ಕನ್ನಡ ಸುದ್ದಿ  /  ಮನರಂಜನೆ  /  Coolie Teaser: ಚಿನ್ನದ ಚೈನ್‌, ನಾಣ್ಯದಲ್ಲೇ ಹೊಡೆದಾಟ; ರಜನಿಕಾಂತ್‌ ಕೂಲಿ ಟೀಸರ್‌ ಬಿಡುಗಡೆ, ತಲೈವಾ ಅಟ್ಟಹಾಸಕ್ಕೆ ಪ್ರೇಕ್ಷಕ ಅಚ್ಚರಿ

Coolie teaser: ಚಿನ್ನದ ಚೈನ್‌, ನಾಣ್ಯದಲ್ಲೇ ಹೊಡೆದಾಟ; ರಜನಿಕಾಂತ್‌ ಕೂಲಿ ಟೀಸರ್‌ ಬಿಡುಗಡೆ, ತಲೈವಾ ಅಟ್ಟಹಾಸಕ್ಕೆ ಪ್ರೇಕ್ಷಕ ಅಚ್ಚರಿ

Coolie: ರಜನಿಕಾಂತ್‌ ಇದೇ ಮೊದಲ ಬಾರಿಗೆ ಲೋಕೇಶ್‌ ಕನಕರಾಜು ನಿರ್ದೇಶನದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕೂಲಿ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಈ ಟೀಸರ್‌ನಲ್ಲಿ ಚಿನ್ನದ ನಾಣ್ಯಗಳು, ಚಿನ್ನದ ಬಿಸ್ಕಿತ್‌ಗಳು, ಚಿನ್ನದ ಚೈನ್‌ಗಳಲ್ಲಿಯೇ ಹೊಡೆದಾಟ ನಡೆಯುತ್ತಿದೆ. ತಲೈವಾನ ನಗು ಪ್ರೇಕ್ಷಕರಿಗೆ ಮೋಡಿ ಮಾಡುವಂತೆ ಇದೆ.

Coolie teaser: ಚಿನ್ನದ ಚೈನ್‌, ನಾಣ್ಯದಲ್ಲೇ ಹೊಡೆದಾಟ; ರಜನಿಕಾಂತ್‌ ಕೂಲಿ ಟೀಸರ್‌
Coolie teaser: ಚಿನ್ನದ ಚೈನ್‌, ನಾಣ್ಯದಲ್ಲೇ ಹೊಡೆದಾಟ; ರಜನಿಕಾಂತ್‌ ಕೂಲಿ ಟೀಸರ್‌

ರಜನಿಕಾಂತ್‌ 171ನೇ ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇದೇ ಮೊದಲ ಬಾರಿಗೆ ನಿರ್ದೇಶಕ ಲೋಕೇಶ್‌ ಕನಕರಾಜು ಜತೆ ರಜನಿಕಾಂತ್‌ ನಟಿಸುತ್ತಿದ್ದಾರೆ. ಸೋಮವಾರ ಎಕ್ಸ್‌ನಲ್ಲಿ ಲೋಕೇಶ್‌ ಕನಕರಾಜು ಅವರು ಕೂಲಿ ಸಿನಿಮಾದ ಟೈಟಲ್‌ ಟೀಸರ್‌ ಬಿಡುಗಡೆ ಮಾಡಿದ್ದಾರೆ. ಈ ಹಿಂದೆ ಈ ಸಿನಿಮಾಕ್ಕೆ ತಲೈವಾ 171 ಹೆಸರಿಡಲಾಗಿತ್ತು. ಇದೀಗ ರಜನಿಕಾಂತ್‌ 171ನೇ ಸಿನಿಮಾದ ಹೆಸರು ಕೂಲಿ ಎಂದು ಘೋಷಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಲೋಕೇಶ್‌ ಕನಕರಾಜು ನಿರ್ದೇಶನದ ಸಿನಿಮಾ

ಈ ಸಿನಿಮಾದ ಪುಟ್ಟ ಟೀಸರ್‌ ಪ್ರೇಕ್ಷಕರಿಗೆ ಅಚ್ಚರಿ ತಂದಿದೆ. ಚಿನ್ನದ ನಾಣ್ಯ, ಚಿನ್ನದ ಬಿಸ್ಕಿತ್‌, ಚಿನ್ನದ ಚೈನ್‌ಗಳೇ ತುಂಬಿರುವ ಫ್ಯಾಕ್ಟರಿಯಲ್ಲಿ ಕೆಲಸಗಾರರು, ಗೂಂಡಗಳು ಇರುತ್ತಾರೆ. ಆಆ ಸಮಯದಲ್ಲಿ ಒಬ್ಬರಿಗೆ "ಫ್ಯಾಕ್ಟರಿಗೆ ಅನಾಮಿಕ ವ್ಯಕ್ತಿಯೊಬ್ಬ ಭದ್ರತೆಯನ್ನು ಉಲ್ಲಂಘಿಸಿ ಎಂಟ್ರಿ ನೀಡಿದ್ದಾನೆ" ಎಂಬ ಕಾಲ್‌ ಬರುತ್ತದೆ. ಎಚ್ಚರಿಕೆಯಿಂದ ಇರಿ ಎಂಬ ಕರೆಯನ್ನು ಸ್ವೀಕರಿಸಿದ ಒಬ್ಬ ವ್ಯಕ್ತಿ ಚಿನ್ನದ ದೊಡ್ಡ ಸರಪಣಿಯನ್ನೇ ಎಳೆದುಕೊಂಡು ಹೋಗುತ್ತಾನೆ. ಬಾಗಿಲು ತೆಗೆದು ಹೊರಕ್ಕೆ ಹೋದ ಆತನಿಗೆ ಹೊಡೆಯುವ ಸದ್ದು ಕೇಳಿಸುತ್ತದೆ. ಉಳಿದವರು ಕೈಗೆ ಸಿಕ್ಕ ಚಿನ್ನದ ವಸ್ತುಗಳೊಂದಿಗೆ ಬರುತ್ತಾರೆ. ಆಗ ಕಿಂಡಿಯಲ್ಲಿ ಎರಡು ಕಣ್ಣುಗಳು ಕಾಣಿಸುತ್ತವೆ. ಅಲ್ಲಿ ರಜನಿಕಾಂತ್‌ ತನ್ನದೇ ಶೈಲಿಯಲ್ಲಿ ಪೋಸ್‌ ನೀಡುತ್ತಾರೆ.

ಇದಾದ ಬಳಿಕ ರಜನಿಕಾಂತ್‌ ಚಿನ್ನದ ಸರಪಣಿಯನ್ನು ಆ ಕೆಲಸಗಾರನ ಕೊರಳಿಗೆ ಹಾಕಿ ಎಳೆದುಕೊಂಡು ಬರುತ್ತಾನೆ. ಉಳಿದವರ ಜತೆ ಫೈಟಿಂಗ್‌ ಮಾಡುತ್ತಾನೆ. ಈ ಟೀಸರ್‌ ಸಂಪೂರ್ಣವಾಗಿ ಬ್ಲ್ಯಾಕ್‌ ಆಂಡ್‌ ವೈಟ್‌ನಲ್ಲಿದೆ. ಕೇವಲ ಚಿನ್ನದ ಬಣ್ಣ ಮಾತ್ರ ಕಾಣಿಸುತ್ತದೆ.

ಕೂಲಿ ಸಿನಿಮಾದ ಟೀಸರ್‌ಗೆ ನೆಟ್ಟಿಗರ ಪ್ರತಿಕ್ರಿಯೆ

ಲೋಕೇಶ್‌ + ಅನಿರುದ್ಧ್‌ + ರಜನಿ= ಬ್ಲಾಕ್‌ಬಸ್ಟರ್‌ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ತಲೈವರ್‌ ನಗುವಿನ ಅಂತಿಮ ದೃಶ್ಯವಂತೂ ಅದ್ಭುತ ಎಂದು ಇನ್ನೊಬ್ಬರು ಕಾಮೆಂಟ್‌ ಮಾಡಿದ್ದಾರೆ. ಹಿನ್ನೆಲೆ ಮ್ಯೂಸಿಕ್‌ ಸಖತ್‌ ಇದೆ ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಕೆಲವೊಂದು ಅನಿರೀಕ್ಷಿತ ಡೈಲಾಗ್‌ಗಳು ಇವೆ ಎಂದು ಇನ್ನೊಬ್ಬರು ಹೇಳಿದ್ದಾರೆ. ಈ ಸಿನಿಮಾ ಚಿತ್ರಮಂದಿರಗಳಲ್ಲಿ ಸೂಪರ್‌ಹಿಟ್‌ ಆಗೋದು ಗ್ಯಾರಂಟಿ ಎಂದು ಇನ್ನೊಬ್ಬರು ಷರಾ ಬರೆದಿದ್ದಾರೆ.

ತಲೈವರ್‌ 171ರ ಕುರಿತು

ಇದು ಲೋಕೇಶ್‌ ಕನಕರಾಜು ನಿರ್ದೇಶನದಲ್ಲಿ ರಜನಿಕಾಂತ್‌ ನಟಿಸುತ್ತಿರುವ ಮೊದಲ ಸಿನಿಮಾವಾಗಿದೆ. ಸನ್‌ ಫಿಕ್ಚರ್ಸ್‌ ನಿರ್ಮಾಣದ ಈ ಸಿನಿಮಾವನ್ನು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಘೋಷಿಸಲಾಗಿತ್ತು. ಈ ಸಿನಿಮಾದಲ್ಲಿ ಶಿವ ಕಾರ್ತಿಕೇಯನ್‌ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಯಾರೆಲ್ಲ ನಟಿಸಲಿದ್ದಾರೆ ಎನ್ನುವುದನ್ನು ಗೌಪ್ಯವಾಗಿಡಲಾಗಿತ್ತು. ಇದೀಗ ರಜನಿಕಾಂತ್‌ ಕೂಲಿಯಾಗಿ ಅಬ್ಬರಿಸಿದ್ದು ನೋಡಿ ಅಭಿಮಾನಿಗಳು ಅಚ್ಚರಿಗೊಂಡಿದ್ದಾರೆ. ಅನಿರುದ್ಧ್‌ ರವಿಚಂದರ್‌ ಸಂಕಲನ ಮತ್ತು ಅನುಭೈರವ್‌ ಸಾಹಸ ನಿರ್ದೇಶನವಿರಲಿದೆ. ಇದರಿಂದ ಸಿನಿಮಾದ ಕುರಿತು ನಿರೀಕ್ಷೆ ಹೆಚ್ಚಾಗಿದೆ.

ರಜನಿಕಾಂತ್‌ ಮುಂಬರುವ ಸಿನಿಮಾಗಳು

ಇತ್ತೀಚೆಗೆ ತನ್ನ ಮಗಳು ಐಶ್ವರ್ಯಾ ನಿರ್ದೇಶನದ ಲಾಲ್‌ ಸಲಾಮ್‌ ಸಿನಿಮಾದಲ್ಲಿ ರಜನಿಕಾಂತ್‌ ನಟಿಸಿದ್ದರು. ಇದೀಗ ಟಿಜೆ ಜ್ಞಾನವೇಲ್‌ ನಿರ್ದೇಶನದ ವೆಟ್ಟಯನ್‌ ಸಿನಿಮಾದ ಶೂಟಿಂಗ್‌ನಲ್ಲಿದ್ದಾರೆ. ವೆಟೈಯನ್‌ ಸಿನಿಮಾದಲ್ಲಿ ಅಮಿತಾಬ್‌ ಬಚ್ಚನ್‌, ಫಹಾದ್‌ ಫಾಸಿಲ್‌, ರಾಣಾ ದಗ್ಗುಬಾಟಿ ಮುಂತಾದವರಿದ್ದಾರೆ.

2022ರಲ್ಲಿ ಲೋಕೇಶ್‌ ಕನಕರಾಜು ಅವರು ಕಮಲ್‌ ಹಾಸನ್‌ ಜತೆ ವಿಕ್ರಂ ಸಿನಿಮಾದಲ್ಲಿ ಮಿಂಚಿದ್ದರು. 2023ರಲ್ಲಿ ಲಿಯೋ ಸಿನಿಮಾವನ್ನು ವಿಜಯ್‌ ಜತೆ ಮಾಡಿದ್ದರು. ಕೈತಿ 2 ಎಂಬ ಕಾರ್ತಿ ಸಿನಿಮಾಕ್ಕೂ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ.

IPL_Entry_Point