logo
ಕನ್ನಡ ಸುದ್ದಿ  /  ಮನರಂಜನೆ  /  Vettaiyan Ott Release: ಕಾಯುವಿಕೆಗೆ ಬಿತ್ತು ಬ್ರೇಕ್‌; ರಜನಿಕಾಂತ್‌ ‘ವೆಟ್ಟೈಯನ್‌’ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

Vettaiyan OTT Release: ಕಾಯುವಿಕೆಗೆ ಬಿತ್ತು ಬ್ರೇಕ್‌; ರಜನಿಕಾಂತ್‌ ‘ವೆಟ್ಟೈಯನ್‌’ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

Oct 31, 2024 06:13 PM IST

google News

ರಜನಿಕಾಂತ್‌ ‘ವೆಟ್ಟೈಯನ್‌’ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

  • Vettaiyan OTT Streaming Official: ಸೂಪರ್‌ಸ್ಟಾರ್ ರಜನಿಕಾಂತ್ ಅವರ ಇತ್ತೀಚಿನ ತಮಿಳು ಆಕ್ಷನ್ ಥ್ರಿಲ್ಲರ್ ವೆಟ್ಟೈಯನ್ ಸಿನಿಮಾ ಒಟಿಟಿಗೆ ಬರುತ್ತಿದೆ. ಬಹುನಿರೀಕ್ಷಿತ ವೆಟ್ಟೈಯನ್ ಒಟಿಟಿ ಬಿಡುಗಡೆ ದಿನಾಂಕವೂ ಇದೀಗ ಅಧಿಕೃತವಾಗಿ ಘೋಷಣೆಯಾಗಿದೆ. ಹಾಗಾದರೆ ಯಾವ ಒಟಿಟಿಯಲ್ಲಿ ಈ ಸಿನಿಮಾ ಸ್ಟ್ರೀಮಿಂಗ್‌ ಆರಂಭಿಸಲಿದೆ? ಇಲ್ಲಿದೆ ಮಾಹಿತಿ.

ರಜನಿಕಾಂತ್‌ ‘ವೆಟ್ಟೈಯನ್‌’ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ
ರಜನಿಕಾಂತ್‌ ‘ವೆಟ್ಟೈಯನ್‌’ ಒಟಿಟಿ ಬಿಡುಗಡೆ ದಿನಾಂಕ ಅಧಿಕೃತ ಘೋಷಣೆ

Vettaiyan OTT Release Date: ಸೂಪರ್ ಸ್ಟಾರ್ ರಜನಿಕಾಂತ್ ನಟಿಸಿರುವ 'ವೆಟ್ಟೈಯನ್- ದಿ ಹಂಟರ್' ಚಿತ್ರ, ಈಗಾಗಲೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿ, ಸೂಪರ್‌ ಹಿಟ್‌ ಎನಿಸಿಕೊಂಡಿದೆ ತಮಿಳಿನ ಖ್ಯಾತ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್ಸ್‌ ಬ್ಯಾನರ್‌ನಡಿಯಲ್ಲಿ ಸುಭಾಸ್ಕರನ್ ನಿರ್ಮಿಸಿರುವ ವೆಟ್ಟೈಯನ್ ಚಿತ್ರವನ್ನು ಟಿಜೆ ಜ್ಞಾನವೇಲ್ ನಿರ್ದೇಶಿಸಿದ್ದಾರೆ. ಇದೀಗ ಇದೇ ಸಿನಿಮಾ ಕೊನೆಗೂ ತನ್ನ ಒಟಿಟಿ ಬಿಡುಗಡೆಯನ್ನು ಅಧಿಕೃತ ಮಾಡಿಕೊಂಡಿದೆ.

ರಜನಿಕಾಂತ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಟಾಲಿವುಡ್‌ ನಟ ರಾಣಾ ದಗ್ಗುಬಾಟಿ ಖಳನಾಗಿ ನಟಿಸಿದ್ದಾರೆ. ಅಲ್ಲದೆ, ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್, ಮಲಯಾಳಂನ ಜನಪ್ರಿಯ ನಟ ಫಹಾದ್ ಫಾಸಿಲ್, ಮಂಜು ವಾರಿಯರ್, ರೋಹಿಣಿ, ಅಭಿರಾಮಿ, ರಿತಿಕಾ ಸಿಂಗ್, ದುಶಾರಾ ವಿಜಯನ್ ಮತ್ತು ಇತರರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಬಹುತಾರಾಗಣದ ಈ ಸಿನಿಮಾ ಮೇಲೆ ಆರಂಭದಿಂದಲೂ ನಿರೀಕ್ಷೆಯ ಪ್ರಮಾಣ ತುಸು ಜಾಸ್ತಿನೇ ಇತ್ತು. ಅದರಲ್ಲೂ ರಜನಿಕಾಂತ್‌ ಸಿನಿಮಾ ಅಂದ ಮೇಲೆ ಅಲ್ಲಿ ಆ ಕ್ರೇಜ್‌ ಇದ್ದದ್ದೇ. ಹಾಡುಗಳಿಂದಲೂ ಹೈಪ್‌ ಹೆಚ್ಚಿಸಿಕೊಂಡಿದ್ದ ಈ ಸಿನಿಮಾ, ಅಷ್ಟೇ ದೊಡ್ಡ ಪ್ರಮಾಣದಲ್ಲಿ ಅಕ್ಟೋಬರ್‌ 10ರಂದು ತಮಿಳು, ಕನ್ನಡ, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಬಿಡುಗಡೆ ಆಗಿತ್ತು. ಬಿಡುಗಡೆ ಆದ ಮೇಲೂ ಕಲೆಕ್ಷನ್‌ ವಿಚಾರದಲ್ಲಿ ಈ ಸಿನಿಮಾ ಮೋಡಿ ಮಾಡಿತ್ತು.

ಚಿತ್ರಮಂದಿರಗಳಲ್ಲಿ ಮಿಶ್ರ ಪ್ರತಿಕ್ರಿಯೆ

ವಿಮರ್ಶೆ ದೃಷ್ಟಿಯಿಂದ ಮಿಶ್ರ ಪ್ರತಿಕ್ರಿಯೆ ಪಡೆದಿದ್ದ ವೆಟ್ಟೈಯನ್‌ ಸಿನಿಮಾ, ರಜನಿ ಅಭಿಮಾನಿಗಳಿಗೇ ಮೋಸ ಮಾಡಲಿಲ್ಲ. ರಜನಿಯ ಗತ್ತು, ಡೈಲಾಗ್‌ ಒಪ್ಪಿಸುವ ರೀತಿಗೆ ಫ್ಯಾನ್ಸ್‌ ಫಿದಾ ಆಗಿದ್ದರು. ಇದೀಗ ಚಿತ್ರಮಂದಿರದಲ್ಲಿ ನೋಡಿದ ಫ್ಯಾನ್ಸ್‌ ಒಟಿಟಿಯಲ್ಲಿ ಮತ್ತೊಮ್ಮೆ ಕಣ್ತುಂಬಿಕೊಳ್ಳಲು ಕಾಯ್ತಿದ್ದಾರೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇಂದು ಅಂದರೆ ಅಕ್ಟೋಬರ್‌ 31ರ ದೀಪಾವಳಿ ಹಬ್ಬದ ಪ್ರಯುಕ್ತ ವೆಟ್ಟೈಯನ್‌ ಸಿನಿಮಾ ಒಟಿಟಿಗೆ ಆಗಮಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಮುಂಡೂಲ್ಪಟ್ಟಿತು. ಇದೀಗ ಅಧಿಕೃತ ದಿನಾಂಕ ಹೊರಬಿದ್ದಿದೆ.

ನವೆಂಬರ್‌ 8ಕ್ಕೆ ಪ್ರೈಂನಲ್ಲಿ ಸ್ಟ್ರೀಮಿಂಗ್‌

ರಜನಿಕಾಂತ್ ಅವರ ವೆಟ್ಟೈಯನ್‌ ಚಿತ್ರವು ಅಮೆಜಾನ್ ಪ್ರೈಮ್ ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಆಗಲಿದೆ. ನವೆಂಬರ್ 8 ರಿಂದ 240 ದೇಶಗಳಲ್ಲಿ ವೆಟ್ಟೈಯನ್ ‌ಸಿನಿಮಾ ಒಟಿಟಿ ಸ್ಟ್ರೀಮಿಂಗ್ ಆಗಲಿದೆ ಎಂದು ಸ್ವತಃ ಅಮೆಜಾನ್ ಪ್ರೈಮ್ ವಿಡಿಯೋ ಸಂಸ್ಥೆ ತನ್ನ ಸೋಷಿಯಲ್‌ ಮೀಡಿಯಾ ವೇದಿಕೆಯಲ್ಲಿ ಘೋಷಿಸಿದೆ. ಅಂದರೆ, ಇನ್ನು ಕೇವಲ 8 ದಿನಗಳಲ್ಲಿ ವೆಟ್ಟೈಯನ್‌ ಸಿನಿಮಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವೀಕ್ಷಣೆಗೆ ಸಿಗಲಿದೆ.

250 ಕೋಟಿ ಕಲೆಕ್ಷನ್

ಏತನ್ಮಧ್ಯೆ, ಬಾಕ್ಸ್ ಆಫೀಸ್‌ನಲ್ಲಿ ಐದು ಭಾಷೆಗಳಲ್ಲಿ ಒಟಿಟಿ ಎಂಟ್ರಿಕೊಡಲಿರುವ ವೆಟ್ಟೈಯನ್, 160 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಗಳಿಕೆ ಲೆಕ್ಕಾಚಾರ ನೋಡಿದೆ, ‌ಕೇವಲ 250 ಕೋಟಿ ರೂಪಾಯಿ ಮಾತ್ರ ಕಲೆಕ್ಷನ್ ಮಾಡಿದೆ. ವೆಟ್ಟಯನ್ ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜಿಸಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸುಭಾಸ್ಕರನ್ ಈ ಸಿನಿಮಾ ನಿರ್ಮಿಸಿದ್ದಾರೆ. ರೋಬೋ 2.0, ದರ್ಬಾರ್ ಮತ್ತು ಲಾಲ್ ಸಲಾಮ್ ಚಿತ್ರಗಳ ನಂತರ, ನಾಲ್ಕನೇಯ ವೆಟ್ಟೈಯಾನ್‌ ಚಿತ್ರಕ್ಕೂ ಲೈಕಾ ಪ್ರೊಡಕ್ಷನ್ಸ್ ಬಂಡವಾಳ ಹೂಡಿದೆ.

ಕೂಲಿ ಚಿತ್ರದಲ್ಲಿ ರಜನಿಕಾಂತ್‌ ಬಿಜಿ

ವೆಟ್ಟೈಯನ್‌ ಸಿನಿಮಾ ಬಳಿಕ ಲೋಕೇಶ್‌ ಕನಗರಾಜ್‌ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಹುತಾರಾಗಣದ ಕೂಲಿ ಸಿನಿಮಾದಲ್ಲಿಯೂ ರಜನಿಕಾಂತ್‌ ನಟಿಸುತ್ತಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್‌ ಶುರುವಾಗಿದ್ದು, ಕನ್ನಡದ ರಿಯಲ್‌ ಸ್ಟಾರ್‌ ಉಪೇಂದ್ರ ಸಹ ಈ ಸಿನಿಮಾದ ಭಾಗವಾಗಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ