logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore News: ಮುಂಗಾರು ಮಳೆಗೆ ಬಿಬಿಎಂಪಿ ಸಿದ್ದತೆ, ರಸ್ತೆ ಗುಂಡಿಗೆ ಮುಕ್ತಿ, ಎಂಜಿನಿಯರ್‌ಗಳಿಗೆ ಜವಾಬ್ದಾರಿ ನಿಗದಿ

Bangalore News: ಮುಂಗಾರು ಮಳೆಗೆ ಬಿಬಿಎಂಪಿ ಸಿದ್ದತೆ, ರಸ್ತೆ ಗುಂಡಿಗೆ ಮುಕ್ತಿ, ಎಂಜಿನಿಯರ್‌ಗಳಿಗೆ ಜವಾಬ್ದಾರಿ ನಿಗದಿ

Umesha Bhatta P H HT Kannada

Apr 23, 2024 07:11 AM IST

ಬೆಂಗಳೂರಿನಲ್ಲಿ ಮುಂಗಾರು ಮಳೆಗೆ ಸಿದ್ದತೆ ಆರಂಭಿಸಿರುವ ಬಿಬಿಎಂಪಿ.

    • Monsoon ಬೆಂಗಳೂರಿನಲ್ಲಿ ಮುಂಗಾರು ಮಳೆಗೆ ಈಗಿನಿಂದಲೇ ಸಿದ್ದತೆ ಶುರುವಾಗಿದೆ. ಬಿಬಿಎಂಪಿ ರಸ್ತೆ ಗುಂಡಿ ಮುಚ್ಚುವ, ರಾಜಕಾಲುವೆ ಸ್ವಚ್ಛಗೊಳಿಸುವ ಕೆಲಸ ಶುರು ಮಾಡಿದೆ.
    • (ವರದಿ: ಎಚ್.ಮಾರುತಿ. ಬೆಂಗಳೂರು)
ಬೆಂಗಳೂರಿನಲ್ಲಿ ಮುಂಗಾರು ಮಳೆಗೆ ಸಿದ್ದತೆ ಆರಂಭಿಸಿರುವ ಬಿಬಿಎಂಪಿ.
ಬೆಂಗಳೂರಿನಲ್ಲಿ ಮುಂಗಾರು ಮಳೆಗೆ ಸಿದ್ದತೆ ಆರಂಭಿಸಿರುವ ಬಿಬಿಎಂಪಿ.

ಬೆಂಗಳೂರು: ಮುಂಗಾರು ಮಳೆ ಪ್ರಾರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎರಡು ವಾರಗಳ ಸ್ವಚ್ಛತಾ ಆಂದೋಲನವನ್ನು ಆರಂಭಿಸಿದೆ.

ಟ್ರೆಂಡಿಂಗ್​ ಸುದ್ದಿ

Elephant Census2024: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೇ 23ರಿಂದ ಆನೆಗಣತಿಗೆ ಸಿದ್ದತೆ, ಕರ್ನಾಟಕದಲ್ಲೂ ತಯಾರಿ, ಏನಿದರ ವಿಶೇಷ

ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದಿಲ್ಲ; ಲೋಕಸಭಾ ಚುನಾವಣೆ ಫಲಿತಾಂಶ ತನಕ ಬರುವ ನಿರೀಕ್ಷೆಯೂ ಇಲ್ಲ, ಎಸ್‌ಐಟಿ ಮೂಲ ಹೇಳಿಕೆ

ಬಿಬಿಎಂಪಿಗೆ 10 ವರ್ಷದ ಹಿಂದೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕಾವೇರಿ 5 ನೇ ಹಂತದಲ್ಲಿ ನೀರಿನ ಸಂಪರ್ಕ, ಅಧಿಕಾರಿಗಳಿಗೆ ಜಲಮಂಡಳಿ ಸೂಚನೆ

Anjali Murder Case; ಹುಬ್ಬಳ್ಳಿಯಲ್ಲಿ ನೇಹಾ ಹತ್ಯೆ ನೆನಪು ಮಾಸುವ ಮೊದಲೇ 20 ವರ್ಷದ ಅಂಜಲಿಯ ಭೀಕರ ಹತ್ಯೆ, 10 ಅಂಶಗಳ ವಿವರ ವರದಿ

ರಸ್ತೆ ಮತ್ತು ಪಾದಚಾರಿ ರಸ್ತೆಗಳ ಮೇಲಿರುವ ಕಸ ಎತ್ತುವುದು, ರಾಜಕಾಲುವೆಗಳಲ್ಲಿ ಹೂಳೆತ್ತುವುದು, ಚರಂಡಿ ಸ್ವಚ್ಛತೆ ಮಾಡಲಿದೆ.ಮುಂಗಾರು ಮಳೆ ಆರಂಭವಾಗುವ ಮುನ್ನ ಸ್ವಚ್ಛತೆಯನ್ನು ಹಮ್ಮಿಕೊಳ್ಳುವುದು ಸಾಮಾನ್ಯ ಪ್ರಕ್ರಿಯೆಯಾದರೂ ಈ ಬಾರಿ ಲೋಕಸಭಾ ಚುನಾವಣೆಗೆ ತಳುಕು ಹಾಕಿಕೊಂಡಿದೆ.ಈ ಸ್ವಚ್ಛತಾ ಕಾರ್ಯ ಮುಖ್ಯ ಎಂಜಿನಿಯರ್‌ ಗಳ ನೇತೃತ್ವದಲ್ಲಿ ನಡೆಯಲಿದ್ದು, ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ವಿಲೇವಾರಿ ರಸ್ತೆ ಗುಂಡಿ ರಿಪೇರಿ, ಚರಂಡಿಗಳ ದುರಸ್ತಿ ಸೇರಿದಂತೆ ಎಲ್ಲ ಕೆಲಸಗಳನ್ನು ಹಂಚಿಕೆ ಮಾಡಲಾಗಿದೆ. ಯಾರು ಯಾವ ಕೆಲಸ ಮಾಡಬೇಕೆಂದು ಆಂತರಿಕ ಜ್ಞಾಪನಾ ಪತ್ರದಲ್ಲಿ ಜವಾಬ್ಧಾರಿಯನ್ನು ನಿಗದಿಪಡಿಸಲಾಗಿದೆ.

ಸ್ವಚ್ಛತಾ ಕಾರ್ಯಕ್ರಮದ ಛಾಯಾಚಿತ್ರಗಳು ಮತ್ತು ಸ್ವಚ್ಛತೆ ನಡೆಯುತ್ತಿರುವ ಸ್ಥಳದ ಲೋಕೇಶನ್ ಅನ್ನು ಪ್ರತಿದಿನ ಹಂಚಿಕೊಳ್ಳಬೇಕು ಎಂದು ಎಂಜಿನಿಯರ್ ಗಳಿಗೆ ಸೂಚಿಸಲಾಗಿದೆ.ನಾಗರಿಕ ಮೂಲಸೌಕರ್ಯಗಳನ್ನು ನಿರ್ವಹಿಸುವುದು ಬಿಬಿಎಂಪಿಯ ಸಾಮಾನ್ಯ ಜವಾಬ್ದಾರಿಯಾಗಿದೆ. ರಾಜ ಕಾಲುವೆ, ಕೆರೆ, ರಸ್ತೆ ಮತ್ತು ಒಳ ಚರಂಡಿಗಳ ಸ್ವಚ್ಛತೆಯನ್ನು ತುರ್ತು ಆದ್ಯತೆ ಎಂದು ಪರಿಗಣಿಸಿ ಈ ಅಭಿಯಾನವನ್ನು ಹಮ್ಮಿಕೊಂಡಿದೆ.

ರಸ್ತೆ ಗುಂಡಿ ಮುಚ್ಚುವ ಕೆಲಸ

ವಾರ್ಡ್‌ಮಟ್ಟದಲ್ಲಿ ರಾಜಕಾಲುವೆಗಳ ಸಂಪರ್ಕ ಚರಂಡಿಗಳಲ್ಲಿ ಹೂಳೆತ್ತುವುದು, ರಸ್ತೆ ಬದಿಯಲ್ಲಿ ಶೇಖರಣೆಯಾಗುವ ಘನತ್ಯಾಜ್ಯ ವಿಲೇವಾರಿ ಮಾಡುವುದು, ರಸ್ತೆ ಗುಂಡಿ, ಚರಂಡಿಗಳನ್ನು ದುರಸ್ತಿಪಡಿಸುವುದು,ರಾಜಕಾಲುವೆಗಳ ಸಂಪರ್ಕ ಚರಂಡಿ, ಸೂಕ್ಷ್ಮ, ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೂಳೆತ್ತುವುದು ವಲಯ ಮುಖ್ಯ ಎಂಜಿನಿಯರ್ ರವರ ಜವಾಬ್ದಾರಿ ಎನ್ನುವುದನ್ನು ತಿಳಿಸಲಾಗಿದೆ.

ರಸ್ತೆ ಗುಂಡಿಗಳನ್ನು ದುರಸ್ತಿಪಡಿಸುವುದು, ಕಟ್ಟಡ ತ್ಯಾಜ್ಯ ತೆರವುಗೊಳಿಸುವುದು, ಮುಖ್ಯ ಮತ್ತು ಉಪಮುಖ್ಯ ರಸ್ತೆಗಳ ಚರಂಡಿ ಸ್ವಚ್ಛತೆ, ಯಂತ್ರಗಳಿಂದ ರಸ್ತೆ ಕಸವನ್ನು ತೆಗೆಯುವುದು, ಮೇಲ್ಸೇತುವೆ ಮತ್ತು ಕೆಳಸೇತುವೆಗಳಲ್ಲಿ ನೀರು ನಿಲ್ಲುವುದಿಲ್ಲ ಎಂಬ ಪ್ರಮಾಣಪತ್ರ ಸಲ್ಲಿಸುವುದು ರಸ್ತೆ ಮೂಲಸೌಕರ್ಯ ಮುಖ್ಯ ಎಂಜಿನಿಯರ್‌ ಕೆಲಸ.

ಬೃಹತ್‌ ನೀರುಗಾಲುವೆ ಮುಖ್ಯ ಎಂಜಿನಿಯರ್‌ ರವರು ರಾಜಕಾಲುವೆಗಳ ನಿರ್ವಹಣೆ, ನೀರು ಸರಾಗವಾಗಿ ಹರಿಯುವಂತೆ ಸೇತುವೆ ಮತ್ತು ಅಡಿಗಾಲುವೆಗಳನ್ನು ಸ್ವಚ್ಛಗೊಳಿಸುವುದು, ತುರ್ತು ಸಂದರ್ಭಗಳಿಗೆ ಗುತ್ತಿಗೆದಾರರು ಸರ್ವಸನ್ನದ್ಧರಾಗಿ ಇರುವಂತೆ ನಿಗಾ ವಹಿಸುವುದು, ರಾಜಕಾಲುವೆಗಳಿಗೆ ಘನತ್ಯಾಜ್ಯ ಹಾಕುತ್ತಿರುವ ಸ್ಥಳಗಳನ್ನು ಗುರುತಿಸಿ ಘನತ್ಯಾಜ್ಯ ವಿಭಾಗ ಮುಖ್ಯ ಎಂಜಿನಿಯರ್‌ ಅವರಿಗೆ ತಿಳಿಸುವುದು ಕಡ್ಡಾಯ.

ಕೆರೆಗಳತ್ತಲೂ ಗಮನ

ಕೆರೆಗಳನ್ನು ಸಂಪರ್ಕಿಸುವ ಮತ್ತು ಕೆರೆಗಳಿಂದ ಹೊರ ಹೋಗುವ ರಾಜಕಾಲುವೆಗಳನ್ನು ಸ್ವಚ್ಛಗೊಳಿಸುವುದು, ಕೆರೆಗಳಲ್ಲಿ ಶೇಖರಣೆಯಾಗಿರುವ ಮತ್ತು ಶೇಖರಣೆಯಾಗಬಹುದಾದ ನೀರಿನ ಸಾಮರ್ಥ್ಯ ನಿರ್ವಹಣೆ ಮತ್ತು ಕೆರೆಗಳಲ್ಲಿ ಬೆಳೆದಿರುವ ಲಂಟಾನ ಗಿಡಗಳನ್ನು ತೆಗೆಸುವುದು ಕೆರೆಗಳ ವಿಭಾಗದ ಮುಖ್ಯ ಎಂಜಿನಿಯರ್ ಪ್ರಮುಖ ಕೆಲಸ ಎನ್ನುವ ಸೂಚನೆ ನೀಡಲಾಗಿದೆ.

ಪ್ರಮುಖ ಪ್ರದೇಶ, ರಸ್ತೆಗಳಲ್ಲಿ ನೀರು ನಿಲ್ಲುವುದನ್ನು ತಡೆಯುವುದು ಕೇಂದ್ರ ವಿಭಾಗದ ಮುಖ್ಯ ಎಂಜಿನಿಯರ್ ಕೆಲಸವಾದರೆ ಘನತ್ಯಾಜ್ಯ ಸಂಗ್ರಹ ಮತ್ತು ಸಾಗಣೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಮತ್ತು ರಾಜಕಾಲುವೆಗಳಿಗೆ ಘನತ್ಯಾಜ್ಯ ಹಾಕುವುದನ್ನು ತಡೆಗಟ್ಟುವುದನ್ನು ಘನತ್ಯಾಜ್ಯ ಮುಖ್ಯ ಎಂಜಿನಿಯರ್‌ ನಿರ್ವಹಿಸಬೇಕಾಗಿರುತ್ತದೆ.

ಹಣಕಾಸಿನ ಹಂಚಿಕೆ

ಈ ಕಾಮಗಾರಿಗಳಿಗೆ ಹಣಕಾಸಿನ ಕೊರತೆ ಇರುವುದಿಲ್ಲ. 2024-25ರ ಬಜೆಟ್ ನಲ್ಲಿ ರಸ್ತೆಗಳ ನಿರ್ವಹಣೆಗೆ 47.85 ಕೋಟಿ ರೂ.ಮೇಲ್ಸೇತುವೆ, ಸೇತುವೆ ಸಬ್ ವೇ ಗಳ ರಿಪೇರಿಗೆ ರೂಪಾಯಿ 31.29 ಕೋಟಿ, ವಾರ್ಡ್ ರಸ್ತೆಗಳ, ಪಾದಚಾರಿ ರಸ್ತೆ ಮತ್ತು ರಸ್ತೆ ಬದಿಯ ಚರಂಡಿಗಳ ರಿಪೇರಿಗೆ 181 ಕೋಟಿ ರೂಪಾಯಿ ನಿಗದಿಪಡಿಸಲಾಗಿದೆ. ರಾಜಕಲುವೆಗಳ ನಿರ್ವಹಣೆಗಾಗಿಯೇ ಪ್ರತ್ಯೇಕವಾಗಿ 36.40 ಕೋಟಿ ರೂ. ನಿಗದಿಪಡಿಸಲಾಗಿದೆ.

(ವರದಿ: ಎಚ್. ಮಾರುತಿ, ಬೆಂಗಳೂರು)

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ