Bengaluru Weather: ಮುಂಜಾನೆ ಮಂಜು ಮುಸುಕಿದ ಬೆಂಗಳೂರಲ್ಲಿ ಇಂದು ಚಳಿ ಮತ್ತು ಹಗಲು ಹೊತ್ತಲ್ಲಿ ಒಣ ಹವೆಯ ಮುನ್ಸೂಚನೆ
Jan 03, 2024 06:13 AM IST
ಬೆಂಗಳೂರು ವ್ಯಾಪ್ತಿಯಲ್ಲಿ ಕೆಲವೆಡೆ ಇಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದ.
ಕರ್ನಾಟಕದ ರಾಜಧಾನಿ ಬೆಂಗಳೂರಲ್ಲಿ ಇಂದು (ಜ.3) ಕೂಡ ಚಳಿ ಮತ್ತು ಒಣಹವೆ ಇರಲಿದೆ. ಬೆಂಗಳೂರಿನ ಕೆಲವೆಡೆ ಮುಂಜಾನೆ ಮಂಜು ಕವಿದ ವಾತಾವರಣ ಇರಲಿದೆ. ರಾತ್ರಿ ವೇಳೆ ಚಳಿಯ ತೀವ್ರತೆ ಹೆಚ್ಚಿರಲಿದೆ. ಹಗಲು ಹೊತ್ತಿನಲ್ಲಿ ಒಣ ಹವೆ ಇದ್ದು, ವಿವಿಧೆಡೆ ಭಾಗಶಃ ಮೋಡ ಕವಿದ ವಾತಾವರಣ ಮುದ ನೀಡಲಿದೆ.
ಬೆಂಗಳೂರಿನ ಕೆಲವೆಡೆ ಮುಂಜಾನೆ ಮಂಜು ಕವಿದ ವಾತಾವರಣ ಮತ್ತು ಹಗಲಲ್ಲಿ ಭಾಗಶಃ ಮೋಡ ಮುಸುಕಿದಂತೆ ಇರುವ ಕಾರಣ ಮುದ ನೀಡುವ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ದಕ್ಷಿಣ ಒಳನಾಡಿನ ಭಾಗವಾಗಿರುವ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಭಾಗದಲ್ಲಿ ನಿನ್ನೆ (ಜ.2) ಇದ್ದ ವಾತಾವರಣವೇ ಇಂದು (ಜ.3) ಕೂಡ ಮುಂದುವರಿಯಲಿದೆ. ಇದರಂತೆ, ರಾತ್ರಿ ವೇಳೆ ಚಳಿ ಮತ್ತು ಹಗಲು ಹೊತ್ತಿನಲ್ಲಿ ಒಣ ಹವೆ ಇರಲಿದೆ. ಆದಾಗ್ಯೂ, ಭಾಗಶಃ ಮೋಡ ಕವಿದ ವಾತಾವರಣ ಇರುವ ಕಾರಣ ತಾಪಮಾನದಲ್ಲಿ ಬಹಳ ವ್ಯತ್ಯಾಸ ಇರಲ್ಲ. ಮುದ ನೀಡುವ ವಾತಾವರಣ ಕಾಣಬಹುದು.
ಮುಂದಿನ 24 ಗಂಟೆ ಅವಧಿಯಲ್ಲಿ ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಹಗಲು ಹೊತ್ತಿನಲ್ಲಿ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ವರದಿ ವಿವರ ನೀಡಿದೆ.
ಬೆಂಗಳೂರು ಮಹಾನಗರದ ಕೆಲವು ಪ್ರದೇಶಗಳಲ್ಲಿ ಮುಂಜಾನೆ ಹೊತ್ತು ಮಂಜು ಮುಸುಕಿದ ವಾತಾವರಣ ಇರಲಿದೆ. ವಾತಾವರಣದಲ್ಲಿ ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಶಿಯಸ್ ಮತ್ತು ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಶಿಯಸ್ ನಡುವೆ ಇರಲಿದೆ ಎಂದು ಬೆಂಗಳೂರ ಹವಾಮಾನ ಕೇಂದ್ರದ ಮೂಲಗಳು ತಿಳಿಸಿವೆ.
ಇನ್ನುಳಿದ ಹಾಗೆ, ದಕ್ಷಿಣ ಒಳನಾಡಿನ ಜಿಲ್ಲೆಗಳ ಪೈಕಿ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಬೀಳಬಹುದು ಎಂದು ಮುನ್ಸೂಚನೆ ವರದಿ ವಿವರಿಸಿದೆ. ಇದಲ್ಲದೆ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜ ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಮತ್ತು ವಿಜಯನಗರಗಳಲ್ಲಿ ಚಳಿ ಮತ್ತು ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.