logo
ಕನ್ನಡ ಸುದ್ದಿ  /  ಕರ್ನಾಟಕ  /  Belagavi Protest: ಬ್ರ್ಯಾಂಡ್‌ ಬೆಂಗಳೂರು ಓಕೆ, ಬ್ರ್ಯಾಂಡ್‌ ಬೆಳಗಾವಿ ಯಾಕಿಲ್ಲ; ರಾಜ್ಯದ ಎರಡನೇ ರಾಜಧಾನಿಯಲ್ಲಿ ಇಂದು ಪ್ರತಿಭಟನೆ

Belagavi Protest: ಬ್ರ್ಯಾಂಡ್‌ ಬೆಂಗಳೂರು ಓಕೆ, ಬ್ರ್ಯಾಂಡ್‌ ಬೆಳಗಾವಿ ಯಾಕಿಲ್ಲ; ರಾಜ್ಯದ ಎರಡನೇ ರಾಜಧಾನಿಯಲ್ಲಿ ಇಂದು ಪ್ರತಿಭಟನೆ

HT Kannada Desk HT Kannada

Jul 10, 2023 07:30 AM IST

google News

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಬಜೆಟ್‌ ಮಂಡನೆಗೆ ಮೊದಲು ಶುಕ್ರವಾರ (ಜುಲೈ 7) ಸಭಿಕರ ಗ್ಯಾಲರಿ ಕಡೆಗೆ ನೋಡಿ ಕೈ ಬೀಸಿದ ಸಂದರ್ಭ. (ಕಡತ ಚಿತ್ರ)

  • Belagavi Protest: ಸಿದ್ದರಾಮಯ್ಯ ನೇತೃತ್ವದ ಹೊಸ ಕಾಂಗ್ರೆಸ್‌ ಸರ್ಕಾರದ ಮೊದಲ ಬಜೆಟ್‌ ಶುಕ್ರವಾರ (ಜು.7) ಮಂಡನೆಯಾಗಿದೆ. ರಾಜಧಾನಿ ಬೆಂಗಳೂರನ್ನು ಬ್ರ್ಯಾಂಡ್‌ ಬೆಂಗಳೂರನ್ನಾಗಿ ಮಾಡಲು ಹೊರಟ ಸರ್ಕಾರ, 2ನೇ ರಾಜಧಾನಿ ಬೆಳಗಾವಿಯನ್ನೇಕೆ ಕಡೆಗಣಿಸಿದೆ ಎಂಬ ಪ್ರಶ್ನೆ ಈಗ ಸಿಎಂ ಸಿದ್ದರಾಮಯ್ಯಿಗೆ ಎದುರಾಗಿದೆ. ಇಂದು (ಜು.10) ಸಾಂಕೇತಿಕವಾಗಿ ಪ್ರತಿಭಟನೆ ಕೂಡ ನಡೆಯಲಿದೆ.

ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಬಜೆಟ್‌ ಮಂಡನೆಗೆ ಮೊದಲು ಶುಕ್ರವಾರ (ಜುಲೈ 7) ಸಭಿಕರ ಗ್ಯಾಲರಿ ಕಡೆಗೆ ನೋಡಿ ಕೈ ಬೀಸಿದ ಸಂದರ್ಭ. (ಕಡತ ಚಿತ್ರ)
ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವರು ಬಜೆಟ್‌ ಮಂಡನೆಗೆ ಮೊದಲು ಶುಕ್ರವಾರ (ಜುಲೈ 7) ಸಭಿಕರ ಗ್ಯಾಲರಿ ಕಡೆಗೆ ನೋಡಿ ಕೈ ಬೀಸಿದ ಸಂದರ್ಭ. (ಕಡತ ಚಿತ್ರ)

ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯ (Karnataka CM Siddaramaiah) ಅವರು ತಮ್ಮ ಸರ್ಕಾರದ ಈ ಅವಧಿಯ ಮೊದಲ ಕರ್ನಾಟಕ ಬಜೆಟ್ (Karnataka Budget) ಅನ್ನು ಜುಲೈ 7 ರಂದು ಮಂಡಿಸಿದರು. ಈ ಬಜೆಟ್‌ನಲ್ಲಿ ರಾಜ್ಯದ ಎರಡನೇ ರಾಜಧಾನಿ ಬೆಳಗಾವಿ (Belagavi) ಗೆ ನಗರದ ಸರ್ಕಾರಿ ಅನುದಾನಿತ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಾನವ ದೇಹದ ಅಂಗಾಂಗ ಕಸಿ ಘಟಕವನ್ನು ಸ್ಥಾಪಿಸುವುದನ್ನು ಹೊರತುಪಡಿಸಿ ಬೇರಾವುದೇ ಯೋಜನೆ ಪ್ರಕಟಿಸಿಲ್ಲ. ಇದು ಸ್ಥಳೀಯರ ಅಸಮಾಧಾನವನ್ನು ಹೆಚ್ಚಿಸಿದೆ.

ಸಿದ್ದರಾಮಯ್ಯ ಅವರ ಬಜೆಟ್‌ ಸಂಪೂರ್ಣವಾಗಿ ರಾಜಧಾನಿ ಬೆಂಗಳೂರನ್ನು ಕೇಂದ್ರೀಕರಿಸಿತ್ತು. 'ಬ್ರಾಂಡ್ ಬೆಂಗಳೂರು' (Brand Bengaluru) ಬ್ರ್ಯಾಂಡ್ ಅಡಿಯಲ್ಲಿ ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗೆ 45,000 ಕೋಟಿ ರೂಪಾಯಿ ಅನುದಾನ ಹಂಚಿಕೆಯಾಗಿದೆ. ಎರಡನೇ ರಾಜಧಾನಿ ಬೆಳಗಾವಿಯು ಗೋವಾ ಮತ್ತು ಮಹಾರಾಷ್ಟ್ರದಿಂದ ಪ್ರವಾಸಿಗರನ್ನು ಆಕರ್ಷಿಸುವ ವಾಣಿಜ್ಯ ಕೇಂದ್ರವಾಗಿದ್ದರೂ ಸರ್ಕಾರ ಅದನ್ನು ಬ್ರ್ಯಾಂಡ್‌ ಬೆಳಗಾವಿ (Brand Belagavi)ಯನ್ನಾಗಿ ಮಾಡುವುದನ್ನು ಸಂಪೂರ್ಣವಾಗಿ ಕಡೆಗಣಿಸಿದೆ.

ತಾರತಮ್ಯ ನೀತಿ ವಿರೋಧಿಸಿ ಬೆಳಗಾವಿಯಲ್ಲಿ ಇಂದು (ಜು.10) ಪ್ರತಿಭಟನೆ

ಕನ್ನಡ ಸಂಘಟನೆಗಳು ಮತ್ತು ಆಮ್ ಆದ್ಮಿ ಪಕ್ಷ (ಎಎಪಿ) ಇಂದು ಸೋಮವಾರ ಜುಲೈ 10 ರಂದು ಪ್ರತಿಭಟನೆ ನಡೆಸಲಿದೆ ಎಂದು ಹಿಂದುಸ್ತಾನ್‌ ಟೈಮ್ಸ್‌ ಕನ್ನಡದ ಮಾತೃ ಸಂಸ್ಥೆ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರತಿಭಟನೆಗೆ ಕಾಂಗ್ರೆಸ್, ಎಎಪಿ, ಕನ್ನಡಪರ ಸಂಘಟನೆಗಳು, ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಸಹ ಬೆಂಬಲ ನೀಡಲಿವೆ ಎಂದು ಉತ್ತರಕರ್ನಾಟಕ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಶೋಕ್ ಪೂಜಾರಿ ತಿಳಿಸಿದ್ದಾರೆ.

‘‘ಕರ್ನಾಟಕದಲ್ಲಿ ನೂತನ ಕಾಂಗ್ರೆಸ್ ಸರಕಾರ ರಚನೆಯಾದ ಬಳಿಕ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನೂತನ ಜಿಲ್ಲಾಡಳಿತ ಸಂಕೀರ್ಣ ನಿರ್ಮಿಸುವಂತೆ ಕನ್ನಡಪರ ಸಂಘಟನೆಗಳು ಒತ್ತಾಯಿಸಿದ್ದವು. ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ, ಇಲ್ಲಿನ ಶಾಸಕರ ಭವನ ಮತ್ತಿತರ ಕಾಮಗಾರಿಗಳಿಗೆ ಹಣ ನೀಡುವಂತೆ ಒತ್ತಾಯಿಸಿದ್ದೇವೆ. ನಮ್ಮ ಬೇಡಿಕೆಗಳನ್ನು ಎಲ್ಲ ಸರ್ಕಾರಗಳು ನಿರ್ಲಕ್ಷಿಸುತ್ತಿವೆ" ಎಂದು ಕನ್ನಡ ಸಂಘಟನೆಗಳ ಸಂಚಾಲಕ ಸಮಿತಿ ಸಂಚಾಲಕ ಅಶೋಕ ಚಂದರಗಿ ಹಿಂದುಸ್ತಾನ್‌ ಟೈಮ್ಸ್‌ಗೆ ತಿಳಿಸಿದರು.

ಕಿತ್ತೂರು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆಯಾದ ನಂತರ ಅನುದಾನ ನೀಡದೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅದೇ ರೀತಿ ಮಾಡಿದ್ದಾರೆ ಎಂದು ಚಂದರಗಿ ಅಸಮಾಧಾನ ತೋಡಿಕೊಂಡರು.

ನಗರದೊಳಗೆ ಭಾರಿ ವಾಹನಗಳ ಓಡಾಟ ಮತ್ತು ವಾಹನಗಳ ಹೊರೆ ತಪ್ಪಿಸಲು ಎರಡು ಮೇಲ್ಸೇತುವೆ ಮತ್ತು ವರ್ತುಲ ರಸ್ತೆಗಳ ನಿರ್ಮಾಣದ ತಮ್ಮ ಬಹುಕಾಲದ ಬೇಡಿಕೆಯನ್ನು ಸಿದ್ದರಾಮಯ್ಯ ಅವರು ಕಣ್ಣೆತ್ತಿಯೂ ನೋಡಿಲ್ಲ ಎಂದು ಚಂದರಗಿ ಅಹವಾಲು ತೋಡಿಕೊಂಡರು.

ಗ್ಯಾರೆಂಟಿಗಳ ಕಾರಣ ಕರ್ನಾಟಕದ ಬಜೆಟ್‌ ಗಾತ್ರ ಹೆಚ್ಚಳ

ಕರ್ನಾಟಕದಲ್ಲಿ ಇತ್ತೀಚೆಗೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ಬಜೆಟ್‌ ಗಾತ್ರವನ್ನು 2022-23 ರಲ್ಲಿ ಇದ್ದ 265,720 ಕೋಟಿ ರೂಪಾಯಿಗಳಿಂದ 2023-24 ರಲ್ಲಿ 3,27,747 ಕೋಟಿ ರೂಪಾಯಿಗೆ ಹೆಚ್ಚಿಸಿದೆ. ಶೇಕಡಾ 23 ರ ಬೆಳವಣಿಗೆಯ ದರದೊಂದಿಗೆ 62,027 ಕೋಟಿ ರೂಪಾಯಿ ಹೆಚ್ಚಳವಾಗಿದೆ.

ಒಟ್ಟು ವೆಚ್ಚದಲ್ಲಿ ರಾಜಸ್ವ ವೆಚ್ಚ 2,50,933 ಕೋಟಿ ರೂಪಾಐಿ ಮತ್ತು ಬಂಡವಾಳ ವೆಚ್ಚ 54,374 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದ್ದು. ಇದು ಕ್ರಮವಾಗಿ ಶೇ.23 ಮತ್ತು ಶೇ.16ರಷ್ಟು ಹೆಚ್ಚಳವಾಗಿದೆ.

ರಾಜ್ಯ ಸರ್ಕಾರವು ಈ ಬಜೆಟ್ ಅನ್ನು ತಮ್ಮ 'ಗ್ಯಾರೆಂಟಿ ಬಜೆಟ್' ಎಂದು ಬಣ್ಣಿಸಿದೆ. ವಿಧಾನಸಭೆ ಚುನಾವಣೆಗೆ ಮುಂಚಿತವಾಗಿ ಜನರಿಗೆ ನೀಡಿದ ಎಲ್ಲಾ ಐದು ಪ್ರಮುಖ ಗ್ಯಾರೆಂಟಿ ಭರವಸೆಗಳನ್ನು ಇದು ಈಡೇರಿಸುತ್ತದೆ ಎಂದು ಪ್ರತಿಪಾದಿಸಿದೆ. ಚುನಾವಣಾ ಪೂರ್ವದ ಆ ಭರವಸೆಗಳ ಅನುಷ್ಠಾನಕ್ಕೆ ಘೋಷಿತ ಬಜೆಟ್‌ನಲ್ಲಿ ಒಟ್ಟು 35,410 ಕೋಟಿ ರೂಪಾಯಿ ಮೀಸಲಿಡಲಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ