logo
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಅಕ್ಕಪಕ್ಕದ ಮನೆಯವರು ನಾಟ್ ರೀಚೆಬಲ್‌ ಎನ್ನುತ್ತಿದೆ ವರದಿ; ಕಾರಣ ಇಷ್ಟೆ ನೋಡಿ

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಅಕ್ಕಪಕ್ಕದ ಮನೆಯವರು ನಾಟ್ ರೀಚೆಬಲ್‌ ಎನ್ನುತ್ತಿದೆ ವರದಿ; ಕಾರಣ ಇಷ್ಟೆ ನೋಡಿ

Umesh Kumar S HT Kannada

Mar 07, 2024 11:49 AM IST

google News

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಂಭಾಗ (ಎಡ ಚಿತ್ರ); ಮೊಬೈಲ್‌ನಲ್ಲಿ ಸಿಗ್ನಲ್ ಇಲ್ಲದೇ ಇರುವುದನ್ನು ತೋರಿಸುವ ಸಾಂಕೇತಿಕ ಚಿತ್ರ ( ಬಲ ಚಿತ್ರ)

  • ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಅಕ್ಕಪಕ್ಕದ ಮನೆಯವರು ನಾಟ್ ರೀಚೆಬಲ್‌ ಎನ್ನುತ್ತಿದೆ ವರದಿ. ಅವರ ಫೋನ್ ಕೆಲಸ ಮಾಡದೇ ಇರುವುದು ಗಮನಸೆಳೆದಿದೆ. ಈ ಕುರಿತು ಅಧಿಕಾರಿಗಳ ಗಮನಸೆಳೆಯುವ ಕೆಲಸವನ್ನೂ ಜನ ಮಾಡಿದ್ದಾರೆ. ಇನ್ನೂ ಫಲ ನೀಡಿಲ್ಲ. ಆದಾಗ್ಯೂ, ಅದಕ್ಕೆ ಕಾರಣ ಇಷ್ಟೆ ನೋಡಿ.

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಂಭಾಗ (ಎಡ ಚಿತ್ರ); ಮೊಬೈಲ್‌ನಲ್ಲಿ ಸಿಗ್ನಲ್ ಇಲ್ಲದೇ ಇರುವುದನ್ನು ತೋರಿಸುವ ಸಾಂಕೇತಿಕ ಚಿತ್ರ ( ಬಲ ಚಿತ್ರ)
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಂಭಾಗ (ಎಡ ಚಿತ್ರ); ಮೊಬೈಲ್‌ನಲ್ಲಿ ಸಿಗ್ನಲ್ ಇಲ್ಲದೇ ಇರುವುದನ್ನು ತೋರಿಸುವ ಸಾಂಕೇತಿಕ ಚಿತ್ರ ( ಬಲ ಚಿತ್ರ)

ಬೆಂಗಳೂರು: ಪರಪ್ಪನ ಅಗ್ರಹಾರ ಎಂದ ಕೂಡಲೇ ನೆನಪಾಗುವುದು ಕೇಂದ್ರ ಕಾರಾಗೃಹ. ಪರಪ್ಪನ ಅಗ್ರಹಾರ ಪದೇಪದೆ ಸುದ್ದಿಯಾಗುತ್ತಲೇ ಇರುತ್ತದೆ. ಜೈಲಿನೊಳಗಿನ ಅಕ್ರಮ ಚಟುವಟಿಕೆಗಳು ಹೆಚ್ಚು ಸದ್ದು ಮಾಡುತ್ತವೆ. ಇತ್ತೀಚೆಗೆ ಅಲ್ಲಿ ಅಕ್ರಮವಾಗಿ ಫೋನ್ ಬಳಕೆ, ಶಸ್ತ್ರಾಸ್ತ್ರ ಸಂಗ್ರಹಿಸಿದ್ದು ಪತ್ತೆಯಾಗಿತ್ತು.

ಉಗ್ರರ ನೇಮಕವೂ ಜೈಲಿನಲ್ಲಿದ್ದುಕೊಂಡೇ ನಡೆಯಿತು ಎಂಬ ಈ ಪ್ರಕರಣದ ತನಿಖೆಯನ್ನು ಎನ್ಐಎ ಮಾಡುತ್ತಿದೆ. ಈಗ ಪರಪ್ಪನ ಅಗ್ರಹಾರ ಸುದ್ದಿಯಾಗಿರುವುದ ಜೈಲಿನೊಳಗಿನ ವಿಚಾರಕ್ಕೆ ಅಲ್ಲ. ಹೊರಗಿನ ವಿಚಾರಕ್ಕಾದರೂ ಮತ್ತದು ಜೈಲಿಗೆ ಸಂಬಂಧಿಸಿದ್ದೇ ಆಗಿದೆ.

ಹೌದು, ಪರಪ್ಪನ ಅಗ್ರಹಾರದ ಸುತ್ತಮುತ್ತಲಿನ ಮನೆಯವರು ಯಾವಾಗ ನೋಡಿದ್ರೂ ನಾಟ್ ರೀಚೆಬಲ್‌. ಹೀಗೊಂದು ದೂರು ಆ ಮನೆಯವರ ಸಂಬಂಧಿಕರು, ಸ್ನೇಹಿತರು, ಹಿತೈಷಿಗಳದ್ದು. ದಿನದ 24 ಗಂಟೆಯಲ್ಲಿ ಯಾವಾಗ ಫೋನ್ ಮಾಡಿದ್ರೂ ಈ ಭಾಗದ ಜನರ ಫೋನ್ ನಾಟ್ ರೀಚೆಬಲ್‌. ಇನ್ನು, ಪರಪ್ಪನ ಅಗ್ರಹಾರದ ಸುತ್ತಮುತ್ತಲಿನ ಮನೆಯವರು ಯಾರಿಗಾದರೂ ಫೋನ್ ಮಾಡಬೇಕು ಎಂದು ಫೋನ್ ಕೈಗೆತ್ತಿಕೊಂಡರೆ ಸಿಗ್ನಲೇ ಇಲ್ಲ.

ಮೂರು ವರ್ಷದ ಮಗುವಿನ ಆರೋಗ್ಯ ಕೆಟ್ಟಿದೆ. ಬಂದು ಕರೆದುಕೊಂಡು ಹೋಗಿ ಎಂದು ಶಾಲೆಯೊಂದರಿಂದ ಪಾಲಕರಿಗೆ ಫೋನ್ ಕರೆ ಮಾಡಿದರೆ, ಅದು ಅವರಿಗೆ ಕನೆಕ್ಟ್ ಆಗಲೇ ಇಲ್ಲ ಎಂಬುದನ್ನು ಆ ಪಾಲಕರು ತಿಳಿಸಿದ್ದಾಗಿ ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಜಾಮರ್

ಜೈಲು ಅಕ್ರಮಗಳ ಕಾರಣ ಪರಪ್ಪನ ಅಗ್ರಹಾರ ಜೈಲು ಕಳೆದ ಕೆಲವು ತಿಂಗಳಿಂದ ತೀವ್ರ ನಿಗಾಕ್ಕೆ ಒಳಪಟ್ಟಿದೆ. ಪರಪ್ಪನ ಅಗ್ರಹಾರ ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಬಳಕೆ ಆಗುತ್ತಿರುವುದನ್ನು ತಪ್ಪಿಸುವುದಕ್ಕಾಗಿ ಜನವರಿಯಲ್ಲಿ ಜಾಮರ್ (Tower-Harmonious Call Blocking System) ಅಳವಡಿಸಲಾಗಿದೆ.

ಹಳೆ ಜಾಮರ್ ತೆಗೆದು ಮೂರು ಅತ್ಯಾಧುನಿಕ ಜಾಮರ್ ಅಳವಡಿಸಿದ್ದು, ಈ ಜಾಮರ್‌ಗಳ ಅಳವಡಿಕೆಯಾದ ಬಳಿಕ ಜೈಲಿನ ಒಳಗೆ ಮೊಬೈಲ್ ಅಥವಾ ಇನ್ಯಾವುದೇ ಡಿವೈಸ್‌ ಕೆಲಸ ಮಾಡುತ್ತಿಲ್ಲ ಎಂಬುದನ್ನು ಅಧಿಕಾರಿಗಳು ಖಚಿತಪಡಿಸಿಕೊಂಡಿದ್ದರು.

ಆದರೆ, ಇದರ ತೊಂದರೆ ಶುರುವಾಗಿದ್ದು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ ಅಕ್ಕಪಕ್ಕದ ಮನೆಯವರಿಗೆ. ಅವರು ಸದಾ ನಾಟ್ ರೀಚೆಬಲ್ ಇರುವಂಥಾಯಿತು. ಜೈಲಿನ 500 ಮೀಟರ್ ಪರಧಿಯಲ್ಲಿರುವ ಮನೆ, ಕಚೇರಿಗಳಲ್ಲಿ ಮೊಬೈಲ್ ಫೋನ್‌ ಕೆಲಸ ಮಾಡದಂತಾಯಿತು ಎಂದು ವರದಿ ಹೇಳಿದೆ.

ಪರಪ್ಪನ ಅಗ್ರಹಾರ ಜೈಲಿನ ಅಕ್ಕಪಕ್ಕದ ಮನೆಯವರ ಸಮಸ್ಯೆಗಳಿವು

ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿನ 500 ಮೀಟರ್ ಪರಿಧಿಯಲ್ಲಿರುವ ಅಕ್ಕಪಕ್ಕದ ಮನೆಯವರು ಎದುರಿಸುತ್ತಿರುವ ಸಮಸ್ಯೆಗಳಿವು.

1) ಮೊಬೈಲ್‌ ಫೋನ್ ನೆಟ್‌ವರ್ಕ್‌ ಇಲ್ಲ. ಫೋನ್ ಕರೆ ಬರುವುದೂ ಇಲ್ಲ, ಕರೆ ಮಾಡುವುದಕ್ಕೆ ಸಾಧ್ಯವೂ ಆಗುತ್ತಿಲ್ಲ.

2) ಆರಂಭದಲ್ಲಿ ತಾಂತ್ರಿಕ ಸಮಸ್ಯೆ ಇರಬಹುದು ಎಂದು ಸಿಮ್ ಕಾರ್ಡ್ ಬದಲಾಯಿಸಿ ನೋಡಿ ಆಯಿತು. ಬಳಿಕ ಅದು ಜಾಮರ್‌ ಸಮಸ್ಯೆ ಎಂಬುದು ಖಚಿತವಾಗಿದೆ.

3) ನಿತ್ಯ ಬದುಕಿಗೆ ಆನ್‌ಲೈನ್‌ನಲ್ಲಿ ಏನನ್ನೂ ಆರ್ಡರ್ ಮಾಡುವಂತೆ ಇಲ್ಲ, ಒಟಿಪಿ ಬರುವುದೇ ಇಲ್ಲ.

4) ನೆಟ್‌ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್‌ ಮನೆಯಲ್ಲಿದ್ದುಕೊಂಡು ಮಾಡುವುದು ಸಾಧ್ಯವಾಗುತ್ತಿಲ್ಲ.

5) ಕಾರಾಗೃಹ ಅಧಕಾರಿಗಳು, ಪೊಲೀಸ್ ಅಧಿಕಾರಿಗಳಿಗೆ ಇಮೇಲ್ ಬರೆದಿದ್ದರೂ ಸ್ಪಂದಿಸಿಲ್ಲ ಎಂಬುದು ಸ್ಥಳೀಯರ ಆರೋಪ.

ಪೊಲೀಸರ, ಕಾರಾಗೃಹ ಅಧಿಕಾರಿಗಳ ಸಮಜಾಯಿಷಿ ಏನು

1) ಜೈಲು ಅಧಿಕಾರಿಗಳ ಪ್ರಕಾರ ಈ ಮೊಬೈಲ್‌ ಜಾಮರ್ ಅಳವಡಿಸಿದ್ದರಿಂದಾಗಿ ಜೈಲಿನ 100 ಮೀಟರ್ ಪರಿಧಿಯಲ್ಲಿ ಸಮಸ್ಯೆ ಆಗುತ್ತಿದೆ.

2) ಇಂಥದ್ದೇ ಜಾಮರ್‌ಗಳನ್ನು ದೆಹಲಿ, ತಿಹಾರ್ ಮತ್ತು ಇತರೆ ಜೈಲುಗಳಲ್ಲೂ ಅಳವಡಿಸಲಾಗಿದೆ. ಅಲ್ಲೆಲ್ಲೂ ಇಂತಹ ಸಮಸ್ಯೆ ಎದುರಾದ ವರದಿ ಇಲ್ಲ.

3) ಪದೇಪದೆ ದೂರುಗಳು ಬರುತ್ತಿರುವ ಕಾರಣ, ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂಬ ಕಾರಣಕ್ಕೆ ತಾಂತ್ರಿಕ ಸಮಸ್ಯೆಗಳ ಪರಿಶೀಲನೆಗೆ ಕ್ರಮ ಜರುಗಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.

ಜಮ್ಮು ಮತ್ತು ಕಾಶ್ಮೀರದ 14 ಜೈಲುಗಳಲ್ಲಿ, ತಿಹಾರ್ ಜೈಲಿನಲ್ಲಿ ಇಂತಹ ಜಾಮರ್ ಅಳವಡಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದ ಇತರೆ ಏಳು ಕೇಂದ್ರ ಕಾರಾಗೃಹಗಳಲ್ಲಿ ಜಾಮರ್ ಅಳವಡಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ