ದರ್ಶನ್ ತೂಗುದೀಪ ರಾಜಕೀಯ ಪ್ರವೇಶದ ಬಗ್ಗೆ ಅವಧೂತ ಅರ್ಜುನ್ ಗುರೂಜಿ ಸ್ಫೋಟಕ ಭವಿಷ್ಯ; 2025ರಲ್ಲಿ ದಾಸನದ್ದೇ ಹವಾ!
Oct 31, 2024 01:32 PM IST
ದರ್ಶನ್ ತೂಗುದೀಪ ರಾಜಕೀಯ ಪ್ರವೇಶದ ಬಗ್ಗೆ ಅವಧೂತ ಅರ್ಜುನ್ ಗುರೂಜಿ ಸ್ಫೋಟಕ ಭವಿಷ್ಯ
- Avadhuta Arjun Guruji: ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧಿಸಿ ಜೈಲು ಪಾಲಾಗಿ ಇದೀಗ ಮಧ್ಯಂತರ ಜಾಮೀನು ಪಡೆದಿರುವ ನಟ ದರ್ಶನ್ ತೂಗುದೀಪ ರಾಜಕೀಯಕ್ಕೆ ಎಂಟ್ರಿಕೊಡುವ ಕೊಡುವ ಬಗ್ಗೆ ಮೈಸೂರಿನಲ್ಲಿ ಅವಧೂತ ಅರ್ಜುನ್ ಗುರೂಜಿ ಭವಿಷ್ಯ ನುಡಿದಿದ್ದಾರೆ.
ಮೈಸೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ (Renukaswamy murder case) ಆರೋಪಿಯೂ ಆಗಿರುವ ನಟ ದರ್ಶನ್ ತೂಗುದೀಪ ಅವರಿಗೆ (Actor Darshan Thoogudeepa) ಮಧ್ಯಂತರ ಬೇಲ್ ಮಂಜೂರು ಮಾಡಲಾಗಿದೆ. ಅಕ್ಟೋಬರ್ 30ರ ಬುಧವಾರ ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಗೊಂಡು ಬೆಂಗಳೂರಿಗೆ ಬಂದಿದ್ದಾರೆ. ಮಧ್ಯಂತರ ಜಾಮೀನು ಪಡೆದ ವಿಚಾರವಾಗಿ ಮೈಸೂರಿನಲ್ಲಿ ಅವಧೂತ ಅರ್ಜುನ್ ಗುರೂಜಿ (Avadhuta Arjun Guruji) ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ದರ್ಶನ್ ಅವರಿಗೆ ಮುಂದಿನ ದಿನಗಳಲ್ಲಿ ಒಳ್ಳೆಯ ಭವಿಷ್ಯ ಇದೆ ಎಂದು ಭವಿಷ್ಯ ನುಡಿದಿದ್ದಾರೆ. ಇತ್ತೀಚೆಗೆ ಅಂದರೆ ಅಕ್ಟೋಬರ್ 20ರ ನಂತರ ದರ್ಶನ್ಗೆ ಉತ್ತಮ ದಿನಗಳಿವೆ ಎಂದು ಗುರೂಜಿ ಭವಿಷ್ಯ ನುಡಿದಿದ್ದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅರ್ಜುನ್ ಗುರೂಜಿ, 2025ರಲ್ಲಿ ದರ್ಶನ್ಗೆ ಒಳ್ಳೆಯ ದಿನಗಳು ಬರಲಿವೆ. ಚಿತ್ರದಲ್ಲೂ ಕೂಡ ನಟಿಸಲಿದ್ದಾರೆ. ದರ್ಶನ್ ಅಭಿಮಾನಿಗಳು, ಅವರ ತಾಯಿ ಮೀನಾ ತೂಗುದೀಪ, ಪತ್ನಿ ವಿಜಯಲಕ್ಷ್ಮೀ, ತಮ್ಮ ದಿನಕರ್ ಕೈಗೊಂಡ ಪೂಜೆಗಳು ಫಲಿಸಿವೆ. ಹಾಗಾಗಿ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್ಗೆ ಸ್ತ್ರೀ ದೋಷ ಇಲ್ಲ, ಸ್ತೀ ದೋಷ ಇದೆ ಎಂಬುದೆಲ್ಲಾ ಸುಳ್ಳು. ಕೆಟ್ಟ ಸಮಯ, ಕೆಲವೊಂದು ಕೆಟ್ಟ ನಿರ್ಧಾರಗಳಿಂದ ಈ ರೀತಿಯಾಗಿದೆ ಎಂದು ಹೇಳಿದ್ದಾರೆ.
ಕನ್ನಡಿಗರಿಗೆ ದರ್ಶನ್ ಮೇಲೆ ಅಪಾರ ಪ್ರೀತಿಯಿದೆ. ಅನೇಕರಿಗೆ ದರ್ಶನ್ ಸಹಾಯ ಮಾಡಿದ್ದಾರೆ. ಕನ್ನಡ ಚಿತ್ರರಂಗಕ್ಕೆ ತಮ್ಮದೇ ಸೇವೆ ಸಲ್ಲಿಸಿದ್ದಾರೆ. ವಿಜಯಲಕ್ಷ್ಮೀ ನಡೆಸಿದ ಹೋಮ ಹವನ ಫಲಿಸಿದೆ. ದರ್ಶನ್ ಅವರ ತಾಯಿಯನ್ನು ನಿರ್ಲ್ಯಕ್ಷ ಮಾಡಿಲ್ಲ. ಅದನ್ನು ಯಾರೂ ನೋಡಿಲ್ಲ, ದರ್ಶನ್ ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ತಾಯಿ ಮಕ್ಕಳನ್ನು ಕೈಬಿಡುವುದಿಲ್ಲ ಎಂದು ಗುರೂಜಿ ಹೇಳಿದ್ದಾರೆ.
ಚಿತ್ರರಂಗಕ್ಕೆ ಒಳ್ಳೆಯ ದಿನಗಳು
ಕನ್ನಡ ಚಿತ್ರರಂಗದ ಬಗ್ಗೆಯೂ ಮಾತನಾಡಿದ ಅರ್ಜುನ್ ಗುರೂಜಿ, ಕನ್ನಡ ಚಿತ್ರರಂಗಕ್ಕೂ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳು ಬರುತ್ತವೆ. ಎಲ್ಲರೂ ಕೂಡ ಕನ್ನಡ ಚಿತ್ರರಂಗದ ಕಡೆ ಮತ್ತೆ ತಿರುಗಿ ನೋಡುವಂತೆ ಆಗತ್ತದೆ. ಕಲ್ಲಿಗೆ ಏಟು ಬಿದ್ದು ವಿಗ್ರಹ ಆಗಿದೆ. ದರ್ಶನ್ ಕೂಡ ಅಷ್ಟೇ, ಈಗ ಸಾಕಷ್ಟು ಏಟು ಬಿದ್ದಿವೆ. ವಿಗ್ರಹ ಆಗಿ ಹೊರ ಬಂದಿದ್ದಾರೆ. ಪೂಜೆಯೂ ಸಹ ಆಗತ್ತದೆ. ಯಾರನ್ನೂ ಯಾರು ಕೂಡ ದ್ವೇಷ ಮಾಡಬೇಡಿ. ನಾನು, ನಾನು ಎಂದು ಮೆರೆಯಬೇಡಿ. ಎಲ್ಲರನ್ನೂ ಸಮಾನ ರೀತಿಯಲ್ಲಿ ನೋಡಿ. ಕನ್ನಡ ಬೆಳೆಸಿ, ನೀವು ಬೆಳೆಯಿರಿ ಎಂದು ಸಲಹೆ ನೀಡಿದ್ದಾರೆ.
ದರ್ಶನ್ ರಾಜಕೀಯ ಪ್ರವೇಶ
ಇದೇ ವೇಳೆ ದರ್ಶನ್ ರಾಯಕೀಯಕ್ಕೆ ಬರುವ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದರ್ಶನ್ ರಾಜಕೀಯಕ್ಕೂ ಬರುತ್ತಾರೆ. ಮುಂದಿನ ದಿನಗಳಲ್ಲಿ ರಾಜಕೀಯದಲ್ಲಿ ಉತ್ತಮ ಭವಿಷ್ಯವಿದೆ. ರಾಜಕೀಯ ಪಕ್ಷಗಳೇ ಅವರ ಬಳಿಗೆ ಹೋಗುತ್ತವೆ ಎಂದ ಅರ್ಜುನ್ ಅವಧೂತ ಗುರೂಜಿ, ದರ್ಶನ್ ಸಹೋದರ ದಿನಕರ್ ಕರೆ ಮಾಡಿದ್ದರು. ಬೇಲ್ ಸಿಗುವ ಮುನ್ನಾ ಏನಾಗತ್ತದೆ ಎಂದು ಕೇಳಿದ್ದರು. ಸಂಜೆ ಸ್ವೀಟ್ ತೆಗೆದುಕೊಂಡು ಬನ್ನಿ ಎಂದಿದ್ದೆ ಎಂದು ಮೈಸೂರಿನಲ್ಲಿ ಹೇಳಿಕೆ ನೀಡಿದ್ದಾರೆ.