BMTC Digital Pass: ಬಿಎಂಟಿಸಿ ಡಿಜಿಟಲ್ ಬಸ್ ಪಾಸ್ ಪಡೆಯುವುದು ಹೇಗೆ? ವಜ್ರ, ವೋಲ್ವೊ, ಸಾಮಾನ್ಯ ಬಸ್ ಪಾಸ್ ದರವೆಷ್ಟು? ಇಲ್ಲಿದೆ ವಿವರ
Sep 19, 2024 12:12 PM IST
BMTC Digital Pass: ಬಿಎಂಟಿಸಿ ಡಿಜಿಟಲ್ ಬಸ್ ಪಾಸ್ ಪಡೆಯುವುದು ಹೇಗೆ? ವಜ್ರ, ವೋಲ್ವೊ, ಸಾಮಾನ್ಯ ಬಸ್ ಪಾಸ್ ದರವೆಷ್ಟು? ಇತ್ಯಾದಿ ವಿವರ ಇಲ್ಲಿ ನೀಡಲಾಗಿದೆ.
- BMTC Digital Pass: ಈಗ ಮೊಬೈಲ್‌ನಲ್ಲಿ ಟುಮಾಕ್ ಆಪ್ ಮೂಲಕ ಬಿಎಂಟಿಸಿಯ ದೈನಿಕ, ಸಾಪ್ತಾಹಿಕ, ವಾರ್ಷಿಕ ಬಸ್ ಪಾಸ್ ಪಡೆಯಬಹುದು. ಬಿಎಂಟಿಸಿ ಡಿಜಿಟಲ್ ಬಸ್ ಪಾಸ್ ಪಡೆಯುವ ವಿಧಾನ, ವಾರ, ತಿಂಗಳು ಮತ್ತು ದಿನದ ಪಾಸ್‌ಗಳ ದರ ವಿವರ ಇಲ್ಲಿದೆ.
BMTC Digital Pass: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಸೆಪ್ಟೆಂಬರ್ 15ರಿಂದ ಅನ್ವಯವಾಗುವಂತೆ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆ ಜಾರಿಗೊಳಿಸಿದೆ. ಗ್ರಾಹಕರು ತಮ್ಮ ಮೊಬೈಲ್ ಫೋನ್‌ನಲ್ಲಿಯೇ ಡಿಜಿಟಲ್ ಪಾಸ್ ಪಡೆದುಕೊಳ್ಳಬಹುದಾಗಿದೆ. ತಕ್ಷಣ ಈ ರೀತಿ ಡಿಜಿಟಲ್ ಪಾಸ್ ಮಾಡಿದ್ರೆ ಹಿರಿಯ ನಾಗರಿಕರು, ಮೊಬೈಲ್ ಫೋನ್ ಬಳಸಲು ತಿಳಿಯದವರಿಗೆ ತೊಂದರೆಯಾಗಲಿದೆ ಎಂಬ ಆತಂಕವೂ ಇತ್ತು. ಈ ಸಮಯದಲ್ಲಿ ಈ ಹಿಂದಿನ ಪ್ರಿಂಟೆಡ್ ಪಾಸ್‌ಗಳನ್ನೂ ನೀಡಲಾಗುವುದು ಎಂದು ಬಿಎಂಟಿಸಿ ತಿಳಿಸಿದೆ. ಬಿಎಂಟಿಟಿ ಡಿಜಿಟಲ್ ಪಾಸ್ ಅಥವಾ ಪ್ರಿಂಟೆಡ್ ಪಾಸ್‌ನಲ್ಲಿ ಯಾವುದನ್ನೂ ಬೇಕಾದರೂ ಪ್ರಯಾಣಿಕರು ಹೊಂದಬಹುದು. ಸಾಕಷ್ಟು ಜನರಿಗೆ ಡಿಜಿಟಲ್ ಬಸ್ ಬಸ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ? ಯಾವ ಆಪ್ ಮೂಲಕ ಡಿಜಿಟಲ್ ಪಾಸ್‌ಗೆ ಅಪ್ಲೈ ಮಾಡಬೇಕು ಎಂಬೆಲ್ಲ ಸಂದೇಹಗಳು ಇವೆ. ಡಿಜಿಟಲ್ ಪಾಸ್ ಡೌನ್‌ಲೋಡ್ ಮಾಡಿಕೊಳ್ಳುವುದು ಹೇಗೆ ಎಂದು ತಿಳಿದುಕೊಳ್ಳೋಣ.
ಏನಿದು ಬಿಎಂಟಿಸಿ ಡಿಜಿಟಲ್ ಪಾಸ್?
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನಲ್ಲಿ ಸಾಮಾನ್ಯ ಬಸ್ ಮಾತ್ರವಲ್ಲದೆ ವೋಲ್ವೊ, ವಜ್ರ ಬಸ್‌ಗಳ ಮೂಲಕ ಪ್ರಯಾಣಿಕರ ಸೇವೆ ನೀಡುತ್ತಿದೆ. ಬೆಂಗಳೂರಿನಲ್ಲಿ ದಿನದ, ವಾರದ, ಮಾಸಿಕ ಬಸ್‌ಗಳು ಲಭ್ಯ ಇರುವುದರಿಂದ ಸಾಕಷ್ಟು ಜನರಿಗೆ ಅನುಕೂಲವಾಗುತ್ತದೆ. ಕಂಡೆಕ್ಟರ್‌ಗಳ ಮೂಲಕ ಅಥವಾ ಬಿಎಂಟಿಸಿ ಬಸ್ ಸ್ಟ್ಯಾಂಡ್‌ಗಳಲ್ಲಿ ಇಂತಹ ಪ್ರಿಂಟೆಡ್ ಪಾಸ್‌ಗಳು ದೊರಕುತ್ತವೆ. ಬಸ್ ಪಾಸ್ ಡಿಜಿಟಲೀಕರಣ ಮಾಡುವ ಉದ್ದೇಶದಿಂದ ಬಿಎಂಟಿಸಿಯು ಸೆಪ್ಟೆಂಬರ್ 15ರಿಂದ ಡಿಜಿಟಲ್ ಬಸ್ ಪಾಸ್ ಆರಂಭಿಸಿದೆ.
ಬಿಎಂಟಿಸಿ ಡಿಜಿಟಲ್ ಬಸ್ ಪಾಸ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?
- ಮೊದಲಿಗೆ ಪ್ರಯಾಣಿಕರು ತಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಟುಮಾಕ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅಂದ್ರೆ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ Tummoc ಎಂದು ಹುಡುಕಾಟ ನಡೆಸಿ. ಆಗ ಅಲ್ಲಿ Tummoc App ದೊರಕುತ್ತದೆ. ಟುಮಾಕ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಲು ಡೈರೆಕ್ಟ್ ಲಿಂಕ್ ಇಲ್ಲಿದೆ.
- ಆಪ್ ತೆರೆಯಿರಿ. ಇಂಗ್ಲಿಷ್, ಕನ್ನಡ, ಹಿಂದಿ ಭಾಷೆ ಆಯ್ಕೆಗಳು ಕಾಣಿಸುತ್ತವೆ. ಇದು ದೆಹಲಿ ಮತ್ತು ಬೆಂಗಳೂರು ಬಿಎಂಟಿಸಿ ಬಸ್ ಪಾಸ್‌ಗೆ ನೆರವಾಗುವ ಆಪ್. ಕನ್ನಡ ಅಥವಾ ಇಂಗ್ಲಿಷ್ ಆಯ್ಕೆ ಮಾಡಿ. ಲೊಕೆಷನ್ ಆಯ್ಕೆ ನೀಡಿ.
- ಬಸ್, ಮೆಟ್ರೋ, ಡೈರೆಕ್ಟ್ ರೂಟ್, ಏರ್‌ಪೋರ್ಟ್ ರೈಲು ಇತ್ಯಾದಿ ಆಯ್ಕೆಗಳು ಕಾಣಿಸುತ್ತವೆ. ಅದಕ್ಕಿಂತಲೂ ಮೇಲೆ ಪಾಸ್‌ಗಳು ಮತ್ತು ಟಿಕೆಟ್‌ಗಳು ಆಯ್ಕೆ ಇದೆ. ಅದರಲ್ಲಿ ಬಿಎಂಟಿಸಿ ಪಾಸ್ ಕ್ಲಿಕ್ ಮಾಡಿ.
- ಅಲ್ಲಿ ದಿನದ ಪಾಸ್, ವಾರದ ಪಾಸ್, ತಿಂಗಳ ಪಾಸ್, ಆರ್ಡಿನರಿ ಬಸ್ ಪಾಸ್, ವಜ್ರ ಬಸ್ ಪಾಸ್, ವೋಲ್ವೋ ಪಾಸ್‌ಗಳು ಕಾಣಿಸುತ್ತವೆ. ನಿಮಗೆ ಯಾವ ಪಾಸ್ ಬೇಕೋ ಆ ಪಾಸ್ ಖರೀದಿಸಲು ಮುಂದಾಗಿ.
- ಈ ಸಮಯದಲ್ಲಿ ನಿಮ್ಮ ಮೊಬೈಲ್ ಸಂಖ್ಯೆ ನೀಡಿ. ಒಟಿಪಿ ನೀಡಿ. ಇದಾದ ಬಳಿಕ ಬಯಸಿದ ಮಾಹಿತಿಯನ್ನು ಭರ್ತಿ ಮಾಡಿ. ಹಣ ಪಾವತಿಸಿದ ಬಳಿಕ ಡಿಜಿಟಲ್ ಪಾಸ್ ದೊರಕುತ್ತದೆ. ಈ ಬಸ್ ಪಾಸ್ ಅನ್ನು ಕಂಡೆಕ್ಟರ್‌ಗೆ ತೋರಿಸಿ. ಕೆಲವೊಮ್ಮೆ ಬಸ್ ನಿರ್ವಾಹಕ ಸೂಚಿಸಿದ ಕ್ಯೂಆರ್ ಕೋಡ್‌ಗೆ ಪಾಸ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ದೃಢೀಕರಿಸಬೇಕಾಗುತ್ತದೆ.
ಬಿಎಂಟಿಸಿ ಡಿಜಿಟಲ್ ಪಾಸ್ ದರವೆಷ್ಟು?
ದಿನದ ಪಾಸ್
- ಆರ್ಡಿನರಿ ಡೇ ಪಾಸ್: 70 ರೂಪಾಯಿ
- ವಜ್ರ ಗೋಲ್ಡ್ ಡೇ ಪಾಸ್: 120 ರೂಪಾಯಿ
ವಾರದ ಪಾಸ್
- ಆರ್ಡಿನರಿ ವೀಕ್ಲಿ ಪಾಸ್: 300 ರೂಪಾಯಿ
ಮಾಸಿಕ ಪಾಸ್
- ಆರ್ಡಿನರಿ ಸರ್ವೀಸ್ ಮಂತ್ಲಿ ಪಾಸ್: 1050 ರೂಪಾಯಿ
- ವಜ್ರ ಗೋಲ್ಡ್ ಮಂತ್ಲಿ ಪಾಸ್: 1800 ರೂಪಾಯಿ
- ವಜ್ರ ಗೋಲ್ಡ್ ಪಾಸ್ (ಎಸಿ): 3755 ರೂಪಾಯಿ
ನೈಸ್ ರೋಡ್ ಮಂತ್ಲಿ ಪಾಸ್ - ನೈಸ್ ರೋಡ್ ಮಂತ್ಲಿ ಪಾಸ್ (ಆರ್ಡಿನರಿ): 2200 ರೂಪಾಯಿ