logo
ಕನ್ನಡ ಸುದ್ದಿ  /  ಕರ್ನಾಟಕ  /  Obituary: ಮೈಸೂರು ಆಯಿಷ್‌ ನಿವೃತ್ತ ನಿರ್ದೇಶಕ, ಹಿರಿಯ ರಂಗಕರ್ಮಿ ನ.ರತ್ನ ಬೆಂಗಳೂರಲ್ಲಿ ನಿಧನ, ಮೈಸೂರಲ್ಲಿ ಅಂತ್ಯಕ್ರಿಯೆ

obituary: ಮೈಸೂರು ಆಯಿಷ್‌ ನಿವೃತ್ತ ನಿರ್ದೇಶಕ, ಹಿರಿಯ ರಂಗಕರ್ಮಿ ನ.ರತ್ನ ಬೆಂಗಳೂರಲ್ಲಿ ನಿಧನ, ಮೈಸೂರಲ್ಲಿ ಅಂತ್ಯಕ್ರಿಯೆ

Umesha Bhatta P H HT Kannada

Jun 19, 2024 10:55 AM IST

google News

ಬೆಂಗಳೂರಿನಲ್ಲಿ ನಿಧನರಾದ ನ.ರತ್ನ.

    • Senior Artist ಹಿರಿಯ ಕಲಾವಿದರು, ವಾಕ್‌ ಮತ್ತು ಶ್ರವಣ ತಜ್ಞರೂ ಆಗಿದ್ದ ಮೈಸೂರಿನ ನ.ರತ್ನ ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. 
ಬೆಂಗಳೂರಿನಲ್ಲಿ ನಿಧನರಾದ ನ.ರತ್ನ.
ಬೆಂಗಳೂರಿನಲ್ಲಿ ನಿಧನರಾದ ನ.ರತ್ನ.

ಬೆಂಗಳೂರು: ಕರ್ನಾಟಕದ ಹಿರಿಯ ರಂಗಕರ್ಮಿ ಹಾಗೂ ಕಲಾವಿದ, ವಾಕ್‌ ಮತ್ತು ಶ್ರವಣ ತಜ್ಞರಾಗಿದ್ದ ನ.ರತ್ನ ಅವರು ಬೆಂಗಳೂರಿನಲ್ಲಿ ಬುಧವಾರ ಬೆಳಿಗ್ಗೆ ನಿಧನರಾದರು. ಮೈಸೂರಿನಲ್ಲಿ ಸಮತೆಂತೊ (ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ರಂಗ ತಂಡ ಕಟ್ಟಿ ನಿರಂತರವಾಗಿ 50 ವರ್ಷಗಳವರೆಗೆ ನಡೆಸಿಕೊಂಡು ಬಂದ ಹಿರಿಯ ರಂಗಕರ್ಮಿ ನ.ರತ್ನ ಹೃದಯಾಘಾತದಿಂದ ನಿಧನರಾದರು. ಅವರಿಗೆ 89 ವರ್ಷ ವಯಸ್ಸಾಗಿತ್ತು.

ಅವರಿಗೆ ಪುತ್ರ ಅಜಿತ್,‌ ಪುತ್ರಿ ಕವಿತಾರತ್ನ ಇದ್ದಾರೆ. ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ನಿರ್ದೇಶಕರೂ ಆಗಿದ್ದ ಅವರ ರಚನೆಯ 'ಆಯಾನ್ ಶಾಂತಿ ಕುಟೀರ' ನಾಟಕ ಈಚೆಗೆ ಮೈಸೂರಿನಲ್ಲಿ ಪ್ರದರ್ಶನಗೊಂಡಿತ್ತು. ಈ ನಾಟಕದಲ್ಲಿ ಅವರೂ ಪಾತ್ರ ನಿರ್ವಹಿಸಿದ್ದರು. ಕಳೆದ ವಾರ ನಿಧನರಾದ ಪಂ‌.ರಾಜೀವ ತಾರಾನಾಥರ ಆತ್ಮೀಯರೂ ಆಗಿದ್ದರು. ಅವರ ಅಂತ್ಯಕ್ರಿಯೆ ಮೈಸೂರಿನಲ್ಲಿ ಬುಧವಾರ ನಡೆಯಲಿದೆ.

ತಮಿಳುನಾಡಿನಿಂದ ಮೈಸೂರಿಗೆ

ಇಳಿ ವಯಸ್ಸಿನಲ್ಲೂ ಸಕ್ರಿಯವಾಗಿ ರಂಗ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದರು. ಕೆಲವೇ ದಿನಗಳ ಹಿಂದೆ ನಾಟಕವೊಂದರಲ್ಲಿ ಅಭಿನಯಿಸಿದ್ದರು. ಮೈಸೂರಿನಲ್ಲಿ ನಿಯಮಿತವಾಗಿ ಅವರ ನಾಟಕಗಳ ಪ್ರದರ್ಶನ ಇರುತ್ತಲೇ ಇತ್ತು. ದಶಕಗಳ ಹಿಂದೆಯೇ ಮೈಸೂರಿನ ಹವ್ಯಾಸಿ ರಂಗಭೂಮಿಗೆ ನವ್ಯದ ಆಯಾಮವನ್ನು ನಿರ್ಮಿಸಿದ ಕೀರ್ತಿ ಸಮೆತೆಂತೋಗೆ ಸಲ್ಲುತ್ತದೆ. ಇದರಲ್ಲಿ ನಟರಾಗಿ, ನಾಟಕಕಾರರಾಗಿ ನ.ರತ್ನ ಅವರ ಪಾಲು ದೊಡ್ಡದು.

ನ. ರತ್ನ ಎಂತಲೇ ಪರಿಚಿತರಾಗಿರುವ ನಾಟಕಕಾರ ನಟೇಶ ರತ್ನ ಅವರು ಹುಟ್ಟಿದ್ದು ತಮಿಳುನಾಡಿನ ಚಿದಂಬರಂನಲ್ಲಿಯಾದರೂ ವಿದ್ಯಾಭ್ಯಾಸ ನಡೆಸಿದ್ದು ಮಾತ್ರ ಮೈಸೂರಿನಲ್ಲಿ. ವೃತ್ತಿಯಲ್ಲಿ ವಾಕ್‌ಶ್ರವಣ ಚಿಕಿತ್ಸಾ ತಜ್ಞರಾಗಿರುವ ಇವರು ನಟರು ನಾಟಕಕಾರರು ಆಗಿದ್ದಾರೆ.

ಮೈಸೂರಲ್ಲಿ ಶಿಕ್ಷಣ

ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ, ಬಿ.ಎಡ್‌ ಪದವಿ ಪಡೆದ ಇವರು ಅಮೆರಿಕದಲ್ಲಿ ಉನ್ನತ ವ್ಯಾಸಂಗ ನಡೆಸಿದರು. ವಾಕ್‌ ಶ್ರವಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿಯನ್ನು ಗಳಿಸಿ ಮೈಸೂರಿನಲ್ಲೇ ವೃತ್ತಿ ಜೀವನ ಆರಂಭಿಸಿದ್ದರು. ನಂತರ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದರು.. ವಾಕ್ ಶ್ರವಣ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ-ಅಂಧರು ಮತ್ತು ಶ್ರವಣ ನ್ಯೂನತೆಯುಳ್ಳವರಿಗೆ ಶಿಕ್ಷಣ ನೀಡುವುನೀಡುವುದರಲ್ಲಿ ಪರಿಣತಿ ಪಡೆದರು. ಇಂಡಿಯಾನ ಸ್ಟೇಟ್ ಕಿವುಡರ ಶಾಲೆಯಲ್ಲಿ ಬೋಧಕರಾಗಿ ವೃತ್ತಿ ಜೀವನ ಶುರುಮಾಡಿದರು. ಸ್ವಲ್ಪಕಾಲ ಇಂಡಿಯಾನ ವಿಶ್ವವಿದ್ಯಾನಿಲಯದಲ್ಲಿ ವಾಕ್‌ಚಿಕಿತ್ಸಾ ತಜ್ಞ ರಾಗಿ ದುಡಿದರು. ಆದರೆ ಅವರಿಗೆ ತಾಯ್ನಾಡಿನ ಸೆಳೆತ ಇದ್ದುದರಿಂದ ಮೈಸೂರಿಗೆ ಮರಳಿದರು.

ಆಯಿಷ್‌ ಕಟ್ಟಿದ ಅನನ್ಯತೆ

ಮೈಸೂರಿನಲ್ಲಿ ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆ ಕಟ್ಟುವಲ್ಲಿ ನ.ರತ್ನ ಅವರ ಪಾತ್ರವೂ ದೊಡ್ಡದು.ವಾಕ್ ಶ್ರವಣ ನ್ಯೂನತೆಗಳನ್ನು ವಿಶ್ವವಿದ್ಯಾನಿಲಯಗಳ ಮಟ್ಟದಲ್ಲಿ ಆಧ್ಯಯನಕ್ಕೆ ಅಕಾಡಮಿಕ್ ಮಂದಿಯ ಅಂಗೀಕಾರ ಪಡೆಯುವುದರಲ್ಲಿ ರತ್ನರ ಪಾತ್ರ ಸ್ಮರಣೀಯವಾದದ್ದು ಎಂದು ಹಿರಿಯ ಪತ್ರಕರ್ತರಾಗಿದ್ದ ಜಿ.ಎನ್‌.ರಂಗನಾಥರಾವ್‌ ಅವರು ತಮ್ಮ ಲೇಖನದಲ್ಲಿ ನ.ರತ್ನ ಅವರ ಪ್ರತಿಭೆಯನ್ನು ಅನಾವರಣಗೊಳಿಸಿದ್ಧಾರೆ.

ರಂಗಭೂಮಿ ಆಕರ್ಷಣೆ

ರತ್ನ ಅವರದು ಬಹುಮುಖ ಸಾಮರ್ಥ್ಯದ ವ್ಯಕ್ತಿತ್ವ. ಮೈಸೂರಿನಲ್ಲಿ ವಾಕ್‌ಶ್ರವಣ ಸಂಸ್ಥೆಯನ್ನು ಬೆಳೆಸುತ್ತಲೇ ರಾಜಸ್ತಾನ, ಈಶಾನ್ಯ ರಾಜ್ಯಗಳು ಮುಂತಾಡೆಗಳಲ್ಲೆಲ್ಲ ಸುತ್ತಿ ವಾಕ್ ಶ್ರವಣನ್ಯೂನತೆಯುಳ್ಳವರ ಶಿಕ್ಷಣಕ್ಕಾಗಿ ಶಾಲೆಗಳನ್ನು ಅಭಿವೃದ್ಧಿಪಡಿಸುವುದರಲ್ಲಿ ಶ್ರಮಿಸಿದರು. ಸಾಹಿತ್ಯ ಮತ್ತು ರಂಗಭೂಮಿಯಲ್ಲೂ ತೊಡಗಿಸಿಕೊಂಡರು.

ಹವ್ಯಾಸಿ ರಂಗಭೂಮಿಯ ಮೂಲಕ ರಂಗಭೂಮಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡ ಇವರು ಎಲ್ಲಿಗೆ, ಬೊಂತೆ, ಗೋಡೆ ಬೇಕೆ ಗೋಡೆ, ಮುಂತಾದ ನಾಟಕಗಳನ್ನು ರಚಿಸಿದ್ದಾರೆ. ರೇಡಿಯೋ ನಾಟಕಗಳನ್ನು ರಚನೆ ಮಾಡಿದ್ದಾರೆ.. ಇವರಿಗೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಎಂ.ಎನ್‌. ರಾಯ್‌ ಪ್ರಶಸ್ತಿ, ಬಿ.ವಿ. ಕಾರಂತ ಪ್ರಶಸ್ತಿ, ಹೆಲನ್ ಕೆಲರ್‌ ಪ್ರಶಸ್ತಿ ಸಹಿತ ಪ್ರತಿಷ್ಠಿತ ಪ್ರಶಸ್ತಿಗಳು ನ. ರತ್ನ ಅವರಿಗೆ ಬಂದಿವೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ