Bengaluru News: ಬೆಂಗಳೂರು ವ್ಯಾಪ್ತಿಯಲ್ಲಿ ಕ್ರಿಸ್‌ಮಸ್‌ಗೂ ಮುನ್ನ 2 ದಿನ ಪವರ್‌ಕಟ್, ಬೆಸ್ಕಾಂನ ಯಾವ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ
Dec 22, 2023 06:15 PM IST
ಬೆಂಗಳೂರಿನ ಬೆಸ್ಕಾಂನ ವಿವಿಧ ವಲಯಗಳಲ್ಲಿ ಕ್ರಿಸ್‌ಮಸ್ ಹಬ್ಬಕ್ಕೆ ಮುನ್ನ ಎರಡು ದಿನ ನಾಳೆ ಮತ್ತು ನಾಡಿದ್ದು ಪವರ್ ಕಟ್ ಇರಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಕ್ರಿಸ್‌ಮಸ್ ಮತ್ತು ಹೊಸ ವರ್ಷಾಚರಣೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲಿ, ವಾರಾಂತ್ಯದ ಎರಡು ದಿನ ನಾಳೆ ಮತ್ತು ನಾಡಿದ್ದು ಆಯ್ದ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಬೆಸ್ಕಾಂ ಮತ್ತು ಕೆಪಿಟಿಸಿಎಲ್ ನಿಯತ ದುರಸ್ತಿ, ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಂಡಿರುವುದು ಇದಕ್ಕೆ ಕಾರಣ. ಯಾವ ಏರಿಯಾದಲ್ಲಿ ಕರೆಂಟ್ ಇರಲ್ಲ- ಇಲ್ಲಿದೆ ವಿವರ.
ಬೆಂಗಳೂರು ಮಹಾನಗರದ ವಿವಿಧೆಡೆ ನಾಳೆ (ಡಿ.23) ಮತ್ತು ನಾಡಿದ್ದು (ಡಿ.24) ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಮೂಲಗಳು ತಿಳಿಸಿವೆ. ಬೆಸ್ಕಾಂ ವ್ಯಾಪ್ತಿಯ ವಿವಿಧೆಡೆ ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಹಲವು ನಿರ್ವಹಣಾ ಮತ್ತು ದುರಸ್ತಿ ಕಾರ್ಯಗಳನ್ನು ಕೈಗೊಳ್ಳುತ್ತಿರುವುದು ಇದಕ್ಕೆ ಕಾರಣ.
ಇದು ನಿಯತ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಾಗಿದ್ದು, ಜಂಗಲ್ ಕ್ಲಿಯರೆನ್ಸ್, ನವೀಕರಣ, ಆಧುನೀಕರಣ, ಡಿಟಿಸಿ ರಚನೆ ನಿರ್ವಹಣೆ, ಲೈನ್ ನಿರ್ವಹಣೆ, ಓವರ್‌ಹೆಡ್‌ನಿಂದ ಭೂಗತಕ್ಕೆ ಕೇಬಲ್‌ಗಳನ್ನು ಬದಲಾಯಿಸುವುದು, ರಿಂಗ್ ಮುಖ್ಯ ಘಟಕ (ಆರ್‌ಎಂಯು) ನಿರ್ವಹಣೆ, ಮರದ ಟ್ರಿಮ್ಮಿಂಗ್, ಜಲಸಿರಿ 24x7 ನೀರು ಸರಬರಾಜು ಕೆಲಸ ಮತ್ತು ಭೂಗತ ಕೇಬಲ್ ಹಾನಿ ಸರಿಪಡಿಸುವಿಕೆ ಇತ್ಯಾದಿಗಳನ್ನು ಒಳಗೊಂಡಿದೆ.
ಪೂರ್ವ ನಿಗದಿಯಲ್ಲಿ ಆಯ್ದ ಪ್ರದೇಶಗಳಲ್ಲಿ ನಾಳೆ ಮತ್ತು ನಾಡಿದ್ದು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ತನಕ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಯಾವ ದಿನ ಯಾವ ಏರಿಯಾದಲ್ಲಿ ವಿದ್ಯುತ್ ಪೂರೈಕೆ ವ್ಯತ್ಯಯ ಇಲ್ಲಿದೆ ವಿವರ.
ಡಿಸೆಂಬರ್ 23ರಂದು ಶನಿವಾರ ಬೆಂಗಳೂರಿನ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ
ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಲೋಹಿತ್ ನಗರ, ಗಂಗಾಧರ ಪಾಳ್ಯ, ಬೈದರಹಳ್ಳಿ, ರಾಶಿ ಲೇಔಟ್, ವೀರರಾಘವ ಪಾಳ್ಯ, ಕೆಂಚನಳ್ಳಿ, ಉಳ್ಳಳ್ಳಿ, ಎಸ್‌ಎಸ್ ಲೇಔಟ್ ಎ ಬ್ಲಾಕ್, ಎಸ್ ಎಸ್ ಮಾಲ್, ಗ್ಲಾಸ್ ಹೌಸ್ ಏರಿಯಾ, ಶಾಮನೂರು ರಸ್ತೆ, ಲಕ್ಷ್ಮಿ ಫ್ಲೋರ್ ಮಿಲ್, ಸಿದ್ದವೀರಪ್ಪ ಬಡಾವಣೆ, ಕುವೆಂಪು ನಗರ, ಮಾವಿನ ತೋಪು, ಜಿಎಚ್ ಪಾರ್ಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು, ಹೊಸ ಬೆಳವನೂರು, ಹಳೇ ಬೆಳವನೂರು ಮತ್ತು ತುರ್ಚಗಟ್ಟಾ ಐಪಿ ಲಿಮಿಟ್,
ಐಗೂರು, ಐಗೂರು ಗೋಳರಹಟ್ಟಿ, ಲಿಂಗದಹಳ್ಳಿ, ಒಡ್ಡನಹಳ್ಳಿ, ಅಡವಿಗೊಲ್ಲರಹಳ್ಳಿ, ಬೈಲಹಳ್ಳಿ, ಶಿವನಕೆರೆ, ಹಿರೇಕಬ್ಬಿಗೆರೆ, ಎನ್ ಬಾಳಿಗಟ್ಟೆ, ಬೇವಿನಹಳ್ಳಿ, ನಂದಿಹಳ್ಳಿ, ಬಹದೂರಘಟ್ಟ, ಕೋಗುಂಡೆ, ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ, ಗೋನೂರು, ಮುಟೈನಹಟ್ಟಿ, ಬೆಳಗಟ್ಟ, ಹಾಯ್ಕಲ್, ಗೌಡಿಹಳ್ಳಿ, ಗೊಲ್ಲರಹಳ್ಳಿ, ಬಿ.ಜಿ.ಹಳ್ಳಿ, ತೊಡ್ರನಾಳ್, ಟಿ ನುಲೇನೂರು, ಜೆ.ಜಿ. ಹಳ್ಳಿ, ಓಬಳಾಪುರ, ಪಿಲಾಲಿ ಸೂರಪ್ಪನಹಟ್ಟಿ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್. ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ.
ಡಿಸೆಂಬರ್ 24, ಭಾನುವಾರದಂದು ಬೆಂಗಳೂರಿನ ಈ ಏರಿಯಾದಲ್ಲಿ ವಿದ್ಯುತ್ ವ್ಯತ್ಯಯ
ಹಳೆ ನಿಜಗಲ್, ಹೊಸ ನಿಜಗಲ್, ದೇವರಹೊಸಹಳ್ಳಿ, ಮರೋಹಳ್ಳಿ, ತೊಣಚಿನಕುಪ್ಪೆ, ಭುವನೇಶ್ವರಿ ನಗರ, ಬೂದಿಹಾಳ್, ಬೊಮ್ಮನಹಳ್ಳಿ, ವೀರನಂಜಿಪುರ, ಕಾಚನಹಳ್ಳಿ, ಬೀಚನಹಳ್ಳಿ, ಪಾಪಭೋವಿಪಾಳ್ಯ, ಎರಮಂಚನಹಳ್ಳಿ, ಫೀಡರ್ ಪ್ರದೇಶಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು, ಮಂಡಕ್ಕಿ ಬಟ್ಟಿ, ಕಾರ್ಲ್ ಮಾರ್ಕ್ಸ್ ನಗರ, ಸಿದ್ದರಾಮೇಶ್ವರ ನಗರ, ಇಂದಿರಾ ನಗರ, ಕೋಳಿ ಚನ್ನಪ್ಪ, ಅಡವಿಗೊಲ್ಲರಹಳ್ಳಿ, ಬೈಲಹಳ್ಳಿ, ಶಿವನಕೆರೆ, ಹಿರೇಕಬ್ಬಿಗೆರೆ, ಎನ್ ಬಾಳಿಗಟ್ಟೆ, ಕೊಣನೂರು, ಆಲಘಟ್ಟ, ಚಿಕ್ಕೇನಹಳ್ಳಿ, ಬಿ.ಜಿ.ಹಳ್ಳಿ, ತೊಡ್ರನಾಳ, ಟಿ ನುಲೇನೂರು, ಜೆ.ಜಿ. ಹಳ್ಳಿ, ಓಬಳಾಪುರ, ಪಿಲಾಲಿ ಸೂರಪ್ಪನಹಟ್ಟಿ, ಗೊರ್ಲಡಕು, ಆನೆಸಿದ್ರಿ, ಜವನಗೊಂಡನಹಳ್ಳಿ, ಕೆ.ಟಿ.ಎನ್. ಹಳ್ಳಿ, ಪಿಲಾಲಿ ಮತ್ತು ರಂಗನಾಥಪುರ.