ರಯಾಣ ಈಗಷ್ಟೇ ಆರಂಭವಾಗಿದೆ. 250 ಕಿಲೋ ಭಾರ ಎತ್ತುವ ಮೂಲಕ ಈ ಪ್ರಯಾಣ ಆರಂಭವಾಗಿದೆ. ಗುರಿ ಸಾಧಿಸುವವರೆಗೂ ವಿಶ್ರಮಿಸುವುದಿಲ್ಲ. ಈ ಜರ್ನಿಯಲ್ಲಿ ನನಗೆ ಪ್ರೋತ್ಸಾಹಿಸಿದ ಎಲ್ಲರಿಗೂ ಧನ್ಯವಾದಗಳು'' ಎಂದು ಪ್ರಗತಿ ತನ್ನನ್ನು ಬೆಂಬಲಿಸಿದವರಿಗೆ ಥ್ಯಾಂಕ್ಸ್‌ ಹೇಳಿದ್ದಾರೆ.

ಪ್ರಗತಿ ವಿಡಿಯೋ ನೋಡಿ ಎಲ್ಲರೂ ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ನಿಜಕ್ಕೂ ನಂಬಲಾಗುತ್ತಿಲ್ಲ. ಸಾಮಾನ್ಯವಾಗಿ ಸಿನಿಮಾದವರು ಮಾಡೆಲಿಂಗ್‌ ಕ್ಷೇತ್ರದತ್ತ ಆಕರ್ಷಿತರಾಗುತ್ತಾರೆ. ಆದರೆ ನೀವು ಕ್ರೀಡಾ ಕ್ಷೇತ್ರದತ್ತ ಹೆಜ್ಜೆ ಇಡುತ್ತಿದ್ದೀರಿ. ಎಲ್ಲವೂ ಒಳ್ಳೆಯದಾಗಲಿ, ನಿಮ್ಮ ಮುಂದಿನ ಜರ್ನಿಗೆ ಆಲ್‌ ದಿ ಬೆಸ್ಟ್‌ ಎಂದು ಶುಭ ಕೋರುತ್ತಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ