logo
ಕನ್ನಡ ಸುದ್ದಿ  /  ಕರ್ನಾಟಕ  /  Umesh Katti Death: ಉಮೇಶ್​​ ಕತ್ತಿ ನಿಧನ; ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಗೆ ಸಿಎಂ ಕರೆ

Umesh Katti death: ಉಮೇಶ್​​ ಕತ್ತಿ ನಿಧನ; ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಗೆ ಸಿಎಂ ಕರೆ

HT Kannada Desk HT Kannada

Sep 07, 2022 06:45 PM IST

google News

ಉಮೇಶ ಕತ್ತಿ ನಿಧನ ಹಿನ್ನೆಲೆ ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಗೆ ಸಿಎಂ ಕರೆ

    • ಸಚಿವ ಉಮೇಶ ಕತ್ತಿ ವಿಧಿವಶರಾದ ಹಿನ್ನೆಲೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. ಈ ಹಿಂದೆ ಕೇವಲ ಒಂದು ದಿನದ ಶೋಕಾಚರಣೆಯನ್ನು ಮಾತ್ರ ಘೋಷಿಸಲಾಗಿತ್ತು
ಉಮೇಶ ಕತ್ತಿ ನಿಧನ ಹಿನ್ನೆಲೆ ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಗೆ ಸಿಎಂ ಕರೆ
ಉಮೇಶ ಕತ್ತಿ ನಿಧನ ಹಿನ್ನೆಲೆ ರಾಜ್ಯಾದ್ಯಂತ 3 ದಿನಗಳ ಕಾಲ ಶೋಕಾಚರಣೆಗೆ ಸಿಎಂ ಕರೆ

ಬೆಳಗಾವಿ: ಸಚಿವ ಉಮೇಶ್​​ ಕತ್ತಿ ವಿಧಿವಶರಾದ ಹಿನ್ನೆಲೆ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ. ಈ ಹಿಂದೆ ಕೇವಲ ಒಂದು ದಿನದ ಶೋಕಾಚರಣೆಯನ್ನು ಮಾತ್ರ ಘೋಷಿಸಲಾಗಿತ್ತು

ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಸಿಎಂ, ಇವತ್ತು ಅತ್ಯಂತ ಭಾರವಾದ ಹೃದಯದಿಂದ ನಾನು ಬೆಳಗಾವಿಗೆ ಬಂದಿದ್ದೇನೆ. ಉಮೇಶ ಕತ್ತಿ ಅವರ ಅಂತ್ಯಕ್ರಿಯೆಗೆ ಎಲ್ಲ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಗೆ ಜನರು ದೊಡ್ಡ ಪ್ರಮಾಣದಲ್ಲಿ ಬರೋದು ಬೇಡ, ಜನರು ಸಹಕರಿಸಬೇಕು. ರಾಜ್ಯಾದ್ಯಂತ ಮೂರು ದಿನ ಸರ್ಕಾರದಿಂದ ಶೋಕಾಚರಣೆ ಮಾಡಲು ತೀರ್ಮಾನಿಸಲಾಗಿದೆ. ದೊಡ್ಡಬಳ್ಳಾಪುರದಲ್ಲಿ ನಡೆಯುವ ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್​ 11ಕ್ಕೆ ಮುಂದೂಡಲಾಗಿದೆ ಎಂದರು.

ಸಕಲ ಸರ್ಕಾರಿ ಗೌರವಗಳೊಂದಿಗೆ ಕತ್ತಿ ಅವರ ಅಂತ್ಯಕ್ರಿಯೆ ನೆರವೇರಿದೆ. ಅಂತ್ಯಕ್ರಿಯೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ.ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಕೆ.ಸಿ.ನಾರಾಯಣಗೌಡ, ಸಚಿವರಾದ ಆರ್.ಅಶೋಕ್, ಗೋವಿಂದ ಕಾರಜೋಳ, ಆರಗ ಜ್ಞಾನೇಂದ್ರ, ಶಾಸಕರಾದ ಬಸವರಾಜ ಯತ್ನಾಳ್, ಪ್ರಭಾಕರ ಕೋರೆ, ಭಾಜಪ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಭಾಗವಹಿಸಿದ್ದಾರೆ.

ಏರ್ ಆ್ಯಂಬುಲೆನ್ಸ್ ಮುಖಾಂತರ ಉಮೇಶ್ ಕತ್ತಿಯವರ ಪಾರ್ಥೀವ ಶರೀರವನ್ನು ಬೆಳಗಾವಿಗೆ ಒಯ್ಯಲಾಗಿತ್ತು. ಬೆಳಗಾವಿಯಿಂದ ಸಂಕೇಶ್ವರದ ಹಿರಾ ಸಕ್ಕರೆ ಕಾರ್ಖಾನೆಯ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿತ್ತು. ಅಲ್ಲಿಂದ ಬಾಗೇವಾಡಿಯ ಅವರ ನಿವಾಸದಲ್ಲಿ ಎಲ್ಲ ವಿಧಿವಿಧಾನಗಳನ್ನು ಪೂರೈಸಲಾಗಿದ್ದು, ಕತ್ತಿ ಅವರ ಸ್ವಂತ ತೋಟದಲ್ಲಿ ಅಂತಿಮಕ್ರಿಯೆಯನ್ನು ನೆರವೇರಿಸಲಾಗಿದೆ.

ಕರ್ನಾಟಕ ಅರಣ್ಯ ಮತ್ತು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್​​ ಕತ್ತಿ ಅವರಿಗೆ ನಿನ್ನೆ (ಸೆ.6) ರಾತ್ರಿ ತೀವ್ರ ಹೃದಯಾಘಾತವಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ವಿಧಿವಶರಾದರು. ಬೆಂಗಳೂರಿನ ಎಂ.ಎಸ್‌.ರಾಮಯ್ಯ ಆಸ್ಪತ್ರೆಯಲ್ಲಿ ಕೊನೆಯ ಕ್ಷಣದ ಚಿಕಿತ್ಸೆಯನ್ನು ನೀಡಲಾಗಿತ್ತು. ಬೆಂಗಳೂರಿನ ಡಾಲರ್ಸ್‌ ಕಾಲನಿಯ ನಿವಾಸದಲ್ಲಿದ್ದಾಗ ಹೃದಯಾಘಾತ ಸಂಭವಿಸಿದೆ. ರಾತ್ರಿ ಹತ್ತು ಗಂಟೆಗೆ ಎದೆನೋವು ಕಾಣಿಸಿಕೊಂಡು, ಹೃದಯಾಘಾತ ಆಗಿತ್ತು. ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ರೀತಿ ಆಗಿತ್ತು.

ಮೊನ್ನೆ (ಸೆ.5) ಹುಕ್ಕೇರಿಯಿಂದ ಬಂದಿದ್ದ ಉಮೇಶ್‌ ಕತ್ತಿ ಅವರು, ನಿನ್ನೆ ಇಲಾಖೆಯ ವಿವಿಧ ಸಭೆಗಳನ್ನು ಅಟೆಂಡ್‌ ಮಾಡಿದ್ದರು. ಊಟದ ಬಳಿಕ ಮನೆಯಲ್ಲಿ ಬಾತ್‌ರೂಮ್‌ಗೆ ಹೋಗಿದ್ದ ಉಮೇಶ್‌ ಕತ್ತಿ ಅವರು ಕೆಲ ಹೊತ್ತಾದರೂ ವಾಪಸ್‌ ಬಂದಿರಲಿಲ್ಲ. ಸಂದೇಹ ಗೊಂಡು ಬಾತ್‌ ರೂಮ್‌ ಪರಿಶೀಲಿಸಿದಾಗ ಅವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಕುಸಿದು ಬಿದ್ದಿದ್ದು ಕಂಡು ಬಂದಿದೆ. ಅವರನ್ನು ಕೂಡಲೇ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಅವರಿಗೆ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿ ಆಗದೇ ಅವರು ಕೊನೆಯುಸಿರೆಳೆದರು

ಇನ್ನು ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆ ನಾಳೆ (ಸೆ.8) ನಡೆಯಬೇಕಿದ್ದ ಬಿಜೆಪಿ ಸರ್ಕಾರದ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರ (ಸೆ.11)ಕ್ಕೆ ಮುಂದೂಡಲಾಗಿದೆ. ಈ ಮೂಲಕ ಸತತ ಮೂರನೇ ಬಾರಿಗೆ ಜನೋತ್ಸವ ಕಾರ್ಯಕ್ರಮ ಮುಂದೂಡಿಕೆಯಾದಂತಾಗಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ