logo
ಕನ್ನಡ ಸುದ್ದಿ  /  ಕರ್ನಾಟಕ  /  Ksrtc Cargo Trucks: ಮನೆಗೆ ಬರಲಿದೆ ಕೆಎಸ್‌ಆರ್‌ಟಿಸಿ ಕಾರ್ಗೋ ಟ್ರಕ್‌ : 20 ಟ್ರಕ್‌ ಖರೀದಿ, ಶನಿವಾರ ಸೇವೆ ಆರಂಭ

KSRTC Cargo Trucks: ಮನೆಗೆ ಬರಲಿದೆ ಕೆಎಸ್‌ಆರ್‌ಟಿಸಿ ಕಾರ್ಗೋ ಟ್ರಕ್‌ : 20 ಟ್ರಕ್‌ ಖರೀದಿ, ಶನಿವಾರ ಸೇವೆ ಆರಂಭ

HT Kannada Desk HT Kannada

Dec 21, 2023 08:46 AM IST

google News

ಕೆಎಸ್‌ಆರ್‌ಟಿಸಿ ಈಗ ಕಾರ್ಗೋ ಸೇವೆಯನ್ನು ತನ್ನದೇ ಟ್ರಕ್‌ಗೆ ವಿಸ್ತರಿಸಲಿದೆ.

    • KSRTC Cargo service updates ಎರಡು ವರ್ಷದಿಂದ ಕೆಎಸ್‌ಆರ್‌ಟಿಸಿ( KSRTC) ಕಾರ್ಗೋ ಸೇವೆಯನ್ನು( Cargo service) ಜನರಿಗೆ ನೀಡುತ್ತಿದೆ. ಈಗ ಕಾರ್ಗೋ ಸೇವೆಗೆ ಪ್ರತ್ಯೇಕ ಟ್ರಕ್‌ಗಳನ್ನು ಖರೀದಿಸಿ ಸೇವೆಯನ್ನು ಒದಗಿಸಲಾಗುತ್ತದೆ.
ಕೆಎಸ್‌ಆರ್‌ಟಿಸಿ ಈಗ ಕಾರ್ಗೋ ಸೇವೆಯನ್ನು ತನ್ನದೇ ಟ್ರಕ್‌ಗೆ ವಿಸ್ತರಿಸಲಿದೆ.
ಕೆಎಸ್‌ಆರ್‌ಟಿಸಿ ಈಗ ಕಾರ್ಗೋ ಸೇವೆಯನ್ನು ತನ್ನದೇ ಟ್ರಕ್‌ಗೆ ವಿಸ್ತರಿಸಲಿದೆ.

ಬೆಂಗಳೂರು: ಸಾರಿಗೆ ಬಸ್‌ಗಳಲ್ಲಿ ಕಾರ್ಗೋ ಸೇವೆ ನೀಡುತ್ತಿದ್ದ ಕರ್ನಾಟಕ ರಾಜ್ಯ ಸಾರಿಗೆ ನಿಗಮ( ಕೆಎಸ್‌ಆರ್‌ಟಿಸಿ) ಟ್ರಕ್‌ಗೂ ಈ ಸೇವೆ ವಿಸ್ತರಿಸಿದೆ.

ಈಗಾಗಲೇ ಕೆಲ ವರ್ಷದಿಂದ ಕರ್ನಾಟಕದ ಸಾರಿಗೆ ಬಸ್‌ಗಳು ಜನರ ಸೇವೆ ಜತೆಗೆ ಪಾರ್ಸೆಲ್‌ ಕೂಡ ಸಾಗಿಸುತ್ತಿದ್ದವು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತ ನಂತರ ಕಾರ್ಗೊ ಸೇವೆಯನ್ನು ವಿಸ್ತರಿಸಲಾಗುತ್ತಿದೆ.

ಇದಕ್ಕಾಗಿಯೇ ಪ್ರತೇಕ ಕಾರ್ಗೋ ಟ್ರಕ್‌ಗಳು ಸೇವೆ ನೀಡಲಿವೆ. ಈಗಾಗಲೇ ಕೆಎಸ್‌ಆರ್‌ಟಿಸಿಯಿಂದ 20ಗಳನ್ನು ಖರೀದಿ ಮಾಡಲಾಗಿದೆ. ಡಿ. 23ರಂದು ನಮ್ಮ ಕಾರ್ಗೊ ಟ್ರಕ್‌ ಸೇವೆ ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ಆರಂಭವಾಗಲಿದೆ.

ಸಾರಿಗೆ ಬಸ್‌ಗಳಲ್ಲಿ ಯಾವುದೇ ಪಾರ್ಸೆಲ್‌ ನೀಡಿದ್ದರೆ ಅದನ್ನು ನಿಗದಿತ ಬಸ್‌ ನಿಲ್ದಾಣಕ್ಕೆ ಆಗಮಿಸಿಯೇ ಪಡೆಯಬೇಕಿತ್ತು. ಮನೆಗೆ ಇಲ್ಲವೇ ನಿಗದಿತ ವಿಳಾಸಕ್ಕೆ ತಲುಪಿಸುವ ವ್ಯವಸ್ಥೆ ಕೆಎಸ್‌ಆರ್‌ಟಿಸಿಯಲ್ಲಿ ಇರಲಿಲ್ಲ. ಸಿಬ್ಬಂದಿಗೂ ಇದು ಸಾಧ್ಯವಾಗುತ್ತಿರಲಿಲ್ಲ.

ಆದರೆ ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ವಿಶ್ವಾಸಾರ್ಹವಾಗಿ ಬೆಳೆದಿದೆ. ಹೆಚ್ಚಿನ ಪ್ರಮಾಣದಲ್ಲಿ ಜನ ಇದನ್ನು ಬಳಸುತ್ತಿರುವುದರಿಂದ ಇದಕ್ಕೆ ಇನ್ನಷ್ಟು ವಿಸ್ತೃತ ರೂಪದೊಂದಿಗೆ ಸೇವೆ ನೀಡುವುದು ಕೆಎಸ್‌ಆರ್‌ಟಿಸಿ ಉದ್ದೇಶ.

ಕಾರ್ಗೋಗೆ ಪ್ರತ್ಯೇಕ ವಾಹನ ಖರೀದಿಸಿ ನಿಗದಿತ ಸ್ಥಳಗಳಿಗೆ ಪಾರ್ಸೆಲ್‌ ಅನ್ನು ತಲುಪಿಸುವ ಕೆಲಸ ಇನ್ನು ಕೆಎಸ್‌ಆರ್‌ಟಿಸಿಯಿಂದ ಆಗಲಿದೆ. ಬಸ್‌ನಲ್ಲಿರುವ ಸೇವೆಯೂ ಯಥಾರೀತಿ ಮುಂದುವರಿಯಲಿದೆ. ಪ್ರತಿ ವರ್ಷ ನಮ್ಮ ಕಾರ್ಗೋ ಸೇವೆಯಿಂದಲೇ 100 ಕೋಟಿ ರೂ. ಆದಾಯ ಮಾಡುವ ಗುರಿಯನ್ನು ಕೆಎಸ್‌ಆರ್‌ಟಿಸಿ ಹೊಂದಿದೆ.

ಪುಣೆಯಲ್ಲಿ ಟಾಟಾ ಕಂಪೆನಿ ಮೂಲಕ ವಿಶೇಷ ವಿನ್ಯಾಸದ 20 ಟ್ರಕ್‌ಗಳನ್ನು ಮೊದಲ ಹಂತವಾಗಿ ಕೆಎಸ್‌ಆರ್‌ಟಿ ಖರೀದಿಸಿದೆ. ಗುಣಮಟ್ಟದ ಈ ಟ್ರಕ್‌ಗಳು ಪಾರ್ಸೆಲ್‌ ಅನ್ನು ಸಾಗಿಸಲು ಬೇಕಾದ ರೀತಿಯಲ್ಲಿ ವಿನ್ಯಾಸ ಮಾಡಲಾಗಿದೆ. ಇವು ಆರು ಟನ್‌ ಪಾರ್ಸೆಲ್‌ ಸಾಗಣೆ ಮಾಡಲಿವೆ. ಈಗಾಗಲೇ ಈ ಟ್ರಕ್‌ಗಳ ವಿನ್ಯಾಸವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಎಸ್‌ಆರ್‌ಟಿಸಿ ಎಂಡಿ ವಿ.ಅನ್ಬುಕುಮಾರ್‌ ಅವರು ಪರಿಶೀಲಿಸಿ ಖರೀದಿಗೂ ಅನುಮತಿ ನೀಡಿದ್ದಾರೆ.

ಕೆಎಸ್‌ಆರ್‌ಟಿಸಿ ಕಾರ್ಗೋ ಸೇವೆ ಈಗ ಮತ್ತೊಂದು ರೂಪ ಪಡೆದುಕೊಳ್ಳುತ್ತಿದೆ. ಬಸ್‌ಗಳ ಜತೆಗೆ ನಮ್ಮ ಕಾರ್ಗೋ ಟ್ರಕ್‌ಗಳೂ ಸೇವೆ ನೀಡಲಿವೆ. ನಿಲ್ದಾಣದಿಂದ ನಿಗದಿತ ಸ್ಥಳಕ್ಕ ಪಾರ್ಸೆಲ್‌ ಸಾಗಿಸುವುದು ಉದ್ದೇಶ. ಇದರ ಪ್ರತಿಕ್ರಿಯೆ ನೋಡಿಕೊಂಡು ಕಾರ್ಗೊ ಟ್ರಕ್‌ ಸೇವೆಯನ್ನು ವಿಸ್ತರಿಸಲಾಗುತ್ತದೆ ಎನ್ನುವುದು ಕೆಎಸ್‌ಆರ್‌ಟಿಸಿ ಎಂಡಿ ವಿ.ಅನ್ಬುಕುಮಾರ್‌ ವಿವರಣೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ