logo
ಕನ್ನಡ ಸುದ್ದಿ  /  ಮನರಂಜನೆ  /  ವಿಜಯ್‌ ದೇವರಕೊಂಡ ನಟನೆಯ ಖುಷಿ ಚಿತ್ರದ ಒಟಿಟಿ ಆಗಮನಕ್ಕೆ ಹೀಗೊಂದು ದಿನಾಂಕ

ವಿಜಯ್‌ ದೇವರಕೊಂಡ ನಟನೆಯ ಖುಷಿ ಚಿತ್ರದ ಒಟಿಟಿ ಆಗಮನಕ್ಕೆ ಹೀಗೊಂದು ದಿನಾಂಕ

Sep 14, 2023 07:00 PM IST

ವಿಜಯ್‌ ದೇವರಕೊಂಡ ನಟನೆಯ ಖುಷಿ ಚಿತ್ರದ ಒಟಿಟಿ ಆಗಮನಕ್ಕೆ ಹೀಗೊಂದು ದಿನಾಂಕ

    • ವಿಜಯ್‌ ದೇವರಕೊಂಡ ಮತ್ತು ಸಮಂತಾ ನಟನೆಯ ಖುಷಿ ಸಿನಿಮಾ ಚಿತ್ರಮಂದಿರದಲ್ಲಿ ಸದ್ದು ಮಾಡುತ್ತಿದೆ. ಹೀಗಿರುವಾಗಲೇ ಇದೇ ಸಿನಿಮಾ ಒಟಿಟಿ ಅಂಗಳಕ್ಕೂ ಆಗಮಿಸುವ ಸುಳಿವು ನೀಡಿದೆ.  
ವಿಜಯ್‌ ದೇವರಕೊಂಡ ನಟನೆಯ ಖುಷಿ ಚಿತ್ರದ ಒಟಿಟಿ ಆಗಮನಕ್ಕೆ ಹೀಗೊಂದು ದಿನಾಂಕ
ವಿಜಯ್‌ ದೇವರಕೊಂಡ ನಟನೆಯ ಖುಷಿ ಚಿತ್ರದ ಒಟಿಟಿ ಆಗಮನಕ್ಕೆ ಹೀಗೊಂದು ದಿನಾಂಕ

Kushi OTT Update: ವಿಜಯ್ ದೇವರಕೊಂಡ ಸಮಂತಾ ಜೋಡಿಯಾಗಿ ನಟಿಸಿದ ಖುಷಿ ಸಿನಿಮಾ ಮೆಚ್ಚುಗೆ ಜತೆಗೆ ಕಲೆಕ್ಷನ್‌ ವಿಚಾರದಲ್ಲೂ ಸದ್ದು ಮಾಡಿತ್ತು. ಸೆಪ್ಟೆಂಬರ್ 1ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾದ ಖುಷಿ ಚಿತ್ರ ಫ್ಯಾನ್ಸ್‌ ಮಾತ್ರವಲ್ಲದೆ ಫ್ಯಾಮಿಲಿ ಪ್ರೇಕ್ಷಕರನ್ನೂ ಸೆಳೆದಿತ್ತು. ವಿಜಯ್‌ ಮತ್ತು ಸಮಂತಾ ಕೆಮಿಸ್ಟ್ರಿಯೂ ವರ್ಕೌಟ್‌ ಆಗಿತ್ತು. ಮೂಲ ತೆಲುಗಿನಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಕನ್ನಡ, ತಮಿಳು, ಹಿಂದಿಯಲ್ಲಿಯೂ ಬಿಡುಗಡೆ ಆಗಿತ್ತು. ಇದೀಗ ಇದೇ ಸಿನಿಮಾ ಚಿತ್ರಮಂದಿರದಲ್ಲಿರುವಾಗಲೇ ಒಟಿಟಿ ಬಿಡುಗಡೆಯ ಬಗ್ಗೆ ದಿನವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸುಳಿದಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಬ್ಲಿಂಕ್‌ಗೆ ಬಹುಪರಾಕ್‌ ಸಿಗ್ತಿದ್ದಂತೆ ಬ್ಯಾಂಕ್ ಆಫ್‌ ಭಾಗ್ಯಲಕ್ಷ್ಮಿ ಚಿತ್ರದ ಜತೆಗೆ ಬರ್ತಿದ್ದಾರೆ ದೀಕ್ಷಿತ್‌ ಶೆಟ್ಟಿ

OTT releases: ಬಾಹುಬಲಿಯಿಂದ ಬ್ಲಿಂಕ್‌ವರೆಗೆ; ಒಟಿಟಿಯಲ್ಲಿ ಈ ವಾರ ಯಾವ ಸಿನಿಮಾ ನೋಡ್ತಿರಿ? ಇಲ್ಲಿದೆ ಲಿಸ್ಟ್‌

ಐಶ್ವರ್ಯಾ ರೈ ಬಚ್ಚನ್‌ ಕೈಗೆ ಸದ್ಯದಲ್ಲಿಯೇ ಶಸ್ತ್ರಚಿಕಿತ್ಸೆ; ಬ್ಯಾಂಡೇಜ್‌ ಕಟ್ಟಿಕೊಂಡೇ ಕಾನ್‌ ಚಿತ್ರೋತ್ಸವದಲ್ಲಿ ಮಿಂಚಿನ ನಡಿಗೆ

Blink Movie: ಕನ್ನಡದಲ್ಲಿ ಇಂಥ ಸಿನಿಮಾ ನೋಡಿದ್ದು ಇದೇ ಮೊದಲು, ಕಥೆಗೆ ಅದೆಷ್ಟು ತಲೆ ಖರ್ಚು ಮಾಡಿದ್ದಾರಪ್ಪ

ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ ಕೆಲವರು, ಒಟಿಟಿಗೆ ಯಾವಾಗ ಬರಲಿದೆ ಎಂದು ಕಾಯುತ್ತಿದ್ದಾರೆ. ಹೀಗಿರುವಾಗಲೇ ಅವರಿಗೂ ಸಿಹಿ ಸುದ್ದಿಯೊಂದು ಸಿಕ್ಕಿದೆ. ನೆಟ್‌ಫ್ಲಿಕ್ಸ್‌ ಸಂಸ್ಥೆ ವಿಜಯ್ ದೇವರಕೊಂಡ ಮತ್ತು ಸಮಂತಾ ಜೋಡಿಯ ಖುಷಿ ಚಿತ್ರದ ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಖರೀದಿಸಿದೆ. ಈ ವೇದಿಕೆ ಮೂಲಕ ಅಕ್ಟೋಬರ್ 6ರಂದು ಖುಷಿ ಸಿನಿಮಾದ ಡಿಜಿಟಲ್‌ ಸ್ಟ್ರೀಮಿಂಗ್‌ ಶುರುವಾಗಲಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಚಿತ್ರತಂಡದೇ ಅಧಿಕೃತವಾಗಿ ಘೋಷಣೆ ಮಾಡಬೇಕಿದೆ.

ಶಿವ ನಿರ್ವಾಣ ನಿರ್ದೇಶನದ ಮೂಡಿಬಂದಿದ್ದ ಖುಷಿ ಸಿನಿಮಾದಲ್ಲಿ ವೆನ್ನೆಲ ಕಿಶೋರ್, ರಾಹುಲ್ ರಾಮಕೃಷ್ಣ, ಶ್ರೀಕಾಂತ್ ಅಯ್ಯಂಗಾರ್, ಶರಣ್ಯ ಪ್ರದೀಪ್, ಜಯರಾಮ್, ಸಚಿನ್ ಕೇಡ್ಕರ್, ಮುರಳಿ ಶರ್ಮಾ, ಲಕ್ಷ್ಮಿ, ಅಲಿ, ರೋಹಿಣಿ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮೈತ್ರಿ ಮೂವೀ ಮೇಕರ್ಸ್ ಬ್ಯಾನರ್ ಅಡಿಯಲ್ಲಿ ನವೀನ್ ಯೆರ್ನೇನಿ ಮತ್ತು ರವಿಶಂಕರ್ ಯಲಮಂಚಿಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.

ಲೈಗರ್‌ ಸೋಲು ಮರೆಸಿದ ಖುಷಿ

ಕಳೆದ ವರ್ಷ ತೆರೆ ಕಂಡಿದ್ದ ವಿಜಯ್‌ ದೇವರಕೊಂಡ ಅಭಿನಯದ ಲೈಗರ್‌ ಸಿನಿಮಾ ಹೀನಾಯ ಸೋಲು ಕಂಡಿತ್ತು. ಲೈಗರ್‌ ಸಿನಿಮಾ ಬಗ್ಗೆ ವಿಜಯ್‌ ದೇವರಕೊಂಡ ಮತ್ತು ಅಭಿಮಾನಿಗಳು ಹಾಗೂ ಚಿತ್ರತಂಡಕ್ಕೆ ಭಾರೀ ಭರವಸೆ ಇತ್ತು. ಚಿತ್ರತಂಡ ಕೂಡಾ ದೇಶದ ವಿವಿಧ ನಗರಗಳಿಗೆ ತೆರಳಿ ಪ್ರಮೋಷನ್‌ ಸಹ ಮಾಡಿತ್ತು. ಆದರೆ ಸಿನಿಮಾ ರಿಲೀಸ್‌ ಆದ ನಂತರ ಎಲ್ಲರಿಗೂ ಭಾರೀ ನಿರಾಸೆ ಕಾದಿತ್ತು. ಹೀನಾಯ ಸೋಲು ಕಂಡಿತ್ತು ಲೈಗರ್.‌ ಇದೀಗ ಖುಷಿ ಸಿನಿಮಾ ಮೂಲಕ ಗೆಲುವಿನ ಲಯಕ್ಕೆ ಮರಳಿದ್ದಾರೆ ದೇವರಕೊಂಡ.

ಮನರಂಜನೆ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಸಿನಿಮಾ, ಕನ್ನಡ ಕಿರುತೆರೆ, ರಿಯಾಲಿಟಿ ಶೋ ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, "ಹಿಂದೂಸ್ತಾನ್ ಟೈಮ್ಸ್ ಕನ್ನಡ" ವೆಬ್‌ಸೈಟ್ ನೋಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ