logo
ಕನ್ನಡ ಸುದ್ದಿ  /  ಕರ್ನಾಟಕ  /  ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದ ಬೆಂಗಳೂರು ಟೆಕ್ಕಿ, ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಲ್ಲ, ಮತ್ತೇನು, ಊಹಿಸಿ

ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದ ಬೆಂಗಳೂರು ಟೆಕ್ಕಿ, ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಲ್ಲ, ಮತ್ತೇನು, ಊಹಿಸಿ

Umesh Kumar S HT Kannada

Nov 04, 2024 04:19 PM IST

google News

ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದ ಬೆಂಗಳೂರು ಟೆಕ್ಕಿ, ಆದರೆ ಆ ಚಿತ್ರ ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಂತೆ ಅಲ್ಲ!

  • ಜಿಪಿಎಸ್ ಬಳಸಿಕೊಂಡು ಚಿತ್ರ ಬಿಡಿಸುವ ಪರಿಕಲ್ಪನೆ ಹೊಸದು. ಬೆಂಗಳೂರಿನ ಟೆಕ್ಕಿಯೊಬ್ಬರು ಈ ದೀಪಾವಳಿ ಸಂದರ್ಭದಲ್ಲಿ ಅದನ್ನು ಮಾಡಿದರು. ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದರು. ಅದನ್ನು ಎಕ್ಸ್ ಖಾತೆಯಲ್ಲಿ ಶೇರ್ ಮಾಡಿ ದೀಪಾವಳಿಗೆ ಶುಭ ಕೋರಿದರು ಕೂಡ. ಆದರೆ, ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಲ್ಲ ... ಇನ್ನೇನೇನೋ.

ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದ ಬೆಂಗಳೂರು ಟೆಕ್ಕಿ, ಆದರೆ ಆ ಚಿತ್ರ ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಂತೆ ಅಲ್ಲ!
ಗೂಗಲ್‌ ಮ್ಯಾಪ್‌ನಲ್ಲಿ ಹಣತೆ ಬಿಡಿಸೋದಕ್ಕಾಗಿ 5 ಕಿಮೀ ಓಡಿದ ಬೆಂಗಳೂರು ಟೆಕ್ಕಿ, ಆದರೆ ಆ ಚಿತ್ರ ನೆಟ್ಟಿಗರ ನೋಟಕ್ಕೆ ಕಂಡದ್ದು ಹಣತೆಯಂತೆ ಅಲ್ಲ! ((X/@thilak_ch))

ಬೆಂಗಳೂರು: ಜೀವನದಲ್ಲಿ ಏನಾದರೂ ಮಾಡಬೇಕು, ಸೃಜನಶೀಲವಾಗಿ ಪ್ರಯತ್ನಿಸಬೇಕು ಎಂದೆಲ್ಲ ಯೋಚಿಸುವವರು, ಯೋಜಿಸುವವರು ಸಮ್ಮನೆ ಕೂರುವುದಿಲ್ಲ. ಏನೋ ಮಾಡುತ್ತಿರುತ್ತಾರೆ. ಹಾಗೆಯೇ ಬೆಂಗಳೂರಿನ ಟೆಕ್ಕಿಯೊಬ್ಬರು ಈ ದೀಪಾಳಿ ಸಂದರ್ಭದಲ್ಲಿ ಜಿಪಿಎಸ್ ಬಳಸಿಕೊಂಡು ಗೂಗಲ್‌ ಮ್ಯಾಪ್ಸ್‌ನಲ್ಲಿ ಹಣತೆ ಚಿತ್ರ ಬರೆಯಲು ಪ್ರಯತ್ನಿಸಿದರು. ಇದಕ್ಕಾಗಿ ಅವರು 5 ಕಿಮೀ ಓಡಿದರು. ಇಂದಿರಾನಗರ ಮತ್ತು ಕೋಡಿಹಳ್ಳಿ ನಡುವೆ ಈ ಹಣತೆ ಚಿತ್ರ ಬಿಡಿಸಲು ಪ್ರಯತ್ನಿಸಿದರು. ಬಳಿಕ ಮೈಕ್ರೋ ಬ್ಲಾಗಿಂಗ್ ತಾಣ ಎಕ್ಸ್‌ನ ತಮ್ಮ ಖಾತೆಯಲ್ಲಿ ಈ ಗೂಗಲ್ ಮ್ಯಾಪ್‌ನ ಚಿತ್ರವನ್ನು ಶೇರ್ ಮಾಡಿ ದೀಪಾವಳಿ ಹಬ್ಬಕ್ಕೆ ಶುಭಕೋರಿದ್ದಾರೆ. ಅಷ್ಟೇ ಅಲ್ಲ, ತನ್ನ ಪ್ರಯತ್ನವನ್ನು ವಿವರಿಸಿದ್ದಾರೆ. ಸೋಷಿಯಲ್ ಮೀಡಿಯಾ ಅಲ್ವ, ಕೇಳಬೇಕಾ.. ನಾನಾ ರೀತಿಯ ಪ್ರತಿಕ್ರಿಯೆಗಳು ವ್ಯಕ್ತವಾದವು. ಕೆಲವು ತುಂಬ ಹಗುರವಾಗಿದ್ದರೆ, ಇನ್ನು ಕೆಲವು ಕೆಟ್ಟದಾಗಿದ್ದವು. ಗೂಗಲ್‌ ಮ್ಯಾಪ್‌ನಲ್ಲಿ ಮೂಡಿದ ಹಣತೆಯ ಚಿತ್ರ ಒಬ್ಬ ನೆಟ್ಟಿಗನಿಗಂತೂ ಟಾಯ್ಲೆಟ್‌ ಕಮೋಡ್ ತರ ಕಾಣಿಸಿತ್ತು! ಅದಾಗಿ ಅನೇಕರು ಅದನ್ನು ಟಾಯ್ಲೆಟ್‌ ಕಮೋಡ್ ರೀತಿಯೇ ನೋಡಿದರು.

ಬೆಂಗಳೂರು ಟೆಕ್ಕಿಯ ವಿಶೇಷ ಪ್ರಯತ್ನ

ಹೈದರಾಬಾದ್ ಮೂಲದ ತಿಲಕ್ ರೆಡ್ಡಿ ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ತಿಲಕ್ ರೆಡ್ಡಿ 5ಕೆ ಓಟದಲ್ಲಿ ಪಾಲ್ಗೊಳ್ಳುವ ಉತ್ಸಾಹಿ. ಆದ್ದರಿಂದ ಈ ದೀಪಾವಳಿಗೆ ಶುಭಾಶಯ ಹೇಳುವಾಗ, ಜಿಪಿಎಸ್ ಬಳಸಿಕೊಂಡು ಹಣತೆಯ ಚಿತ್ರ ಬರೆದು ಅದನ್ನು ಬಳಸಿಕೊಂಡು ಎಲ್ಲರಿಗೂ ಶುಭಾಶಯ ಹೇಳಲು ಪ್ರಯತ್ನಿಸಿದರು. ಇದಕ್ಕಾಗಿ ಇಂದಿರಾನಗರ ಮತ್ತು ಕೋಡಿಹಳ್ಳಿ ನಡುವೆ 5 ಕಿ.ಮೀ. ಓಡಿದರು. ಆದಾಗ್ಯೂ ಅದು ಪೂರ್ತಿ ಹಣತೆಯ ಆಕಾರಕ್ಕೆ ಬರಲಿಲ್ಲ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಅದು ಟಾಯ್ಲೆಟ್ ಕಮೋಡ್ ಹೋಲಿಕೆ ಪಡೆದುಕೊಂಡಿತು.

ವಾಸ್ತವದಲ್ಲಿ ಜಿಪಿಎಸ್‌ ಬಳಸಿಕೊಂಡು ಚಿತ್ರ ರಚಿಸುವ ಪರಿಕಲ್ಪನೆ ಹೊಸದು. ಸೃಜನಶೀಲ ಆಲೋಚನೆಯ ಫಲ ಇದು. ಇದಕ್ಕಾಗಿ ಮ್ಯಾಪ್ ತಗೊಂಡು ಮಾರ್ಗ ಆಯ್ಕೆ ಮಾಡಿಕೊಳ್ಳಲಾಗಿತ್ತು. 34 ನಿಮಿಷ ಇದಕ್ಕಾಗಿ ಓಟ ನಡೆಸಿದ್ದಾಗಿ ತಿಲಕ್ ಹೇಳಿಕೊಂಡಿದ್ದಾರೆ. ತಿಲಕ್ ಅವರ ಎಕ್ಸ್ ಪೋಸ್ಟ್ ಇಲ್ಲಿದೆ.

ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆ

ತಿಲಕ್‌ ರೆಡ್ಡಿ ಅವರು ತಮ್ಮ ನವೀನ ಕಲ್ಪನೆಗೆ ಪ್ರಶಂಸೆ ನಿರೀಕ್ಷಿಸಿದ್ದರೂ, ಪ್ರತಿಕ್ರಿಯೆ ಅನಿರೀಕ್ಷಿತವಾಗಿ ಹಾಸ್ಯಮಯವಾಗಿತ್ತು. ಒಬ್ಬ ವ್ಯಂಗ್ಯವಾಡಿದ್ದು, “ಇದು ವಾಸ್ತವವಾಗಿ ಕಮೋಡ್ ಆಗಿದೆ. ಅಸಮಪಾರ್ಶ್ವದ ಒಂದು, ಆದರೆ ಇದು ಕಮೋಡ್,” ಗೊಂದಲ ಸೃಷ್ಟಿಸಿದ. ಅದಾಗಿ ಒಬ್ಬೊಬ್ಬರೇ ಗೊಂದಲದ ಪ್ರತಿಕ್ರಿಯೆ ನೀಡಿದರು.

ಮತ್ತೊಬ್ಬರು ಪ್ರತಿಕ್ರಿಯೆ ನೀಡುತ್ತ, ಡೋಕರ್‌ ಲೋಗೋ ರೀತಿ ಕಾಣಿಸುತ್ತಿದೆ, ದೀಪಾವಳಿಯ ಶುಭಾಶಯ ಎಂದು ಮತ್ತೊಂದು ಚಿತ್ರವನ್ನು ಶೇರ್ ಮಾಡಿದ್ದಾರೆ. ಮತ್ತೊಬ್ಬರು, ತಮ್ಮ ಪರವಾಗಿ ಯಾರಾದರೂ ಅಂತಹ ಸಾಧನೆ ಮಾಡಿ ಶುಭ ಕೋರಬೇಕಾಗಿತ್ತು ಎಂದು ಬಯಸಿದ್ದೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೂ ತಿಲಕ್‌, ಯಾರಾದರೂ ನಿಮ್ಮ ಆಸೆ ಪೂರೈಸುತ್ತಾರೆ. ಹುಟ್ಟುಹಬ್ಬದ ಶುಭಾಶಯಗಳು ಎಂದು ಹೇಳಿದ್ದಾರೆ.

"ನಾನು ಓಟವನ್ನು ಪ್ರಾರಂಭಿಸಲು ಮತ್ತು ಇದನ್ನು ಸ್ಟ್ರಾವಾದಲ್ಲಿ ರೆಕಾರ್ಡ್ ಮಾಡಲು ತುಂಬಾ ಉತ್ಸುಕನಾಗಿದ್ದೇನೆ. ಇದು ತುಂಬಾ ಅದ್ಭುತವಾಗಿದೆ, ಸಹೋದರ. ” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಇನ್ನೊಬ್ಬ ಉತ್ಸಾಹಿ, "ಇದು ಅಮೆರಿಕದಲ್ಲಿ ನಾನು ವಾಸಿಸುವ ರಾಜ್ಯದ ನಕ್ಷೆಯಂತೆ ತೋರುತ್ತಿದೆ" ಎಂದು ಪ್ರತಿಕ್ರಿಯಿಸಿದ್ದಾರೆ. ಮತ್ತೊಬ್ಬರು, "ಕೆಲವು ಮಾರ್ಪಾಡು ಮಾಡಿದರೆ, ಇದು ಅತ್ಯುತ್ತಮ F1 ಟ್ರ್ಯಾಕ್ ವಿನ್ಯಾಸ ವಾಗುತ್ತದೆ" ಎಂದಿದ್ದಾರೆ. ನೀವು ಇನ್ನೂ ಸ್ವಲ್ಪ ಓಡಿದ್ದರೆ ಪಕ್ಕಾ ಟಾಯ್ಲೆಟ್ ಕಮೋಡ್ ತರಾನೇ ಆಗಿಬಿಡ್ತಿತ್ತು ಇದು ಎಂದು ಮತ್ತೊಬ್ಬರು ಗೊಂದಲದಲ್ಲಿ ಪ್ರತಿಕ್ರಿಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ