logo
ಕನ್ನಡ ಸುದ್ದಿ  /  ಕರ್ನಾಟಕ  /  Threat Call To Raj Bhavan: ಬೆಂಗಳೂರು ರಾಜಭವನಕ್ಕೆ ಬಾಂಬ್‌ ಬೆದರಿಕೆ ಕರೆ: ಪೊಲೀಸರಿಂದ ಮಧ್ಯರಾತ್ರಿ ತಪಾಸಣೆ

Threat call to Raj Bhavan: ಬೆಂಗಳೂರು ರಾಜಭವನಕ್ಕೆ ಬಾಂಬ್‌ ಬೆದರಿಕೆ ಕರೆ: ಪೊಲೀಸರಿಂದ ಮಧ್ಯರಾತ್ರಿ ತಪಾಸಣೆ

HT Kannada Desk HT Kannada

Dec 12, 2023 11:54 AM IST

google News

ಬೆಂಗಳೂರಿನ ರಾಜಭವನಕ್ಕೆ ಬಾಂಬ್‌ ಬೆದರಿಕೆ ಬಂದಿದ್ದರಿಂದ ಭದ್ರತೆ ಹೆಚ್ಚಿಸಲಾಗಿದೆ.

    • bangalore Rajbhavan bomb threat ಬೆಂಗಳೂರಿನ ರಾಜಭವನಕ್ಕೆ( Bangalore Raj bhavan) ಬಾಂಬ್‌ ಇಡಲಾಗಿದೆ ಎನ್ನುವ ಕರೆ ( B̧omb cal) ಹಿನ್ನೆಲೆಯಲ್ಲಿ ತಪಾಸಣೆ ನಡೆಸಲಾಗಿದೆ. ಪ್ರಕರಣದ ಕುರಿತು ತನಿಖೆ ನಡೆದಿದೆ.
ಬೆಂಗಳೂರಿನ ರಾಜಭವನಕ್ಕೆ ಬಾಂಬ್‌ ಬೆದರಿಕೆ ಬಂದಿದ್ದರಿಂದ ಭದ್ರತೆ ಹೆಚ್ಚಿಸಲಾಗಿದೆ.
ಬೆಂಗಳೂರಿನ ರಾಜಭವನಕ್ಕೆ ಬಾಂಬ್‌ ಬೆದರಿಕೆ ಬಂದಿದ್ದರಿಂದ ಭದ್ರತೆ ಹೆಚ್ಚಿಸಲಾಗಿದೆ.

ಬೆಂಗಳೂರು: ಕಳೆದ ವಾರ ಬೆಂಗಳೂರಿನ ಕೆಲ ಖಾಸಗಿ ಶಾಲೆಗಳಿಗೆ ಬಾಂಬ್‌ ಹಾಕುವ ಬೆದರಿಕೆ ಹಾಕಿದ್ದ ಘಟನೆ ಹಸಿರುವಾಗಲೇ ಈ ಬಾರಿ ರಾಜಭವನಕ್ಕೆ ಬಾಂಬ್‌ ಇಟ್ಟಿರುವ ಕರೆ ಬಂದಿತ್ತು.

ಅನಾಮಧೇಯ ವ್ಯಕ್ತಿಯೊಬ್ಬ ಬೆಂಗಳೂರು ಪೊಲೀಸ್‌ ಕಂಟ್ರೋಲ್‌ ರೂಂಗೆ ಕರೆ ಮಾಡಿ ರಾಜಭವನದಲ್ಲಿ ಬಾಂಬ್‌ ಇಡಲಾಗಿದೆ ಎಂದು ಬೆದರಿಕೆ ಹಾಕಿದ್ದ.

ಸೋಮವಾರ ರಾತ್ರಿ ರಾತ್ರಿ 11.30ರ ಹೊತ್ತಿಗೆ ಬೆಂಗಳೂರಿನಲ್ಲಿರುವ ರಾಷ್ಟ್ರೀಯ ತನಿಖಾ ಸಂಸ್ಥೆ(NIA) ಕಚೇರಿಯ ಕಂಟ್ರೋಲ್‌ರೂಂಗೆ ಬಂದ ಕರೆ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡು ಪೊಲೀಸರು ಕಾರ್ಯಪ್ರವೃತ್ತರಾಗಿದ್ದರು. ಈ ಮಾಹಿತಿಯನ್ನು ಎನ್‌ಐಎ ಸಿಬ್ಬಂದಿ ಕೂಡಲೇ ಬೆಂಗಳೂರು ನಗರ ಪೊಲೀಸರ ಗಮನಕ್ಕೆ ತಂದಿದ್ದರು.

ಬೆಂಗಳೂರು ನಗರ ಪೊಲೀಸರು ರಾಜಭವನದ ಭದ್ರತಾ ಸಿಬ್ಬಂದಿಗೆ ಮಾಹಿತಿ ರವಾನಿಸಿದ್ದರು. ಬಳಿಕ ಬಾಂಬ್‌ ನಿಷ್ಕ್ರಿಯ ದಳದ ಸಮೇತವೇ ರಾತ್ರಿಯೇ ರಾಜಭವನಕ್ಕೆ ತೆರಳಿ ತೀವ್ರ ತಪಾಸಣೆ ನಡೆಸಿದ್ದರು. ಆದರೆ ಯಾವುದೇ ಬಾಂಬ್‌ ರಾಜಭವನದಲ್ಲಿ ಕಂಡು ಬಂದಿರಲಿಲ್ಲ. ಬಳಿಕ ಇದೊಂದು ಹುಸಿ ಕರೆ ಎನ್ನುವುದು ಖಚಿತವಾಯಿತು.

ಈ ಸಂಬಂಧ ವಿಧಾನಸೌಧ ಠಾಣೆ ಪೊಲೀಸರು ಎನ್‌ಐಸಿ ಸಿಬ್ಬಂದಿಯಿಂದ ಕರೆ ಮಾಡಿದ ಸಂಖ್ಯೆಯ ವಿವರ ಪಡೆದಿದ್ದಾರೆ. ಈ ಕುರಿತು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದ್ದು. ಹುಸಿ ಕರೆ ಮಾಡಿದ ವ್ಯಕ್ತಿ ಸೆರೆಗೆ ಮುಂದಾಗಿದ್ಧಾರೆ.

ಸದ್ಯದ ತನಿಖೆ ಪ್ರಕಾರ ಬೀದರ್‌ ನಿಂದ ವ್ಯಕ್ತಿ ಎನ್‌ಐಎ ಕಂಟ್ರೋಲ್‌ ರೂಂಗೆ ಕರೆ ಮಾಡಿರುವುದು ಗೊತ್ತಾಗಿದೆ. ಆನಂತರ ಆತನ ಮೊಬೈಲ್‌ ಸ್ವಿಚ್‌ ಆಫ್‌ ಇದೆ. ಮೊಬೈಲ್‌ ಸಂಖ್ಯೆ ಯಾರದ್ದು. ವಿಳಾಸ ಸಂಗ್ರಹಿಸಲಾಗುತ್ತಿದೆ ಎಂದು ಪೊಲೀಸ್‌ ಮೂಲಗಳು ಖಚಿತಪಡಿಸಿವೆ.

ಈ ಕರೆ ಬಂದಾಗ ರಾಜ್ಯಪಾಲರು ಬೆಂಗಳೂರಿನಲ್ಲಿ ಇರಲಿಲ್ಲ. ಸದ್ಯ ಕಾರ್ಯಕ್ರಮ ನಿಮಿತ್ತ ರಾಜ್ಯಪಾಲರು ಬೆಳಗಾವಿಗೆ ತೆರಳಿದ್ದಾರೆ. ಹುಸಿ ಕರೆ ಕುರಿತು ತನಿಖೆ ನಡೆದಿದೆ ಎಂದು ಬೆಂಗಳೂರು ಪಶ್ಚಿಮ ಡಿಸಿಪಿ ಡಾ.ಶೇಖರ್‌ ತೆಕ್ಕಣ್ಣವರ್‌ ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ