logo
ಕನ್ನಡ ಸುದ್ದಿ  /  ಕರ್ನಾಟಕ  /  Didac India 2022: ಏಷ್ಯಾದ ಅತಿ ದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್‌ ಇಂಡಿಯಾ ಸಮಾವೇಶ ಸೆ.21-23

DIDAC India 2022: ಏಷ್ಯಾದ ಅತಿ ದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್‌ ಇಂಡಿಯಾ ಸಮಾವೇಶ ಸೆ.21-23

HT Kannada Desk HT Kannada

Sep 20, 2022 07:26 PM IST

ಏಷ್ಯಾದ ಅತೀದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್ಟ್ ಇಂಡಿಯಾ ಸಮಾವೇಶ ನಾಳೆಯಿಂದ ಶುರುವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

    • DIDAC India 2022: ಏಷ್ಯಾದ ಅತೀದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್‌ ಇಂಡಿಯಾ ಸಮಾವೇಶ ನಾಳೆಯಿಂದ ಶುರುವಾಗಲಿದೆ. ಮೂರು ದಿನಗಳ ಸಮಾವೇಶದ ಪ್ರಾಯೋಜಕತ್ವವನ್ನು ಉನ್ನತ ಶಿಕ್ಷಣ ಇಲಾಖೆ ವಹಿಸಿಕೊಂಡಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದರು.
ಏಷ್ಯಾದ ಅತೀದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್ಟ್ ಇಂಡಿಯಾ ಸಮಾವೇಶ ನಾಳೆಯಿಂದ ಶುರುವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
ಏಷ್ಯಾದ ಅತೀದೊಡ್ಡ ಶಿಕ್ಷಣ ಮೇಳ ಡೈಡ್ಯಾಕ್ಟ್ ಇಂಡಿಯಾ ಸಮಾವೇಶ ನಾಳೆಯಿಂದ ಶುರುವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರು: ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಕ್ಕೆ ಸಂಬಂಧಿಸಿ ಏಷ್ಯಾದ ಅತೀದೊಡ್ಡ ಮತ್ತು ಭಾರತದ ಏಕೈಕ ಸಮಾವೇಶ 'ಡೈಡ್ಯಾಕ್‌ ಇಂಡಿಯಾ' (DIDAC India 2022). ಈ ಸಮಾವೇಶವು ಬೆಂಗಳೂರಿನಲ್ಲಿ ಸೆ.21ರಿಂದ 23ರವರೆಗೆ ನಡೆಯಲಿದೆ. ಇದಕ್ಕೆ ರಾಜ್ಯ ಉನ್ನತ ಶಿಕ್ಷಣ ಇಲಾಖೆ ಪ್ರಾಯೋಜಕತ್ವ ನೀಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

HD Revanna: ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಎಸ್‌ಐಟಿಯಿಂದ ಜೆಡಿಎಸ್ ಶಾಸಕ ರೇವಣ್ಣ ಬಂಧನ; ಮುಂದೇನಾಗುತ್ತೆ

ಸಂಪಾದಕೀಯ: ತಲೆಮರೆಸಿಕೊಳ್ಳುತ್ತಿರುವ ಪ್ರಜ್ವಲ್ ರೇವಣ್ಣ ಹಗರಣದ ಸಂತ್ರಸ್ತೆಯರು, ವ್ಯವಸ್ಥೆಯ ಮೇಲೆ ಭರವಸೆ ಹುಟ್ಟುವುದು ಸುಲಭವಲ್ಲ

Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಸಾಧ್ಯತೆ; ಏನಿದು ಬ್ಲೂ ಕಾರ್ನರ್ ನೋಟಿಸ್

ಕರ್ನಾಟಕ ಹವಾಮಾನ ಮೇ 5: ಬೆಂಗಳೂರು ನಗರ ಸೇರಿ ಇಂದು 8 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ; ಈ ಭಾಗದಲ್ಲಿ ಶಾಖದ ಅಲೆ ಹೆಚ್ಚಾಗುವ ಸಾಧ್ಯತೆ

ಈ ಸಮಾವೇಶವು 12ನೇ ವರ್ಷ ಆಯೋಜಿಸಲ್ಪಟ್ಟಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (BIEC) ನಡೆಯಲಿದೆ. ಇಲ್ಲಿ ಶಿಕ್ಷಣ ಮತ್ತು ಕೌಶಲ್ಯ ಕ್ಷೇತ್ರಗಳ 4,000ಕ್ಕೂ ಹೆಚ್ಚು ನವೀನ ಉತ್ಪನ್ನ ಹಾಗೂ ಸೇವೆ ಅನಾವರಣಗೊಳ್ಳಲಿವೆ. ಮೈಕ್ರೋಸಾಫ್ಟ್, ಅಮೆಜಾನ್‌, ಸ್ಯಾಮ್ಸಂಗ್, ಎಚ್.ಪಿ. ಸೇರಿ 20 ದೇಶಗಳ 200ಕ್ಕೂ ಹೆಚ್ಚು ಪ್ರದರ್ಶಕರು ಭಾಗವಹಿಸುತ್ತಿದ್ದಾರೆ ಎಂದರು.

ಡೈಡ್ಯಾಕ್‌ ಇಂಡಿಯಾ ಸಮಾವೇಶದ ಜತೆ ಹಲವು ಕಾರ್ಯಾಗಾರಗಳು ಹಾಗೂ ಸಮ್ಮೇಳನಗಳು ಸಹ ಜರುಗಲಿವೆ. ಇಂಟರ್ ನ್ಯಾಷನಲ್ ಎಜುಕೇಶನ್ ಅಂಡ್ ಸ್ಕಿಲ್ ಸಮ್ಮಿಟ್, ಡೈಡ್ಯಾಕ್ ಅಲೈಯನ್ಸ್ ಆಫ್ ಇಂಟರ್ ನ್ಯಾಷನಲ್ ಸ್ಕೂಲ್ಸ್ ಕಾನ್ಫರೆನ್ಸ್, ಅರ್ಲಿ ಲರ್ನಿಂಗ್ ಕಾನ್ಫರೆನ್ಸ್, ಕೆ-12 ಎಜುಕೇಶನ್ ಕಾನ್ಫರೆನ್ಸ್, ಐಡಿಎ ಕನೆಕ್ಟ್ ವರ್ಕ್ ಶಾಪ್ ಮುಂತಾದ ಕಾರ್ಯಾಗಾರಗಳು ಹಾಗೂ ಸಮ್ಮೇಳನಗಳು ಸಮಾವೇಶದ ಭಾಗವಾಗಿರಲಿವೆ.

ಸಮಾವೇಶದಲ್ಲಿ ಯುಕೆ, ಜರ್ಮನಿ, ಆಸ್ಟ್ರೇಲಿಯಾ, ಕೆನಡಾ, ಫಿನ್ಲೆಂಡ್, ಪೋಲೆಂಡ್, ಸಿಂಗಾಪೂರ ಮುಂತಾದ ದೇಶಗಳ ಪ್ರತ್ಯೇಕ ಅಂತರರಾಷ್ಟ್ರೀಯ ಪೆವಿಲಿಯನ್ ಇರಲಿವೆ. ಸಮಾವೇಶವು ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ (IDA), ಕೇಂದ್ರ ಶಿಕ್ಷಣ ಇಲಾಖೆ, ನೀತಿ ಆಯೋಗ, ಕೇಂದ್ರ ಕೌಶಲ್ಯ ಮತ್ತು ಉದ್ಯಮಶೀಲತೆ ಇಲಾಖೆ ಮತ್ತು ಎಜುಕೇಶನ್ ವರ್ಲ್ಡ್ ಫೋರಂ ಸಹಯೋಗದಲ್ಲಿ ಜರುಗಲಿದೆ. ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು (AICTE) ಹಾಗೂ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ತು (NCERT) ಈ ಸಮಾವೇಶದ ಸಹಭಾಗಿತ್ವ ವಹಿಸಿವೆ ಎಂದು ಅವರು ಮಾಹಿತಿ ನೀಡಿದರು.

"ಕರ್ನಾಟಕವು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ. ಬೆಂಗಳೂರು ವಿಶ್ವದ ನಾವೀನ್ಯತೆಯ ರಾಜಧಾನಿಗಳಲ್ಲಿ ಒಂದಾಗಿದೆ. ವಿವಿಧ ದೇಶಗಳ ಶಿಕ್ಷಣ ಸಚಿವರು, ನಿಯೋಗಗಳು ಮತ್ತು ಶಿಕ್ಷಣ ತಜ್ಞರಿಗೆ ಈ ಸಮಾವೇಶವು ಅತ್ಯಂತ ಆಸಕ್ತಿದಾಯಕವಾಗಿರಲಿದೆಎಂದು ಅಶ್ವತ್ಥ ನಾರಾಯಣ ಅಭಿಪ್ರಾಯ ಪಟ್ಟರು.

ಇಂಡಿಯಾ ಡೈಡ್ಯಾಕ್ಟಿಕ್ಸ್ ಅಸೋಸಿಯೇಷನ್ ಸಿಇಒ ಆದಿತ್ಯ ಗುಪ್ತಾ ಮಾತನಾಡಿ, ಈ ಸಮಾವೇಶವು ಶಿಕ್ಷಣ ಕ್ಷೇತ್ರದ ಆವಿಷ್ಕಾರಗಳನ್ನು ಒಂದೇ ಸೂರಿನಡಿ ತರಲಿದೆ. ಕೊರೊನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರ ಎದುರಿಸಿದ ಅನೇಕ ಸವಾಲುಗಳಿಗೆ ಪರಿಹಾರಗಳನ್ನು ಪ್ರಸ್ತುತ ಪಡಿಸಲಿದೆ ಎಂದರು.

ಈ ನಡುವೆ, ಏಷಿಯನ್ ಸಮ್ಮಿಟ್ ಆನ್ ಎಜುಕೇಶನ್ ಅಂಡ್ ಸ್ಕಿಲ್ಸ್ ಸಮಾವೇಶದ 7ನೇ ಆವೃತ್ತಿಯೂ ಸೆ. 20 ಮತ್ತು 21ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಇದರಲ್ಲಿ ಯುಕೆ, ಬ್ರೆಜಿಲ್, ಮಲೇಶಿಯಾ, ಸೌದಿ ಅರೇಬಿಯಾ ಸೇರಿದಂತೆ 15 ದೇಶಗಳ ಶಿಕ್ಷಣ ಸಚಿವರು, ಸಚಿವರ ನಿಯೋಗಗಳು ಪಾಲ್ಗೊಳ್ಳಲಿವೆ. ಭಾರತದ 10 ರಾಜ್ಯಗಳ ಶಿಕ್ಷಣ ಸಚಿವರು ಇದರಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ನುಡಿದರು.

ಎಜುಕೇಶನ್ ವರ್ಲ್ಡ್ ಫೋರಂನ ನಿರ್ದೇಶಕ ಡೊಮಿನಿಕ್ ಸವಾಜ್ ಸುದ್ದಿಗೋಷ್ಠಿಯಲ್ಲಿ ಇದ್ದರು.

    ಹಂಚಿಕೊಳ್ಳಲು ಲೇಖನಗಳು