Youtuber Dr Bro: ಏನ್ ಗುರು ಈ ಡಾಕ್ಟರ್ ಬ್ರೋ; ಗಗನ್ ಶ್ರೀನಿವಾಸ್ ಮಾಡಿದ ಈ 5 ವಿಡಿಯೋಗಳನ್ನೊಮ್ಮೆ ನೋಡಿ
Nov 25, 2023 11:32 AM IST
ಡಾ. ಬ್ರೋ ಖ್ಯಾತಿಯ ಯೂಟ್ಯೂಬರ್ ಗಗನ್ ಶ್ರೀನಿವಾಸ್
- Youtuber Dr Bro Videos: ಕನ್ನಡದ ಹೆಮ್ಮೆಯ ಯೂಟ್ಯೂಬರ್ ಮತ್ತು ವ್ಲಾಗರ್ ಗಗನ್ ಶ್ರೀನಿವಾಸ್‌ರ ಐದು ಜನಪ್ರಿಯ ಸಾಹಸಿ ವಿಡಿಯೋದ ಮಾಹಿತಿ ಇಲ್ಲಿದೆ. ಸಿನಿಮಾ, ಸೀರಿಯಲ್ ಮಾತ್ರವಲ್ಲದೆ ಯೂಟ್ಯೂಬ್‌ನಲ್ಲಿ ಮನರಂಜನೆ ಮತ್ತು ಪ್ರವಾಸದ ಅನುಭವ ಬಯಸುವವರಿಗೆ ಈ ವಿಡಿಯೋಗಳು ಇಷ್ಟವಾಗಬಹುದು.
ಬೆಂಗಳೂರು: ಗಗನ್ ಶ್ರೀನಿವಾಸ್ ಅಲಿಯಾಸ್ ಡಾ. ಬ್ರೋ (Kannada Travel vlogger Dr Bro youtube channel) ಗೊತ್ತಿಲ್ಲದೆ ಇರುವ ಕನ್ನಡಿಗರು ಇರಲಿಕ್ಕಿಲ್ಲ. ಕನ್ನಡ ಜನಪ್ರಿಯ ಯೂಟ್ಯೂಬರ್, ವ್ಲಾಗರ್ ಡಾ. ಬ್ರೋ ಸಾಹಸ ಕಥನ, ಪ್ರವಾಸ ಎಲ್ಲರಿಗೂ ಇಷ್ಟ. ಎಲ್ಲೋ ನಮ್ಮ ಮನೆ ಮನ ಯಾವುದೋ ದೂರದ ಊರಿಗೆ ಹೋಗಿ ಅಲ್ಲಿನ ದೃಶ್ಯಗಳನ್ನು ತೋರಿಸುತ್ತಿದ್ದಾನೆ ಎಂದು ಸಾಕಷ್ಟು ಜನರು ಖುಷಿಯಿಂದ ಇವರ ವಿಡಿಯೋ ನೋಡುತ್ತಾರೆ. ಒಬ್ಬಂಟಿಯಾಗಿ ಯಾವುದೂ ದೇಶದ ಊರಿಗೆ ಹೋಗಿ ಅಲ್ಲಿನ ವಿಶೇಷಗಳನ್ನು ನಮ್ಮ ಕಣ್ಮುಂದೆ ತರುವ ಇವರ ಸಾಹಸಿ ಪ್ರಯಾಣವನ್ನು ಎಲ್ಲರೂ ಇಷ್ಟಪಟ್ಟಿರಬಹುದು. ಡಾ. ಬ್ರೋ ಅವರು ಪ್ರತಿನಿತ್ಯ ಹಲವು ವಿಡಿಯೋಗಳನ್ನು ತಮ್ಮ ಚಾನೆಲ್‌ಗಳಿಗೆ (ಯೂಟ್ಯೂಬ್, ಫೇಸ್‌ಬುಕ್) ಅಪ್ಲೋಡ್ ಮಾಡುತ್ತಾರೆ. ಕಳೆದ ಹಲವು ವರ್ಷಗಳಿಂದ ತಪಸ್ಸಿನಂತೆ ಯೂಟ್ಯೂಬ್‌ಗೆ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಾರೆ. ಈ ವಿಡಿಯೋಗಳಲ್ಲಿ ಜನರಿಗೆ ಹೆಚ್ಚು ಇಷ್ಟವಾದ, ಹೆಚ್ಚು ಜನರನ್ನು ತಲುಪಿದ ವಿಡಿಯೋ ಯಾವುದು ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಅಂತಹ ಐದು ಜನಪ್ರಿಯ ವಿಡಿಯೋಗಳ ವಿವರ ಇಲ್ಲಿದೆ.
ಅಂದಹಾಗೆ, ಡಾ. ಬ್ರೋ ಅವರ ಸಾಹಸ ಕಥನ, ಅವರ ವಿವರಗಳ ಕುರಿತು ಈಗಾಗಲೇ ಹಿಂದೂಸ್ತಾನ್ ಟೈಮ್ಸ್ ಕನ್ನಡ ವರದಿ ಮಾಡಿದೆ. ಈಗಾಗಲೇ ಡಾ. ಬ್ರೋ ಜತೆ ಸಂದರ್ಶನವನ್ನೂ ನಡೆಸಿದೆ. ಓದಿ: Dr Bro Exclusive Interview: ‘ನಮಸ್ಕಾರ ದೇವ್ರು’ ಎಂದ ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಎಕ್ಸ್‌ಕ್ಲೂಸಿವ್ ಸಂದರ್ಶನ ಇಲ್ಲಿದೆ.
ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್‌ರ 5 ಜನಪ್ರಿಯ ವಿಡಿಯೋಗಳು
1. ಡಾ. ಬ್ರೋ ಪಾಕಿಸ್ತಾನ ಪ್ರವೇಶ ವಿಡಿಯೋ
ಅಫೀಶಿಯಲ್ ಎಂಟ್ರಿ ಟು ಪಾಕಿಸ್ತಾನ್ ಪಿಕೆ, ಕರ್ತಾಪುರ್ ಕಾರಿಡಾರ್ ಎಂಬ ವಿಡಿಯೋ ಡಾ. ಬ್ರೋ ಅವರ ಯೂಟ್ಯೂಬ್ ಚಾನೆಲ್‌ನಲ್ಲಿ ಅತ್ಯಧಿಕ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ 55 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಲ್ಲರೂ ಒಬ್ಬಂಟಿಯಾಗಿ ಹೋಗಲು ಭಯಪಡುವ ಪಾಕಿಸ್ತಾನದ ಪ್ರದೇಶಗಳಿಗೆ ಈ ಯುವಕ (ಬಾಲಕ!) ಧೈರ್ಯವಾಗಿ ಹೋಗಿ ಬಂದಿದ್ದಾನೆ. ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್ ಕರ್ತಾಪರ್‌ಗೆ ಭೇಟಿ ನೀಡಿದ್ದರು. ಪಾಕಿಸ್ತಾನಕ್ಕೆ ಪ್ರವೇಶಿಸುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಅಂದುಕೊಂಡಿಲ್ಲ ಎಂದು ಹೇಳುತ್ತ ಇವರು ಭಾರತದ ಗಡಿಯಾಚೆ ಕಾಲಿಟ್ಟ ಈ ವಿಡಿಯೋ ಸಾಕಷ್ಟು ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ನೋಡಿಲ್ಲವೆಂದಾದರೆ ಇಲ್ಲಿದೆ ನೋಡಿ. ಇದನ್ನೂ ಓದಿ: ಷೇರು ಹೂಡಿಕೆ ಮಾಡಬೇಕೆಂದಿದ್ದೀರಾ, ಷೇರುಪೇಟೆ ಬಗ್ಗೆ ಕಲಿಯಲು ಈ 5 ಕನ್ನಡ ಯೂಟ್ಯೂಬ್ ಚಾನೆಲ್‌ಗಳಿಗೊಮ್ಮೆ ಭೇಟಿ ನೀಡಿ
2. ಮನುಷ್ಯರನ್ನು ಕೊಂದು ತಿನ್ನೋ ಜನಗಳ ಜೊತೆ ಮುಖಾಮುಖಿ
ಡಾ. ಬ್ರೋ ಅವರ ಈ ವಿಡಿಯೋ ಜನಪ್ರಿಯತೆಯಲ್ಲಿ ಎರಡನೇ ಸ್ಥಾನ ಪಡೆದಿದೆ. ಇಂಡೋನೇಷ್ಯಾದ ವೆಸ್ಟ್ ಪಪುವಾದ ಡೆಕಾಯಿ ಎಂಬಲ್ಲಿನ ಕೊರೊವಾಯಿ ಟ್ರೈಬ್‌ಗಳನ್ನು ಭೇಟಿಯಾದ ಇವರ ವಿಡಿಯೋ 53 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಈ ಜನರ ಜೀವನಕ್ರಮ, ಬದುಕಿನ ರೀತಿಯನ್ನು ಅವರು ತೋರಿಸಿಕೊಟ್ಟಿದ್ದರು. ಈ ವಿಡಿಯೋ ಸಾಕಷ್ಟು ಸಾಹಸಮಯವಾಗಿದ್ದು, ನೋಡಿಲ್ಲವೆಂದಾದರೆ ನೋಡಿ. ಇದನ್ನೂ ಓದಿ: Youtube Channel: ಸ್ವಂತ ಯೂಟ್ಯೂಬ್ ಚಾನೆಲ್ ರಚಿಸುವುದು ಹೇಗೆ? ಆರಂಭಿಕರಿಗೆ ಕನ್ನಡ ಮಾರ್ಗದರ್ಶಿ
3. ಭಾರತದ ಬೃಹತ್ ಕ್ರೂಸ್ ಹಡಗು
ಭಾರತದ ಕರ್ನಿಕಾ ಹೆಸರಿನ ಬೃಹತ್ ಕ್ರೂಸ್ ಅಡಗಿನ ಚಿತ್ರಣವನ್ನು ನೇರವಾಗಿ ಅಲ್ಲಿಗೆ ಹೋಗಿ ಡಾ. ಬ್ರೋ ನೀಡಿದ್ದರು. ಈ ವಿಡಿಯೋ 43 ಲಕ್ಷ ವೀಕ್ಷಣೆ ಪಡೆದುಕೊಂಡಿದೆ. ಈ ವಿಡಿಯೋ ಇಲ್ಲಿದೆ ನೋಡಿ.
4. ಸೋಮಾಲಿಲ್ಯಾಂಡ್‌ನ ಮನಿ ಮಾರ್ಕೆಟ್
ಹಣ ಎಂದರೆ ಎಲ್ಲರಿಗೂ ಇಷ್ಟ. ಹಣ ಬೀದಿಬದಿಯಲ್ಲಿ ತರಕಾರಿಯಂತೆ ದೊರಕುತ್ತದೆ ಎಂಬ ಇವರ ವಿಡಿಯೋ ಜನಪ್ರಿಯತೆಯಲ್ಲಿ (34 ಲಕ್ಷ ವೀಕ್ಷಣೆ) ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಬೀದಿಬದಿಯಲ್ಲೇ ಹಣ ಮಾರಾಟ ಮಾಡುವ ಸೋಮಾಲಿಲ್ಯಾಂಡ್ (ಸೋಮಾಲಿಯಾ) ವಿಡಿಯೋ ಇಲ್ಲಿದೆ ನೋಡಿ.
5. ಈ ಚಿಕ್ ದೇಶಕ್ಕೆ ಏಕೆ ಇಷ್ಟು ಡಿಮ್ಯಾಂಡ್, ದುಬಾರಿ ನಗರ
ಈ ವಿಡಿಯೋ 31 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. ಇಥಿಯೋಪಿಯಾದ ಮೂಲಕ ಆ ನಿಗೂಢ ದೇಶಕ್ಕೆ ಅವರು ಪ್ರಯಾಣ ಬೆಳೆಸುವ ವಿಡಿಯೋ ಇದಾಗಿದೆ. 250-350 ಕಿ.ಮಿ. ವಿಸ್ತಾರದ ಈ ಪುಟ್ಟ ದೇಶಕ್ಕೆ ಅವರು ಭೇಟಿ ನೀಡಿದ್ದರು. ಅಂದಹಾಗೆ ಈ ದೇಶದ ಹೆಸರು ಜಿಬುಟಿ. ಈ ವಿಡಿಯೋ ನೋಡಿ.
ಇವಿಷ್ಟೇ ಅಲ್ಲ, ಗೊರಿಲ್ಲಾಗಳ ಬೇಟೆ, ಉಗಾಂಡ, ಆಫ್ರೀಕಾದ ಲಂಬುಗಳು, ಅತ್ಯಂತ ಅಪಾಯಕಾರಿ ದೇಶಕ್ಕೆ ಸ್ವಾಗತ (ದಕ್ಷಿಣ ಸುಡಾನ್), ಅಜರ್ಬೈಜಾನ್, ಸಹರಾ ಡೆಸಾರ್ಟ್, ಈಜಿಪ್ಟ್ ಪಿರಾಮಿಡ್, ಇಂಡೋನೇಷ್ಯಾ, ಅಫಘಾನಿಸ್ತಾನ, ಆಫ್ರೀಕಾ ಕಾಡಿನ ವಿಡಿಯೋ, ತಾಲಿಬಾನ್ ವಿಡಿಯೋಗಳು ಲಕ್ಷಾಂತರ ವೀಕ್ಷಣೆ ಪಡೆದುಕೊಂಡಿವೆ.