logo
ಕನ್ನಡ ಸುದ್ದಿ  /  ಕರ್ನಾಟಕ  /  Bjp Banks On Modi Hava: ಅಧಿಕಾರ ಗದ್ದುಗೆ ಏರಲು ಮೋದಿ ಹವಾ ನೆಚ್ಚಿಕೊಳ್ಳುತ್ತಾ ಬಿಜೆಪಿ; ಸೋಷಿಯಲ್‌ ಇಂಜಿನಿಯರಿಂಗ್‌ ಮಾಡೆಲ್‌ ಪ್ರಯೋಗ

BJP banks on Modi hava: ಅಧಿಕಾರ ಗದ್ದುಗೆ ಏರಲು ಮೋದಿ ಹವಾ ನೆಚ್ಚಿಕೊಳ್ಳುತ್ತಾ ಬಿಜೆಪಿ; ಸೋಷಿಯಲ್‌ ಇಂಜಿನಿಯರಿಂಗ್‌ ಮಾಡೆಲ್‌ ಪ್ರಯೋಗ

Umesh Kumar S HT Kannada

Mar 30, 2023 02:52 PM IST

ವಿಜಯ ಸಂಕಲ್ಪ ಯಾತ್ರೆಯ ಮಹಾಸಂಕಲ್ಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ)

  • BJP banks on Modi hava: ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಆಗಿದೆ. ಆಡಳಿತ ಚುಕ್ಕಾಣಿ ಉಳಿಸಿಕೊಳ್ಳುವುದಕ್ಕೆ ಆಡಳಿತಾರೂಢ ಬಿಜೆಪಿ ಈ ಸಲ ಯಾವುದನ್ನು ನೆಚ್ಚಿಕೊ‍ಳ್ಳಲಿದೆ? ಮೋದಿ ಹವಾ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಭಿವೃದ‍್ಧಿ ಕಾರ್ಯಕ್ರಮಗಳು, ಮಹತ್ವಾಕಾಂಕ್ಷಿ ಯೋಜನೆಗಳು? ಇಲ್ಲಿದೆ ಒಂದು ಕಿರುನೋಟ.

ವಿಜಯ ಸಂಕಲ್ಪ ಯಾತ್ರೆಯ ಮಹಾಸಂಕಲ್ಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ)
ವಿಜಯ ಸಂಕಲ್ಪ ಯಾತ್ರೆಯ ಮಹಾಸಂಕಲ್ಪ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ (ಕಡತ ಚಿತ್ರ) (BJP Karnataka Twitter )

ಕರ್ನಾಟಕ ವಿಧಾನಸಭಾ ಚುನಾವಣೆ ಘೋಷಣೆ ಆಗಿದ್ದು, ಮೇ 10ರಂದು ಮತದಾನ ನಡೆಯಲಿದೆ. ಜೆಡಿಎಸ್‌, ಕಾಂಗ್ರೆಸ್‌ ಪಕ್ಷಗಳು ಈಗಾಗಲೇ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿವೆ. ಬಿಜೆಪಿಯಲ್ಲಿ ಇನ್ನೂ ಅಭ್ಯರ್ಥಿಗಳ ವಿಚಾರ ಅಂತಿಮವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಮತದಾರರ ಮನವೊಲಿಸಲು ಬಿಜೆಪಿ ನಾಯಕರು ಈಗಾಗಲೇ ಯಾತ್ರೆಗಳನ್ನು ಕೈಗೊಂಡಿರುವುದು ವೇದ್ಯ ವಿಚಾರ. ಅವೆಲ್ಲ ಏನೇ ಇದ್ದರೂ ಚುನಾವಣೆ ಘೋಷಣೆ ಆದ ನಂತರದ ಈ ಕಾಲಘಟ್ಟ ಅತ್ಯಂತ ನಿರ್ಣಾಯಕ.

ಟ್ರೆಂಡಿಂಗ್​ ಸುದ್ದಿ

Hassan Sex Scandal; ಹಾಸನ ಸಂಸದ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಲೈಂಗಿಕ ದೌರ್ಜನ್ಯ ಕೇಸ್‌ ಏನಾಯಿತು, ಇದುವರೆಗಿನ 10 ಪ್ರಮುಖ ಅಂಶಗಳು

ನೂರಾರು ವಿದ್ಯಾರ್ಥಿಗಳ ನೆನಪಿನಂಗಳದಲ್ಲಿ ಉಳಿದಿರುವ ಗುರುಮಾತೆ; ದಿವಂಗತ ವಿದ್ಯಾ ಸರಸ್ವತಿ ಚೂಂತಾರು - ವ್ಯಕ್ತಿ ವ್ಯಕ್ತಿತ್ವ ಅಂಕಣ

Hassan Scandal: ವಾಟ್ಸ್‌ ಆಪ್‌ ಮೂಲಕವೂ ವಿಡಿಯೋ ಹಂಚಿದರೆ ಕ್ರಮ, ಎಸ್‌ಐಟಿ ಎಚ್ಚರಿಕೆ

ಸೋಮವಾರ ರಾತ್ರಿಯಿಂದ 108 ಆಂಬುಲೆನ್ಸ್ ನೌಕರರ ಅನಿರ್ದಿಷ್ಟಾವಧಿ ಮುಷ್ಕರ: ಆರೋಗ್ಯ ಸೇವೆಯಲ್ಲಿ ವ್ಯತ್ಯಯ; ಅವರ ಬೇಡಿಕೆಗಳೇನು?

ಅಧಿಕಾರ ಗದ್ದುಗೆಯನ್ನು ಮತ್ತೆ ಖಾತರಿಪಡಿಸುವಂತಹ ಜನಾದೇಶ ಪಡೆಯಲು ಬಿಜೆಪಿಯ ರಣತಂತ್ರವೇನು?

ಹೀಗೊಂದು ಪ್ರಶ್ನೆಯನ್ನು ಪಕ್ಷದ ಪ್ರಮುಖರ ಮುಂದಿಟ್ಟರೆ ಅವರು ಹೇಳುವುದಿಷ್ಟು. ಬೊಮ್ಮಾಯಿ ಸರ್ಕಾರ ಒಂದಷ್ಟು ಕಲ್ಯಾಣ ಯೋಜನೆ, ಅಭಿವೃದ್ಧಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳೂ ರಾಜ್ಯದಲ್ಲಿ ಯಶಸ್ವಿಯಾಗಿ ಜಾರಿಯಾಗಿದೆ. ಇದರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆ ಇನ್ನೂ ಉಳಿದುಕೊಂಡಿರುವ ಕಾರಣ ಅದು ಕೆಲಸ ಮಾಡಲಿದೆ ಎಂಬ ಉತ್ತರ ಬರುತ್ತದೆ.

ತಳಮಟ್ಟದಲ್ಲಿ ಪಕ್ಷದ ಟಿಕೆಟ್‌ಗಾಗಿ ಓಡಾಡುತ್ತಿರುವ ಒಂದಿಬ್ಬರನ್ನು ಬಿಜೆಪಿ ಗೆಲುವಿನ ವಿಚಾರವಾಗಿ HTಕನ್ನಡ ಮಾತನಾಡಿಸಿದೆ. ಹೆಸರು ಉಲ್ಲೇಖಿಸುವುದಿಲ್ಲ ಎಂದು ಹೇಳಿದ್ದಕ್ಕಾಗಿ ಅವರು ಫ್ರಾಂಕ್‌ ಆಗಿ ಹೇಳಿದ್ದು ಇಷ್ಟು -

ಸರ್ಕಾರ ರಚನೆ ಆಗಬೇಕು ಎಂದು ಕಾಂಗ್ರೆಸ್‌, ಜೆಡಿಎಸ್‌ನಿಂದ ಬಂದವರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಯಿತು. ಸಚಿವ ಸಂಪುಟದಲ್ಲೂ ಅಷ್ಟೆ. ಇದು ಒಳಬೇಗುದಿಗೆ ಕಾರಣವಾಗಿದೆ. ಇನ್ನು, ಮೀಸಲಾತಿ ಮತ್ತು ಉಪವರ್ಗೀಕರಣವನ್ನು ಚುನಾವಣೆಗೆ ಸಮೀಪದಲ್ಲಿ ಪರಿಷ್ಕರಿಸಿದ್ದು ಬಹುಶಃ ಹಿನ್ನೆಡೆ ಆದೀತು. ಅಧಿಕಾರದ ಆಸೆಯಿಂದ ಸರ್ಕಾರ ರಚನೆಯ ಉದ್ದೇಶದಿಂದ ಪಕ್ಷ ಸೇರಿದವರು ಈ ಚುನಾವಣೆಯಲ್ಲಿ ಪಕ್ಷದ ಟಿಕೆಟ್‌ ಸಿಗದೇ ಇದ್ದರೆ ಅವರು ಬೇರೆ ಪಕ್ಷಗಳಿಗೆ ಹೋಗುವುದು ಖಚಿತ. ಹೀಗಾದರೆ ಅಂತಹ ಕ್ಷೇತ್ರದಲ್ಲಿ ಪಕ್ಷ ಗೆಲ್ಲಲಾರದು. ಅಲ್ಲಿ ವ್ಯಕ್ತಿಗತ ವರ್ಚಸ್ಸು ಗೆಲುವಿಗೆ ಕಾರಣ ಎಂಬುದನ್ನು ಮರೆಯುವಂತೆ ಇಲ್ಲ.

ಆದರೆ ಬಿಜೆಪಿ ಹಿಂದಿನಂತೆ ಇಲ್ಲ. ಪಕ್ಷದ ಗೆಲುವಿಗಾಗಿ ಅಧಿಕಾರ ಉಳಿಸಿಕೊಳ್ಳುವುದಕ್ಕೆ ಮತದಾರರನ್ನು ತನ್ನೆಡೆಗೆ ಸೆಳೆದುಕೊಳ್ಳಲು ಹೆಚ್ಚಿನ ಪ್ರಯತ್ನ ಮಾಡುತ್ತಲೇ ಇದೆ. ಸೋಷಿಯಲ್‌ ಇಂಜಿನಿಯರಿಂಗ್‌ ಮಾದರಿಯನ್ನು ಬಿಜೆಪಿ ಪರೀಕ್ಷೆ ಮಾಡಿದ್ದು, 117 ಕ್ಷೇತ್ರಗಳಲ್ಲಿ ಇದು ಪರಿಣಾಮಕಾರಿಯಾಗಿ ಕೆಲಸ ಮಾಡಲಾರಂಭಿಸಿದೆ. ಇದು ಯಶಸ್ವಿಯಾದರೆ 224 ಕ್ಷೇತ್ರಗಳ ಪೈಕಿ ಕನಿಷ್ಠ 117 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಲಿದೆ ಎಂದು ಈ ವಿದ್ಯಮಾನದಲ್ಲಿ ಭಾಗಿಯಾದ ಪಕ್ಷದ ಹಿರಿಯೊಬ್ಬರು ತಿಳಿಸಿದ್ದಾಗಿ HT ಕನ್ನಡದ ಮಾತೃಸಂಸ್ಥೆ ಹಿಂದುಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಹೆಚ್ಚಿನ ಜಾತಿಗಳನ್ನು ಜಾತಿ ಆಧಾರಿತ ಮೀಸಲಾತಿಯ ವ್ಯಾಪ್ತಿಗೆ ತರುವ ನಿರ್ಧಾರ ಮತ್ತು ವಿವಿಧ ಜಾತಿಗಳಿಗೆ ಕೋಟಾಗಳನ್ನು ಹೆಚ್ಚಿಸುವ ನಿರ್ಧಾರವು ಪಕ್ಷಕ್ಕೆ ಲಾಭವನ್ನು ತರುತ್ತದೆ. ಮತದಾರರ ಪಟ್ಟಿಯಲ್ಲಿ ಎಸ್‌ಸಿ ಮತ್ತು ಎಸ್‌ಟಿ ಮತದಾರರ ಪಾಲು ಶೇಕಡ 24.5 ಇದೆ. ಒಬಿಸಿ, ಲಿಂಗಾಯತ, ಒಕ್ಕಲಿಗರ ಪ್ರಮಾಣ ಶೇಕಡ OBC ಗಳು ಲಿಂಗಾಯತರು ಮತ್ತು ವೊಕ್ಕಲಿಗರು ಕ್ರಮವಾಗಿ 14% ಮತ್ತು 11% ಇದ್ದಾರೆ. ಮುಸ್ಲಿಮರ ಪಾಲು ಶೇಕಡ 16 ಎಂದು ಅವರು ವಿವರಿಸಿದ್ದಾಗಿ ವರದಿ ಹೇಳಿದೆ.

“ಇದಕ್ಕೂ ಮುನ್ನ, ಮೀಸಲಾತಿಯ ಪ್ರಯೋಜನಗಳು ಹೆಚ್ಚು ಬಲವಿರುವ ಜಾತಿಗಳಿಗೆ ಸೀಮಿತವಾಗಿತ್ತು, ಸಣ್ಣ ಗುಂಪುಗಳು ಇದರಿಂದ ವಂಚಿತವಾಗಿದ್ದವು. ಬಿಹಾರದಂತಹ ರಾಜ್ಯಗಳಲ್ಲಿ ಸರ್ಕಾರಗಳು ಈ ಉಪ-ಗುಂಪುಗಳಾದ ಮಹಾ ದಲಿತರು, ಅತಿ ಪಿಚ್ಡಾ (ಅತ್ಯಂತ ಹಿಂದುಳಿದ ವರ್ಗಗಳು) ಗಾಗಿ ಯೋಜನೆಗಳನ್ನು ಜಾರಿಗೆ ತಂದವು.

ಕಳೆದ ವಾರ, ಕರ್ನಾಟಕ ಸರ್ಕಾರವು ಲಿಂಗಾಯತರು ಮತ್ತು ಒಕ್ಕಲಿಗರಿಗೆ ಹೆಚ್ಚುವರಿ 2% (ಪ್ರತಿ) ಮೀಸಲಾತಿಯನ್ನು ಘೋಷಿಸುವ ಮೂಲಕ ಆ ಪ್ರಯತ್ನವನ್ನೂ ನಡೆಸಿತು. ಎರಡು ಜಾತಿಗಳನ್ನು ರಾಜ್ಯದ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ.

ಸರ್ಕಾರವು ಮುಸ್ಲಿಮರ ಕೋಟಾ ರದ್ದುಗೊಳಿಸಿದರೆ (ಆರ್ಥಿಕ ದುರ್ಬಲ ವರ್ಗಗಳ 10% ಕೋಟಾದಲ್ಲಿ ಅವರಿಗೆ ಮೀಸಲಾತಿ ಇದೆ ಎಂದು ಹೇಳುತ್ತದೆ). ಇದನ್ನು ಎಸ್‌ಟಿ ಗಳಿಗೆ 3% ರಿಂದ 7% ಕ್ಕೆ ಮತ್ತು ಎಸ್‌ಸಿಗಳಿಗೆ 15% ರಿಂದ 17% ಕ್ಕೆ ಹೆಚ್ಚಿಸಿತು. ಇದು "ದೊಡ್ಡ ಪರಿಣಾಮ" ಉಂಟುಮಾಡಲಿದೆ ಎಂಬ ಅಭಿಪ್ರಾಯವನ್ನು ಸೋಷಿಯಲ್‌ ಇಂಜಿನಿಯರಿಂಗ್‌ ಮಾದರಿಯಲ್ಲಿ ಕೆಲಸ ಮಾಡಿದ ನಾಯಕರು ಹೇಳಿದ್ದಾರೆ.

ಸೋಷಿಯಲ್ ಇಂಜಿನಿಯರಿಂಗ್ ಸೂತ್ರವು, ಬಿಜೆಪಿಗೆ ರಾಜ್ಯದಲ್ಲಿ 16% ಮುಸ್ಲಿಂ ಮತಗಳನ್ನು ಎಣಿಸುವ ಕಾಂಗ್ರೆಸ್‌ ವಿರುದ್ಧ ಮೇಲುಗೈ ನೀಡಲಿದೆ ಎಂದು ಈ ವ್ಯಕ್ತಿ ಹೇಳಿದರು.

“ಕಾಂಗ್ರೆಸ್, ಅಧಿಕಾರದಲ್ಲಿದ್ದಾಗ, ಅಸ್ತಿತ್ವದಲ್ಲಿರುವ ಪಟ್ಟಿಗೆ ಹೊಸ ಜಾತಿಗಳನ್ನು ಸೇರಿಸಲಿಲ್ಲ ಅಥವಾ ಒಟ್ಟಾರೆ ಶೇಕಡಾವಾರು ಮೀಸಲಾತಿ ಹೆಚ್ಚಿಸಲಿಲ್ಲ ... ಆದರೆ, ಅಸಾಂವಿಧಾನಿಕ ರೀತಿಯಲ್ಲಿ ಅವರು ಮುಸ್ಲಿಮರಿಗೆ 4% ಮೀಸಲಾತಿ ಮೀಸಲಿಟ್ಟರು” ಎಂದು ಅವರು ವಿವರಿಸಿದ್ದಾರೆ.

ಅದೇ ರೀತಿ, "ಮಾಜಿ ಸಿಎಂ ಮತ್ತು ಹಾಲಿ ಸಿಎಂ ಇಬ್ಬರೂ ಸೇರಿ ದೊಡ್ಡ ಜನಾದೇಶದೊಂದಿಗೆ ಪಕ್ಷದ ಗೆಲುವನ್ನು ಖಚಿತಪಡಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿಯವರ ಆಡಳಿತ ಮಾದರಿಯಲ್ಲಿ ಜನರು ಇಟ್ಟಿರುವ ನಂಬಿಕೆಯೇ ಪಕ್ಷದ ಗೆಲುವಿಗೆ ದೊಡ್ಡ ಶಕ್ತಿಯಾಗಿದೆ. ಆದ್ದರಿಂದ ನಾಯಕತ್ವದ ವಿಷಯದಲ್ಲಿ ಪಕ್ಷವು ಸವಾಲು ಎದುರಿಸುವ ಪ್ರಶ್ನೆಯೇ ಇಲ್ಲ" ಎಂದು ಅವರು ವಿಶ್ವಾಸ ವಕ್ತಪಡಿಸಿದ್ದಾಗಿ ವರದಿ ಹೇಳಿದೆ.

    ಹಂಚಿಕೊಳ್ಳಲು ಲೇಖನಗಳು