Namma Metro: ನಮ್ಮ ಮೆಟ್ರೋ ನೇರಳೆ ಮಾರ್ಗದ ಪೂರ್ಣ ಸೇವೆ ಶುರು ಯಾವಾಗ, ಅಪ್ಡೇಟ್ಸ್ ನೀಡದ ಬಿಎಂಆರ್‌ಸಿಎಲ್
Oct 07, 2023 09:27 AM IST
ಬೆಂಗಳೂರು ನಮ್ಮ ಮೆಟ್ರೋ ನೇರಳೆ ಮಾರ್ಗ (ಕಡತ ಚಿತ್ರ)
ಬೆಂಗಳೂರಿನ ನಮ್ಮ ಮೆಟ್ರೋ ನೇರಳ ಮಾರ್ಗ ಪೂರ್ಣ ಪ್ರಮಾಣದ ಸೇವೆ ಇಂದಿನಿಂದ ಶುರುವಾಗಬಹುದು ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ಬಿಎಂಆರ್‌ಸಿಎಲ್ ಕೂಡ ಈ ಕುರಿತು ಅಪ್ಡೇಟ್ಸ್ ನೀಡಿಲ್ಲ. ಮಾರ್ಗಗಳ ಕಾಮಗಾರಿ ಪೂರ್ಣಗೊಂಡಿದ್ದರೂ, ವಿಳಂಬ ಯಾಕೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ ಎನ್ನುತ್ತಿದ್ದಾರೆ ಜನ.
ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನ ಸಂಚಾರ ದಟ್ಟಣೆ ಕಡಿಮೆ ಮಾಡುವುದಕ್ಕೆ ಇರುವಂತಹ ನಮ್ಮ ಮೆಟ್ರೋ ವ್ಯವಸ್ಥೆಯ ನೇರಳೆ ಮಾರ್ಗ ಇಂದು ಪೂರ್ಣ ಪ್ರಮಾಣದಲ್ಲಿ ಸಾರ್ವಜನಿಕ ಸೇವೆಗೆ ಮುಕ್ತವಾಗುವ ನಿರೀಕ್ಷೆ ಇತ್ತಾದರೂ, ಬಿಎಂಆರ್‌ಸಿಎಲ್ ಈ ಬಗ್ಗೆ ಅಧಿಕೃತವಾಗಿ ಯಾವುದೇ ಅಪ್ಡೇಟ್ಸ್ ನೀಡಿಲ್ಲ.
ಬೆಂಗಳೂರು ಮೆಟ್ರೋ ಅಪ್ಡೇಟ್ಸ್ ಪ್ರಕಾರ, ಕೃಷ್ಣರಾಜಪುರಂ - ಬೈಯಪ್ಪನಹಳ್ಳಿ ಮತ್ತು ಕೆಂಗೇರಿ - ಚಲ್ಲಘಟ್ಟ ಮಾರ್ಗಗಳು ಕೂಡ ಪೂರ್ಣಗೊಂಡಿದ್ದು, ಇಂದು ಸಂಜೆ ವೇಳೆಗೆ ನೇರಳೆ ಮಾರ್ಗದ ಮೆಟ್ರೋ ರೈಲು ಸಂಚಾರ ಪೂರ್ಣ ಪ್ರಮಾಣದಲ್ಲಿ ಆರಂಭವಾಗುವ ನಿರೀಕ್ಷೆಯಲ್ಲಿ ಜನರಿದ್ದಾರೆ.
ಬೆಂಗಳೂರು ಮೆಟ್ರೋಗೆ ಸಂಬಂಧಿಸಿ ನೇರಳೆ ಮಾರ್ಗವೇ ಅತ್ಯಂತ ಉದ್ದದ ಮಾರ್ಗ. ಇದು 42.5 ಕಿ.ಮೀ. ಇದೆ. ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 25 ರಂದು ಕೃಷ್ಣರಾಜಪುರದಿಂದ ವೈಟ್‌ಫೀಲ್ಡ್ (ಕಾಡುಗೋಡಿ) ವರೆಗಿನ ಬೆಂಗಳೂರು ಮೆಟ್ರೋ ಪರ್ಪಲ್ ಲೈನ್ ಅನ್ನು ಉದ್ಘಾಟಿಸಿದರು.
ಪರ್ಪಲ್ ಲೈನ್ ಅನ್ನು ಹೆಚ್ಚು ಎತ್ತರಿಸಲಾಗಿದ್ದು, 29 ಎತ್ತರದ ನಿಲ್ದಾಣಗಳು. 5 ಭೂಗತ ನಿಲ್ದಾಣಗಳು ಮತ್ತು ಒಂದು ಗ್ರೇಡ್ ಸ್ಟೇಶನ್ ಇದೆ.
ನ್ಯೂಸ್ 18 ವರದಿಯ ಪ್ರಕಾರ ಚಲ್ಲಘಟ್ಟದಿಂದ ವೈಟ್‌ಫೀಲ್ಡ್‌ಗೆ ಮೆಟ್ರೋ ಪ್ರಯಾಣವು ಅಂದಾಜು 76 ನಿಮಿಷ ತೆಗೆದುಕೊಳ್ಳುತ್ತದೆ. ಇದರ ಟಿಕೆಟ್ ದರ 60 ರೂಪಾಯಿ.
ನೇರಳೆ ಮಾರ್ಗದ ಮೆಟ್ರೋ ನಿಲ್ದಾಣಗಳಿವು
ಬೆಂಗಳೂರಿನ ನಮ್ಮ ನೇರಳೆ ಮಾರ್ಗದಲ್ಲಿರುವುದು ಒಟ್ಟು 37 ನಿಲ್ದಾಣಗಳು.
- ವೈಟ್‌ಫೀಲ್ಡ್ (ಕಾಡುಗೋಡಿ)
- ಹೋಪ್‌ಫಾರ್ಮ್ ಚನ್ನಸಂದ್ರ
- ಕಾಡುಗೋಡಿ ಟ್ರೀ ಪಾರ್ಕ್
- ಪಟ್ಟಂದೂರು ಅಗ್ರಹಾರ
- ಶ್ರೀ ಸತ್ಯಸಾಯಿ ಆಸ್ಪತ್ರೆ
- ನಲ್ಲೂರಹಳ್ಳಿ
- ಕುಂದಲಹಳ್ಳಿ
- ಸೀತಾರಾಮಪಾಳ್ಯ
- ಹೂಡಿ
- ಗರುಡಾಚಾರಪಾಳ್ಯ
- ಸಿಂಗಯ್ಯನಪಾಳ್ಯ
- ಕೃಷ್ಣರಾಜಪುರ (ಕೆ.ಆರ್.ಪುರ)
- ಬೆನ್ನಿಗಾನಹಳ್ಳಿ
- ಬೈಯಪ್ಪನಹಳ್ಳಿ
- ಸ್ವಾಮಿ ವಿವೇಕಾನಂದ ರೋಡ್
- ಇಂದಿರಾನಗರ
- ಹಲಸೂರು
- ಟ್ರಿನಿಟಿ
- ಎಂ.ಜಿ.ರಸ್ತೆ
- ಕಬ್ಬನ್ ಪಾರ್ಕ್
- ಡಾ. ಬಿಆರ್. ಅಂಬೇಡ್ಕರ್ ನಿಲ್ದಾಣ ವಿಧಾನಸೌಧ
- ಸರ್.ಎಂ.ವಿಶ್ವೇಶ್ವರಯ್ಯ ನಿಲ್ದಾಣ
- ನಾಡಪ್ರಭು ಕೆಂಪೇಗೌಡ ನಿಲ್ದಾಣ
- ಸಿಟಿ ರೈಲು ನಿಲ್ದಾಣ
- ಮಾಗಡಿ ರಸ್ತೆ
- ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ
- ವಿಜಯನಗರ
- ಅತ್ತಿಗುಪ್ಪೆ
- ದೀಪಾಂಜಲಿ ನಗರ
- ಮೈಸೂರು ರಸ್ತೆ
- ಪಂತರಪಾಳ್ಯ - ನಾಯಂಡಹಳ್ಳಿ
- ರಾಜರಾಜೇಶ್ವರಿ ನಗರ
- ಜ್ಞಾನಭಾರತಿ,
- ಪಟ್ಟಣಗೆರೆ
- ಕೆಂಗೇರಿ ಬಸ್ ಟರ್ಮಿನಲ್
- ಕೆಂಗೇರಿ
- ಚಲ್ಲಘಟ್ಟ.
‘ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್
“ತಾಜಾ ಸುದ್ದಿ, ಜ್ಯೋತಿಷ್ಯ, ಮನರಂಜನೆ, ಕ್ರೀಡೆ ಸೇರಿದಂತೆ ನಿಮ್ಮಿಷ್ಟದ ವಿಷಯಗಳ ತ್ವರಿತ ಅಪ್‌ಡೇಟ್ ಪಡೆಯಲು 'ಎಚ್‌ಟಿ ಕನ್ನಡ' ವಾಟ್ಸಾಪ್ ಚಾನೆಲ್ 🚀 ಫಾಲೊ ಮಾಡಿ. ಮರೆಯದಿರಿ, ಇದು ಪಕ್ಕಾ ಲೋಕಲ್” ಕ್ಲಿಕ್ ಮಾಡಿ.