logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ಕೆಎಸ್‌ಆರ್‌ ಬೆಂಗಳೂರಿನಿಂದ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ, ವಿವರ ಇಲ್ಲಿದೆ.

Bengaluru News: ಕೆಎಸ್‌ಆರ್‌ ಬೆಂಗಳೂರಿನಿಂದ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ, ವಿವರ ಇಲ್ಲಿದೆ.

Umesh Kumar S HT Kannada

Mar 30, 2024 03:17 PM IST

google News

ಭಾರತೀಯ ರೈಲ್ವೆಯ ರೈಲುಗಳ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ ಎಂಬ ವಿವರ ಈ ವರದಿಯಲ್ಲಿದೆ. ರೈಲೊಂದರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

  • ಕೆಎಸ್‌ಆರ್‌ ಬೆಂಗಳೂರಿನಿಂದ ಸಂಚರಿಸುವ ರೈಲುಗಳ ಸಂಚಾರದಲ್ಲಿ ವ್ಯತ್ಯಯ ಇರುವುದಾಗಿ ನೈಋತ್ಯ ರೈಲ್ವೆ ತಿಳಿಸಿದೆ. ಪ್ರಮುಖವಾಗಿ ಏಪ್ರಿಲ್ 10ರ ತನಕದ ಸಂಚಾರ ವ್ಯತ್ಯಯದ ವಿವರವನ್ನು ಅದು ಪ್ರಕಟಿಸಿದೆ. ಅದರ ವಿವರ ಇಲ್ಲಿದೆ.

ಭಾರತೀಯ ರೈಲ್ವೆಯ ರೈಲುಗಳ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ ಎಂಬ ವಿವರ ಈ ವರದಿಯಲ್ಲಿದೆ. ರೈಲೊಂದರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.
ಭಾರತೀಯ ರೈಲ್ವೆಯ ರೈಲುಗಳ ಮೇಲೆ ಕಲ್ಲು ತೂರಾಟ ಮಾಡಿದವರಿಗೆ ಏನು ಶಿಕ್ಷೆ ಎಂಬ ವಿವರ ಈ ವರದಿಯಲ್ಲಿದೆ. ರೈಲೊಂದರ ಚಿತ್ರವನ್ನು ಸಾಂದರ್ಭಿಕವಾಗಿ ಬಳಸಲಾಗಿದೆ.

ಬೆಂಗಳೂರು: ಕೆಎಸ್‌ಆರ್ ರೈಲ್ವೆ ನಿಲ್ದಾಣದಿಂದ ಹೊರಡುವ ಮೆಮು ರೈಲು ಮತ್ತು ಇತರೆ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ವಿಶೇಷವಾಗಿ ದೇವರಪಲ್ಲಿ ಮತ್ತು ಹಿಂದೂಪುರ ರೈಲು ನಿಲ್ದಾಣಗಳ ನಡುವಿನ ಲೆವೆಲ್ ಕ್ರಾಸಿಂಗ್ ಸಂಖ್ಯೆ 54 ರಲ್ಲಿ ತಾತ್ಕಾಲಿಕ ಗರ್ಡರ್ ಅಳವಡಿಕೆ ಮತ್ತು ಲೈನ್/ಪವರ್ ಬ್ಲಾಕ್‌ ತೆಗೆದುಹಾಕುವ ಕೆಲಸ ಪ್ರಗತಿಯಲ್ಲಿರುವ ಕಾರಣ ಈ ವ್ಯತ್ಯಯ ಉಂಟಾಗಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಕೆಲವು ಮೆಮು ರೈಲುಗಳು ಮತ್ತು ರೈಲುಗಳ ಸಂಚಾರ ರದ್ದುಗೊಂಡರೆ, ಇನ್ನು ಕೆಲವು ಭಾಗಶಃ ರದ್ದುಗೊಂಡಿವೆ. ಇನ್ನು ಕೆಲವು ದಾರಿ ಬದಲಾಯಿಸಿಕೊಂಡು ಚಲಿಸುತ್ತಿವೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಮೆಮು ಸ್ಪೆಷಲ್ ರೈಲು ಸಂಚಾರ ರದ್ದು

ಏಪ್ರಿಲ್ 3 ಮತ್ತು 10 ರಂದು ಈ ರೈಲುಗಳ ಸಂಚಾರ ರದ್ದುಗೊಂಡಿದೆ.

ಕೆಎಸ್‌ಆರ್ ಬೆಂಗಳೂರು- ಧರ್ಮಾವರಂ ಮೆಮು ಸ್ಪೆಷಲ್‌ (ರೈಲು ಸಂಖ್ಯೆ 06595),

ಧರ್ಮಾವರಂ-ಕೆಎಸ್ಆರ್ ಬೆಂಗಳೂರು ಮೆಮು ಸ್ಪೆಷಲ್‌ (ರೈಲು ಸಂಖ್ಯೆ 06596)

ಯಶವಂತಪುರ-ಹಿಂದೂಪುರ ಎಕ್ಸ್‌ಪ್ರೆಸ್ ಸ್ಪೆಷಲ್‌ (ರೈಲು ಸಂಖ್ಯೆ 06517)

ಹಿಂದೂಪುರ-ಯಶವಂತಪುರ ಎಕ್ಸ್‌ಪ್ರೆಸ್ ಸ್ಪೆಷಲ್‌ (ರೈಲು ಸಂಖ್ಯೆ 06518)

ಮೆಮು ಸ್ಪೆಷಲ್ ರೈಲು ಸಂಚಾರ ಭಾಗಶಃ ರದ್ದು

ಏಪ್ರಿಲ್ 3 ಮತ್ತು 10 ರಂದು ಈ ರೈಲುಗಳ ಸಂಚಾರ ಭಾಗಶಃ ರದ್ದುಗೊಂಡಿದೆ.

ಕೆಎಸ್‌ಆರ್ ಬೆಂಗಳೂರು-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಮೆಮು ಸ್ಪೆಷಲ್ (ರೈಲು ಸಂಖ್ಯೆ 06515) ಸಂಚಾರ ಗೌರಿಬಿದನೂರು ಮತ್ತು ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ನಡುವೆ ಮಾತ್ರ ರದ್ದಾಗಿದೆ.

ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ-ಕೆಎಸ್‌ಆರ್ ಬೆಂಗಳೂರು ಮೆಮು ಸ್ಪೆಷಲ್ (ರೈಲು ಸಂಖ್ಯೆ 06516) ಪ್ರಶಾಂತಿ ನಿಲಯಂ ಮತ್ತು ಗೌರಿಬಿದನೂರು ನಡುವೆ ರದ್ದುಗೊಂಡಿದೆ.

ಏಪ್ರಿಲ್ 7 ಮತ್ತು 8 ರಂದು ಈ ರೈಲುಗಳ ಸಂಚಾರ ಭಾಗಶಃ ರದ್ದುಗೊಂಡಿದೆ.

ಕೆಎಸ್‌ಆರ್ ಬೆಂಗಳೂರು-ಧರ್ಮಾವರಂ ಮೆಮು (ರೈಲು ಸಂಖ್ಯೆ 06595) ಗೌರಿಬಿದನೂರು ಮತ್ತು ಧರ್ಮಾವರಂ ನಡುವೆ ರದ್ದುಗೊಂಡಿದೆ.

ಧರ್ಮವರಂ-ಕೆಎಸ್‌ಆರ್ ಬೆಂಗಳೂರು ಮೆಮು (ರೈಲು ಸಂಖ್ಯೆ 06596) ಧರ್ಮಾವರಂ ಮತ್ತು ಗೌರಿಬಿದನೂರು ನಡುವೆ ರದ್ದುಗೊಂಡಿದೆ.

ರೈಲು ಮಾರ್ಗ ಬದಲಾವಣೆ

ಜೈಪುರ - ಮೈಸೂರು ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 12976) ಏಪ್ರಿಲ್ 1 ಮತ್ತು 8 ರಂದು ಗುಂತಕಲ್‌, ಬಳ್ಳಾರಿ, ರಾಯದುರ್ಗ, ಅರಸೀಕೆರೆ, ಹಾಸನ ಮತ್ತು ಮೈಸೂರು ಮಾರ್ಗವಾಗಿ ಚಲಿಸಲಿದೆ. ಅನಂತಪುರ ಮತ್ತು ಮಂಡ್ಯ ನಿಲುಗಡೆಗಳು ಇರಲ್ಲ.

ವಾರಕ್ಕೆ ಮೂರು ಸಲ ಸಂಚರಿಸುವ ಸರ್‌ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು - ಗುವಾಹಟಿ ಎಕ್ಸ್‌ಪ್ಸ್ (ರೈಲು ಸಂಖ್ಯೆ 12509) ಏಪ್ರಿಲ್ 3,5,10, 12, 17, 19,24 ಮತ್ತು 26ರಂದು ವಿಜಯವಾಡ, ಗುಡಿವಾಡ, ಭೀಮಾವರಂ ಟೌನ್‌, ನಿಡದವೋಲು ಸ್ಟೇಷನ್‌ ಮೂಲಕ ಸಂಚರಿಸಲಿದೆ.

ಟಾಟಾನಗರ- ಯಶವಂತಪುರ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 18111) ಟಾಟಾನಗರದಿಂದ ಏಪ್ರಿಲ್‌ 4,11, 18 ಮತ್ತು 25 ರಂದು ಹೊರಡಲಿದ್ದು, ನಿಡದವೋಲು, ಭೀಮಾವರಂ ಟೌನ್, ಗುಡಿವಾಡ, ವಿಜಯವಾಡ ದಾರಿಯಾಗಿ ಈಳೂರು ನಿಲ್ದಾಣ ತಪ್ಪಿಸಿಕೊಂಡು ಬರಲಿದೆ.

ರೈಲುಗಳ ಸಂಚಾರ ಸಮಯ ಮರುನಿಗದಿ, ನಿರ್ಬಂಧ

ಏಪ್ರಿಲ್ 3 ಮತ್ತು 10 ರಂದು, ಕಲಬುರಗಿ-ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22231) ಕಲಬುರಗಿಯಿಂದ 320 ನಿಮಿಷಗಳು ಮತ್ತು ಎಸ್‌ಎಂವಿಟಿ ಬೆಂಗಳೂರು-ಕಲಬುರಗಿ ವಂದೇ ಭಾರತ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 22232) ಎಸ್‌ಎಂವಿಟಿ ಬೆಂಗಳೂರಿನಿಂದ 60 ನಿಮಿಷಗಳಷ್ಟು ಮರುಹೊಂದಿಸಲಾಗಿದೆ.

ಇದೇ ರೀತಿ, ಏಪ್ರಿಲ್ 3 ಮತ್ತು 10ರಂದು ಕೆಎಸ್‌ಆರ್‌ ಬೆಂಗಳೂರು- ಭುವನೇಶ್ವರ ಪ್ರಶಾಂತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 18464) ರೈಲು ಸಂಚಾರ 75 ನಿಮಿಷ ನಿರ್ಬಂಧಿಸಲ್ಪಡಲಿದೆ. ಇದೇ ರೀತಿ, ಸಿಎಸ್‌ಎಂಟಿ ಮುಂಬೈ ತಿರುವನಂತಪುರಂ ಸೆಂಟ್ರಲ್ (ರೈಲು ಸಂಖ್ಯೆ 16331) ರೈಲು ಸಂಚಾರವು ಏಪ್ರಿಲ್ 7ರಂದು 100 ನಿಮಿಷ ನಿರ್ಬಂಧಿಸಲ್ಪಡಲಿದೆ.

ಕನ್ಯಾಕುಮಾರಿ ಎಕ್ಸ್‌ಪ್ರೆಸ್ ಸಂಚಾರ ಕೊಚುವೇಲಿಯಲ್ಲಿ ಮೊಟಕು

ಮಾರ್ಚ್ 28 ರಿಂದ 31ರ ತನಕ ಕೆಎಸ್‌ಆರ್ ಬೆಂಗಳೂರು - ಕನ್ಯಾಕುಮಾರಿ ಡೇಲಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16526) ಟ್ರಿವೆಂಡ್ರಮ್‌ ಪೆಟ್ಟಾ ಕನ್ಯಾಕುಮಾರಿ ತನಕ ಹೋಗಲ್ಲ. ಬದಲಾಗಿ ಕೊಚುವೇಲಿಯಲ್ಲಿ ಸಂಚಾರ ಮೊಟಕುಗೊಳಿಸಲಿದೆ. ಇದೇ ರೀತಿ ಕನ್ಯಾಕುಮಾರಿ - ಕೆಎಸ್‌ಆರ್‌ ಬೆಂಗಳೂರು ಡೇಲಿ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 16525) ಮಾರ್ಚ್29ರಿಂದ ಏಪ್ರಿಲ್ 1 ರ ತನಕ ಕೊಚುವೇಲಿಯಿಂದಲೇ ಪ್ರಯಾಣ ಶುರುಮಾಡಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ