logo
ಕನ್ನಡ ಸುದ್ದಿ  /  ಕರ್ನಾಟಕ  /  Bjp State Executive Meet: ಬಜೆಟ್‌ನಲ್ಲಿ ಕರ್ನಾಟಕಕ್ಕೆ ವಿಶೇಷ ಪ್ರಾಶಸ್ತ್ಯ; ಚುನಾವಣೆಗೆ ಪೂರಕ ಎಂದ ಸಚಿವ ಪ್ರಲ್ಹಾದ್‌ ಜೋಶಿ

BJP state executive meet: ಬಜೆಟ್‌ನಲ್ಲಿ ಕರ್ನಾಟಕಕ್ಕೆ ವಿಶೇಷ ಪ್ರಾಶಸ್ತ್ಯ; ಚುನಾವಣೆಗೆ ಪೂರಕ ಎಂದ ಸಚಿವ ಪ್ರಲ್ಹಾದ್‌ ಜೋಶಿ

HT Kannada Desk HT Kannada

Feb 04, 2023 06:20 PM IST

ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

  • BJP state executive meet: ಮಹಾಭಾರತದಲ್ಲಿ ಶಲ್ಯ ಸಾರಥಿ ಸ್ಥಾನದಲ್ಲಿದ್ದು ಅವಹೇಳನ ಮಾಡಿ ಎದೆಗುಂದುವಂತೆ ಮಾಡಿದ. ಶ್ರೀಕೃಷ್ಣ ಸಾರಥಿಯಾಗಿ ಗೀತೋಪದೇಶ ನೀಡಿ ಸಮರಕ್ಕೆ ಸಜ್ಜಾಗುವಂತೆ ಮಾಡಿದ. ಆದ್ದರಿಂದ ಚುನಾವಣಾ ರಣಾಂಗಣದಲ್ಲಿ ಶಲ್ಯನಂತೆ ಅಲ್ಲ, ಶ್ರೀಕೃಷ್ಣನಂತೆ ಪಾಲ್ಗೊಳ್ಳೋಣ. ಕಾರ್ಯಕರ್ತರನ್ನು ಹುರಿದುಂಬಿಸೋಣ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು

ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ
ಬಿಜೆಪಿಯ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ

ಬೆಂಗಳೂರು: ಕೇಂದ್ರ ಸರ್ಕಾರದ ಈ ಸಲದ ಬಜೆಟ್‌ನಲ್ಲಿ ಕರ್ನಾಟಕಕ್ಕೆ ವಿಶೇಷ ಪ್ರಾಶಸ್ತ್ಯ ಸಿಕ್ಕಿದೆ. ರಾಜ್ಯದಲ್ಲೂ ಇದುವರೆಗೆ ಉತ್ತಮ ಅಭಿವೃದ್ಧಿ ಕಾರ್ಯಗಳಾಗಿವೆ. ಇವೆಲ್ಲವೂ ಪ್ಲಸ್‌ ಪಾಯಿಂಟ್‌ ಆಗಿದ್ದು, ಈ ಬಾರಿಯ ಚುನಾವಣೆಯಲ್ಲಿ ನಾವು 140+ ಸ್ಥಾನದೊಂದಿಗೆ ಸ್ಪಷ್ಟ ಬಹುಮತ ಪಡೆದು ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಆತ್ಮವಿಶ್ವಾಸದಿಂದ ನುಡಿದರು.

ಟ್ರೆಂಡಿಂಗ್​ ಸುದ್ದಿ

SSLC Result 2024: ಸದಾ ಓದಿನಲ್ಲಿ ಮುಳುಗಬೇಡಿ; ಪಠ್ಯೇತರ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಿ; ಟಾಪರ್ ಮಾನ್ಯತಾ ಎಸ್ ಮಯ್ಯ

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಬಾಗಲಕೋಟೆ ವಿದ್ಯಾರ್ಥಿನಿ ರಾಜ್ಯಕ್ಕೆ ಪ್ರಥಮ; ವಜ್ರಮಟ್ಟಿಯ ಅಂಕಿತಾಗೆ ಐಎಎಸ್ ಆಗುವ ಕನಸು

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ರೈತನ ಮಗಳು ಅಂಕಿತಾ ಬಸಪ್ಪ ಕೊಣ್ಣೂರು ರಾಜ್ಯಕ್ಕೆ ಪ್ರಥಮ; ಬಡತನದಲ್ಲಿ ಅರಳಿದ ಪ್ರತಿಭೆ

ಅಕ್ಷಯ ತೃತೀಯ 2024ರ ಕೊಡುಗೆ, ಯಾವ ಜುವೆಲ್ಲರ್ಸ್ ಏನು ಆಫರ್, ಉಚಿತ ಚಿನ್ನ ಬೆಳ್ಳಿ ನಾಣ್ಯ, ಮೇಕಿಂಗ್ ಚಾರ್ಜ್‌ ವಿನಾಯಿತಿ ಸೇರಿ ಹಲವು ಆಫರ್‌

ಅವರು ಶನಿವಾರ ಬೆಂಗಳೂರಿನಲ್ಲಿ ಭಾರತೀಯ ಜನತಾ ಪಕ್ಷದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ವಿಜಯ ಸಂಕಲ್ಪ ಯಾತ್ರೆಯ ಮಧ್ಯದಲ್ಲಿ, ಕೇಂದ್ರ ಸರ್ಕಾರ ಅದ್ಭುತ ಬಜೆಟ್‌ ಮಂಡನೆ ಮಾಡಿದೆ. ಕರ್ನಾಟಕ ವಿಧಾನ ಸಭೆ ಚುನಾವಣೆಗೆ ಸಜ್ಜಾಗುತ್ತಿರುವ ಈ ಸನ್ನಿವೇಶದಲ್ಲಿ ಇವೆಲ್ಲವೂ ಪೂರಕ ವಿದ್ಯಮಾನಗಳು. ಮಹಾಭಾರತ ಯುದ್ಧದಲ್ಲಿ ಶಲ್ಯ ಸಾರಥಿಯ ಸ್ಥಾನದಲ್ಲಿ ಕುಳಿತು ಅವಹೇಳನ ಮಾಡುತ್ತ ಎದೆಗುಂದುವಂತೆ ಮಾಡಿದ. ಶ್ರೀಕೃಷ್ಣ ಸಾರಥಿಯ ಸ್ಥಾನದಲ್ಲಿ ಕುಳಿತು ಗೀತೋಪದೇಶ ನೀಡಿ ಸಮರಕ್ಕೆ ಸಜ್ಜಾಗುವಂತೆ ಮಾಡಿದ. ಆದ್ದರಿಂದ ಚುನಾವಣಾ ರಣಾಂಗಣದಲ್ಲಿ ಶಲ್ಯನಂತೆ ಅಲ್ಲ, ಶ್ರೀಕೃಷ್ಣನಂತೆ ಪಾಲ್ಗೊಳ್ಳೋಣ. ಕಾರ್ಯಕರ್ತರನ್ನು ಹುರಿದುಂಬಿಸೋಣ ಎಂದು ಹೇಳಿದರು

ಸುಳ್ಳಿನ, ಸ್ವಾರ್ಥದ, ಪರಿವಾರವಾದದ ರಾಜಕಾರಣವನ್ನು ಕೊನೆಗೊಳಿಸಬೇಕಿದೆ. ವಿರೋಧ ಪಕ್ಷಗಳು ಕೇವಲ ಹುದ್ದೆ ಹಾಗೂ ಅಧಿಕಾರಕ್ಕಾಗಿ ಹಪಹಪಿಸುತ್ತವೆ. ಈ ಸಮಯದಲ್ಲಿ ರಾಜ್ಯದ ಜನರ ಹಿತ ಕಾಪಾಡುವ, ಅವರು ಬಯಸುವ ಅಭಿವೃದ್ಧಿ ಕಾರ್ಯಗಳನ್ನು ಪೂರೈಸುವ ಜವಾಬ್ದಾರಿ ಬಿಜೆಪಿಯ ಮೇಲಿದೆ. ನಾವೆಲ್ಲ ಶಕ್ತಿ ಮೀರಿ ಪ್ರಯತ್ನಿಸಿ, ಜನರ ವಿಶ್ವಾಸ ಗೆಲ್ಲ ಬೇಕಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಹೇಳಿದರು.

ವಿರೋಧ ಪಕ್ಷಗಳು ಕೇವಲ ಹುದ್ದೆ ಹಾಗೂ ಅಧಿಕಾರಕ್ಕಾಗಿ ಹಪಹಪಿಸುತ್ತವೆ. ಈ ಸಮಯದಲ್ಲಿ ರಾಜ್ಯದ ಜನರ ಹಿತ ಕಾಪಾಡುವ, ಅವರು ಬಯಸುವ ಅಭಿವೃದ್ಧಿ ಕಾರ್ಯಗಳನ್ನು ಪೂರೈಸುವ ಜವಾಬ್ದಾರಿ ಬಿಜೆಪಿಯ ಮೇಲಿದೆ. ನಾವೆಲ್ಲ ಶಕ್ತಿ ಮೀರಿ ಪ್ರಯತ್ನಿಸಿ, ಜನರ ವಿಶ್ವಾಸ ಗೆಲ್ಲಬೇಕಿದೆ ಎಂದರು.

ಇದೇ ವೇಳೆ ಜೆಡಿಎಸ್ ಪಕ್ಷದ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸಿದ ಅವರು, ಜೆಡಿಎಸ್ ನಾಯಕರು ಪಂಚರತ್ನ ಯಾತ್ರೆಯನ್ನು ಮಾಡುವ ಬದಲು ನವಗ್ರಹ ಯಾತ್ರೆಯನ್ನು ಮಾಡಬೇಕು ಯಾಕೆಂದರೆ ಅವರ ಕುಟುಂಬದ ಒಂಬತ್ತು ಜನರೇ ಅವರಿಗೆ ಹೈಕಮಾಂಡ್ ಮತ್ತು ಅವರೇ ಅಧಿಕಾರಕ್ಕಾಗಿ ದುಂಬಾಲು ಬಿದ್ದಿದ್ದಾರೆ ಎಂದು ವ್ಯಂಗ್ಯವಾಡಿದರು‌.

ಇದೇ ವೇಳೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಕಟುವಾಗಿ ಟೀಕಿಸಿದ ಅವರು, ದಲಿತರ ಹೆಸರು ಹೇಳಿಕೊಂಡು ತಮ್ಮದೇ ಪಕ್ಷದ ದಲಿತ ನಾಯಕರಾದ ಪರಮೇಶ್ವರ್ ಅವರ ರಾಜಕೀಯ ಜೀವನವನ್ನು ಮುಗಿಸಲು ಹೊರಟ ಸಿದ್ದರಾಮಯ್ಯ ಮತ್ತು ಡಿಕೆಶಿ ಕೇವಲ ತಮಗೆ ಮುಖ್ಯಮಂತ್ರಿ ಸ್ಥಾನ ಸಿಗಬೇಕೆಂದು ಹೋರಾಡುತ್ತಿದ್ದಾರೆ ಎಂದರು.

ಸಭೆಯಲ್ಲಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲು , ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ, ಜಗದೀಶ್ ಶೆಟ್ಟರ್, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್, ರಾಜ್ಯ ಸಹ ಉಸ್ತುವಾರಿ ಶ್ರೀಮತಿ ಅರುಣಾ ಉಪಸ್ಥಿತರಿದ್ದರು.

    ಹಂಚಿಕೊಳ್ಳಲು ಲೇಖನಗಳು