logo
ಕನ್ನಡ ಸುದ್ದಿ  /  ಕರ್ನಾಟಕ  /  Bidar News: ಸ್ವಪಕ್ಷದ ಮಾಜಿ ಸಚಿವ ಪ್ರಭು ಚವ್ಹಾಣ್‌ ವಿರುದ್ಧ 100 ಕೋಟಿ ಮಾನನಷ್ಟ ಪ್ರಕರಣ ದಾಖಲಿಸಲು ಕೇಂದ್ರ ಸಚಿವ ಭಗವಂತ ಖೂಬಾ ನಿರ್ಧಾರ

Bidar News: ಸ್ವಪಕ್ಷದ ಮಾಜಿ ಸಚಿವ ಪ್ರಭು ಚವ್ಹಾಣ್‌ ವಿರುದ್ಧ 100 ಕೋಟಿ ಮಾನನಷ್ಟ ಪ್ರಕರಣ ದಾಖಲಿಸಲು ಕೇಂದ್ರ ಸಚಿವ ಭಗವಂತ ಖೂಬಾ ನಿರ್ಧಾರ

HT Kannada Desk HT Kannada

Aug 13, 2023 07:40 AM IST

google News

ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಭು ಚೌವ್ಹಾಣ್.

  • ಕೇಂದ್ರ ಸಚಿವ ಭಗವಂತ ಖೂಬಾ ಅವರು ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ . ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ, ಹಾಲಿ ಶಾಸಕ ಪ್ರಭು ಚವ್ಹಾಣ್ ಆರೋಪಿಸಿದ್ದರು.

ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಭು ಚೌವ್ಹಾಣ್.
ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪ್ರಭು ಚೌವ್ಹಾಣ್.

ಬೀದರ್:‌ ತನ್ನನ್ನು ಹತ್ಯೆ ಮಾಡಿ ವಿಧಾನಸಭೆಯ ಉಪ ಚುನಾವಣೆ ನಡೆಸಲು ಕೇಂದ್ರ ಸಚಿವ ಖೂಬಾ ಅವರು ಸಂಚು ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಸ್ವಪಕ್ಷದ ಮಾಜಿ ಸಚಿವ, ಹಾಲಿ ಶಾಸಕ ಪ್ರಭು ಚವ್ಹಾಣ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಕೇಂದ್ರ ರಾಸಾಯನಿ, ರಸಗೊಬ್ಬರ ಸಚಿವ ಭಗವಂತ ಖೂಬಾ ಅವರು ಚವ್ಹಾಣ್‌ ವಿರುದ್ಧ 100 ಕೋಟಿ ರೂ.ಮಾನನಷ್ಟ ಪ್ರಕರಣ ದಾಖಲಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಸಚಿವರು, ಮಾಜಿ ಸಚಿವ ಪ್ರಭು ಚವ್ಹಾಣ್ ಆರೋಪ ಮೋಸ ಮತ್ತು ಕಪಟದಿಂದ ಕೂಡಿದೆ ಎಂದಿದ್ದಾರೆ. ಮಂಡಲದ ಕಾರ್ಯಕಾರಣಿಯಲ್ಲಿ ಮಾತನಾಡುವ ಎಲ್ಲರ ಮಾತು ಬಿಟ್ಟು ನನ್ನ ಮೇಲೆ ಸಾರ್ವಜನಿಕವಾಗಿ ಆರೋಪ ಮಾಡಿದ್ದಾರೆ. ಇದರಿಂದ ಆಘಾತನಾಗಿದ್ದೇನೆ. ಹೇಳಿಕೊಳ್ಳಲಾಗದಷ್ಡು ಮನಸ್ಸಿಗೆ ನೋವಾಗಿದೆ. ನನ್ನ ಕುಟುಂಬ ಕೂಡ ವಿಚಲಿತವಾಗಿದೆ. ಪಕ್ಷದ ಕಾರ್ಯಕರ್ತರು, ಹಿತೈಶಿಗಳು ನಿರಂತರವಾಗಿ ಸಂಪರ್ಕ ಮಾಡಿ ಧೈರ್ಯ ತುಂಬುತ್ತಿದ್ದಾರೆ ಎಂದಿದ್ದಾರೆ.

ಚವ್ಹಾಣ್ ಆರೋಪ ಮೋಸ ಮತ್ತು ಕಪಟದಿಂದ ಕೂಡಿದೆ

ಪ್ರಭು ಚವ್ಹಾಣ್ ಆರೋಪ ಮೋಸ ಮತ್ತು ಕಪಟದಿಂದ ಕೂಡಿದೆ. ಒಂಭತ್ತು ವರ್ಷದ ಹಿಂದೆ ಇದೇ ರೀತಿ ಆರೋಪ ಮಾಡಿದ್ದರು. ನಮ್ಮ ಪಕ್ಷದಲ್ಲಿ ಈ ಎಲ್ಲ ಸಮಸ್ಯೆ ಬಗೆಹರಿಯುತ್ತವೆ. ತಪ್ಪು ತಿಳುವಳಿಕೆ ಸರಿಯಾಗಬಹುದು ಎಂದು ಭಾವಿಸಿದ್ದೆ. ಆದರೆ ಇದರ ಹಿಂದೆ ತಂತ್ರ ಕುತಂತ್ರ ಮೋಸ ಕಪಟದಿಂದ ಕೂಡಿದೆ ಎಂದು ಅರ್ಥವಾಗಿದೆ ಎಂದು ಸಚಿವ ಖೂಬಾ ಅಭಿಪ್ರಾಪಟ್ಟಿದ್ದಾರೆ.

ಪಕ್ಷದ ಸೇವೆ ನೋಡಿ ಮೋದಿ ಅವರು ಮಂತ್ರಿ ಮಂಡಲದಲ್ಲಿ ಅವಕಾಶ ನೀಡಿದ್ದಾರೆ. ಮಂತ್ರಿ ಮಾಡುವ ಮುನ್ನ ನನ್ನ ಚರಿತ್ರೆ ಗಮನ ಹರಿಸುತ್ತಾರೆ. ನಾನು ಜನ ಸೇವೆ ಮಾಡಲು ರಾಜಕೀಯಕ್ಕೆ ಬಂದಿದ್ದೇನೆ. ಆದರೆ ಈ ಆರೋಪ ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ. ಜಿಲ್ಲೆಯಲ್ಲಿ ಶಾಸಕರ ಸಂಖ್ಯೆಯನ್ನು ಒಂದರಿಂದ ನಾಲ್ಕಕ್ಕೆ ಹೆಚ್ಚಿಸಿದೆ. ಇಂತಹ ಸಮಯದಲ್ಲಿ ಪ್ರಭು ಚವ್ಹಾಣ್‌ ಎಲ್ಲರ ಜೊತೆಗೆ ಸಂಭ್ರಮ ಮಾಡಬೇಕಿತ್ತು. ಆದರೆ ದೋಷಣೆ ಮಾಡುತ್ತಿದ್ದಾರೆ ಎಂದು ಆಪಾದಿಸಿದ್ದಾರೆ.

ಸತ್ಯಾಸತ್ಯತೆಯನ್ನು ವರಿಷ್ಠರ ಹೊರ ಹಾಕಲಿದ್ದಾರೆ

ಇದು ಚವ್ಹಾಣ್‌ ಅವರ ತಂತ್ರ ಕುತಂತ್ರದ ಆಟ. ಎಲ್ಲ ಆದರೂ ಮಾಧ್ಯಮಕ್ಕೆ ಹೋಗಿಲ್ಲ. ನಮ್ಮ ನಾಯಕರು ಮಾಹಿತಿ ಪಡೆದುಕೊಂಡಿದ್ದಾರೆ. ನನ್ನ ಭಾವನೆ ಹೇಳಿಕೊಂಡಿದ್ದೇನೆ. ಪಕ್ಷದ ವೇದಿಕೆಯಲ್ಲಿ ಸತ್ಯಾಸತ್ಯತೆಯನ್ನು ವರಿಷ್ಠರ ಹೊರ ಹಾಕಲಿದ್ದಾರೆ. ನೂರು ಕೋಟಿ ಮಾನ ಹಾನಿ ಕೇಸ್ ಹಾಕಲು ನಿರ್ಧರಿಸಿದ್ದೇನೆ. ವರಿಷ್ಠರು ಅನುಮತಿ ನೀಡಿದರೆ ದೂರು ದಾಖಲಿಸುತ್ತೇನೆ ಎಂದು ತಿಳಿಸಿದ್ದಾರೆ.

ಮಾಜಿ ಸಚಿವ ಚವ್ಹಾಣ್‌ ಅವರ ಆರೋಪವೇನು?

ಬೀದರ್ ಜಿಲ್ಲೆ ಔರಾದನಲ್ಲಿ ಆಗಸ್ಟ್ 9 ರಂದು ನಡೆದ ಕಾರ್ಯಕಾರಿಣಿ ಸಭೆ ನಡೆಸಲಾಗಿತ್ತು. ಈ ಸಭೆಯಲ್ಲಿ ಮಾಜಿ ಸಚಿವ ಪ್ರಭು ಚವ್ಹಾಣ್‌ ಅವರು ಮಾತನಾಡಿ, ಭಗವಂತ ಖೂಬಾಗೆ ನನ್ನ ಮೇಲೆ ಕೋಪವಿದ್ದರೆ ಗುಂಡಿಕ್ಕಿ ಹತ್ಯೆ ಮಾಡಲಿ. ಆದರೆ ನಮ್ಮ ಪಕ್ಷ, ಕಾರ್ಯಕರ್ತರಿಗೆ ಖೂಬಾ ದ್ರೋಹ ಮಾಡದಿರಲಿ. ಭಗವಂತ ಖೂಬಾ ನನ್ನನ್ನು ಸೋಲಿಸಲು ಸಾಕಷ್ಟು ಪ್ರಯತ್ನ ಮಾಡಿದರು. ವಿಫಲವಾಗಿ ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದರು.

ಕೇಂದ್ರ ಸಚಿವ ಭಗವಂತ ಖೂಬಾ ಅವರು ಗೂಂಡಾಗಳನ್ನು ಬಿಟ್ಟು ನನ್ನ ಹತ್ಯೆಗೆ ಸಂಚು ಮಾಡುತ್ತಿದ್ದಾರೆ . ನನ್ನನ್ನು ಕೊಂದು 6 ತಿಂಗಳಲ್ಲಿ ಉಪ ಚುನಾವಣೆಗೆ ಕುತಂತ್ರ ಮಾಡುತ್ತಿದ್ದಾರೆ. ಇದಕ್ಕಾಗಿ ರಸ್ತೆ ಮಧ್ಯೆ ಗುಂಡುಹಾರಿಸಿ ಕೊಲೆ ಮಾಡಿಸಲು ಸಂಚು ರೂಪಿಸಲಾಗಿದೆ. ಭಗವಂತ ಖೂಬಾ ಬೆಂಬಲಿಗರಿಂದಲೇ ನನಗೆ ಗೊತ್ತಾಗಿದೆ ಎಂದಿದ್ದರು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ