logo
ಕನ್ನಡ ಸುದ್ದಿ  /  ಕರ್ನಾಟಕ  /  ಏಪ್ರಿಲ್ 7 ರಿಂದ 14 ರವರೆಗೆ ಸಾಲು ಸಾಲು ರಜೆ ಎಫೆಕ್ಟ್; ಹಬ್ಬಕ್ಕೆ ಊರಿನತ್ತ ಹೊರಟವರಿಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೌಲಭ್ಯ

ಏಪ್ರಿಲ್ 7 ರಿಂದ 14 ರವರೆಗೆ ಸಾಲು ಸಾಲು ರಜೆ ಎಫೆಕ್ಟ್; ಹಬ್ಬಕ್ಕೆ ಊರಿನತ್ತ ಹೊರಟವರಿಗೆ ಕೆಎಸ್‌ಆರ್‌ಟಿಸಿ ವಿಶೇಷ ಬಸ್ ಸೌಲಭ್ಯ

Raghavendra M Y HT Kannada

Apr 05, 2024 04:25 PM IST

google News

2024ರ ಏಪ್ರಿಲ್ 7 ರಿಂದ 14 ರವರೆಗೆ ಒಟ್ಟು 5 ರಜೆಗಳಿವೆ. ಹೀಗಾಗಿ ಜನರು ಹಬ್ಬಕ್ಕಾಗಿ ಊರಿನತ್ತ ಹೊರಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ.

    • ಏಪ್ರಿಲ್ 7 ರಿಂದ 14 ರವರೆಗೆ 5  ರಜೆಗಳಿವೆ. ಶಾಲಾ ಮಕ್ಕಳಿಗೆ ರಜೆ ಜೊತೆಗೆ ಕೆಲಸಕ್ಕೂ ಸಾಲು ಸಾಲು ರಜೆ ಸಿಗುತ್ತಿರುವುದರಿಂದ ಬಹುತೇಕರು ಹಬ್ಬಕ್ಕಾಗಿ ತಮ್ಮ ಸ್ವಂತ ಊರುಗಳತ್ತ ಹೊರಟ್ಟಿದ್ದಾರೆ. ಇವರಿಗೆ ಕೆಎಸ್‌ಆರ್‌ಟಿಸಿ ಕೂಡ ಸ್ಪಂದಿಸಿದೆ.
2024ರ ಏಪ್ರಿಲ್ 7 ರಿಂದ 14 ರವರೆಗೆ ಒಟ್ಟು 5 ರಜೆಗಳಿವೆ. ಹೀಗಾಗಿ ಜನರು ಹಬ್ಬಕ್ಕಾಗಿ ಊರಿನತ್ತ ಹೊರಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ.
2024ರ ಏಪ್ರಿಲ್ 7 ರಿಂದ 14 ರವರೆಗೆ ಒಟ್ಟು 5 ರಜೆಗಳಿವೆ. ಹೀಗಾಗಿ ಜನರು ಹಬ್ಬಕ್ಕಾಗಿ ಊರಿನತ್ತ ಹೊರಟ್ಟಿದ್ದಾರೆ. ಕೆಎಸ್‌ಆರ್‌ಟಿಸಿ ವಿಶೇಷ ಬಸ್ ವ್ಯವಸ್ಥೆಯನ್ನು ಮಾಡಿದೆ.

ಬೆಂಗಳೂರು: ಯುಗಾದಿ, ರಂಜಾನ್ ಹಬ್ಬಗಳಿಗಾಗಿ ಸಾಲು ಸಾಲು ರಜೆಗಳು ಬರುತ್ತಿವೆ. ಜೊತೆಗೆ ಮಕ್ಕಳಿಗೆ ಬೇಸಿಗೆ ರಜೆ ಇರುತ್ತದೆ. ಹೀಗಾಗಿ ಕೆಲವರು ಪ್ರವಾಸದ ಪ್ಲಾನ್ ಮಾಡಿದ್ದರೆ ಇನ್ನೂ ಕೆಲವರು ಹಬ್ಬಕ್ಕಾಗಿ ಬೆಂಗಳೂರಿನಿಂದ ತಮ್ಮ ಸ್ವಂತ ಊರುಗಳತ್ತ ಹೊರಟ್ಟಿದ್ದಾರೆ. ಮುಂದಿನ ಒಂದು ವಾರದಲ್ಲಿ ಒಟ್ಟು 5 ರಜೆಗಳಿವೆ. ಸೋಮವಾರ (ಏಪ್ರಿಲ್ 8), ಬುಧವಾರ (ಏಪ್ರಿಲ್ 10) ಹಾಗೂ ಶುಕ್ರವಾರ (ಏಪ್ರಿಲ್ 12) ಮೂರು ದಿನ ರಜೆ ಇಲ್ಲ. ಈ ದಿನಗಳಂದೂ ರಜೆ ಹೊಂದಾಣಿಕೆ ಮಾಡಿಕೊಂಡರೆ ಏಪ್ರಿಲ್ 7ರ ಭಾನುವಾರದಿಂದ 14ರ ಭಾನುವಾರದ ವರೆಗೆ 8 ರಜೆಗಳ ಸುದೀರ್ಘ ಪ್ರವಾಸವನ್ನು ಕೈಗೊಳ್ಳಬಹುದು.

ಇನ್ನೂ ಸಾಲು ಸಾಲು ರಜೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಜನರು ಊರುಗಳತ್ತ ಹೊರಡಲು ಪ್ಲಾನ್ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಪ್ರಯಾಣಿಕರ ಸುಗಮ ಸಂಚಾರಕ್ಕಾಗಿ ಕೆಎಸ್‌ಆರ್‌ಟಿಸಿ 2000 ಹೆಚ್ಚುವರಿ ವಿಶೇಷ ಬಸ್ ವ್ಯವಸ್ಥೆ ಮಾಡುವ ನಿರ್ಧಾರವನ್ನು ಪ್ರಕಟಿಸಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಸ್ಯಾಟಲೈನ್ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣಗಳಿಂದ ಬಸ್‌ ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮಾತ್ರವಲ್ಲದೆ, ಸುತ್ತಮುತ್ತಲಿನ ಹೊರ ರಾಜ್ಯಗಳಿಗೂ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ಮಾಡಿದೆ. ರಾಜ್ಯದ ಪ್ರಮುಖ ಧಾರ್ಮಿಕ ಸ್ಥಳಗಳಾದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶೃಂಗೇರಿ, ಹೊರನಾಡು, ಮಡಿಕೇರಿ, ಶಿವಮೊಗ್ಗ, ಗೋಕರ್ಣ, ಕೊಲ್ಲೂರು, ಹುಬ್ಬಳ್ಳಿ-ಧಾರವಾಡ, ಬೆಳವಾಗಿ ಹೀಗಿ ರಾಜ್ಯದ ಮೂಲೆ ಮೂಲೆಗೆ ಹೆಚ್ಚುವರಿ ಬಸ್ ಸಂಚಾರ ಇರಲಿದೆ.

ಮತ್ತೊಂದೆಡೆ ಪಕ್ಕದ ರಾಜ್ಯಗಳಾದ ತೆಲಂಗಾಣ ರಾಜಧಾನಿ ಹೈದರಾಬಾದ್, ತಮಿಳುನಾಡಿನ ಚೆನ್ನೈ, ಗೋವಾದ ಪಣದಜಿ, ಎರ್ನಾಕುಲಂ, ತಿರುಪತಿ, ಶಿರಡಿ ಸೇರಿದಂತೆ ಕೆಲವೊಂದು ಪ್ರವಾಸಿ ಹಾಗೂ ಧಾರ್ಮಿಕ ತಾಣಗಳಿಗೂ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ಮಾಡುತ್ತವೆ. ಒಟ್ಟಾರೆಯಾಗಿ ಕೆಎಸ್‌ಆರ್‌ಟಿಸಿಯಿಂದ 1,750, ಎನ್‌ಡಬ್ಲ್ಯುಕೆಎಸ್‌ಆರ್‌ಟಿಸಿಯಿಂದ 145, ಕೆಕೆಆರ್‌ಟಿಸಿಯಿಂದ 200 ಹಾಗೂ ಬಿಎಂಟಿಸಿಯ 180 ವಿಶೇಷ ಬಸ್‌ಗಳು ಮುಂದಿನ ಕೆಲ ದಿನಗಳ ಮಟ್ಟಿಗೆ ಪ್ರಯಾಣಿಕರ ಅನುಕೂಲಕ್ಕಾಗಿ ಸಂಚಾರ ಮಾಡಲಿವೆ. ಸಾಲು ಸಾಲು ರಜೆಗಳು ಇರುವುದರಿಂದ ಕೆಲ ಉದ್ಯೋಗಿಗಳು ಮುಂದಿನ ವಾರ ಪೂರ್ತಿ ಕೆಲಸಕ್ಕೆ ರಜೆ ಹಾಕಿಕೊಳ್ಳಲು ಪ್ಲಾನ್ ಮಾಡಿಕೊಳ್ಳುತ್ತಿರುವಂತೆ ಇದೆ.

ಏಪ್ರಿಲ್ 7 ರಿಂದ 14 ರವರೆಗೆ ಇರುವ ರಜೆಗಳು, ಕೆಲಸದ ದಿನಗಳ ವಿವರ

ಏಪ್ರಿಲ್ 7 - ಭಾನುವಾರ (ರಜೆ)

ಏಪ್ರಿಲ್ 8 - ಸೋಮವಾರ (ರಜೆ ಇಲ್ಲ)

ಏಪ್ರಿಲ್ 9 - ಮಂಗಳವಾರ (ಯುಗಾದಿ)

ಏಪ್ರಿಲ್ 10 - ಬುಧವಾರ (ರಜೆ ಇಲ್ಲ)

ಏಪ್ರಿಲ್ 11 - ಗುರುವಾರ (ರಂಜಾನ್)

ಏಪ್ರಿಲ್ 12 - ಶುಕ್ರವಾರ (ರಜೆ ಇಲ್ಲ)

ಏಪ್ರಿಲ್ 13 - ಶನಿವಾರ (ಎರಡನೇ ಶನಿವಾರ)

ಏಪ್ರಿಲ್ 14 - ಭಾನುವಾರ ರಜೆ

ಏಪ್ರಿಲ್ ನಾಲ್ಕನೇ ವಾರದಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಏಪ್ರಿಲ್ 26ರ ಶುಕ್ರವಾರ ಮತದಾನ ಇರಲಿದ್ದು, ಅಂದು ಸಾರ್ವತ್ರಿಕ ರಜೆ ಇರಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ