logo
ಕನ್ನಡ ಸುದ್ದಿ  /  ಕರ್ನಾಟಕ  /  ಕೊಳ್ಳೇಗಾಲದಲ್ಲಿ ಕಾವೇರಿ, ತುಂಗಭದ್ರಾ ಪ್ರವಾಹದ ಎಚ್ಚರಿಕೆ, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ತಗ್ಗಿದ ನೀರಿನ ಒಳಹರಿವು- ಡ್ಯಾಮ್ ನೀರಿನ ಮಟ್ಟ

ಕೊಳ್ಳೇಗಾಲದಲ್ಲಿ ಕಾವೇರಿ, ತುಂಗಭದ್ರಾ ಪ್ರವಾಹದ ಎಚ್ಚರಿಕೆ, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ತಗ್ಗಿದ ನೀರಿನ ಒಳಹರಿವು- ಡ್ಯಾಮ್ ನೀರಿನ ಮಟ್ಟ

Umesh Kumar S HT Kannada

Aug 13, 2024 07:00 AM IST

google News

ಕೊಳ್ಳೇಗಾಲದಲ್ಲಿ ಕಾವೇರಿ, ತುಂಗಭದ್ರಾ ಪ್ರವಾಹದ ಎಚ್ಚರಿಕೆ, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ತಗ್ಗಿದ ನೀರಿನ ಒಳಹರಿವು- ಡ್ಯಾಮ್ ನೀರಿನ ಮಟ್ಟ ಇಂದು ಹೀಗಿದೆ.

  • Dam Water Level Today; ನಾಡಿನ ಜನರ ಗಮನ ತುಂಗಭದ್ರಾ ಜಲಾಶಯದ ಕಡೆಗೆ ನೆಟ್ಟಿದ್ದು, ಅಲ್ಲಿ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗುತ್ತಿದೆ. ತುಂಗಭದ್ರಾ ಅಣೆಕಟ್ಟೆ ಕೆಳಗೆ ಮತ್ತು  ಕೊಳ್ಳೇಗಾಲದಲ್ಲಿ ಕಾವೇರಿ ನದಿ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇನ್ನು, ಈ ದಿನದ ಕರ್ನಾಟಕದ ಜಲಾಶಯಗಳ ನೀರಿನ ಮಟ್ಟದ ವಿವರ ಹೀಗಿದೆ. 

ಕೊಳ್ಳೇಗಾಲದಲ್ಲಿ ಕಾವೇರಿ, ತುಂಗಭದ್ರಾ ಪ್ರವಾಹದ ಎಚ್ಚರಿಕೆ, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ತಗ್ಗಿದ ನೀರಿನ ಒಳಹರಿವು- ಡ್ಯಾಮ್ ನೀರಿನ ಮಟ್ಟ ಇಂದು ಹೀಗಿದೆ.
ಕೊಳ್ಳೇಗಾಲದಲ್ಲಿ ಕಾವೇರಿ, ತುಂಗಭದ್ರಾ ಪ್ರವಾಹದ ಎಚ್ಚರಿಕೆ, ಕರ್ನಾಟಕದ ಪ್ರಮುಖ ಜಲಾಶಯಗಳಿಗೆ ತಗ್ಗಿದ ನೀರಿನ ಒಳಹರಿವು- ಡ್ಯಾಮ್ ನೀರಿನ ಮಟ್ಟ ಇಂದು ಹೀಗಿದೆ.

ಬೆಂಗಳೂರು: ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಕೊಚ್ಚಿ ಹೋಗಿರುವ ಕಾರಣ ಜಲಾಶಯದಿಂದ ಹೆಚ್ಚಿನ ನೀರು ಹೊರ ಹರಿಯುತ್ತಿದ್ದು, ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಲ್ಲೆಲ್ಲ ಪ್ರವಾಹದ ಎಚ್ಚರಿಕೆ ನೀಡಲಾಗಿದೆ. ಇನ್ನೊಂದೆಡೆ, ಕಾವೇರಿ ನದಿ ಕೊಳ್ಳೇಗಾಲ ಭಾಗದಲ್ಲಿ ಅಪಾಯದ ಮಟ್ಟ ಮೀರಿ ಹರಿಯತ್ತಿದ್ದು ಅಲ್ಲಿನ ನದಿಪಾತ್ರದ ಜನರಿಗೆ ಪ್ರವಾಹದ ಎಚ್ಚರಿಕೆಯನ್ನು ನೀಡಲಾಗಿದೆ.

ತುಂಗಭದ್ರ ಜಲಾಶಯದಿಂದ ನಿನ್ನೆ (ಆಗಸ್ಟ್ 12) ರಾತ್ರಿ 1.14 ಲಕ್ಷ ಕ್ಯೂಸೆಕ್ ನೀರು ಹೊರಬಿಡಲಾಗಿದೆ. ಹೀಗಾಗಿ ತುಂಗಭದ್ರ ಅಣೆಕಟ್ಟೆಯ ಕೆಳಭಾಗದ ಜನವಸತಿ ಪ್ರದೇಶಗಳು ಜಲಾವೃತವಾಗಬಹುದು. ಎಲ್ಲರೂ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಸ್ಥಳೀಯಾಡಳಿತ ಎಚ್ಚರಿಕೆಯನ್ನು ನೀಡಿತ್ತು.

ಕರ್ನಾಟಕದ ಜಲಾಶಯಗಳ ನೀರಿನ ಮಟ್ಟ ಆಗಸ್ಟ್ 12-13, 2024

1) ಕೆಆರ್‌ಎಸ್ ಜಲಾಶಯ (ಕಾವೇರಿ)

ಗರಿಷ್ಠ ಮಟ್ಟ: 124.80 ಅಡಿ

ಇಂದಿನ ಮಟ್ಟ: 124.80 ಅಡಿ

ಒಳ ಹರಿವು: 21,060 ಲಕ್ಷ ಕ್ಯೂಸೆಕ್

ಹೊರ ಹರಿವು: 38,318 ಲಕ್ಷ ಕ್ಯೂಸೆಕ್

2) ಹಾರಂಗಿ ಜಲಾಶಯ

ಗರಿಷ್ಠ ಮಟ್ಟ: 2,859 ಅಡಿ

ಇಂದಿನ ಮಟ್ಟ: 2,856.87 ಅಡಿ

ಒಳ ಹರಿವು: 3168 ಕ್ಯೂಸೆಕ್‌

ಹೊರ ಹರಿವು: 2,000 ಕ್ಯೂಸೆಕ್

3) ಕಬಿನಿ ಜಲಾಶಯ

ಗರಿಷ್ಠ ಮಟ್ಟ: 2,284 ಅಡಿ

ಇಂದಿನ ಮಟ್ಟ: 2,282.84

ಒಳ ಹರಿವು: 4782 ಕ್ಯೂಸೆಕ್

ಹೊರ ಹರಿವು: 6350 ಕ್ಯೂಸೆಕ್‌

4) ಹೇಮಾವತಿ ಜಲಾಶಯ (ಗೊರೂರು)

ಗರಿಷ್ಠ ಮಟ್ಟ: 2,922

ಇಂದಿನ ಮಟ್ಟ: 2,920.80

ಒಳ ಹರಿವು: 9206 ಕ್ಯೂಸೆಕ್

ಹೊರ ಹರಿವು: 15875 ಕ್ಯೂಸೆಕ್

5) ಲಿಂಗನಮಕ್ಕಿ ಜಲಾಶಯ (ಶರಾವತಿ)

ಗರಿಷ್ಠ ಮಟ್ಟ: 1,819 ಅಡಿ

ಇಂದಿನ ಮಟ್ಟ: 1,816.65 ಅಡಿ

ಒಳ ಹರಿವು: 7,713 ಕ್ಯೂಸೆಕ್

ಹೊರ ಹರಿವು: 7,611 ಕ್ಯೂಸೆಕ್

6) ಸೂಪಾ ಜಲಾಶಯ (ಕಾಳಿ)

ಗರಿಷ್ಠ ಮಟ್ಟ: 564 ಮೀಟರ್

ಇಂದಿನ ಮಟ್ಟ: 558.50 ಮೀಟರ್‌

ಒಳ ಹರಿವು: 5,093 ಕ್ಯೂಸೆಕ್

ಹೊರ ಹರಿವು: 4,638 ಕ್ಯೂಸೆಕ್‌

7) ಮಾಣಿ ಜಲಾಶಯ (ವರಾಹಿ)

ಗರಿಷ್ಠ ಮಟ್ಟ: 595 ಮೀಟರ್‌

ಇಂದಿನ ಮಟ್ಟ: 588.75

ಒಳ ಹರಿವು: 901 ಕ್ಯೂಸೆಕ್

ಹೊರ ಹರಿವು: ---

8) ತುಂಗಭದ್ರಾ ಡ್ಯಾಂ (ಹೊಸಪೇಟೆ)

ಗರಿಷ್ಠ ಮಟ್ಟ: 1,633 ಅಡಿ

ಇಂದಿನ ಮಟ್ಟ: 1,630.97

ಒಳ ಹರಿವು: 25,571 ಕ್ಯೂಸೆಕ್

ಹೊರ ಹರಿವು: 99,985 ಕ್ಯೂಸೆಕ್

9) ಮಲಪ್ರಭಾ

ಗರಿಷ್ಠ ಮಟ್ಟ: 2,079.5 ಅಡಿ

ಇಂದಿನ ಮಟ್ಟ: 2,077.00

ಒಳ ಹರಿವು: 1,877 ಕ್ಯೂಸೆಕ್‌

ಹೊರ ಹರಿವು: 1,877 ಕ್ಯೂಸೆಕ್

10) ಘಟಪ್ರಭಾ

ಗರಿಷ್ಠ ಮಟ್ಟ: 2,175 ಅಡಿ

ಇಂದಿನ ಮಟ್ಟ: 2,174.95

ಒಳ ಹರಿವು: 5,791 ಕ್ಯೂಸೆಕ್

ಹೊರ ಹರಿವು: 5,629 ಕ್ಯೂಸೆಕ್


11) ಭದ್ರಾ ಡ್ಯಾಂ

ಗರಿಷ್ಠ ಮಟ್ಟ: 2158 ಅಡಿ

ಇಂದಿನ ಮಟ್ಟ: 2152.25 ಅಡಿ

ಒಳ ಹರಿವು: 7,683 ಕ್ಯೂಸೆಕ್

ಹೊರ ಹರಿವು: 8,841 ಕ್ಯೂಸೆಕ್

12) ಆಲಮಟ್ಟಿ (ಕೃಷ್ಣಾ)

ಗರಿಷ್ಠ ಮಟ್ಟ: 519.6 ಮೀಟರ್

ಇಂದಿನ ಮಟ್ಟ: 519.29 ಮೀಟರ್

ಒಳ ಹರಿವು: 54,830 ಕ್ಯೂಸೆಕ್

ಹೊರ ಹರಿವು: 20,108 ಲಕ್ಷ ಕ್ಯೂಸೆಕ್

13) ನಾರಾಯಣಪುರ (ಕೃಷ್ಣಾ)

ಗರಿಷ್ಠ ಮಟ್ಟ: 492.25 ಮೀಟರ್

ಇಂದಿನ ಮಟ್ಟ: 492.18 ಮೀಟರ್

ಒಳ ಹರಿವು: 16,818 ಕ್ಯೂಸೆಕ್

ಹೊರ ಹರಿವು: 13,002 ಕ್ಯೂಸೆಕ್

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ