logo
ಕನ್ನಡ ಸುದ್ದಿ  /  ಕರ್ನಾಟಕ  /  ದಕ್ಷಿಣ ಕನ್ನಡ- ಉಡುಪಿ ಎಂಎಲ್ಸಿ ಚುನಾವಣೆ: ಬಿಜೆಪಿಗೆ ಭಾರೀ ಗೆಲುವು, ಸ್ಥಾನ ಉಳಿಸಿಕೊಂಡ ಕಮಲಪಡೆ, ಕಾಂಗ್ರೆಸ್‌ಗೆ ಮುಖಭಂಗ

ದಕ್ಷಿಣ ಕನ್ನಡ- ಉಡುಪಿ ಎಂಎಲ್ಸಿ ಚುನಾವಣೆ: ಬಿಜೆಪಿಗೆ ಭಾರೀ ಗೆಲುವು, ಸ್ಥಾನ ಉಳಿಸಿಕೊಂಡ ಕಮಲಪಡೆ, ಕಾಂಗ್ರೆಸ್‌ಗೆ ಮುಖಭಂಗ

Umesha Bhatta P H HT Kannada

Oct 24, 2024 12:46 PM IST

google News

ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳಿಂದ ಎಂಎಲ್ಸಿಯಾದ ಕಿಶೋರ್‌ ಕುಮಾರ್‌

    • ಕೋಟ ಶ್ರೀನಿವಾಸಪೂಜಾರಿ ಅವರು ಸಂಸದರಾಗಿದ್ದರಿಂದ ತೆರವಾಗಿದ್ದ ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ತನ್ನ ಸ್ಥಾನ ಉಳಿಸಿಕೊಂಡಿದೆ. ಆಡಳಿತಾರೂಢ ಕಾಂಗ್ರೆಸ್‌ಗೆ ಮುಖಭಂಗವಾಗಿದೆ.
    • ವರದಿ: ಹರೀಶ ಮಾಂಬಾಡಿ, ಮಂಗಳೂರು
ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳಿಂದ ಎಂಎಲ್ಸಿಯಾದ ಕಿಶೋರ್‌ ಕುಮಾರ್‌
ದಕ್ಷಿಣ ಕನ್ನಡ ಉಡುಪಿ ಸ್ಥಳೀಯ ಸಂಸ್ಥೆಗಳಿಂದ ಎಂಎಲ್ಸಿಯಾದ ಕಿಶೋರ್‌ ಕುಮಾರ್‌

ಮಂಗಳೂರು: ಬಿಜೆಪಿ ಹಿರಿಯ ನಾಯಕ ಕೋಟಾ ಶ್ರೀನಿವಾಸಪೂಜಾರಿ ಉಡುಪಿ ಚಿಕ್ಕಮಗಳೂರು ಸಂಸದರಾಗಿ ಆಯ್ಕೆಯಾಗಿದ್ದರಿಂದ ತೆರವಾಗಿದ್ದರಿಂದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ವಿಧಾನಪರಿಷತ್‌ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದೆ. ಈ ಮೂಲಕ ಆಡಳಿತಾರೂಢ ಕಾಂಗ್ರೆಸ್‌ಗೆ ಮುಖಭಂಗವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಸ್ಥಳೀಯ ಪ್ರಾಧಿಕಾರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆಗೆ ಅಕ್ಟೋಬರ್ 21ನೇ ಸೋಮವಾರದಂದು ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಕಿಶೋರ್ ಕುಮಾರ್ 1967ಮತಗಳಿಂದ ಜಯವನ್ನು ಗಳಿಸಿದರು. ಈ ಮೂಲಕ ಬಿಜೆಪಿ ಧ್ವಜ ಹಾರುವಂತೆ ಮಾಡಿದರು. ಕಾಂಗ್ರೆಸ್‌ ನ ಪೂಜಾರಿ ಅವರನ್ನು ಮಣಿಸಿದರು. ಎರಡು ದಿನದ ಚುನಾವಣೆ ನಡೆದಿತ್ತು. ಮತ ಎಣಿಕೆ ಗುರುವಾರ ನಡೆದು ಫಲಿತಾಂಶವನ್ನು ಮಧ್ಯಾಹ್ನದ ಹೊತ್ತಿಗೆ ಪ್ರಕಟಿಸಲಾಯಿತು.

ಬಿಜೆಪಿ ಸಾಮಾನ್ಯ ಕಾರ್ಯಕರ್ತ

ಬಿಜೆಪಿ ಸಾಮಾನ್ಯ ಕಾರ್ಯಕರ್ತ ಕಿಶೋರ್‌ ಕುಮಾರ್‌ ಪುತ್ತೂರು ವಿಧಾನಪರಿಷತ್‌ ಪ್ರವೇಶಿಸಲಿದ್ದಾರೆ. ಕೃಷಿಕ ಕುಟುಂಬದ ಜನಸಂಘದ ನೇತಾರ ಬೊಟ್ಯಾಡಿ ದಿವಂಗತ ರಾಮಣ್ಣ ಭಂಡಾರಿ ಮತ್ತು ಸುಶೀಲ ಭಂಡಾರಿ ದಂಪತಿಯ ಇಬ್ಬರು ಪುತ್ರರಲ್ಲಿ ಕಿಶೋರ್ ಪುತ್ತೂರು ಕಿರಿಯ ಮಗ. ಅಣ್ಣ ಚೇತನ್ ಬೊಟ್ಯಾಡಿ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮುಖ್ಯಮಂತ್ರಿ ಚಿನ್ನದ ಪದಕ ವಿಜೇತರಾಗಿದ್ದಾರೆ ಡಿ.ವಿ. ಸದಾನಂದ ಗೌಡರು ಮುಖ್ಯಮಂತ್ರಿಯಾದ ಬಳಿಕ ಅವರ ರಕ್ಷಣೆಯ ಜವಾಬ್ದಾರಿಗೆ ನೇಮಕವಾಗಿದ್ದರು.

ಕಿಶೋರ್ ಪುತ್ತೂರು ಅವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಸರ್ವೆ ಕಲ್ಪನೆ ಪ್ರಾಥಮಿಕ ಶಿಕ್ಷಣವನ್ನು ಪಡೆದು ಎಸ್ ., ಜಿ.ಎಮ್. ಭಕ್ತಕೋಡಿ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸವನ್ನು ಪಡೆದು, ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪದವಿ ವ್ಯಾಸಂಗವನ್ನು ಮುಗಿಸಿ, ಮೈಸೂರು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದಲ್ಲಿ ಎಂ.ಎ. ಪದವಿಯನ್ನು ಪಡೆದಿರುತ್ತಾರೆ ಪತ್ನಿ ಪ್ರೀತಿ ಪುತ್ರಿ ಆರಾಧ್ಯ ಜೊತೆಗೆ ಮಂಗಳೂರಿನ ಕದ್ರಿ ಕಂಬಳದಲ್ಲಿ ಸಂಸಾರಿಕ ಜೀವನವನ್ನು ನಡೆಸುತ್ತಿದ್ದಾರೆ

ಎಬಿವಿಪಿ ಹೋರಾಟದಿಂದ

ವಿದ್ಯಾರ್ಥಿ ಜೀವನದಿಂದಲೇ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಲ್ಲಿ ತೊಡಗಿಸಿಕೊಂಡ ಇವರು ಪುತ್ತೂರು ತಾಲೂಕಿನ ಪ್ರಮುಖ ರಾಗಿದ್ದರು ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಉತ್ತಮ ಕಬಡ್ಡಿ ಆಟಗಾರರಾಗಿದ್ದು ತಂಡದ ನಾಯಕನಾಗಿದ್ದರು. ಕಳೆದ ಮೂರು ದಶಕಗಳಿಂದ ಭಾರತೀಯ ಜನತಾ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿದ್ದು ಸಂಘಟನೆಯಲ್ಲಿ ತೊಡಗಿಸಿಕೊಂಡ ಇವರು ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಮನೋಭಾವದಿಂದ ದುಡಿಯುತ್ತಿದ್ದಾರೆ ದಕ್ಷಿಣ ಕನ್ನಡ ಭಾರತೀಯ ಜನತಾ ಪಕ್ಷದ ಜಿಲ್ಲಾ ಯುವ ಮೋರ್ಚಾದ ಅಧ್ಯಕ್ಷರಾಗಿ ರಾಜ್ಯದ ಯುವ ಮೋರ್ಚಾದ ಉಪಾಧ್ಯಕ್ಷರಾಗಿ ಪಕ್ಷ ಸಂಘಟನೆ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದಾರೆ ಮೆಸ್ಕಾಂ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ ಭಾರತೀಯ ಜನತಾ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದು ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಿಗೆ ಪಕ್ಷವನ್ನು ಮತ್ತಷ್ಟು ಬಲಿಷ್ಠವಾಗಿ ಪಣ ತೊಟ್ಟಿದ್ದಾರೆ

ಆರ್‌ಎಸ್‌ಎಸ್‌ ಪ್ರಭಾವ

ಬಾಲ್ಯದಿಂದಲೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂ ಸೇವಕನಾಗಿ ಸಂಘದ ಕಾರ್ಯ ಪ್ರಾರಂಭಿಸಿದ ವಿಧ್ಯಾರ್ಥಿ ಜೀವನದಲ್ಲಿ ಅಖಿಲ ಭಾರತೀಯ ಬಜರಂಗದಳ ಸಂಯೋಜಕ್ ಜವಬ್ದಾರಿ ಹೊತ್ತು ಹಿಂದುತ್ವಕ್ಕಾಗಿ ಸರ್ವಸ್ವವನ್ನೂ ಧಾರೆಯೆರೆದು ಮಂಗಳೂರು ವಿಭಾಗ ಮಟ್ಟದಲ್ಲಿ ಸಂಚಲನ ಮೂಡಿಸಿದವರು.

2011 ರಲ್ಲಿ ಕಾಶ್ಮೀರದ ಭಯೋತ್ಪಾದಕರು ಕಾಶ್ಮೀರದಲ್ಲಿ ತಿರಂಗ ಹಾರಿಸಲು ಬಿಡುವುದಿಲ್ಲ ಎಂದಾಗ ರಾಜ್ಯ ಯುವಮೋರ್ಚಾ ಅಧ್ಯಕ್ಷರಾದ ಸುನಿಲ್ ಕುಮಾರ್ ಅವರೊಂದಿಗೆ ಜಿಲ್ಲಾಯುವಮೋರ್ಚಾ ಅಧ್ಯಕ್ಷ ಕಿಶೋರ್ ಕುಮಾರ್ ಅವರು ಯುವಕರ ದಂಡನ್ನೇ ಕಟ್ಟಿಕೊಂಡು ಕಾಶ್ಮೀರದ ಲಾಲ್ ಚೌಕ್ ನಲ್ಲಿ ತಿರಂಗ ಹಾರಿಸಿ ಉಗ್ರರಿಗೆ ಸೆಡ್ಡು ಹೊಡೆದ ಕ್ಷಣ ಇಂದಿಗೂ ನನ್ನ ನೆನಪಿನಲ್ಲಿದೆ.

ಅದೇ ರೀತಿ ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಸಂಸತ್ ಚಲೋ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಂಧನಕ್ಕೊಳಗಾದಾಲೂ ತನ್ನೊಳಗಿನ ಪ್ರಬುದ್ಧ ನಾಯಕತ್ವವನ್ನು ತೆರೆದಿಟ್ಟಿದ್ದರು ಕಿಶೋರ್ ಕುಮಾರ್. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಮ್ಮಿ ಕೊಂಡ "ಸರಹದ್ ಕೋ ಪ್ರಣಾಮ್" ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಬಾಂಗ್ಲಾ ಗಡಿಯಲ್ಲಿ ಕರ್ತವ್ಯ ನಿರತ ಸೈನಿಕರ ಸಂಕಷ್ಟಗಳನ್ನು ಅಂದು ನಾವೆಲ್ಲರೂ ಆಲಿಸಿದ್ದೆವು. ಈ ಎಲ್ಲಾ ಕಾರ್ಯಕ್ರಮಗಳಲ್ಲೂ ನಮ್ಮ ಜಿಲ್ಲೆಯ ಯುವ ಪಡೆಯನ್ನು ಮುನ್ನಡೆಸಿದ ಕೀರ್ತಿ ಕಿಶೋರ್ ಕುಮಾರ್ ಅವರದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ. ಈ ಎಲ್ಲಾ ಹೋರಾಟದ ಭಾಗವಾಗಿದ್ದೆ ಎನ್ನುವುದೇ ಜೀವನದ ಅವಿಸ್ಮರಣೀಯ ನೆನಪು. ಪಕ್ಷ ನಿಷ್ಠೆ, ಸಮಾಜಪರ ಸೇವೆಯಿಂದ ಈಗ ಜನಪ್ರತಿನಿಧಿಯಾಗುವ ಅವಕಾಶ ಬಂದಿದೆ. ಅದರಲ್ಲೂ ಅತ್ಯಂತ ಸಣ್ಣ ಸವಿತಾ ಸಮಾಜದ ಕಿಶೋರ್‌ ಅವರೂ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

(ವರದಿ: ಹರೀಶ ಮಾಂಬಾಡಿ.ಮಂಗಳೂರು)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ