logo
ಕನ್ನಡ ಸುದ್ದಿ  /  ಮನರಂಜನೆ  /  Tollywood News: ಇಟಲಿಯಲ್ಲಿ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ; ಚಿರಂಜೀವಿ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ

Tollywood News: ಇಟಲಿಯಲ್ಲಿ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ; ಚಿರಂಜೀವಿ ಮನೆಯಲ್ಲಿ ಕಳೆಗಟ್ಟಿದ ಸಂಭ್ರಮ

HT Kannada Desk HT Kannada

Oct 07, 2023 10:45 PM IST

google News

ಚಿರಂಜೀವಿ ಮನೆಯಲ್ಲಿ ಕಳೆಗಟ್ಟಿದ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ ಸಂಭ್ರಮ

    • Varun Tej-Lavanya Tripathi: ವರುಣ್ ತೇಜ್‌ ಹಾಗೂ ಲಾವಣ್ಯ ನವೆಂಬರ್ 1 ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ‌ ಕಾಲಿಡಲಿದ್ದಾರೆ. ಅಲ್ಲಿಂದ‌ ಬಂದ‌ ನಂತರ‌ ಹೈದರಾಬಾದ್ ಹಾಗೂ ಡೆಹ್ರಾಡೂನ್​​​ನಲ್ಲಿ‌ ಸಿನಿಮಾ‌‌ ಗಣ್ಯರು , ಸ್ನೇಹಿತರು ಹಾಗೂ ಸಂಬಂಧಿಕರಿಗಾಗಿ‌ ಆರತಕ್ಷತೆ ಏರ್ಪಡಿಸಲಾಗುವುದು ಎಂದು ಟಾಲಿವುಡ್‌‌‌ ಮೂಲಗಳು ತಿಳಿಸಿವೆ.
ಚಿರಂಜೀವಿ ಮನೆಯಲ್ಲಿ ಕಳೆಗಟ್ಟಿದ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ ಸಂಭ್ರಮ
ಚಿರಂಜೀವಿ ಮನೆಯಲ್ಲಿ ಕಳೆಗಟ್ಟಿದ ವರುಣ್ ತೇಜ್ ಲಾವಣ್ಯ ತ್ರಿಪಾಠಿ ಮದುವೆ ಸಂಭ್ರಮ

ಟಾಲಿವುಡ್ ಜೋಡಿ ವರುಣ್ ತೇಜ್ ಹಾಗೂ ಲಾವಣ್ಯ ತ್ರಿಪಾಠಿ ಮದುವೆ ಸಂಭ್ರಮ ಶುರುವಾಗಿದೆ. ಈ ಜೋಡಿ ಕಳೆದ ಜೂನ್ 9 ರಂದು ಹೈದರಾಬಾದ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮುಂದಿನ‌ ತಿಂಗಳು ವರುಣ್‌ ತೇಜ್‌ ಹಾಗೂ ಲಾವಣ್ಯ ತ್ರಿಪಾಠಿ‌ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ‌ ಇಬ್ಬರ‌ ಮನೆಯಲ್ಲೂ ಮದುವೆಗೆ‌ ಬೇಕಾದ‌ ಎಲ್ಲಾ ತಯಾರಿ ನಡೆಯುತ್ತಿದೆ. ಖ್ಯಾತ‌‌ ಫ್ಯಾಶನ್ ಡಿಸೈನರ್ ಒಬ್ಬರು ಇಬ್ಬರ ಮದುವೆ ಹಾಗೂ ರಿಸೆಪ್ಷನ್ ಉಡುಪುಗಳನ್ನು ಡಿಸೈನ್ ಮಾಡಲಿದ್ದಾರಂತೆ. ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಶುಕ್ರವಾರ ರಾತ್ರಿ ವರುಣ್ ತೇಜ್ ಹಾಗೂ ಲಾವಣ್ಯ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆದಿದೆ. ನಟ ಚಿರಂಜೀವಿ ಈ ಕಾರ್ಯಕ್ರಮದ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಲ್ಲು ಅರ್ಜುನ್ ಮಕ್ಕಳು, ಸಹೋದರ ಅಲ್ಲು ಶಿರಿಷ್, ಸಾಯಿ ಧರಮ್ ತೇಜ್, ನಾಗಬಾಬು, ನಿಹಾರಿಕಾ, ರಾಮಚರಣ್, ಉಪಾಸನಾ ಹಾಗೂ ಇನ್ನಿತರರು ಈ‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ವರುಣ್ ತೇಜ್‌ ಹಾಗೂ ಲಾವಣ್ಯ ನವೆಂಬರ್ 1 ರಂದು ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ‌ ಕಾಲಿಡಲಿದ್ದಾರೆ. ಅಲ್ಲಿಂದ‌ ಬಂದ‌ ನಂತರ‌ ಹೈದರಾಬಾದ್ ಹಾಗೂ ಡೆಹ್ರಾಡೂನ್​​​ನಲ್ಲಿ‌ ಸಿನಿಮಾ‌‌ ಗಣ್ಯರು , ಸ್ನೇಹಿತರು ಹಾಗೂ ಸಂಬಂಧಿಕರಿಗಾಗಿ‌ ಆರತಕ್ಷತೆ ಏರ್ಪಡಿಸಲಾಗುವುದು ಎಂದು ಟಾಲಿವುಡ್‌‌‌ ಮೂಲಗಳು ತಿಳಿಸಿವೆ.

ಲಾವಣ್ಯ ತ್ರಿಪಾಠಿ ಮೂಲತ: ಉತ್ತರ ಪ್ರದೇಶದ ಅಯೋಧ್ಯೆಯವರು. ಕಾಲೇಜಿನಲ್ಲಿ ಓದಿನ ಜೊತೆಗೆ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದ ಲಾವಣ್ಯ ತ್ರಿಪಾಠಿ ಕೆಲವೊಂದು ಜಾಹೀರಾತುಗಳಲ್ಲಿ ಕೂಡಾ ಕಾಣಿಸಿಕೊಂಡಿದ್ದರು. ಇದೇ ಅವರಿಗೆ ಮುಂದೆ ಸಿನಿಮಾಗೆ ಬರಲು ದಾರಿಯಾಯಿತು. ಆಕೆ ಉತ್ತಮ ಭರತನಾಟ್ಯ ಕಲಾವಿದೆ ಕೂಡಾ. 2012 ರಲ್ಲಿ 'ಅಂದಾಲ ರಾಕ್ಷಸಿ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದ ಲಾವಣ್ಯ ಮನಂ, ಭಲೇ ಭಲೇ ಮಗಾಡಿವಿ, ಸೊಗ್ಗದೆ ಚಿನ್ನಿ ನಾಯನ, ಮಿಸ್ಟರ್‌, ಯುದ್ಧಂ ಶರಣಂ, ಇಂಟಲಿಜಂಟ್‌, ಎ1 ಎಕ್ಸ್‌ಪ್ರೆಸ್‌, ಹ್ಯಾಪಿ ಬರ್ತ್‌ಡೇ ಸೇರಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.

ವರುಣ್‌ ತೇಜ್, ಟಾಲಿವುಡ್‌ ಹಿನ್ನೆಲೆ ಇದ್ದ ಹುಡುಗ, ತಂದೆ ನಾಗಬಾಬು, ದೊಡ್ಡಪ್ಪ ಚಿರಂಜೀವಿ, ಚಿಕ್ಕಪ್ಪ ಪವನ್‌ ಕಲ್ಯಾಣ್‌ ಹಾಗೂ ಕುಟುಂಬದ ಅನೇಕರು ಚಿತ್ರರಂಗದಲಿದ್ದಾರೆ. 2000 ರಲ್ಲಿ ಬಾಲನಟನಾಗಿ 'ಹ್ಯಾಂಡ್ಸ್‌ ಅಪ್‌' ಚಿತ್ರದ ಮೂಲಕ ಸಿನಿಮಾಗೆ ಬಂದ ವರುಣ್‌ 'ಮುಕುಂದ' ಚಿತ್ರದ ಮೂಲಕ ನಾಯಕ ನಟನಾಗಿ ಸಿನಿ ಕರಿಯರ್‌ ಆರಂಭಿಸಿದರು. ತೇಜ್‌ಗೆ 'ಫಿದಾ' ಚಿತ್ರ ಒಳ್ಳೆ ಬ್ರೇಕ್‌ ಕೊಟ್ಟಿತು. ಮುಕುಂದ, ಮಿಸ್ಟರ್‌, ತೊಲಿ ಪ್ರೇಮ, F2, F3, ಗನಿ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ