logo
ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: ರಾಜಾಜಿನಗರ ಡಾ ರಾಜ್‌ಕುಮಾರ್‌ ರಸ್ತೆಯಲ್ಲಿ ಟೈಪ್ ಟಾಪಿಂಗ್ ಕಾಮಗಾರಿ ಆರಂಭ; ಇನ್ನು ಕೆಲ ತಿಂಗಳು ಸಂಚಾರ ಅಸ್ತವ್ಯಸ್ತ

Bengaluru News: ರಾಜಾಜಿನಗರ ಡಾ ರಾಜ್‌ಕುಮಾರ್‌ ರಸ್ತೆಯಲ್ಲಿ ಟೈಪ್ ಟಾಪಿಂಗ್ ಕಾಮಗಾರಿ ಆರಂಭ; ಇನ್ನು ಕೆಲ ತಿಂಗಳು ಸಂಚಾರ ಅಸ್ತವ್ಯಸ್ತ

HT Kannada Desk HT Kannada

Jul 27, 2024 07:31 PM IST

google News

ರಾಜಾಜಿನಗರ ಡಾ ರಾಜ್‌ಕುಮಾರ್‌ ರಸ್ತೆಯಲ್ಲಿ ಟೈಪ್ ಟಾಪಿಂಗ್ ಕಾಮಗಾರಿ ಆರಂಭ; ಇನ್ನು ಕೆಲ ತಿಂಗಳು ಸಂಚಾರ ಅಸ್ತವ್ಯಸ್ತ

    • ಮುಂದಿನ 6 ತಿಂಗಳ ಕಾಲ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿದೆ. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಸುವ ವಿಶ್ವಾಸ ಇದೆ ಎಂದು ಬಿಬಿಎಂಪಿ ತಿಳಿಸಿದೆ. (ವರದಿ: ಮಾರುತಿ ಎಚ್.)
ರಾಜಾಜಿನಗರ ಡಾ ರಾಜ್‌ಕುಮಾರ್‌ ರಸ್ತೆಯಲ್ಲಿ ಟೈಪ್ ಟಾಪಿಂಗ್ ಕಾಮಗಾರಿ ಆರಂಭ; ಇನ್ನು ಕೆಲ ತಿಂಗಳು ಸಂಚಾರ ಅಸ್ತವ್ಯಸ್ತ
ರಾಜಾಜಿನಗರ ಡಾ ರಾಜ್‌ಕುಮಾರ್‌ ರಸ್ತೆಯಲ್ಲಿ ಟೈಪ್ ಟಾಪಿಂಗ್ ಕಾಮಗಾರಿ ಆರಂಭ; ಇನ್ನು ಕೆಲ ತಿಂಗಳು ಸಂಚಾರ ಅಸ್ತವ್ಯಸ್ತ (ಸಂಗ್ರಹ ಚಿತ್ರ)

ಬೆಂಗಳೂರು: ನಗರದ ರಾಜಾಜಿನಗರ 1ನೇ ಬಾಕ್‌ನಿಂದ ಡಾ ರಾಜ್‌ಕುಮಾರ್ ರಸ್ತೆ 10ನೇ ಕ್ರಾಸ್‌ವರೆಗೆ ಜುಲೈ 25 ರಿಂದ ವೈಟ್‌ಟಾಪಿಂಗ್ ಕಾಮಗಾರಿ ಆರಂಭವಾಗಿದೆ. ಈ ಮಾರ್ಗದಲ್ಲಿ ಎಲ್ಲ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಮುಂದಿನ 6 ತಿಂಗಳ ಕಾಲ ಈ ಭಾಗದಲ್ಲಿ ಸಂಚರಿಸುವ ವಾಹನ ಸವಾರರು ತೊಂದರೆ ಅನುಭವಿಸಬೇಕಾಗಿದೆ. ಈ ವರ್ಷದ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿ ಮುಗಿಸುವ ವಿಶ್ವಾಸ ಇದೆ ಎಂದು ಬಿಬಿಎಂಪಿ ತಿಳಿಸಿದೆ.

ವೈಟ್ ಟಾಪಿಂಗ್ ಕಾಮಗಾರಿ ಹಿನ್ನೆಲೆಯಲ್ಲಿ ಕಾಮಗಾರಿ ಮುಕ್ತಾಯವಾಗುವವರೆಗೂ ರಾಜಾಜಿನಗರ 1ನೇ ಬ್ಲಾಕ್‌ನಿಂದ ಡಾ ರಾಜ್ ಕುಮಾರ್ ರಸ್ತೆಯ 10ನೇ ಕ್ರಾಸ್‌ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ಇಸ್ಕಾನ್ ಎಂಟ್ರಿ ಕಡೆಯಿಂದ ಬರುವ ವಾಹನಗಳು ನೇರವಾಗಿ ಸ್ಟಾರ್ ಸರ್ಕಲ್ (ಮೋದಿ ಬ್ರಿಡ್ಜ್) ಎಡ ತಿರುವು ಮೂಲಕ ನವರಂಗ್ ವೃತ್ತದ ಬಳಿ ಎಡ ತಿರುವು ಪಡೆದು ಡಾ ರಾಜ್‌ಕುಮಾರ್ ರಸ್ತೆ 10ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ.

ಇಸ್ಕಾನ್ ಕಡೆಯಿಂದ ಪ್ರವೇಶಿಸುವ ವಾಹನಗಳು ಸ್ಟಾರ್ ಸರ್ಕಲ್ (ಮೋದಿ ಬ್ರಿಡ್) ಸಮೀಪ ಎಡ ತಿರುವು ಪಡೆದು, ನವರಂಗ್ ವೃತ್ತ ತಲುಪಿ ಅಲ್ಲಿಂದ ಎಡ ತಿರುವು ಪಡೆದು ಡಾ.ರಾಜ್ ಕುಮಾರ್ ರಸ್ತೆ 10ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ. ಮಹಾಲಕ್ಷ್ಮಿ ಲೇಔಟ್ ಕಡೆಯಿಂದ ಆಗಮಿಸುವ ವಾಹನಗಳು ಮೇಲ್ಸೇತುವೆ ಕೆಳಗೆ ಬಂದು ಸ್ಟಾರ್ ಸರ್ಕಲ್ (ಮೋದಿ ಬ್ರಿಡ್) ಬಳಿ ಬಲ ತಿರುವು ಪಡೆದು ನವರಂಗ್ ವೃತ್ತ ತಲುಪಿ ಅಲ್ಲಿಂದ 10ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ.

ರಾಜಾಜಿನಗರ ಮೆಟ್ರೋ ಸ್ಟೇಷನ್ ಕಡೆಯಿಂದ ಸಂಚರಿಸುವ ವಾಹನಗಳು ರಾಜಾಜಿನಗರ 1ನೇ ಬ್ಲಾಕ್ ಜಂಕ್ಷನ್‌ನಲ್ಲಿ ಯು ಟರ್ನ್ ಪಡೆದು ಸ್ಟಾರ್ ಸರ್ಕಲ್ (ಮೋದಿ ಬ್ರಿಡ್ಜ್) ತಲುಪಿ, ನವರಂಗ್ ಜಂಕ್ಷನ್ ತಲುಪಲು ಇಲ್ಲಿ ತಿರುವು ಪಡೆಯಬೇಕಿದೆ. ರಾಜಾಜಿನಗರ ಮೆಟ್ರೋ ಸ್ಟೇಷನ್ ಕಡೆಯಿಂದ ಸಂಚರಿಸುವ ವಾಹನಗಳು ನೇರವಾಗಿ ಜಿಎಸ್‌ಎಫ್ ಮುಖಾಂತರ ಡಾ.ರಾಜ್ ಕುಮಾರ್ 10ನೇ ಕ್ರಾಸ್ ಕಡೆಗೆ ಸಂಚರಿಸಬಹುದಾಗಿದೆ. 5-6 ತಿಂಗಳ ಕಾಲ ಈ ಅಡಚಣೆಗೆ ಸಾರ್ವಜನಿಕರು ಸಹಕರಿಸಲು ಮಲ್ಲೇಶ್ವರಂ ಸಂಚಾರ ಠಾಣೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.

1,800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಬೆಂಗಳೂರಿನ 157 ಕಿಮೀ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದರು. ಬೆಂಗಳೂರಿನ ರಸ್ತೆಗಳಲ್ಲಿ ಗುಂಡಿಗಳು ಸಾಮಾನ್ಯವಾಗಿದ್ದು ವೈಟ್ ಟಾಪಿಂಗ್ ಈ ಸಮಸ್ಯೆಗೆ ಪರಿಹಾರ ನೀಡಲಿದೆ. ಈ ನಿಟ್ಟಿನಲ್ಲಿ 200 ಕೋಟಿ ರೂಪಾಯಿ ವೆಚ್ಚದಲ್ಲಿ ಚಾಮರಾಜಪೇಟೆ, ಗಾಂಧಿನಗರ, ಮಲ್ಲೇಶ್ವರಂ ಮತ್ತು ಮಹಾಲಕ್ಷ್ಮಿ ಲೇಔಟ್ ನ 19.67 ಕಿಮೀ ರಸ್ತೆಯನ್ನು ವೈಟ್ ಟಾಪಿಂಗ್ ಮಾಡಲಾಗುತ್ತಿದೆ.

ಮುಂದಿನ 25 ವರ್ಷಗಳ ಅವಧಿಗೆ ವೈಟ್ ಟಾಪಿಂಗ್ ರಸ್ತೆಗಳು ಗುಂಡಿ ಮುಕ್ತವಾಗಿರುತ್ತವೆ. ಪ್ರತಿದಿನ 3-4 ವಾರ್ಡ್ ಗಳಲ್ಲಿ ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ ಮತ್ತು ನಿಗದಿತ ಅವಧಿಯೊಳಗೆ ಮುಗಿಯಲಿದೆ. 200 ಕಿಮೀ ರಸ್ತೆಯನ್ನು ವೈಟ್ ಟಾಪಿಂಗ್ ಮಾಡುವ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶ ಇದೆ ಎಂದು ಅವರು ತಿಳಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ