logo
ಕನ್ನಡ ಸುದ್ದಿ  /  ಕರ್ನಾಟಕ  /  Techie Died In Trekking: ಬೆಂಗಳೂರು ಸಾಫ್ಟ್‌ವೇರ್‌ ಎಂಜಿನಿಯರ್‌ ಟ್ರಕ್ಕಿಂಗ್‌ ಹೋದಾಗ ಸಾವು: ಚಿಕ್ಕಮಗಳೂರು ರಾಣಿ ಝರಿಯಲ್ಲಿ ಶವ ಪತ್ತೆ

Techie died in Trekking: ಬೆಂಗಳೂರು ಸಾಫ್ಟ್‌ವೇರ್‌ ಎಂಜಿನಿಯರ್‌ ಟ್ರಕ್ಕಿಂಗ್‌ ಹೋದಾಗ ಸಾವು: ಚಿಕ್ಕಮಗಳೂರು ರಾಣಿ ಝರಿಯಲ್ಲಿ ಶವ ಪತ್ತೆ

HT Kannada Desk HT Kannada

Dec 10, 2023 12:19 PM IST

google News

ಮೂಡಿಗೆರೆ ತಾಲ್ಲೂಕು ರಾಣಿ ಝರಿಯಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಮೃತಪಟ್ಟಿದ್ದಾರೆ.

    • Bangalore Techie dies in trek ಬೆಂಗಳೂರು ಮೂಲದ ಸಾಫ್ಟ್‌ ವೇರ್‌ ಎಂಜಿನಿಯರ್‌( Bangalore Software engineer) ಒಬ್ಬರು ಟ್ರಕ್ಕಿಂಗ್‌ಗೆ ಬಂದು ಚಿಕ್ಕಮಗಳೂರು ಜಿಲ್ಲೆ ರಾಣಿ ಝರಿ(rani jhari) ಬಳಿ ಮೃತಪಟ್ಟಿದ್ದಾರೆ. ಸಾವಿನ ಕುರಿತು ತನಿಖೆ ನಡೆದಿದೆ. 
ಮೂಡಿಗೆರೆ ತಾಲ್ಲೂಕು ರಾಣಿ ಝರಿಯಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಮೃತಪಟ್ಟಿದ್ದಾರೆ.
ಮೂಡಿಗೆರೆ ತಾಲ್ಲೂಕು ರಾಣಿ ಝರಿಯಲ್ಲಿ ಬೆಂಗಳೂರು ಮೂಲದ ಸಾಫ್ಟ್‌ವೇರ್‌ ಎಂಜಿನಿಯರ್‌ ಮೃತಪಟ್ಟಿದ್ದಾರೆ.

ಬೆಂಗಳೂರು: ಟ್ರಕ್ಕಿಂಗ್‌ಗೆಂದು ಬಂದಿದ್ದ ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ ಶವ ಚಿಕ್ಕಮಗಳೂರು ಜಿಲ್ಲೆ ರಾಣಿ ಝರಿಯಲ್ಲಿ ಪತ್ತೆಯಾಗಿದೆ.

ಬೆಂಗಳೂರು ರಾಜಾಜಿನಗರ ನಿವಾಸಿ ಭರತ್‌ ಟ್ರಕ್ಕಿಂಗ್‌ಗೆ ಹೋದಾಗ ಮೃತಪಟ್ಟಿದ್ದು. ಅರಣ್ಯ ಇಲಾಖೆ ಹಾಗೂ ಪೊಲೀಸರ ಹುಡುಕಾಟದ ಬಳಿ ಮೃತದೇಹ ದೊರೆತಿದೆ.

ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಭರತ್‌ ಆಗಾಗ ಟ್ರಕ್ಕಿಂಗ್‌ ಬರುತ್ತಿದ್ದರು. ಈ ಬಾರಿಯೂ ಟ್ರಕ್ಕಿಂಗ್‌ಗೆ ಚಿಕ್ಕಮಗಳೂರು ಕಡೆ ಹೋಗುವುದಾಗಿ ಕುಟುಂಬದವರಿಗೆ ಹೇಳಿ ಶುಕ್ರವಾರ ಬಂದಿದ್ದರು. ಒಬ್ಬರೇ ಚಿಕ್ಕಮಗಳೂರಿನ ರಾಣಿ ಝರಿ ಕಡೆಗೆ ಬೈಕ್‌ನಲ್ಲಿ ಆಗಮಿಸಿದ್ದರು. ಬೆಟ್ಟದ ಕೆಳ ಭಾಗದಲ್ಲಿ ಬೈಕ್‌ ನಿಲ್ಲಿಸಿ ಅಲ್ಲಿಂದ ಟ್ರಕ್ಕಿಂಗ್‌ ಹೋಗಿದ್ದರು. ಶುಕ್ರವಾರ ಸಂಜೆವರೆಗೂ ಭರತ್‌ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಮೊಬೈಲ್‌ ನಾಟ್‌ ರೀಚಬಲ್‌ ಆಗಿತ್ತು. ಆನಂತರ ಪೋಷಕರು ಚಿಕ್ಕಮಗಳೂರು ಜಿಲ್ಲೆ ಬಾಳೂರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸ್‌ ಸಿಬ್ಬಂದಿಗಳು ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಕಾರದೊಂದಿಗೆ ಪತ್ತೆ ಕಾರ್ಯವನ್ನು ಶನಿವಾರ ಆರಂಭಿಸಿದ್ದರು. ಬೆಟ್ಟದ ಮೇಲೆ ಹೋದಾಗ ಅಲ್ಲಿ ಭರತ್‌ ಟೀ ಶರ್ಟ್‌, ಚಪ್ಪಲಿ ಹಾಗೂ ಮೊಬೈಲ್‌ ಪತ್ತೆಯಾಗಿದ್ದವು. ಅಲ್ಲಿಯೇ ಹುಡುಕಾಟ ನಡೆಸಿದಾಗ ಭರತ್‌ ಶವವೂ ಪತ್ತೆಯಾಗಿತ್ತು. ಕೊನೆಗೆ ಮಹಜರು ನಡೆಸಿ ಮರಣೋತ್ತರ ಪರೀಕ್ಷೆ ಬಳಿಕ ದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.

ಟ್ರಕ್ಕಿಂಗ್‌ ಬಂದ ದಿನವೇ ಭರತ್‌ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಭರತ್‌ ಕೆಲ ದಿನಗಳ ಹಿಂದೆ ಕೆಲಸ ಕಳೆದುಕೊಂಡಿದ್ದರು. ಇದರಿಂದ ಬೇಸರಗೊಂಡು ಮನೆಯಲ್ಲೂ ಹಂಚಿಕೊಂಡಿದ್ದರು. ಆದರೆ ಟ್ರಕ್ಕಿಂಗ್‌ ಹೋಗುವ ನೆಪದಲ್ಲಿ ಬಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ತನಿಖೆ ಮುಂದುವರಿದಿದೆ. ಭರತ್‌ ಸಾವಿಗೆ ನಿಖರ ಕಾರಣ ಇನ್ನಷ್ಟೇ ತಿಳಿಯಬೇಕಿದೆ ಎಂದು ಬಾಳೂರು ಪೊಲೀಸರು ತಿಳಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆ ಕಳಸ ಹಾಗೂ ಮೂಡಿಗೆರೆ ನಡುವೆ ಇರುವ ರಾಣಿ ಝರಿ ಬೆಟ್ಟ ಟ್ರಕ್ಕಿಂಗ್‌ಗೆ ಹೇಳಿ ಮಾಡಿಸಿದಂತಿದೆ. ಇಲ್ಲಿ ಅರಣ್ಯ ಇಲಾಖೆ ಅನುಮತಿಯೊಂದಿಗೆ ಟ್ರಕ್ಕಿಂಗ್‌ ನಡೆಸಲಾಗುತ್ತದೆ. ಹಸಿರು ಹೊದ್ದ ಬೆಟ್ಟ ಹಾಗೂ ಸ್ವಚ್ಛಂದ ಪರಿಸರದ ಕಾರಣಕ್ಕೆ ಹೆಚ್ಚು ಮಂದಿ ಟ್ರಕ್ಕಿಂಗ್‌ಗೆ ಇಲ್ಲಿ ಬರುತ್ತಾರೆ. ಬೆಂಗಳೂರಿನ ಸಾಫ್ಟ್‌ವೇರ್‌ ಎಂಜಿನಿಯರ್‌ಗಳ ಸಹಿತ ವಿವಿಧ ಉದ್ಯೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿಗೆ ಬರುತ್ತಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ