logo
ಕನ್ನಡ ಸುದ್ದಿ  /  ಮನರಂಜನೆ  /  Upsc: ಪುನೀತ್ ರಾಜ್‌ಕುಮಾರ್ ಐಎಎಸ್ ಅಧಿಕಾರಿಯಾಗಿ ನಟಿಸಿದ ಪೃಥ್ವಿ ಚಿತ್ರವೇ ಯುಪಿಎಸ್ಸಿ ಹಾದಿ ಹಿಡಿಯಲು ಸ್ಫೂರ್ತಿ ಎಂದ ಸೌರಭ್

UPSC: ಪುನೀತ್ ರಾಜ್‌ಕುಮಾರ್ ಐಎಎಸ್ ಅಧಿಕಾರಿಯಾಗಿ ನಟಿಸಿದ ಪೃಥ್ವಿ ಚಿತ್ರವೇ ಯುಪಿಎಸ್ಸಿ ಹಾದಿ ಹಿಡಿಯಲು ಸ್ಫೂರ್ತಿ ಎಂದ ಸೌರಭ್

HT Kannada Desk HT Kannada

May 24, 2023 10:10 AM IST

google News

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ಯುಪಿಎಸ್ಸಿ (UPSC Civils 2022 Results) ಪರೀಕ್ಷೆಯಲ್ಲಿ 260ನೇ ಪಡೆದಿದ್ದಾರೆ ಸೌರಭ್

    • Puneeth Rajkumar: 2010ರಲ್ಲಿ ತೆರೆಗೆ ಬಂದ ಪ್ರಥ್ವಿ ಸಿನಿಮಾ ದೊಡ್ಡ ಮಟ್ಟದಲ್ಲಿ ಯಶಸ್ಸು ಗಳಿಸುವುದರ ಜತೆಗೆ ಎಷ್ಟೋ ಮಂದಿಗೆ ಸ್ಫೂರ್ತಿ ತುಂಬಿತ್ತು. ಅಪ್ಪು ರೀತಿ ಎಷ್ಟೋ ಮಂದಿ ಐಎಎಸ್‌ ಅಧಿಕಾರಿ ಆಗಬೇಕೆಂದು ನಿರ್ಧರಿಸಿದ್ದರು. ಹಾಗೆ ಕಂಡ ಕನಸನ್ನು ನನಸು ಮಾಡಿಕೊಂಡಿದ್ದಾರೆ ಮೈಸೂರಿನ ಸೌರಭ.
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ಯುಪಿಎಸ್ಸಿ (UPSC Civils 2022 Results) ಪರೀಕ್ಷೆಯಲ್ಲಿ 260ನೇ ಪಡೆದಿದ್ದಾರೆ ಸೌರಭ್
ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ಯುಪಿಎಸ್ಸಿ (UPSC Civils 2022 Results) ಪರೀಕ್ಷೆಯಲ್ಲಿ 260ನೇ ಪಡೆದಿದ್ದಾರೆ ಸೌರಭ್

ಮೈಸೂರು: 'ಪುನೀತ್ ರಾಜ್ ಕುಮಾರ್ ಐಎಎಸ್ ಅಧಿಕಾರಿಯಾಗಿ ನಟಿಸಿದ 'ಪೃಥ್ವಿ' ಚಿತ್ರವೇ ಯುಪಿಎಸ್ಸಿ ಹಾದಿ ಹಿಡಿಯಲು ಸ್ಫೂರ್ತಿ' ಎಂದಿದ್ದಾರೆ ಮೈಸೂರು ಮೂಲದ ಕೆ.ಸೌರಭ್.

ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2022ನೇ ಸಾಲಿನ ಯುಪಿಎಸ್ಸಿ (UPSC Civils 2022 Results) ಪರೀಕ್ಷೆಯಲ್ಲಿ 260ನೇ ಸ್ಥಾನ ಪಡೆದಿದ್ದಾರೆ ಸೌರಭ್. ಕಠಿಣ ಪರಿಶ್ರಮದ ಮೂಲಕ ತನ್ನ ಯುಪಿಎಸ್ಸಿ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಈಗಲೂ ಪೃಥ್ವಿ ಸಿನಿಮಾ ಎಂದರೆ ರೋಮಾಂಚನವಾಗುತ್ತದೆ ಎಂದು ಸೌರಭ್ ಸಂತಸ ಹಂಚಿಕೊಂಡಿದ್ದಾರೆ.

'ಯೂಟ್ಯೂಬ್‌ನಲ್ಲಿ ರಾಜ್ಯಸಭಾ ಟಿವಿ ಚಾನೆಲ್, ಆನ್‌ಲೈನ್ ಜಾಲತಾಣಗಳು, ಪರೀಕ್ಷೆಗೆ ಪೂರಕ ಮಾಹಿತಿಗಳನ್ನು ಆನ್‌ಲೈನ್‌ನಲ್ಲಿ ಪಡೆದುಕೊಂಡೆ. ಮೂಲ ವಿಷಯಗಳು ಪಠ್ಯ ಪುಸ್ತಕದಲ್ಲಿ ದೊರೆತರೆ, ಆ ವಿಚಾರಗಳಿಗೆ ಸಂಬಂಧಿಸಿದ ಅಪ್ಡೇಟೆಡ್ ಮಾಹಿತಿಯನ್ನು ಅನೇಕ ವೆಬ್‌ಸೈಟ್‌ಗಳಿಂದ ಪಡೆದು ಅಧ್ಯಯನ ನಡೆಸಿದೆ. ಯೂಟ್ಯೂಬ್‌ನಲ್ಲಿ ಕೆಲವೊಂದು ಚಾನೆಲ್ ಗಳಿಂದ ಸಾಕಷ್ಟು ಮಾಹಿತಿ ದೊರೆಯಿತು. ಪರೀಕ್ಷೆಯಲ್ಲಿ ಯಶಸ್ವಿಯಾಗಲು ಈ ವಿಧಾನಗಳೂ ನೆರವಾಗಿವೆ' ಎನ್ನುತ್ತಾರೆ ಸೌರಭ್.

ಮೈಸೂರಿನ ಡಾಕ್ಟರ್ ಗೆ 448ನೇ ಸ್ಥಾನ

ಮೈಸೂರಿನ ಬೆಳವಾಡಿ ಗ್ರಾಮದ ಭಾನುಪ್ರಕಾಶ್ ಜೆ ನಾನು ವೃತ್ತಿಯಲ್ಲಿ ವೈದ್ಯ. ಕೋವಿಡ್ ವೇಳೆ ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವಾಗ ನಾಗರಿಕ ಸೇವಾ ಅಧಿಕಾರಿಯಾಗಬೇಕೆಂಬ ಕನಸು ಮೂಡಿತ್ತು. ಈ ಕನಸನ್ನು ನನಸು ಮಾಡಿಕೊಂಡಿರುವ ಇವರು ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ.

'ಮದುವೆ ಆಗಿ ಸಂಸಾರ ಇದ್ದರೂ ಯಾವುದೂ ನನಗೆ ಅಡೆತಡೆ ಎನಿಸಲಿಲ್ಲ, ಪತ್ನಿ ಡಾ.ಚೈತ್ರಾ ಸಹಕಾರ ಮರೆಯಲಾರೆ. ನನ್ನ ಅಮ್ಮ ಅಂಗನವಾಡಿ ಶಿಕ್ಷಕಿ. ನನ್ನ ಸಾಧನೆಗೆ ಅಮ್ಮನೇ ಪ್ರೇರಣೆ. ಕಳೆದೆರಡು ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಲಿಲ್ಲ, ಮೂರನೇ ಬಾರಿ ತೇರ್ಗಡೆಯಾಗಿರುವುದಕ್ಕೆ ತುಂಬಾ ಖುಷಿ ಆಗುತ್ತಿದೆ. ನನ್ನ ಸಾಧನೆಗೆ ಐಪಿಎಸ್ ಸಿಗಬಹುದು. ಮತ್ತೆ ಪರೀಕ್ಷೆ ಬರೆಯುವೆ. ಸಾಧನೆಗೆ ವಯಸ್ಸು ಮುಖ್ಯವಲ್ಲ, ಎಲ್ಲದಕ್ಕೂ ಗುರಿ ಹಾಗೂ ಮಾರ್ಗ ಮುಖ್ಯ' ಎನ್ನುತ್ತಾರೆ ಸೌರಭ್.

ಇವರು ಸದ್ಯ ಬೆಂಗಳೂರು ಸಮೀಪದ ನೆಲಮಂಗಲದ ಸಿದ್ಧಾರ್ಥ ವೈದ್ಯಕೀಯ ವಿಜ್ಞಾನ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಕೆ.ಆರ್. ನಗರ ತಾಲೂಕಿನ ಕೆಸ್ತೂರು ಕೊಪ್ಪಲು ಗ್ರಾಮದ ಜಯರಾಮೇಗೌಡ ಹಾಗೂ ತಾಯಿ ಗಿರಿಜಮ್ಮ ಅವರ ಪುತ್ರ, ಪಿಯುಸಿವರೆಗೂ ಸರಕಾರಿ ಶಾಲೆಯಲ್ಲಿ ಓದಿ ಮುಂದೆ ಬಂದ' ಭಾನುಪ್ರಕಾಶ್ ಮಂಡ್ಯ ಇನ್ಸಿಟ್ಯೂಟ್ ಆಫ್ ಮೆಡಿಕಲ್‌ ಸೈನ್ಸ್‌ನಲ್ಲಿ ಎಂಬಿಬಿಎಸ್ ಹಾಗೂ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಎಂಡಿ ಪಿಡಿಯಾಟ್ರಿಕ್ಸ್‌ ಪದವಿ ಪಡೆದಿದ್ದಾರೆ. ಮೈಸೂರಿನ ಕುವೆಂಪುನಗರದ ಪೂಜಾ 390ನೇ ಸ್ಥಾನ ಪಡೆದಿದ್ದಾರೆ.

ಮೈಸೂರಿನ ಡಾಕ್ಟರ್ ಭಾನುಪ್ರಕಾಶ್ ಜೆ ಅವರಿಗೆ 448ನೇ ಸ್ಥಾನ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ