logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಬೆಂಗಳೂರಿಗೆ ಬನ್ನೇರಘಟ್ಟ ನಂತರ ಮತ್ತೊಂದು ಮುಖ್ಯ ಅರಣ್ಯ, ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ರಚನೆ

Bangalore News: ಬೆಂಗಳೂರಿಗೆ ಬನ್ನೇರಘಟ್ಟ ನಂತರ ಮತ್ತೊಂದು ಮುಖ್ಯ ಅರಣ್ಯ, ಗ್ರೇಟರ್ ಹೆಸರಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ ರಚನೆ

Umesha Bhatta P H HT Kannada

Oct 08, 2024 01:31 PM IST

google News

ಬೆಂಗಳೂರಿನ ಹೆಸರಘಟ್ಟ ಅರಣ್ಯ ಹುಲ್ಲುಗಾವಲು ಮೀಸಲು ಪ್ರದೇಶ ಆಗಲಿದೆ.

    • ಬೆಂಗಳೂರಿನ ಹೆಸರಘಟ್ಟವನ್ನು ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಬೇಕು ಎಂಬುದು ಬಹು ದಿನಗಳ ಬೇಡಿಕೆಯಾಗಿತ್ತು. ಈ ಬಗ್ಗೆ ಆಂದೋಲನವೂ ನಡೆದಿತ್ತು. ಪ್ರಕೃತಿ ಪರಿಸರ ಸಂರಕ್ಷಣೆಗೆ ಶ್ರಮಿಸುತ್ತಿರುವ ಸರ್ಕಾರ ಇಂದು ಈ ಮಹತ್ವದ ತೀರ್ಮಾನ ಕೈಗೊಂಡಿದೆ.
ಬೆಂಗಳೂರಿನ ಹೆಸರಘಟ್ಟ ಅರಣ್ಯ ಹುಲ್ಲುಗಾವಲು ಮೀಸಲು ಪ್ರದೇಶ ಆಗಲಿದೆ.
ಬೆಂಗಳೂರಿನ ಹೆಸರಘಟ್ಟ ಅರಣ್ಯ ಹುಲ್ಲುಗಾವಲು ಮೀಸಲು ಪ್ರದೇಶ ಆಗಲಿದೆ.

ಬೆಂಗಳೂರು: ಬೆಂಗಳೂರರು ಬೃಹತ್‌ ನಗರಿಯಾಗಿ ಬೆಳೆದು ತನ್ನ ಎಲ್ಲೆಯನ್ನು ವಿಸ್ತರಿಸಿಕೊಂಡರೂ ಅಲ್ಲಲ್ಲಿ ಹಸಿರು ಪ್ರದೇಶ ಇದೆ. ಅದರಲ್ಲೂ ಬೆಂಗಳೂರಿನ ಉತ್ತರ ಭಾಗದಲ್ಲಿರುವ ಹೆಸರಘಟ್ಟ ಸಂರಕ್ಷಿತ ಪ್ರದೇಶವೂ ಅದರಲ್ಲಿ ಒಂದು. ಈ ಪ್ರದೇಶವನ್ನು ಸಂರಕ್ಷಣೆ ಮಾಡಬೇಕು ಎನ್ನುವ ಬೇಡಿಕೆ ಹಳೆಯದ್ದು. ರಿಯಲ್‌ ಎಸ್ಟೇಟ್‌ ನೆಪದಲ್ಲಿ ಅಭಿವೃದ್ದಿ ಚಟುವಟಿಕೆಗಳು ನಡೆಯುತ್ತಿರುವುದರಿಂದ ಹೆಸರಘಟ್ಟ ಪ್ರದೇಶವನ್ನು ಮೀಸಲು ಅರಣ್ಯ ಮಾಡಬೇಕು ಎಂಬ ಒತ್ತಡವೂ ಇತ್ತೀಚಿಗೆ ಹೆಚ್ಚಿತು. ಅದಕ್ಕೆ ಮಣಿದಿರುವ ಸರ್ಕಾರ ಈಗ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ವನ್ಯಜೀವಿ ಮಂಡಳಿ ಸಮ್ಮತಿಸಿದೆ.

ಬೆಂಗಳೂರು ನಗರದ ಹೆಸರುಘಟ್ಟ ಹುಲ್ಲುಗಾವಲಿನ ಪ್ರದೇಶವನ್ನು “ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ” ಎಂದು ಘೋಷಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಭೆ ಅಂಗೀಕಾರ ನೀಡಿದ್ದು, ಇದೂ ಕೂಡ ಬನ್ನೇರಘಟ್ಟ ಮಾದರಿಯಲ್ಲಿಯೇ ಸಂರಕ್ಷಣೆಯೊಂದಿಗೆ ಅಭಿವೃದ್ದಿ ಕಾಣಲಿದೆ.

ಹೆಸರಘಟ್ಟ ಹುಲ್ಲುಗಾವಲಿನ 356 ಎಕರೆ, ಬೈರಾಪುರ ಕೆರೆಯ 383 ಎಕರೆ, ಬೈತಾ ಕೆರೆಯ 165 ಎಕರೆ, ಹೆಸರಘಟ್ಟ ಕೆರೆಯ 1356 ಎಕರೆ ಮತ್ತು ಪಶುಸಂಗೋಪನಾ ಇಲಾಖೆಯವರ ಸ್ವಾಧೀನದಲ್ಲಿರುವ 2750 ಎಕರೆ ಸೇರಿ ಒಟ್ಟು. 5010 ಎಕರೆ ಪ್ರದೇಶವನ್ನು ವನ್ಯಜೀವಿ (ಸಂರಕ್ಷಣಾ) ಕಾಯ್ದೆ, 1972 ಸೆಕ್ಷನ್ 36ಎ ಪ್ರಕಾರ “ಗ್ರೇಟರ್ ಹೆಸರುಘಟ್ಟ ಹುಲ್ಲುಗಾವಲು ಸಂರಕ್ಷಣಾ ಮೀಸಲು ಪ್ರದೇಶ”ವನ್ನಾಗಿ ಘೋಷಿಸಲು ಸಭೆ ಸಮ್ಮತಿಸಿದೆ

2021ರ ಜನವರಿ 19ರಂದು ನಡೆದಿದ್ದ 15ನೇ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಪ್ರಸ್ತಾಪ ತಿರಸ್ಕರಿಸಲಾಗಿತ್ತು. ರಾಜ್ಯ ಹೈಕೋರ್ಟ್ ಈ ಕುರಿತು ಪುನರ್ ನಿರ್ಣಯ ಕೈಗೊಳ್ಳುವಂತೆ ಸೂಚಿಸಿತ್ತು. ಬೆಂಗಳೂರು ಕಾಂಕ್ರೀಟ್ ಕಾಡಾಗಿ ಮಾತ್ರ ಬೆಳೆಯದೆ, ಹಚ್ಚ ಹಸುರಿನ ತಾಣವಾಗಿಯೂ ಉಳಿಯಬೇಕು ಎಂಬ ಮಹತ್ವದ ಉದ್ದೇಶದಿಂದ ನಮ್ಮ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎನ್ನುವುದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನೀಡುವ ವಿವರಣೆ.

ಇದು ಅರಣ್ಯ ಪ್ರದೇಶ ಎಂದು ಅಧಿಕೃತವಾಗಿ ಘೋಷಣೆಯಾದರೆ ಯಾವುದೇ ಅಭಿವೃದ್ದಿಗೆ ಹೆಚ್ಚಿನ ಒತ್ತು ಇರುವುದಿಲ್ಲ. ಸಂರಕ್ಷಿತ ಪ್ರದೇಶವಾಗಲಿದೆ. ಹಸಿರು ಪ್ರದೇಶವಾಗಿ ಮಾರ್ಪಡಲಿದೆ.

ಶೆಟ್ಟಿಹಳ್ಳಿ ಗಡಿ ಸಮಸ್ಯೆ ಪರಿಹಾರ

ಭದ್ರಾವತಿ ವಿಭಾಗದ ಚೋರಡೇನಹಳ್ಳಿ ರಾಜ್ಯ ಅರಣ್ಯ ಮತ್ತು ಕಾಯಿತೊಟ್ಲು ಕಿರು ಅರಣ್ಯ ಪ್ರದೇಶಗಳನ್ನು ಭದ್ರಾ ಹುಲಿ ಸಂರಕ್ಷಿತ ಪ್ರದೇಶದ ಬಫರ್ ಪ್ರದೇಶಕ್ಕೆ ಸೇರಿಸಲು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ವನ್ಯಜೀವಿ ಮಂಡಳಿ ಸಮ್ಮತಿಸಿದೆ

ಇದರ ಜೊತೆಗೆ ಶಿವಮೊಗ್ಗ ನಗರದ ಜನರ ಹಿತ ಕಾಯುವ ನಿಟ್ಟಿನಲ್ಲಿ ಶೆಟ್ಟಿಹಳ್ಳಿ ಅಭಯಾರಣ್ಯದ ಗಡಿಯ ಪರಿಷ್ಕೃತ ಪ್ರಸ್ತಾವನೆ ಪರಿಶೀಲಿಸಿ ಒಟ್ಟು 395.64 ಚದರ ಕಿಲೋ ಮೀಟರ್ ಗೆ ನಿಗದಿ ಪಡಿಸಲಾಗಿದ್ದು, ಇದಕ್ಕೆ ಮಂಡಳಿ ತನ್ನ ಅಂಗೀಕಾರ ನೀಡಿದ್ದು, ಕೇಂದ್ರೀಯ ವನ್ಯಜೀವಿ ಮಂಡಳಿಗೆ ಪ್ರಸ್ತಾವನೆ ಸಲ್ಲಿಸುವ ತೀರ್ಮಾನವೂ ಆಗಿದೆ. ಇದರಿಂದ ಶಿವಮೊಗ್ಗ ಜನತೆಗೆ ಎದುರಾಗಿದ್ದ ಅರಣ್ಯ ಗಡಿ ಸಮಸ್ಯೆಗೆ ಪರಿಹಾರ ಸಿಗಬಹುದು.

ಕಪ್ಪತ್ತಗುಡ್ಡ ಗಣಿಗಾರಿಕೆ ಪ್ರಸ್ತಾಪ ಮುಂದೂಡಿಕೆ

ಗದಗ ಜಿಲ್ಲೆ ಕಪ್ಪತ್ತಗುಡ್ಡ ವನ್ಯಜೀವಿಧಾಮದ 10 ಕಿ.ಮೀ ವ್ಯಾಪ್ತಿಯಲ್ಲಿನ ಗಣಿಗಾರಿಕೆ ಪ್ರಸ್ತಾವನೆಗಳಿಗೆ ಅವಕಾಶ ಕೋರಿದ್ದ ಒಟ್ಟು 28 ಪ್ರಸ್ತಾವನೆಗಳನ್ನು ಮುಂದೂಡಲು ರಾಜ್ಯ ವನ್ಯಜೀವಿ ಮಂಡಳಿ ಸಭೆ ನಿರ್ಧರಿಸಿದೆ

ಕಪ್ಪತ್ತಗುಡ್ಡ ವನ್ಯಜೀವಿಧಾಮದ 1 ಕಿ.ಮೀ ವ್ಯಾಪ್ತಿಯಲ್ಲಿ ಚಾಲನೆಯಲ್ಲಿರುವ ಅನಧಿಕೃತ ಗಣಿಗಾರಿಕೆಗಳಿಗೆ ಗಣಿಗಾರಿಕೆಯನ್ನು ಸ್ಥಗಿತಗೊಳಿಸಲು ನೋಟೀಸ್ ನೀಡುವಂತೆ ಸೂಚಿಸಲಾಗಿತ್ತು. ಈ ಬಗ್ಗೆ ಪರಿಶೀಲಿಸಿ, ಅನಧಿಕೃತ ಗಣಿಗಾರಿಕೆಗಳ ಕುರಿತು ವಾಸ್ತವಾಂಶದ ವರದಿ ನೀಡುವಂತೆ ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶ ಮತ್ತು ಕಾನೂನಿನ ಅಂಶಗಳನ್ನು ಒಳಗೊಂಡ ವರದಿಯೊಂದಿಗೆ ಮೇಲ್ಕಂಡ ಪ್ರಸ್ತಾವನೆಗಳನ್ನು ಮುಂದಿನ ರಾಜ್ಯ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಮರು ಮಂಡಿಸಲು ಸೂಚಿಸಲಾಗಿತ್ತು.ಅದರಂತೆ ಇಂದು ಈ ಪ್ರಸ್ತಾಪ ಮಂಡನೆಯಾಯಿತು. ಆದರೆ ಈ ಪ್ರಸ್ತಾವನೆ ಮುಂದೂಡಲುಇರುವ ತೀರ್ಮಾನಿಸಲಾಯಿತು ಎಂಬುದು ಸಚಿವ ಈಶ್ವರ ಖಂಡ್ರೆ ನೀಡಿದ ಸ್ಪಷ್ಟನೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ